Home
Deal of the day

POCO C65 ಬೆಲೆ ಕುಸಿತ! 36% ಡಿಸ್ಕೌಂಟ್.. ಕೇವಲ 6,998 ರೂ.ಗೆ ಸಿಗುತ್ತೆ!

ಪೊಕೊ ಸ್ಮಾರ್ಟ್‌ಫೋನ್‌ಗಳನ್ನು ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಾರೆ. ಇನ್ನು ಬಂಪರ್ ಆಫರ್ ಇದೆ ಅಂದ್ರೆ ಬಿಡ್ತಾರಾ..? ಹೌದು, ಪೊಕೊ ಪ್ರಿಯರಿಗೆ ಇಲ್ಲಿದೆ ಭರ್ಜರಿ ಸಿಹಿ ಸುದ್ದಿ! ಪೊಕೊ C65 (POCO C65) ಖರೀದಿ ಮೇಲೆ ಬರೋಬ್ಬರಿ ಶೇ.36 ರಷ್ಟು ಡಿಸ್ಕೌಂಟ್ ಇದೆ. ನೀವು ಕಡಿಮೆ ಬೆಲೆಯ ಹೊಸ ಫೋನನ್ನು ಖರೀದಿಸಲು ಬಯಸಿದ್ರೆ, ಇದು ಉತ್ತಮ ಆಯ್ಕೆಯಾಗಿದೆ. ಬನ್ನಿ, ಈ ಫೋನಿನ ಆಫರ್‌ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.

ಪೊಕೊ ಕಳೆದ ವರ್ಷ ಡಿಸೆಂಬರ್‌ನಲ್ಲಿ ತನ್ನ ಅಗ್ಗದ ಸ್ಮಾರ್ಟ್‌ಫೋನ್ ಪೊಕೊ C65 ಅನ್ನು ಬಿಡುಗಡೆ ಮಾಡಿತು. ಮಾರುಕಟ್ಟೆಗೆ ಬಂದಾಗಿನಿಂದ ಭಾರತೀಯ ಗ್ರಾಹಕರು ಈ ಫೋನನ್ನು ಬಹಳಷ್ಟು ಇಷ್ಟಪಟ್ಟಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ಈ ಫೋನ್ ಮೇಲೆ ಭರ್ಜರಿ ರಿಯಾಯಿತಿ ಘೋಷಿಸಿದೆ. ಈ ಫೋನ್, 6.74 ಇಂಚಿನ HD+ ಡಿಸ್ಪ್ಲೇ, ಹೆಲಿಯೋ ಜಿ85 ಪ್ರೊಸೆಸರ್, 5,000mAh ಬ್ಯಾಟರಿ, ಟ್ರಿಪಲ್ ಕ್ಯಾಮೆರಾ ಸೆಟಪ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

POCO C65 ಬೆಲೆ ಕುಸಿತ! 36% ಡಿಸ್ಕೌಂಟ್.. ಕೇವಲ 6,998 ರೂ.ಗೆ ಲಭ್ಯ!

ಪೊಕೊ C65 ಫೋನಿನ ಬೆಲೆ ಮತ್ತು ಆಫರ್‌ಗಳು

ಪೊಕೊ C65 ಫೋನನ್ನು ಇ ಕಾಮರ್ಸ್ ಸೈಟ್‌ಗಳಾದ ಅಮೇಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಬಹುದು. ಅಮೇಜಾನ್‌ನಲ್ಲಿ ಈ ಫೋನಿನ ಮೇಲೆ ಶೇ. 36 ರಷ್ಟು ರಿಯಾಯಿತಿ ಲಭ್ಯವಿದೆ. ಫೋನಿನ 4GB RAM ಮತ್ತು 128GB ಸ್ಟೋರೇಜ್‌ ಬೆಲೆ 8,499 ರೂ. ಇದೆ. 1,501 ರೂ.ಗಳ ಡಿಸ್ಕೌಂಟ್‌ನೊಂದಿಗೆ ಈ ಫೋನನ್ನು ಕೇವಲ 6,998 ರೂ.ಗೆ ಖರೀದಿಸಬಹುದು.

ಈ ಫೋನಿನ 6GB RAM ಮತ್ತು 128GB ಸ್ಟೋರೇಜ್ ರೂಪಾಂತರವು 7,499 ರೂ.ಗೆ ಲಭ್ಯವಿದೆ. 8GB ಮತ್ತು 256GB ಸ್ಟೋರೇಜ್‌ ವೇರಿಯಂಟ್ 10,998 ರೂ.ಗೆ ಮಾರಾಟವಾಗುತ್ತಿದೆ. ಅಮೆಜಾನ್ ಸೈಟ್‌ನಲ್ಲಿ ರಿಯಾಯಿತಿಗಳ ಜೊತೆಗೆ, ನೋ ಕಾಸ್ಟ್ ಇಎಂಐ ಮತ್ತು ಎಕ್ಸ್‌ಚೇಂಜ್‌ ಆಫರ್‌ಗಳನ್ನು ಸಹ ನೀಡಲಾಗುತ್ತಿದೆ.

ಫ್ಲಿಪ್‌ಕಾರ್ಟ್‌ನಲ್ಲಿಯೂ ಆಫರ್‌ ಲಭ್ಯ

ಪೊಕೊ C65 ಫೋನ್ ಆನ್‌ಲೈನ್ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿಯೂ ಖರೀದಿಗೆ ಲಭ್ಯವಿದೆ. ಫೋನಿನ 4GB RAM ಮತ್ತು 128GB ಸ್ಟೋರೇಜ್‌ ಬೆಲೆ 6,999 ರೂ. ಇದೆ. 6GB RAM ಮತ್ತು 128GB ರೂಪಾಂತರದ ಬೆಲೆ 7,499 ರೂ.ಗೆ ಲಭ್ಯವಿದೆ. 8GB ಮತ್ತು 256GB ರೂಪಾಂತರದ ಬೆಲೆ 10,999 ಆಗಿದೆ. ನೀವು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೇಲೆ ಶೇ.5 ರಷ್ಟು ಕ್ಯಾಶ್‌ಬ್ಯಾಕ್ ಪಡೆಯಬಹುದು. ಇದರೊಂದಿಗೆ ಎಕ್ಸ್‌ಚೇಂಜ್ ಆಫರ್ ಕೂಡ ಲಭ್ಯವಿದೆ.

ಪೊಕೊ C65 ಫೋನಿನ ವೈಶಿಷ್ಟ್ಯಗಳು

ಪೊಕೊ C65 ಮೊಬೈಲ್ 6.74 ಇಂಚಿನ HD+ ಡಿಸ್ಪ್ಲೇ ಹೊಂದಿದೆ. ಇದು 90Hz ರಿಫ್ರೆಶ್ ರೇಟ್, ಪಿಕ್ಸೆಲ್ ರೆಸಲ್ಯೂಶನ್ 1650 x 720 ಮತ್ತು ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ಹೊಂದಿದೆ. ಕಂಪನಿಯು ಈ ಫೋನಿನಲ್ಲಿ MediaTek Helio G85 ಪ್ರೊಸೆಸರ್ ಅನ್ನು ಅಳವಡಿಸಿದೆ. ಗ್ರಾಫಿಕ್ಸ್‌ಗಾಗಿ Mali-G52 MC2 GPU ಇದೆ. ಇದು ಮೂರು ಸ್ಟೋರೇಜ್ ರೂಪಾಂತರಗಳಲ್ಲಿ ಬರುತ್ತದೆ. ಇದರಲ್ಲಿ ಉನ್ನತ ಮಾದರಿಯು 8GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ಹೊಂದಿದೆ.

ಪೊಕೊ C65 ಸ್ಮಾರ್ಟ್‌ಫೋನ್ ಎಲ್ಇಡಿಯೊಂದಿಗೆ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಮತ್ತು ಎಐ ಲೆನ್ಸ್ ಅನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ.

ಪೊಕೊ C65 ಮೊಬೈಲ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 18W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಕಂಪನಿಯು ಬಾಕ್ಸ್‌ನಲ್ಲಿ 10W ಅಡಾಪ್ಟರ್ ಅನ್ನು ಮಾತ್ರ ಒದಗಿಸಿದೆ. ಇದು ಡ್ಯುಯಲ್ ಸಿಮ್ 4G LTE, ಡ್ಯುಯಲ್ ಬ್ಯಾಂಡ್ Wi-Fi, ಬ್ಲೂಟೂತ್, ಜಿಪಿಎಸ್‌, ಯುಎಸ್‌ಬಿ ಟೈಪ್ ಸಿ ಪೋರ್ಟ್, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಫೇಸ್ ಅನ್‌ಲಾಕ್‌ನಂತಹ ಹಲವು ಆಯ್ಕೆಗಳನ್ನು ಹೊಂದಿದೆ.

Best Mobiles in India

English summary
POCO C65 Received 36 percent discount in amazon: Check availability, offers, specs and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+