Home
Deal of the day

ಯದ್ವಾತದ್ವಾ ಇಳಿಕೆ..! ಕಡಿಮೆ ಬೆಲೆಗೆ Oppo 5G ಫೋನ್.. ಈಗ ಬಿಟ್ಟರೆ ಮತ್ತೆ ಸಿಗಲ್ಲ!

ಒಪ್ಪೋ ಕಂಪನಿಯು ತನ್ನ ಅಭಿಮಾನಿಗಳಿಗೆ ಎರಡು ಸಿಹಿ ಸುದ್ದಿಗಳನ್ನು ನೀಡಿದೆ. ಹೌದು, Oppo ಕಂಪನಿಯು ತನ್ನ Oppo Reno 12 ಸರಣಿಯನ್ನು ಜುಲೈ 12 ರಂದು ಬಿಡುಗಡೆ ಮಾಡಿತ್ತು. ಈ ಸರಣಿಯ ಸ್ಮಾರ್ಟ್‌ಫೋನ್‌ಗಳು ಗ್ರಾಹಕರನ್ನು ಆಕರ್ಷಿಸುವಲ್ಲಿ ಸೈ ಎನಿಸಿಕೊಂಡಿವೆ. ಈ ಹೊಸ ಮೊಬೈಲ್‌ಗಳ ಬಿಡುಗಡೆ ಜೊತೆಗೆ Oppo ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. Oppo Reno 11 Pro 5G ಸ್ಮಾರ್ಟ್‌ಫೋನ್ ಬೆಲೆಯನ್ನು ದಿಢೀರನೆ ಕಡಿಮೆ ಮಾಡಿದೆ. ನೀವು ಈ ಸ್ಮಾರ್ಟ್‌ಫೋನ್ ಅನ್ನು ಖರೀದಿಸಿದರೆ ಭಾರಿ ಡಿಸ್ಕೌಂಟ್‌ ಪಡೆಯಬಹುದು. ಹಾಗಿದ್ರೆ, ಏನೆಲ್ಲಾ ಆಫರ್‌ ನೀಡಲಿದೆ? ಈ ಒಪ್ಪೋ ಫೋನ್‌ನ ವಿಶೇಷತೆಗಳೇನು? ಈ ಕುರಿತ ಮಾಹಿತಿ ಇಲ್ಲಿದೆ ನೋಡಿ.

ಈ Oppo Reno 11 ಸ್ಮಾರ್ಟ್‌ಫೋನ್ 80W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 4600mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಪುಲ್ HD+ ಡಿಸ್ಪ್ಲೇ ಹೊಂದಿದೆ. ಮತ್ತು ಮೀಡಿಯಾ ಟೆಕ್ ಚಿಪ್ ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇನ್ನೂ Oppo Reno 11 ಫೋನ್ 50MP ಮುಖ್ಯ ಕ್ಯಾಮೆರಾವನ್ನು ಹೊಂದಿದೆ. ನೀವು ಎರಡು ಸ್ಟೋರೇಜ್‌ ರೂಪಾಂತರಗಳಲ್ಲಿ ಈ ಮೊಬೈಲ್‌ ಅನ್ನು ಖರೀದಿಸಬಹುದು.

ಯದ್ವಾತದ್ವಾ ಇಳಿಕೆ..! ಕಡಿಮೆ ಬೆಲೆಗೆ Oppo 5G ಫೋನ್..ಈಗ ಬಿಟ್ಟರೆ ಮತ್ತೆ ಸಿಗಲ್ಲ

2,000 ರೂ. ಇಳಿಕೆಯೊಂದಿಗೆ ಶೇ.10 ರಷ್ಟು ಡಿಸ್ಕೌಂಟ್

ಬಿಡುಗಡೆಯ ಸಮಯದಲ್ಲಿ Oppo Reno 11 Pro ಸ್ಮಾರ್ಟ್‌ಫೋನ್‌ನ ಆರಂಭಿಕ ಬೆಲೆ 39,999 ರೂ. ಇತ್ತು. ಕಂಪನಿಯು ಈ ಮೊಬೈಲ್‌ನ ಬೆಲೆಯನ್ನು 2,000 ರೂ. ಕಡಿಮೆ ಮಾಡಿದೆ. ಇದರೊಂದಿಗೆ 37,999 ರೂ. ಬೆಲೆ ಪಡೆದಿದೆ. ಈ ಫೋನಿನ ಖರೀದಿ ಮೇಲೆ ನೀವು ಶೇ.10 ರಷ್ಟು ತ್ವರಿತ ರಿಯಾಯಿತಿಯನ್ನು ಸಹ ಪಡೆಯಬಹುದು. ಈ ಮೊಬೈಲ್‌ ಫ್ಲಿಪ್‌ಕಾರ್ಟ್‌ನಲ್ಲಿ ಪರ್ಲ್ ವೈಟ್ ಮತ್ತು ರಾಕ್ ಗ್ರೇ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

Oppo Reno 11 Pro ಸ್ಮಾರ್ಟ್‌ಫೋನ್ ವಿಶೇಷತೆಗಳು

Oppo Reno 11 Pro ಸ್ಮಾರ್ಟ್‌ಫೋನ್ 1080 x 2412 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿರುವ 6.7 ಇಂಚಿನ HD+ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯು 120Hz ರಿಫ್ರೆಶ್ ದರವನ್ನು ಹೊಂದಿದೆ. ಮತ್ತು 240Hzನ ಸ್ಪರ್ಶ ಮಾದರಿ ದರದೊಂದಿಗೆ 950 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದೆ.

ಈ ಫೋನ್‌ನ ಪ್ರೊಸೆಸರ್ ಮತ್ತು ಸ್ಟೋರೇಜ್‌ ಆಯ್ಕೆಗಳು

ಇದು Android 14 ಆಧಾರಿತ colorOS 14 ನಲ್ಲಿ ಕಾರ್ಯನಿರ್ವಹಿಸುತ್ತದೆ. ಹುಡ್ ಅಡಿಯಲ್ಲಿ ಮೀಡಿಯಾ ಟೆಕ್ ಡೈಮೆನ್ಸಿಟಿ 8200 ಚಿಪ್‌ಸೆಟ್ ಇದೆ. ಆರ್ಮ್ ಮಾಲಿ G610 GPU ಜೊತೆಗೆ 12GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್‌ ಹೊಂದಿದೆ. 12GB RAM + 256GB ಸ್ಟೋರೇಜ್‌ ಮತ್ತು 12GB RAM + 512GB ಸ್ಟೋರೇಜ್‌ ವೇರಿಯಂಟ್‌ನಲ್ಲಿ ಲಭ್ಯವಿದೆ.

ಯದ್ವಾತದ್ವಾ ಇಳಿಕೆ..! ಕಡಿಮೆ ಬೆಲೆಗೆ Oppo 5G ಫೋನ್..ಈಗ ಬಿಟ್ಟರೆ ಮತ್ತೆ ಸಿಗಲ್ಲ

50MP ಮುಖ್ಯ ಕ್ಯಾಮೆರಾ, 32MP ಸೆಲ್ಫಿ ಶೂಟರ್

ಕ್ಯಾಮೆರಾ ಸೆಟಪ್‌ನಲ್ಲಿ ಈ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾಗಳನ್ನು ಹೊಂದಿದೆ. ಇದು f/1.8 ಅಪರ್ಚರ್‌ನೊಂದಿಗೆ 50MP ಮುಖ್ಯ ಕ್ಯಾಮೆರಾ, f/2.0 ಅಪರ್ಚರ್‌ನೊಂದಿಗೆ 32MP ಟೆಲಿಫೋಟೋ ಕ್ಯಾಮೆರಾ , ಜೊತೆಗೆ 8MP ಅಲ್ಟ್ರಾ ವೈಡ್-ಆಂಗಲ್ ಕ್ಯಾಮೆರಾ ಜೊತೆಗೆ f/2.2 ಅಪರ್ಚರ್ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಈ ಫೋನ್ 32MP ಕ್ಯಾಮೆರಾವನ್ನು ಹೊಂದಿದೆ.

ಒಪ್ಪೋ ರೆನೋ 11 ಸ್ಮಾರ್ಟ್‌ಫೋನ್ 80W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 4600mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್‌ ಅನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ, ಇದು ವೈಫೈ 6, ಬ್ಲೂಟೂತ್ 5.3, NFC, USB-C ಚಾರ್ಜಿಂಗ್ ಪೋರ್ಟ್‌ನಂತಹ ವೈಶಿಷ್ಟ್ಯಗಳೊಂದಿಗೆ ಲಭ್ಯವಿದೆ.

Best Mobiles in India

English summary
Oppo Reno 11 Pro 5G Smartphon Received Price Cut in India: Price and Offer Details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+