Oppo Find X8 Pro: ಅಮೆಜಾನ್‌ನಲ್ಲಿ ಈಗ ಭಾರಿ ಡಿಸ್ಕೌಂಟ್!
ನೀವು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಫ್ಲಾಗ್‌ಶಿಪ್ ಮಾದರಿಗೆ ಅಪ್‌ಗ್ರೇಡ್ ಮಾಡಲು ಯೋಜಿಸುತ್ತಿದ್ದೀರಾ? ಹಾಗಿದ್ದರೆ, ಇದು ಸಕಾಲ! ಏಕೆಂದರೆ, ಉನ್ನತ-ಮಟ್ಟದ ಕ್ಯಾಮೆರಾ ಸಿಸ್ಟಮ್, ದೀರ್ಘಕಾಲಿಕ ಬ್ಯಾಟರಿ ಬಾಳಿಕೆ ಮತ್ತು ಆಕರ್ಷಕ ವಿನ್ಯಾಸದೊಂದಿಗೆ, ಫ್ಲ್ಯಾಗ್‌ಶಿಪ್ ವಿಭಾಗದಲ್ಲಿ ಪ್ರಬಲ ಫೋನ್‌ಗಳಲ್ಲಿ ಒಂದಾದ Oppo Find X8 Pro ಸ್ಮಾರ್ಟ್‌ಫೋನ್ ಮೇಲೆ ಈಗ ಭಾರಿ ರಿಯಾಯಿತಿ ದೊರೆಯುತ್ತಿದೆ. Amazon ಪ್ರಸ್ತುತ Oppo Find X8 Pro ಸ್ಮಾರ್ಟ್‌ಫೋನ್ ಮೇಲೆ ₹18,000 ಕ್ಕಿಂತ ಹೆಚ್ಚಿನ ಭಾರಿ ರಿಯಾಯಿತಿ ನೀಡುತ್ತಿದದ್ದು, ಇದು ಪ್ರೀಮಿಯಂ ಫೋನ್ ಖರೀದಿಸಲು ಇಚ್ಚಿಸಿದವರಿಗೆ ಅತ್ಯುತ್ತಮ ಕೊಡುಗೆಯಾಗಿದೆ.
Oppo Find X8 Pro: Amazon ನಲ್ಲಿ ಭಾರಿ ಡಿಸ್ಕೌಂಟ್
Oppo Find X8 Pro ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ₹99,999 ರೂ. ಬೆಲೆಯಲ್ಲಿ ಬಿಡುಗಡೆ ಮಾಡಲಾಗಿತ್ತು. ಪ್ರಸ್ತುತ, Amazon ಈ ಪ್ರೀಮಿಯಂ ಫೋನ್ ಮೇಲೆ ನೇರವಾಗಿ ₹12,000 ಫ್ಲಾಟ್ ಡಿಸ್ಕೌಂಟ್ ನೀಡುತ್ತಿದ್ದು, ಬೆಲೆ ₹87,999 ಕ್ಕೆ ಇಳಿದಿದೆ. ಇದು ಮಾತ್ರವಲ್ಲದೆ, ನೀವು ಹೆಚ್ಚುವರಿಯಾಗಿ ₹5,500 ರಿಯಾಯಿತಿ ಪಡೆಯಬಹುದು. ಇದರ ಜೊತೆಗೆ, Amazon ಖರೀದಿಯ ಮೇಲೆ ₹1,000 ಮೌಲ್ಯದ ಕೂಪನ್ ನೀಡುತ್ತಿದೆ. ಇನ್ನೂ ಹೆಚ್ಚಿನ ಉಳಿತಾಯಕ್ಕಾಗಿ, ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಿಕೊಳ್ಳುವ ಅವಕಾಶವೂ ಇದೆ. ಈ ಎಲ್ಲಾ ರಿಯಾಯಿತಿಗಳನ್ನು ಸೇರಿಸಿದರೆ, ನೀವು ಒಟ್ಟಾರೆ ₹18,000 ಕ್ಕಿಂತ ಹೆಚ್ಚಿನ ಉಳಿತಾಯವನ್ನು ನಿರೀಕ್ಷಿಸಬಹುದು. ಇದರಿಂದ ಪ್ರೀಮಿಯಂ ಫ್ಲಾಗ್‌ಶಿಪ್ ಒಂದು ಜೇಬಿಗೆ ಹೆಚ್ಚು ಹೊರೆಯಾಗದಂತೆ ನಿಮ್ಮ ಕೈಸೇರಲಿದೆ.

Oppo Find X8 Pro: ಪ್ರಮುಖ ವೈಶಿಷ್ಟ್ಯಗಳು
Oppo Find X8 Pro ಹಲವಾರು ಪ್ರಭಾವಶಾಲಿ ವೈಶಿಷ್ಟ್ಯಗಳನ್ನು ಹೊಂದಿದೆ,
- ಡಿಸ್ಪ್ಲೇ: ಇದು 6.78-ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದೆ. ಇದು 4500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಮತ್ತು 120Hz ರಿಫ್ರೆಶ್ ರೇಟ್ ನೀಡುತ್ತದೆ, ಇದು ದೃಶ್ಯ ಅನುಭವವನ್ನು ಅತ್ಯುತ್ತಮಗೊಳಿಸುತ್ತದೆ. ಡಿಸ್ಪ್ಲೇ ಡಾಲ್ಬಿ ವಿಷನ್ ಬೆಂಬಲದೊಂದಿಗೆ ಬರುತ್ತದೆ.
- ಕ್ಯಾಮೆರಾ: Find X8 Pro ಪ್ರಬಲ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. 50MP ಮುಖ್ಯ ಕ್ಯಾಮೆರಾ, 50MP ಅಲ್ಟ್ರಾ-ವೈಡ್ ಲೆನ್ಸ್, 50MP 3x ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ, 50MP ಸೋನಿ IMX858 6x ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ
- ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ, ಮುಂಭಾಗದಲ್ಲಿ 32MP ಕ್ಯಾಮೆರಾ ಇದೆ.
- ಕಾರ್ಯಕ್ಷಮತೆ: ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9400 ಚಿಪ್‌ಸೆಟ್‌ನಿಂದ ಶಕ್ತಿಯನ್ನು ಪಡೆಯುತ್ತದೆ, ಇದು ಸುಗಮ ಮತ್ತು ವೇಗದ ಕಾರ್ಯಕ್ಷಮತೆಯನ್ನು ಖಚಿತಪಡಿಸುತ್ತದೆ.
- ಬ್ಯಾಟರಿ: Oppo Find X8 Pro 5910mAh ಬ್ಯಾಟರಿಯನ್ನು ಹೊಂದಿದೆ. ಇದು 80W ವೇಗದ ವೈರ್ಡ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ, ಇದು ದೀರ್ಘಕಾಲದ ಬಳಕೆಯನ್ನು ಖಚಿತಪಡಿಸುತ್ತದೆ.
Oppo Find X8 Pro ಸ್ಮಾರ್ಟ್‌ಫೋನ್ ಉತ್ತಮ ಕ್ಯಾಮೆರಾ ಸಿಸ್ಟಮ್, ದೀರ್ಘಕಾಲದ ಬ್ಯಾಟರಿ ಮತ್ತು ನಯವಾದ ವಿನ್ಯಾಸದೊಂದಿಗೆ ಎಲ್ಲಾ ನಿರೀಕ್ಷೆಗಳನ್ನು ಮೀರಿಸುತ್ತದೆ, ಇದು ಫ್ಲ್ಯಾಗ್‌ಶಿಪ್ ವಿಭಾಗದಲ್ಲಿ ಪ್ರಬಲ ಸ್ಪರ್ಧಿಯಾಗಿದೆ. ಹಾಗಾಗಿ, ನೀವು ಹೊಸ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಾಗಿ ಹುಡುಕುತ್ತಿದ್ದರೆ, Oppo Find X8 Pro ಮೇಲಿನ ಈ Amazon ಡೀಲ್ ಅನ್ನು ಪರಿಗಣಿಸುವುದು ಯೋಗ್ಯವಾಗಿದೆ.
ಹಕ್ಕು ನಿರಾಕರಣೆ: ಇಲ್ಲಿ ಉಲ್ಲೇಖಿಸಲಾದ ಬೆಲೆ ಬರೆಯುವ ಸಮಯದಲ್ಲಿ ನಿಖರವಾಗಿದೆ ಮತ್ತು ಪೂರ್ವ ಸೂಚನೆ ಇಲ್ಲದೆ ಬದಲಾಗಬಹುದು. ಹೆಚ್ಚಿನ ವಿವರಗಳಿಗಾಗಿ ಮತ್ತು ಖರೀದಿಸಲು Amazon ವೆಬ್‌ಸೈಟ್‌ಗೆ ಭೇಟಿ ನೀಡಿ.


Click it and Unblock the Notifications








