Home
Deal of the day

POCO: ಈ 5G ಫೋನ್ 7,499ಕ್ಕೆ ಲಭ್ಯ: 50MP ಕ್ಯಾಮೆರಾ, 5000mAh ಬ್ಯಾಟರಿ.. ಈ ಆಫರ್‌ ಬಿಡಬೇಡಿ!

ಪ್ರಸ್ತುತ ಬಹುತೇಕ ಎಲ್ಲಾ ಸ್ಮಾರ್ಟ್‌ಫೋನ್‌ ಬಳಕೆದಾರರು 5G ಫೋನ್‌ಗಳತ್ತ ಮುಖ ಮಾಡಿದ್ದಾರೆ. ಆದರೆ, ಬಜೆಟ್‌ ಕೊರತೆಯಿಂದ ಕೆಲವರು ಮಾತ್ರ ಇತ್ತ ಸುಳಿದಿಲ್ಲ. ಅಂತಹ ಗ್ರಾಹಕರಿಗೆ ಇದು ಸಂತಸದ ಸುದ್ದಿ. ನೀವು ಪೊಕೊ ಕಂಪನಿಯ ಈ 5G ಮೊಬೈಲ್ ಅನ್ನು ಕೇವಲ 7,499 ರೂ.ಗಳಿಗೆ ಖರೀದಿಸಬಹುದು. ಅದುವೇ, ಪೊಕೋ M6 5G (POCO M6 5G) ಸ್ಮಾರ್ಟ್‌ಫೋನ್ ಆಗಿದೆ. ಇದರೊಂದಿಗೆ, ಶೇ.5 ರವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದು. ನೋ ಕಾಸ್ಟ್ ಇಎಂಐ ಆಯ್ಕೆಯು ಲಭ್ಯವಿದೆ.

ಹೌದು, ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್, ಇದೀಗ ಬಿಗ್ ಬಿಲಿಯನ್ ಡೇಸ್ ಸೇಲ್‌ 2024 (Flipkart Big Billion Days sale 2024) ಅನ್ನು ಪ್ರಾರಂಭಿಸಿದೆ. ಈ ವಿಶೇಷ ಮಾರಾಟದಲ್ಲಿ ಹಲವು ಕಂಪನಿಗಳ ಸ್ಮಾರ್ಟ್‌ಫೋನ್‌ಗಳು ಭರ್ಜರಿ ರಿಯಾಯಿತಿಯೊಂದಿಗೆ ಗ್ರಾಹಕರಿಗೆ ಲಭ್ಯವಾಗಿವೆ. ಈ ಮೂಲಕ ಹೆಚ್ಚು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅದರಂತೆ, ಪ್ರಸ್ತುತ ಫ್ಲಿಪ್‌ಕಾರ್ಟ್ ವಿಶೇಷ ಮಾರಾಟದಲ್ಲಿ ಪೊಕೋ M6 5G ಕೂಡ ರಿಯಾಯಿತಿ ದರದಲ್ಲಿ ಮಾರಾಟವಾಗುತ್ತಿದೆ.

POCO: ಈ 5G ಫೋನ್ 7,499ಕ್ಕೆ ಲಭ್ಯ: 50MP ಕ್ಯಾಮೆರಾ, 5000mAh ಬ್ಯಾಟರಿ!

ಪೊಕೋ M6 5G ಬೆಲೆ ಮತ್ತು ಆಫರ್‌ಗಳು

ಪೊಕೋ M6 5G ಸ್ಮಾರ್ಟ್‌ಫೋನ್ ಕೇವಲ 7,499 ರೂ.ಗಳ ಆಫರ್‌ ಅಡಿಯಲ್ಲಿ ಖರೀದಿಗೆ ಲಭ್ಯವಿದೆ. ಇದು ಫೋನ್‌ನ 4GB RAM + 64GB ಸ್ಟೋರೇಜ್‌ ಬೆಲೆಯಾಗಿದೆ. ಇದರ ಮೇಲೆ ಕಂಪನಿಯು 500 ರೂ.ಗಳ ತ್ವರಿತ ಬ್ಯಾಂಕ್ ರಿಯಾಯಿತಿಯನ್ನು ನೀಡುತ್ತಿದೆ. ನೀವು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ, ಶೇ.5 ರವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದು. ಜೊತೆಗೆ, ನೋ ಕಾಸ್ಟ್ ಇಎಂಐ ಆಯ್ಕೆಯ ಪ್ರಯೋಜನ ಪಡೆಯಬಹುದು.

ನೀವು ಫ್ಲಿಪ್‌ಕಾರ್ಟ್‌ನಲ್ಲಿ ಶುರುವಾಗಿರುವ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಈ ಫೋನ್ ಖರೀದಿಸಬಹುದು. ಈ ಮೊಬೈಲ್ ಮೂರು ಸ್ಟೋರೇಜ್‌ ಆಯ್ಕೆಗಳಲ್ಲಿ ಬರುತ್ತದೆ. ಈ ಫೋನಿನ 4GB RAM + 128GB ಸ್ಟೋರೇಜ್ ಆಯ್ಕೆ ಬೆಲೆ 9,249 ರೂ. ಆಗಿದೆ. 6GB RAM + 128GB ರೂಪಾಂತರದ ಬೆಲೆ 9,499 ರೂ. ಮತ್ತು 8GB RAM + 256GB ಸ್ಟೋರೇಜ್ ಬೆಲೆ 13,499 ರೂ.ಗೆ ಮಾರಾಟವಾಗುತ್ತಿದೆ. ಬ್ಯಾಂಕ್ ಆಫರ್‌ ಮತ್ತು ಕ್ಯಾಶ್‌ಬ್ಯಾಕ್ ಸೇರಿದಂತೆ ಇಎಂಐ ಸೌಲಭ್ಯವೂ ಲಭ್ಯವಿದೆ.

ಪೊಕೋ M6 5G ಫೋನಿನ ವೈಶಿಷ್ಟ್ಯಗಳು

ಡಿಸ್ಪೇ: ಪೊಕೋ M6 5G ಫೋನ್ 6.74 ಇಂಚಿನ ಹೆಚ್‌ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಇದು 90Hz ರಿಫ್ರೆಶ್ ರೇಟ್ ಮತ್ತು ರಕ್ಷಣೆಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಅನ್ನು ಹೊಂದಿದೆ.

ಪ್ರೊಸೆಸರ್: ಈ ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಶನ್ 6100 ಪ್ಲಸ್ ಚಿಪ್‌ಸೆಟ್ ಅನ್ನು ಒಳಗೊಂಡಿದೆ. ಪೊಕೋ M6 5G ಫೋನ್ 8GB RAM + 256GB ವರೆಗಿನ ಆಂತರಿಕ ಸ್ಟೋರೇಜ್‌ನೊಂದಿಗೆ ಬರುತ್ತದೆ. ಇದು RAM ಅನ್ನು ಹೆಚ್ಚಿಸಲು ಟರ್ಬೊ ಬೆಂಬಲವನ್ನು ಹೊಂದಿದೆ. ಮತ್ತು ಆಂತರಿಕ ಸ್ಟೋರೇಜ್‌ ಹೆಚ್ಚಿಸಲು ಮೈಕ್ರೋ SD ಕಾರ್ಡ್ ಸ್ಲಾಟ್ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 13 ಆಧಾರಿತ MIUI 14 ಅನ್ನು ಆಧರಿಸಿದೆ.

ಕ್ಯಾಮೆರಾ: ಪೊಕೋ M6 5G ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಲೆನ್ಸ್ ಮತ್ತು ಎಐ ಕ್ಯಾಮೆರಾ ಲಭ್ಯವಿದೆ. ಸೆಲ್ಫಿ ಪ್ರಿಯರಿಗಾಗಿ, 5 ಮೆಗಾಪಿಕ್ಸೆಲ್ ಎಐ ಫ್ರಂಟ್‌ ಕ್ಯಾಮೆರಾ ಇದೆ.

ಬ್ಯಾಟರಿ: ಪೊಕೋ M6 5G ಮೊಬೈಲ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದನ್ನು ವೇಗವಾಗಿ ಚಾರ್ಜ್‌ ಮಾಡಲು 18W ವೇಗದ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ.

ಇತರೆ ವೈಶಿಷ್ಟ್ಯಗಳು: ಪೊಕೋ M6 5G ಫೋನ್ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, ಡ್ಯುಯಲ್ ಸಿಮ್ 5G, 4G, ಬ್ಲೂಟೂತ್, ವೈ-ಫೈ ಮುಂತಾದ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಈ ಫೋನಿನಲ್ಲಿ 3 ವರ್ಷಗಳ ಭದ್ರತಾ ನವೀಕರಣಗಳು ಲಭ್ಯವಿರುತ್ತದೆ.

Best Mobiles in India

English summary
POCO M6 5G is available for just Rs 7499 on Flipkart Big Billion Days sale: know all details here
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+