Home
Deal of the day

ಕೇವಲ 10,793 ರೂ.! 5100mAh ಬ್ಯಾಟರಿ.. 256GB ಸ್ಟೋರೇಜ್.. ಅಗ್ಗದ ಬೆಲೆಗೆ OPPO 5G ಫೋನ್

ಮೊದಲೇ ಅಗ್ಗದ ಬೆಲೆ.. ಮತ್ತೆ ಭರ್ಜರಿ ರಿಯಾಯಿತಿ. ಅಗ್ಗದ ಬೆಲೆಯಲ್ಲಿ 5G ಮೊಬೈಲ್ ಖರೀದಿಸುವವರಿಗೆ ಇಲ್ಲಿದೆ ಬಂಪರ್ ಅವಕಾಶ. ಹೌದು, ಒಪ್ಪೋ K12x 5G (OPPO K12x 5G) ಫೋನನ್ನು ಅತ್ಯಂತ ಕಡಿಮೆ ದರದಲ್ಲಿ ಖರೀದಿಸಬಹುದು. ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ ಮಾನ್ಯುಮೆಂಟಲ್ ಸೇಲ್ 2025 (Flipkart Monumental Sale 2025) ನಡೆಯುತ್ತಿದೆ. ಈ ಸೇಲ್‌ನಲ್ಲಿ ಒಪ್ಪೋ K12x 5G ಸ್ಮಾರ್ಟ್‌ಫೋನ್‌ ಮೇಲೆ ಆಕರ್ಷಕ ರಿಯಾಯಿತಿ ಲಭ್ಯವಿದೆ. ಜೊತೆಗೆ ಬ್ಯಾಂಕ್ ಆಫರ್‌ ಸಹ ಲಭ್ಯವಿದೆ. ಬನ್ನಿ, ಈ ಫೋನಿನ ಹೊಸ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಒಪ್ಪೋ K12x 5G ಮೊಬೈಲ್ ಕಳೆದ ವರ್ಷ ಬಿಡುಗಡೆಯಾಗಿತ್ತು. ಈ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಕ್ಯಾಮೆರಾ ಲಭ್ಯವಿದೆ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಈ ಮೊಬೈಲ್ 6.67 ಇಂಚಿನ ಡಿಸ್ಪ್ಲೇ ಹೊಂದಿದೆ. ಜೊತೆಗೆ 256GB ಸ್ಟೋರೇಜ್, 5100mAh ಬ್ಯಾಟರಿ ಮತ್ತು 45W ಸ್ಪೀಡ್ ಚಾರ್ಜಿಂಗ್ ಒಳಗೊಂಡಿದೆ. ಪ್ರಸ್ತುತ, ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನಿಗೆ 2 ಸಾವಿರ ರೂ.ಗಿಂತ ಹೆಚ್ಚು ರಿಯಾಯಿತಿ ಲಭ್ಯವಿದೆ.

ಕೇವಲ 10,793 ರೂ.! 5100mAh ಬ್ಯಾಟರಿ.. 256GB ಸ್ಟೋರೇಜ್.. ಅದೂ OPPO ಫೋನ್

ಒಪ್ಪೋ K12x 5G ಬೆಲೆ ಮತ್ತು ಆಫರ್

ಒಪ್ಪೋ K12x 5G ಫೋನಿನ 6GB RAM + 256GB ಸ್ಟೋರೇಜ್ ರೂಪಾಂತರದ ಬೆಲೆ 12,999 ರೂ. ಆಗಿದೆ. ಫ್ಲಿಪ್‌ಕಾರ್ಟ್ ಮಾರಾಟದಲ್ಲಿ 1,000 ರೂ. ಫ್ಲಾಟ್ ರಿಯಾಯಿತಿ ನೀಡಲಾಗುತ್ತಿದೆ. ಜೊತೆಗೆ ಹೆಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಈ ಮೊಬೈಲ್ ಖರೀದಿಸಿದರೆ, 1000 ರೂ. ಹೆಚ್ಚುವರಿ ಡಿಸ್ಕೌಂಟ್ ಪಡೆಯಬಹುದು. ಎಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್ ಇಎಂಐ ಪಾವತಿ ಮೇಲೆ 1,206 ರೂ. ರಿಯಾಯಿತಿ ಲಭ್ಯವಿರುತ್ತದೆ. ನೀವು, ಕೇವಲ 10,793 ರೂ.ಗೆ ಈ ಫೋನ್‌ ಕೊಳ್ಳಬಹುದು. ಈ ಫೋನ್ ಬ್ರೀಜ್ ಬ್ಲೂ, ಮಿಡ್‌ನೈಟ್ ವೈಲೆಟ್ ಮತ್ತು ಪಿಂಕ್ ಬಣ್ಣದಲ್ಲಿ ಖರೀದಿಗೆ ಲಭ್ಯವಿದೆ.

ಒಪ್ಪೋ K12x 5G ವೈಶಿಷ್ಟ್ಯಗಳು

ಡಿಸ್ಪ್ಲೇ ಹೇಗಿದೆ

ಒಪ್ಪೋ K12x 5G ಫೋನ್ 6.67 ಇಂಚಿನ ಎಚ್‌ಡಿ ಪ್ಲಸ್ ಪಂಚ್ ಹೋಲ್ ಡಿಸ್ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ದರ ಮತ್ತು 1000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ.

ಪ್ರೊಸೆಸರ್ ಯಾವುದು?

ಒಪ್ಪೋ K12x 5G ಮೊಬೈಲ್ ಮೀಡಿಯಾಟೆಕ್ ಡೈಮೆನ್ಸಿಟಿ 6300 ಆಕ್ಟಾಕೋರ್ ಪ್ರೊಸೆಸರ್ ಹೊಂದಿದೆ. ಈ ಪ್ರೊಸೆಸರ್ ಅನ್ನು 6 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ತಯಾರಿಸಲಾಗಿದೆ. ಇದು ಗ್ರಾಫಿಕ್ಸ್‌ಗಾಗಿ, ಆರ್ಮ್ ಮಾಲಿ G57 ಸಹ ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 14 ಆಧಾರಿತ ColorOS 14 ಜೊತೆಗೆ ಕಾರ್ಯನಿರ್ವಹಿಸುತ್ತದೆ.

ಸ್ಟೋರೇಜ್‌ ಆಯ್ಕೆ

ಒಪ್ಪೋ K12x 5G ಸ್ಮಾರ್ಟ್‌ಫೋನ್ 6GB ಮತ್ತು 8GB RAM ಹೊಂದಿದೆ. ಜೊತೆಗೆ ವರ್ಚುವಲ್ RAM ವೈಶಿಷ್ಟ್ಯವು ಲಭ್ಯವಿದೆ. ಈ ಫೋನಿನಲ್ಲಿ 256GB ಸ್ಟೋರೇಜ್ ಲಭ್ಯವಿದೆ.

ಡ್ಯುಯಲ್ ಕ್ಯಾಮೆರಾ ಸೆಟಪ್

ಒಪ್ಪೋ K12x 5G ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸಹ ಹೊಂದಿದೆ.

ಬೊಂಬಾಟ್ ಬ್ಯಾಟರಿ

ಒಪ್ಪೋ K12x 5G ಮೊಬೈಲ್ 5100mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 45W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಜೊತೆಗೆ 45W ಸೂಪರ್‌ವೂಕ್ ಚಾರ್ಜರ್ ಸಹ ಲಭ್ಯವಿದೆ.

ಇತರೆ ವೈಶಿಷ್ಟ್ಯಗಳು

ಒಪ್ಪೋ K12x 5G ಸ್ಮಾರ್ಟ್‌ಫೋನ್ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP54 ರೇಟಿಂಗ್ ಪಡೆದಿದೆ. ಜೊತೆಗೆ ಎಐ ಲಿಂಕ್ ಬೂಸ್ಟ್ ತಂತ್ರಜ್ಞಾನ, ಫಿಂಗರ್‌ಪ್ರಿಂಟ್ ಸಂವೇದಕ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು 5G ಡ್ಯುಯಲ್ ಸಿಮ್, 5G, 4G, ಬ್ಲೂಟೂತ್, ವೈ-ಫೈ, ಜಿಪಿಎಸ್ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

Best Mobiles in India

English summary
OPPO K12x 5G Available with Rs 2000 discount in Flipkart Monumental Sale 2025: know offers, availability, specs and more details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+