Home
Deal of the day

ಹೊಸ ಫೋನಿನ ಬೆಲೆ ಕುಸಿತ! 4000 ರಿಯಾಯಿತಿ.. ಸೋನಿ ಕ್ಯಾಮೆರಾ.. 5600mAh ಬ್ಯಾಟರಿ.. ಅದೂ OPPO ಫೋನ್

ಒಪ್ಪೋ ಅಭಿಮಾನಿಗಳು ಮಿಸ್‌ ಮಾಡದೇ ಈ ಸ್ಟೋರಿ ಓದಬೇಕು! ಕಳೆದ ತಿಂಗಳು ಭಾರತದಲ್ಲಿ ಬಿಡುಗಡೆಯಾಗಿದ್ದ ಸೊಗಸಾದ ಒಪ್ಪೋ ಫೋನ್ ಭಾರೀ ರಿಯಾಯಿತಿಯೊಂದಿಗೆ ಲಭ್ಯವಿದೆ. ಹೌದು, ಕಂಪನಿಯು ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ಒಪ್ಪೋ ರೆನೋ 13 5G (OPPO Reno13 5G) ಫೋನಿನ ಖರೀದಿ ಮೇಲೆ ಆಫರ್‌ ಘೋಷಿಸಿದೆ. ನೀವು, ಈ ಸ್ಮಾರ್ಟ್‌ಫೋನ್‌ ಖರೀದಿ ಮೇಲೆ ದೊಡ್ಡ ಉಳಿತಾಯ ಮಾಡಬಹುದು. ಬನ್ನಿ, ಈ ಫೋನಿನ ಹೊಸ ಬೆಲೆ, ಆಫರ್‌ಗಳು ಮತ್ತು ವಿಶೇಷತೆಗಳನ್ನು ತಿಳಿಯೋಣ.

ಒಪ್ಪೋ ರೆನೋ 13 ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಮತ್ತು 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಇದು ಮೀಡಿಯಾಟೆಕ್‌ ಡೈಮೆನ್ಸಿಟಿ 8350 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಈ ಸ್ಮಾರ್ಟ್‌ಫೋನ್‌ 6.59 ಇಂಚಿನ ಡಿಸ್ಪ್ಲೇ ಹೊಂದಿದೆ. ಜೊತೆಗೆ 5,600mAh ಬ್ಯಾಟರಿ ಮತ್ತು 80W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಫೋನಿನ ಸ್ಟೈಲಿಶ್ ಲುಕ್ ಮತ್ತು ಫೀಚರ್ಸ್‌ ಮೊಬೈಲ್ ಪ್ರಿಯರನ್ನು ಆಕರ್ಷಿಸುತ್ತಿದೆ. ಇದರ ಆಫರ್‌ ಬೆಲೆ ತಿಳಿಯಲು ಮುಂದೆ ಓದಿ.

 4000 ರಿಯಾಯಿತಿ.. ಸೋನಿ ಕ್ಯಾಮೆರಾ.. 5600mAh ಬ್ಯಾಟರಿ.. ಅದೂ ಹೊಸ OPPO ಫೋನ್

ಒಪ್ಪೋ ರೆನೋ 13 5G ಆಫರ್‌

ಒಪ್ಪೋ ರೆನೋ 13 5G ಫೋನನ್ನು ಎರಡು ಸ್ಟೋರೇಜ್‌ ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಈ ಫೋನಿನ 8GB RAM + 128GB ಸ್ಟೋರೇಜ್ ವೇರಿಯಂಟ್ ಬೆಲೆ 37,999 ರೂ. ಆಗಿದೆ. ಮತ್ತು 8GB RAM + 256GB ಸ್ಟೋರೇಜ್ ಆಯ್ಕೆಯನ್ನು 39,999 ರೂ.ಗೆ ಪರಿಚಯಿಸಲಾಗಿತ್ತು. ಪ್ರಸ್ತುತ, ಇದು ಫ್ಲಿಪ್‌ಕಾರ್ಟ್‌ನಲ್ಲಿ ಕೇವಲ 33,999 ರೂ.ಗೆ ಲಭ್ಯವಿದೆ. ಅಂದರೆ, 4000 ರೂ. ಡಿಸ್ಕೌಂಟ್ ನೀಡಲಾಗುತ್ತಿದೆ. ನೀವು ಎಸ್‌ಬಿಐ ಡೆಬಿಟ್ ಕಾರ್ಡ್‌, ಎಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್‌ ಮತ್ತು ಡೆಬಿಟ್ ಕಾರ್ಡ್‌ಗಳ ಪಾವತಿ ಮೇಲೆ ಈ ಆಫರ್‌ನ ಲಾಭ ಪಡೆಯಬಹುದು.

ಒಪ್ಪೋ ರೆನೋ 13 ವೈಶಿಷ್ಟ್ಯಗಳು

ಡಿಸ್ಪ್ಲೇ ಹೇಗಿದೆ

ಒಪ್ಪೋ ರೆನೋ 13 5G ಫೋನ್ 6.59 ಇಂಚಿನ 1.5K ಡಿಸ್ಪ್ಲೇ ಹೊಂದಿದೆ. ಇದು ಪಂಚ್ ಹೋಲ್ ಶೈಲಿಯ ಅಮೋಲೆಡ್‌ ಡಿಸ್ಪ್ಲೇ ಆಗಿದೆ. ಈ ಡಿಸ್ಪ್ಲೇಯು 2,760 x 1,256 ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಇದು 120Hz ರಿಫ್ರೆಶ್ ದರ, 240Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 1200 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ.

ಪ್ರೊಸೆಸರ್ ಯಾವುದು?

ಒಪ್ಪೋ ರೆನೋ 13 5G ಸ್ಮಾರ್ಟ್‌ಫೋನ್ ಮೀಡಿಯಾಟೆಕ್‌ ಡೈಮೆನ್ಸಿಟಿ 8350 ಆಕ್ಟಾಕೋರ್ ಪ್ರೊಸೆಸರ್ ಹೊಂದಿದೆ. ಇದು ಆಂಡ್ರಾಯ್ಡ್‌ 15 ಆಧಾರಿತ ColorOS 15.0 ಜೊತೆಗೆ ಕೆಲಸ ನಿರ್ವಹಿಸುತ್ತದೆ.

50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ

ಒಪ್ಪೋ ರೆನೋ 13 5G ಮೊಬೈಲ್ OIS ಮತ್ತು ಎಲ್‌ಇಡಿ ಫ್ಲ್ಯಾಷ್ ಜೊತೆಗೆ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಹೊಂದಿದೆ. ಹಾಗೆಯೇ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ ಈ ಮೊಬೈಲ್, 50 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.

ಬೊಂಬಾಟ್ ಬ್ಯಾಟರಿ ಬ್ಯಾಕಪ್

ಒಪ್ಪೋ ರೆನೋ 13 5G ಫೋನ್ 5600mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ಒಪ್ಪೋ ರೆನೋ 13 ಪ್ರೊ ಬೆಲೆ

ಒಪ್ಪೋ ರೆನೋ 13 5G ಫೋನನ್ನು ಎರಡು ಸ್ಟೋರೇಜ್‌ ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಈ ಫೋನಿನ 12GB RAM + 256GB ಸ್ಟೋರೇಜ್ ರೂಪಾಂತರ ಬೆಲೆ 49,999 ರೂ. ಆಗಿದೆ. 12GB RAM + 512GB ಸ್ಟೋರೇಜ್ ಆಯ್ಕೆಯನ್ನು 54,999 ರೂ.ಗೆ ಪರಿಚಯಿಸಲಾಗಿದೆ. ಈ ಮೊಬೈಲ್ ಫ್ಲಿಪ್‌ಕಾರ್ಟ್ ಮತ್ತು ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ ಮಾರಾಟವಾಗುತ್ತಿದೆ. ನೀವು ಮಿಸ್ಟ್ ಲ್ಯಾವೆಂಡರ್ ಮತ್ತು ಗ್ರ್ಯಾಫೈಟ್ ಗ್ರೇ ಬಣ್ಣಗಳಲ್ಲಿ ಖರೀದಿಸಬಹುದು.

Best Mobiles in India

English summary
OPPO Reno13 5G Available With Rs 4,000 discount on flipkart: check price, offer, specs and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+