ಬರೀ 5,899 ರೂ.! 5000mAh ಬ್ಯಾಟರಿ.. ಸೊಗಸಾದ ಕ್ಯಾಮೆರಾ.. ಈ POCO ಫೋನಿಗೆ ಸಖತ್ ಆಫರ್
ಅತ್ಯಂತ ಅಗ್ಗದ ಸ್ಮಾರ್ಟ್‌ಫೋನ್ ಖರೀದಿಸುವವರಿಗೆ ಫ್ಲಿಪ್‌ಕಾರ್ಟ್ ಒಳ್ಳೆಯ ಸುದ್ದಿ ನೀಡಿದೆ. ನೀವು 6,000 ರೂ.ಗಿಂತ ಕಡಿಮೆ ಬೆಲೆಯಲ್ಲಿ ಪೊಕೊ (Poco) ಮೊಬೈಲ್ ಖರೀದಿಸಬಹುದು. ಹೌದು, ಫ್ಲಿಪ್‌ಕಾರ್ಟ್ ವಿಶೇಷ ಸೇಲ್‌ನಲ್ಲಿ ಪೊಕೊ C61 (Poco C61) ಸ್ಮಾರ್ಟ್‌ಫೋನ್ ರಿಯಾಯಿತಿ ದರದಲ್ಲಿ ಲಭ್ಯವಿದೆ. ಇದು ಅಗ್ಗದ ಬೆಲೆಯನ್ನು ಹೊಂದಿದ್ದರೂ, ಕಾರ್ಯಕ್ಷಮತೆ ಮತ್ತು ವೈಶಿಷ್ಟ್ಯಗಳಲ್ಲಿ ಕಂಪನಿಯು ಯಾವುದೇ ಕೊರತೆ ಮಾಡಿಲ್ಲ. ಬನ್ನಿ, ಈ ಪೊಕೊ C61 ಫೋನಿನ ಹೊಸ ಬೆಲೆ, ಆಫರ್‌ಗಳು ಮತ್ತು ವಿಶೇಷತೆಗಳನ್ನು ತಿಳಿಯೋಣ.
ಶಿಯೋಮಿ ಉಪ ಬ್ರಾಂಡ್ ಪೊಕೊ ಅಗ್ಗದ ಬಜೆಟ್ ಪೊಕೊ C61 ಅನ್ನು ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್ 90Hz ರಿಫ್ರೆಶ್ ದರದೊಂದಿಗೆ 6.71 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು ಮೀಡಿಯಾಟೆಕ್ ಹೆಲಿಯೊ G36 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 5,000mAh ಬ್ಯಾಟರಿ ಇದೆ. ಜೊತೆಗೆ 8 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಮತ್ತು 4GB RAM + 64GB ಸ್ಟೋರೇಜ್ ಆಯ್ಕೆ ಹೊಂದಿದೆ.

ಪೊಕೊ C61 ಹೊಸ ಬೆಲೆ ಮತ್ತು ಆಫರ್
ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ ಪೊಕೊ C61 ಸ್ಮಾರ್ಟ್‌ಫೋನ್ ಶೇ.34 ರಷ್ಟು ರಿಯಾಯಿತಿಯೊಂದಿಗೆ ಮಾರಾಟವಾಗುತ್ತಿದೆ. ನೀವು, ಕೇವಲ 5,899 ರೂ.ಗೆ ಖರೀದಿಸಬಹುದು. ಇದು 4GB RAM ಮತ್ತು 64GB ಸ್ಟೋರೇಜ್ ರೂಪಾಂತರದ ಬೆಲೆ ಆಗಿದೆ. ಆಯ್ದ ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿಕೊಂಡು ಈ ಫೋನ್ ಖರೀದಿಸಿದರೆ, ಶೇ.5 ರಷ್ಟು ಹೆಚ್ಚುವರಿ ರಿಯಾಯಿತಿ ಸಹ ಪಡೆಯಬಹುದು. ಈ ಮೂಲಕ ಅತ್ಯಂತ ಕಡಿಮೆ ಬೆಲೆಗೆ ಈ ಸ್ಮಾರ್ಟ್‌ಫೋನ್ ಖರೀದಿಸಬಹುದು. ಈ ಫೋನ್ ಎಥೆರಿಯಲ್ ಬ್ಲೂ, ಡೈಮಂಡ್ ಬಸ್ಟ್ ಬ್ಲಾಕ್ ಮತ್ತು ಮಿಸ್ಟಿಕಲ್ ಗ್ರೀನ್ ಬಣ್ಣಗಳಲ್ಲಿ ಮಾರಾಟವಾಗುತ್ತಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಈ ಎಲ್ಲ ಆಫರ್‌ಗಳ ಲಾಭ ಪಡೆಯಬಹುದು.
ಪೊಕೊ C61 ವೈಶಿಷ್ಟ್ಯಗಳ
ಡಿಸ್ಪ್ಲೇ ಹೇಗಿದೆ
ಪೊಕೊ C61 ಫೋನ್ 6.71 ಇಂಚಿನ ಎಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದು ಐಪಿಎಸ್ ಎಲ್‌ಸಿಡಿ ಡಿಸ್ಲ್ಪೇ ಆಗಿದೆ. ಈ ಡಿಸ್ಪ್ಲೇಯು 1650 x 720 ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಜೊತೆಗೆ 90Hz ರಿಫ್ರೆಶ್ ದರ, 500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಇದು ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ಹೊಂದಿದೆ.
ಪ್ರೊಸೆಸರ್ ಯಾವುದು?
ಪೊಕೊ C61 ಮೊಬೈಲ್ ಮೀಡಿಯಾಟೆಕ್ ಹೆಲಿಯೋ G36 (MediaTek Helio G36) ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಿದೆ. ಈ ಪೊಕೊ ಫೋನ್ ಆಡ್ರಾಯ್ಡ್ 13 (Android 13) ಆಧಾರಿತ MIUI 14 ಓಎಸ್‌ನಲ್ಲಿ ಕೆಲಸ ನಿರ್ವಹಿಸುತ್ತದೆ.

ಡ್ಯುಯಲ್ ಕ್ಯಾಮೆರಾ ಸೆಟಪ್
ಪೊಕೊ C61 ಸ್ಮಾರ್ಟ್‌ಫೋನ್ ಎಐ (AI) ತಂತ್ರಜ್ಞಾನದೊಂದಿಗೆ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 8 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಸ್ಮಾರ್ಟ್‌ಫೋನ್ 5 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸಹ ಹೊಂದಿದೆ.
ಬೊಂಬಾಟ ಬ್ಯಾಟರಿ ಬ್ಯಾಕಪ್
ಪೊಕೊ C61 ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 10W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.
ಇತರೆ ವೈಶಿಷ್ಟ್ಯಗಳು
ಪೊಕೊ C61 ಮೊಬೈಲ್ ಭದ್ರತೆಗಾಗಿ ಸೈಡ್ ಫೇಸಿಂಗ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ, 3.5mm ಹೆಡ್‌ಫೋನ್ ಜ್ಯಾಕ್, ಡ್ಯುಯಲ್ ಸಿಮ್ 4G, ಬ್ಲೂಟೂತ್ 5.3, ವೈ-ಫೈ 5, ಯುಎಸ್‌ಬಿ ಟೈಪ್ ಸಿ ಪೋರ್ಟ್ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.


Click it and Unblock the Notifications








