POCO M6 5G ಬೆಲೆ ದೊಡ್ಡ ಕುಸಿತ: ಅತೀ ಅಗ್ಗದ ಬೆಲೆಗೆ ಸಿಗುತ್ತೆ.. ಆಫರ್ ಕೂಡ ಇದೆ!
ಪೊಕೊ ಅಭಿಮಾನಿಗಳಿಗೆ ಒಳ್ಳೆಯ ಸುದ್ದಿ ಇದೆ. ಮೊದಲೇ ಕಡಿಮೆ ಬೆಲೆ ಇರುವ ಪೊಕೊ ಫೋನ್, ಇದೀಗ ಡಿಸ್ಕೌಂಟ್‌ನೊಂದಿಗೆ ಖರೀದಿಗೆ ಲಭ್ಯವಿದೆ. ಹೌದು, ಪೊಕೊ (Poco) ಕಂಪನಿಯು ಕಳೆದ ವರ್ಷ ಡಿಸೆಂಬರ್‌ನಲ್ಲಿ ತನ್ನ ಕೈಗೆಟುಕುವ ಸ್ಮಾರ್ಟ್‌ಫೋನ್ ಪೊಕೊ M6 5G (POCO M6 5G) ಅನ್ನು ಬಿಡುಗಡೆ ಮಾಡಿತು. ಮಾರುಕಟ್ಟೆಯಲ್ಲಿ ಪ್ರಾರಂಭವಾದಾಗಿನಿಂದ, ಭಾರತೀಯ ಗ್ರಾಹಕರು ಇದನ್ನು ತುಂಬಾ ಇಷ್ಟಪಟ್ಟಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ಫೋನ್ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಈ ಫೋನಿನ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ ಬನ್ನಿ.
ನೀವು ಕಡಿಮೆ ಬೆಲೆಯಲ್ಲಿ ಉತ್ತಮ ಫೋನ್ ಖರೀದಿಸುವುದಾದರೆ, ಪೊಕೊ C65 ಸೂಕ್ತ ಆಯ್ಕೆಯಾಗಿದೆ. ಈ ಫೋನ್ 6.74 ಇಂಚಿನ HD ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಇದು ಡೈಮೆನ್ಸಿಟಿ 6100 ಪ್ಲಸ್ ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದು 8GB RAM + 256 GB ಸ್ಟೋರೇಜ್ ಆಯ್ಕೆಯಲ್ಲಿ ಬರುತ್ತದೆ. ನೀವು ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಕ್ಯಾಮೆರಾ ಪಡೆಯಬಹುದು. ಇದು 5,000mAh ಸಾಮರ್ಥ್ಯದ ಬ್ಯಾಟರಿ, 18W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಪೊಕೊ C65 ಫೋನಿನ ಬೆಲೆ ಮತ್ತು ಆಫರ್‌ಗಳು
ನೀವು ಪೊಕೊ M6 5G ಸ್ಮಾರ್ಟ್‌ಫೋನ್ ಅನ್ನು ಇ-ಕಾಮರ್ಸ್ ಸೈಟ್ ಅಮೇಜಾನ್ ಮೂಲಕ ಖರೀದಿಸಬಹುದು. ಸ್ಮಾರ್ಟ್‌ಫೋನ್‌ನ 4GB RAM + 128GB ಸ್ಟೋರೇಜ್ ಮತ್ತು 6GB RAM + 128GB ಸ್ಟೋರೇಜ್ ರೂಪಾಂತರಗಳ ಮೇಲೆ 1,501 ರೂ.ಗಳ ರಿಯಾಯಿತಿಯನ್ನು ನೀಡಲಾಗುತ್ತಿದೆ. ಡಿಸ್ಕೌಂಟ್ ನಂತರ, ನೀವು 8,998 ರೂ.ಗೆ ಸ್ಮಾರ್ಟ್‌ಫೋನ್‌ನ ಮೂಲ ಮಾದರಿಯನ್ನು ಖರೀದಿಸಬಹುದು. 6GB RAM + 128GB ಸ್ಟೋರೇಜ್ ರೂಪಾಂತರವು 9,998 ರೂ.ಗೆ ಲಭ್ಯವಿರುತ್ತದೆ.
ಬಿಡುಗಡೆಯ ಸಮಯದಲ್ಲಿ ಈ ಮಾದರಿಗಳ ಬೆಲೆ ಕ್ರಮವಾಗಿ 10,499 ರೂ. ಮತ್ತು 11,499 ರೂ. ಇತ್ತು. ರಿಯಾಯಿತಿಯೊಂದಿಗೆ ಅಮೆಜಾನ್‌ನಲ್ಲಿ ನೋ ಕಾಸ್ಟ್ ಇಎಂಐ ಆಯ್ಕೆಯೂ ಲಭ್ಯವಿದೆ. ಜೊತೆಗೆ, ಕಂಪನಿಯು 8,500 ರೂ.ಗಳ ವರೆಗೆ ಎಕ್ಸ್‌ಚೇಂಜ್ ಆಫರ್ ಅನ್ನು ಸಹ ನೀಡುತ್ತಿದೆ. ನೀವು ಅಮೇಜಾನ್ ಪೇ ಐಸಿಐಸಿಐ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದರೆ, ನೀವು ಶೇ.5 ರಷ್ಟು ಕ್ಯಾಶ್‌ಬ್ಯಾಕ್ ಅನ್ನು ಸಹ ಪಡೆಯಬಹುದು. ಇದು ಓರಿಯನ್ ಬ್ಲೂ ಮತ್ತು ಗ್ಯಾಲಕ್ಟಿಕ್ ಬ್ಲ್ಯಾಕ್ ಬಣ್ಣದಲ್ಲಿ ಲಭ್ಯವಿದೆ.
ಪೊಕೊ M6 5G ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ: ಪೊಕೊ M6 5G ಫೋನ್ 6.74 ಇಂಚಿನ HD ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಇದು 90Hz ರಿಫ್ರೆಶ್ ರೇಟ್ ಮತ್ತು ರಕ್ಷಣೆಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಅನ್ನು ಹೊಂದಿದೆ.
ಪ್ರೊಸೆಸರ್: ಈ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಷನ್ 6100 ಪ್ಲಸ್ ಚಿಪ್ಸೆಟ್ ಅನ್ನು ಒಳಗೊಂಡಿದೆ. ಇದು ಅತ್ಯದ್ಭುತ ವೇಗ ಮತ್ತು ಗೇಮಿಂಗ್ ಕಾರ್ಯಕ್ಷಮತೆಯನ್ನು ನೀಡುತ್ತದೆ. ಈ ಫೋನ್ 8GB RAM + 256 GB ವರೆಗಿನ ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಇದು RAM ಅನ್ನು ವಿಸ್ತರಿಸಲು Turbo RAM ಬೆಂಬಲವನ್ನು ಮತ್ತು ಇಂಟರ್ನಲ್ ಸ್ಟೋರೇಜ್ ವಿಸ್ತರಿಸಲು ಮೈಕ್ರೊ SD ಕಾರ್ಡ್ ಸ್ಲಾಟ್ ಅನ್ನು ಪಡೆದಿದೆ.
ಕ್ಯಾಮೆರಾ: ಪೊಕೊ M6 5G ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಇದು 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಲೆನ್ಸ್ ಮತ್ತು ಎಐ (AI) ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ, ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 5 ಮೆಗಾಪಿಕ್ಸೆಲ್ ಎಐ ಫ್ರಂಟ್ ಕ್ಯಾಮೆರಾ ಇದೆ.
ಬ್ಯಾಟರಿ: ಪೊಕೊ M6 5G ಮೊಬೈಲ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಫೋನ್ MIUI 14 ಆಧಾರಿತ Android 13 ಅನ್ನು ಒಳಗೊಂಡಿದೆ. ಕಂಪನಿಯು ಎರಡು ಆಂಡ್ರಾಯ್ಡ್ ನವೀಕರಣಗಳು ಮತ್ತು 3 ವರ್ಷಗಳ ಭದ್ರತಾ ನವೀಕರಣಗಳನ್ನು ಸಹ ನೀಡುತ್ತದೆ.
ಇತರೆ ವೈಶಿಷ್ಟ್ಯಗಳು: ಇದು ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, ಡ್ಯುಯಲ್ ಸಿಮ್ 5G, ಬ್ಲೂಟೂತ್, ವೈ-ಫೈ ಮುಂತಾದ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.


Click it and Unblock the Notifications








