Home
Deal of the day

Valentine's Day Offer: ಪ್ರೇಮಿಗಳ ದಿನಕ್ಕೆ ಧಮಾಕಾ ಆಫರ್‌! ಈ OPPO ಫೋನ್‌ಗಳಿಗೆ 10,000 ಡಿಸ್ಕೌಂಟ್‌.. ಇಲ್ಲಿದೆ ಪಟ್ಟಿ

ವ್ಯಾಲೆಂಟೈನ್ಸ್ ಡೇಗೆ ಕ್ಷಣಗಣನೆ ಆರಂಭವಾಗಿದೆ! ಈ ವರ್ಷ ತನ್ನ ಪ್ರೇಯಸಿಗೆ ಏನಾದರೂ ಉಡುಗೊರೆ ಕೊಡಲು ಪ್ಲಾನ್ ಮಾಡುತ್ತಿದ್ದೀರಾ? ಜೇಬಲ್ಲಿ ಅಷ್ಟೊಂದು ದುಡ್ಡಿಲ್ಲ ಅಂತ ಟೆನ್ಶನ್ ಬೇಡ. ಒಪ್ಪೋ (OPPO) ನಿಮ್ಮ ಚಿಂತೆಯನ್ನು ದೂರ ಮಾಡಿದೆ. ಹೌದು, ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಒಪ್ಪೋ ಆಯ್ದ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ರಿಯಾಯಿತಿ ಘೋಷಿಸಿದೆ. ಈ ಆಫರ್‌ಗಳು ಫೆಬ್ರವರಿ 28 ರವರೆಗೆ ಮಾತ್ರ ಲಭ್ಯವಿದೆ. ನೀವು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಇದರ ಲಾಭ ಪಡೆಯಬಹುದು. ಯಾವೆಲ್ಲಾ ಫೋನ್‌ಗಳ ಮೇಲೆ ಆಫರ್‌ ಲಭ್ಯವಿದೆ ಎನ್ನುವುದನ್ನು ತಿಳಿಯಲು ಮುಂದೆ ಓದಿ.

ಹೌದು, ಒಪ್ಪೋ ತನ್ನ ಸ್ಮಾರ್ಟ್‌ಫೋನ್‌ಗಳ ಮೇಲೆ ವಿಶೇಷ ವ್ಯಾಲೆಂಟೈನ್ಸ್ ವೀಕ್ ಆಫರ್‌ಗಳನ್ನು (OPPO Valentine's Week Sale) ಬಿಡುಗಡೆ ಮಾಡಿದೆ. ತನ್ನ ಗ್ರಾಹಕರಿಗೆ 10,000 ರೂ.ಗಳ ವರೆಗಿನ ರಿಯಾಯಿತಿಯಲ್ಲಿ ಆಯ್ದ ಫೋನ್‌ಗಳನ್ನು ಖರೀದಿಸುವ ಅವಕಾಶವನ್ನು ನೀಡಿದೆ. ಈ ಮಾರಾಟವು ಫೆಬ್ರವರಿ 28 ರವರೆಗೆ ನಡೆಯಲಿದೆ. ಕಂಪನಿಯ ಅಧಿಕೃತ ಸೈಟ್‌ನಲ್ಲಿ ಈ ಆಫರ್‌ ಲಭ್ಯವಿದೆ. ಪ್ರೇಮಿಗಳ ದಿನಾಚರಣೆ ಸಂದರ್ಭದಲ್ಲಿ, ನೀವು ಇಲ್ಲಿಂದ ವಿಶೇಷ ಡೀಲ್‌ಗಳಲ್ಲಿ ಫೋನ್‌ಗಳನ್ನು ಕಡಿಮೆ ದರದಲ್ಲಿ ಕೊಳ್ಳಬಹುದು.

ಧಮಾಕಾ ಆಫರ್‌! ಈ OPPO ಫೋನ್‌ಗಳಿಗೆ 10,000 ಡಿಸ್ಕೌಂಟ್‌.. ಇಲ್ಲಿದೆ ಪಟ್ಟಿ

ನಿಮ್ಮ ಫೋನನ್ನು ಅಪ್‌ಗ್ರೇಡ್ ಮಾಡಲು, ನಿಮ್ಮ ಪ್ರೇಯಸಿ ಅಥವಾ ಪತ್ನಿಗೆ ವ್ಯಾಲೆಂಟೈನ್ಸ್ ಡೇ (Valentine's Day) ಉಡುಗೊರೆ ನೀಡಲು ಬಯಸಿದರೆ, ಈ ಸೀಮಿತ ಅವಧಿಯ ಆಫರ್‌ಗಳ ಲಾಭ ಪಡೆಯಬಹುದು. ಈ ಆಫರ್‌ ಬೆಲೆ ಇಳಿಕೆ, ನೋ ಕಾಸ್ಟ್ ಇಎಂಐ ಆಯ್ಕೆಗಳು ಮತ್ತು ಎಕ್ಸ್‌ಚೇಂಜ್‌ ಆಫರ್‌ಗಳನ್ನು ಒಳಗೊಂಡಿದೆ. ನೀವು, ಕಂಪನಿಯ ಒಪ್ಪೋ ಫೈಂಡ್ X8, ಒಪ್ಪೋ ಫೈಂಡ್ X8 ಪ್ರೊ, ಒಪ್ಪೋ ರೆನೋ 13, ಒಪ್ಪೋ ರೆನೋ 13 ಪ್ರೊ, ಒಪ್ಪೋ F27 ಮತ್ತು ಒಪ್ಪೋ F27 ಪ್ರೊ+ ಫೋನ್‌ಗಳನ್ನು ಬಿಡುಗಡೆ ಬೆಲೆಗಿಂತ ಕಡಿಮೆಗೆ ಖರೀದಿಸಬಹುದು.

ಒಪ್ಪೋ ಫೈಂಡ್ X8

ಒಪ್ಪೋ ಫೈಂಡ್ X8 (OPPO Find X8) ಭಾರತದಲ್ಲಿ ಎರಡು ಸ್ಟೋರೇಜ್‌ಗಳಲ್ಲಿ ಲಭ್ಯವಿದೆ. ಈ ಫೋನಿನ 12GB RAM + 256GB ಸ್ಟೋರೇಜ್ ರೂಪಾಂತರದ ಬೆಲೆ 69,999 ರೂ. ಆಗಿದೆ. ಮತ್ತು 16GB RAM + 512GB ಸ್ಟೋರೇಜ್ ರೂಪಾಂತರವು 79,999 ರೂ.ಗೆ ಮಾರಾಟವಾಗುತ್ತಿದೆ. ಕಂಪನಿಯ ಅಧಿಕೃತ ಸೈಟ್‌ನಲ್ಲಿ ಮೂಲ ರೂಪಾಂತರವನ್ನು ಎಚ್‌ಡಿಎಫ್‌ಸಿ, ಐಸಿಐಸಿಐ, ಬ್ಯಾಂಕ್ ಆಫರ್‌ ಬರೋಡಾ ಕಾರ್ಡ್‌, ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಮತ್ತು ಎಸ್‌ಬಿಐ ಕಾರ್ಡ್‌ಗಳನ್ನು ಬಳಸಿಕೊಂಡು 7,000 ರೂ.ಗಳ ರಿಯಾಯಿತಿಯೊಂದಿಗೆ ಖರೀದಿಸಬಹುದು. ಅಂದರೆ ನೀವು 62,999 ರೂ.ಗಳಿಗೆ ಈ ಮೊಬೈಲ್ ಕೊಳ್ಳಬಹುದು. ಕಂಪನಿಯು 8,000 ರೂ.ವರೆಗೆ ಎಕ್ಸ್‌ಚೇಂಜ್ ಬೋನಸ್ ಸಹ ನೀಡುತ್ತಿದೆ.

ಒಪ್ಪೋ ಫೈಂಡ್ X8 ಪ್ರೊ

ಒಪ್ಪೋ ಫೈಂಡ್ X8 ಪ್ರೊ (OPPO Find X8 Pro) ಫೋನ್ 16GB RAM + 512GB ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯವಿದೆ. ಇದರ ಬೆಲೆ 99,999 ರೂ. ಆಗಿದೆ. ಈ ಸೇಲ್‌ನಲ್ಲಿ ಎಚ್‌ಡಿಎಫ್‌ಸಿ, ಐಸಿಐಸಿಐ, ಬ್ಯಾಂಕ್ ಆಫರ್‌ ಬರೋಡಾ ಕಾರ್ಡ್‌, ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಮತ್ತು ಎಸ್‌ಬಿಐ ಕಾರ್ಡ್‌ಗಳ ಪಾವತಿ ಮೇಲೆ 9,999 ರೂ. ವರೆಗೆ ರಿಯಾಯಿತಿ ಪಡೆಯಬಹುದು. ಇದರೊಂದಿಗೆ ಈ ಫೋನಿನ ಬೆಲೆ 90,000 ರೂ.ಗೆ ಇಳಿಕೆಯಾಗುತ್ತದೆ. ಜೊತೆಗೆ ಕಂಪನಿಯು 8,000 ರೂ. ಎಕ್ಸ್‌ಚೇಂಜ್ ಬೋನಸ್ ಸಹ ನೀಡುತ್ತಿದೆ.

ಒಪ್ಪೋ ರೆನೋ 13

ಒಪ್ಪೋ ರೆನೋ 13 (OPPO Reno13) ಫೋನ್ 37,999 ರೂ.ಗೆ ಬಿಡುಗಡೆಯಾಗಿತ್ತು. ನೀವು ಫೆಡರಲ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಬ್ಯಾಂಕ್ ಆಫರ್‌ ಬರೋಡಾ ಕಾರ್ಡ್‌, ಆಕ್ಸಿಸ್ ಬ್ಯಾಂಕ್, ಎಸ್‌ಬಿಐ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿಕೊಂಡು 3,799 ರೂ.ಗಳ ರಿಯಾಯಿತಿಯೊಂದಿಗೆ ಈ ಮೊಬೈಲ್‌ ಅನ್ನು ಖರೀದಿಸಬಹುದು. ಈ ಸೇಲ್‌ನಲ್ಲಿ ಹೆಚ್ಚುವರಿ 3,000 ರೂ. ಎಕ್ಸ್‌ಚೇಂಜ್ ಬೋನಸ್ ಪಡೆಯಬಹುದು.

ಒಪ್ಪೋ ರೆನೋ 13 ಪ್ರೊ

ಒಪ್ಪೋ ರೆನೋ 13 ಪ್ರೊ ಫೋನ್ 4,999 ರೂ.ಗಳ ಬ್ಯಾಂಕ್ ರಿಯಾಯಿತಿಯೊಂದಿಗೆ ಮಾರಾಟವಾಗುತ್ತಿದೆ. ನೀವು 45,000 ರೂ.ಗೆ ಖರೀದಿಸಬಹುದು. ಈ ಫೋನನ್ನು 49,999 ರೂ. ಬೆಲೆಗೆ ಬಿಡುಗಡೆ ಮಾಡಲಾಗಿತ್ತು. ಒಪ್ಪೋ ರೆನೋ 13 ಪ್ರೊ ಫೋನಿಗೂ 3,000 ರೂ. ಎಕ್ಸ್‌ಚೇಂಜ್ ಬೋನಸ್ ಲಭ್ಯವಿದೆ.

ಒಪ್ಪೋ F27 ಮತ್ತು ಒಪ್ಪೋ F27 ಪ್ರೊ+

ಒಪ್ಪೋ F27 (OPPO F27) ಫೋನ್ 1,500 ರೂ.ಗಳ ಬ್ಯಾಂಕ್ ರಿಯಾಯಿತಿಯೊಂದಿಗೆ ಮಾರಾಟವಾಗುತ್ತಿದೆ. ಹಾಗೆಯೇ, ಒಪ್ಪೋ F27 ಪ್ರೊ+ (OPPO F27 Pro+) ಮೊಬೈಲ್ 2,000 ರೂ.ಗಳ ರಿಯಾಯಿತಿಯೊಂದಿಗೆ ಖರೀದಿಗೆ ಲಭ್ಯವಿದೆ. ಈ ಆಫರ್‌ ಫೆಬ್ರವರಿ 28 ರವರೆಗೆ ಮಾತ್ರ ಲಭ್ಯವಿರುತ್ತದೆ.

Best Mobiles in India

English summary
oppo Valentine’s day Sale: Get Up to Rs.9999 discount on oppo find x8 series, oppo reno13 series and More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+