ಕೇವಲ 11,249 ರೂ.! 108MP ಕ್ಯಾಮೆರಾ.. 5030mAh ಬ್ಯಾಟರಿ.. ಮತ್ತೆ ಇಷ್ಟು ಕಡಿಮೆಗೆ ಸಿಗಲ್ಲ
ಪೊಕೊ ಶಿವರಾತ್ರಿ ಹಬ್ಬದ ಪ್ರಯುಕ್ತ ತನ್ನ ಗ್ರಾಹಕರಿಗೆ ಒಳ್ಳೆಯ ಗಿಫ್ಟ್ ನೀಡುತ್ತಿದೆ. ನೀವು ನೀವು ಅಗ್ಗದ 5G ಫೋನ್ ಖರೀದಿಸಲು ಬಯಸಿದರೆ, ಈ ಅವಕಾಶ ಮಿಸ್ ಮಾಡಿಕೊಳ್ಳಬೇಡಿ. ಹೌದು, ಅಮೆಜಾನ್‌ನಲ್ಲಿ ಪೊಕೊ M6 ಪ್ಲಸ್ 5G (Poco M6 Plus 5G) ಫೋನಿನ ಖರೀದಿ ಮೇಲೆ ಬೊಂಬಾಟ್ ಆಫರ್ ಲಭ್ಯವಿದೆ. ಜೊತೆಗೆ ಬ್ಯಾಂಕ್ ಡಿಸ್ಕೌಂಟ್ ಮತ್ತು ಕ್ರೆಡಿಟ್ ಕಾರ್ಡ್ ಪಾವತಿ ಮೇಲೆ ಹೆಚ್ಚುವರಿ ರಿಯಾಯಿತಿ ನೀಡಲಾಗುತ್ತಿದೆ. ಬನ್ನಿ, ಈ ಪೊಕೊ ಫೋನಿನ ಮೂಲ ಬೆಲೆ, ಆಫರ್ ಮತ್ತು ವಿಶೇಷತೆಗಳನ್ನು ತಿಳಿಯೋಣ.
ಪೊಕೊ M6 ಪ್ಲಸ್ 5G ಫೋನಿನ 8GB RAM ರೂಪಾಂತರದ ಮೇಲೆ ರಿಯಾಯಿತಿ ನೀಡಲಾಗುತ್ತಿದೆ. ಈ ಫೋನಿನಲ್ಲಿ 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 13 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 4 ಜೆನ್ 2 AE ಪ್ರೊಸೆಸರ್ ಜೊತೆಗೆ ಕೆಲಸ ಮಾಡುತ್ತದೆ. ಈ ಮೊಬೈಲ್ 6.79 ಇಂಚಿನ ಡಿಸ್ಪ್ಲೇ ಹೊಂದಿದೆ. ಜೊತೆಗೆ 8GB RAM + 128GB ಸ್ಟೋರೇಜ್, 5030mAh ಬ್ಯಾಟರಿ ಮತ್ತು 33W ವೇಗದ ಚಾರ್ಜರ್ ಸೇರಿದಂತೆ ಹಲವು ಅತ್ಯುತ್ತಮ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಸ್ತುತ, ಈ 5G ಫೋನ್ ಕೇವಲ 11,249 ರೂ.ಗೆ ಮಾರಾಟವಾಗುತ್ತಿದೆ.

ಪೊಕೊ M6 ಪ್ಲಸ್ 5G ಆಫರ್
ಪೊಕೊ M6 ಪ್ಲಸ್ 5G ಮೊಬೈಲ್ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. ಫೋನಿನ 6GB RAM ವೇರಿಯಂಟ್ ಬೆಲೆ 13,499 ರೂ. ಆಗಿದೆ. ಮತ್ತು 8GB RAM ಮಾದರಿಯನ್ನು 14,499 ರೂ. ಪರಿಚಯಿಸಲಾಗಿತ್ತು. ಪ್ರಸ್ತುತ ಅಮೆಜಾನ್‌ನಲ್ಲಿ 8GB RAM ಮಾದರಿಯನ್ನು ಕೇವಲ 11,999 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಈ ಆಫರ್ ಎಲ್ಲಾ ಗ್ರಾಹಕರಿಗೆ ನೀಡಲಾಗುತ್ತಿದೆ. ನೀವು ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡಿದರೆ, 750 ಹೆಚ್ಚುವರಿ ರಿಯಾಯಿತಿ ನೀಡಲಾಗುತ್ತದೆ. ಬ್ಯಾಂಕ್ ಆಫರ್‌ನೊಂದಿಗೆ, ಈ 8GB RAM 5G ಫೋನನ್ನು ಕೇವಲ 11,249 ರೂ.ಗೆ ಖರೀದಿಸಬಹುದು. ಈ ಆಫರ್ ಐಸಿಐಸಿಐ ಮತ್ತು ಎಸ್‌ಬಿಐ ಕ್ರೆಡಿಟ್ ಕಾರ್ಡ್ ಪಾವತಿ ಮೇಲೆ ಲಭ್ಯವಿದೆ.
ಪೊಕೊ M6 ಪ್ಲಸ್ 5G ವೈಶಿಷ್ಟ್ಯಗಳು
ಡಿಸ್ಪ್ಲೇ ಹೇಗಿದೆ
ಪೊಕೊ M6 ಪ್ಲಸ್ 5G ಫೋನ್ 6.79 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು ಫುಲ್ ಎಚ್‌ಡಿ ಪ್ಲಸ್ ಎಲ್‌ಸಿಡಿ ಸ್ಕ್ರೀನ್ ಆಗಿದೆ. ಈ ಡಿಸ್ಪ್ಲೇಯು 2400 x 1080 ಪಿಕ್ಸೆಲ್‌ಗಳ ರೆಸಲ್ಯೂಶನ್, 120Hz ರಿಫ್ರೆಶ್ ದರ, 240Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 550 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ. ಈ ಮೊಬೈಲ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ಹೊಂದಿದೆ.
ಸ್ನಾಪ್‌ಡ್ರಾಗನ್ ಪ್ರೊಸೆಸರ್
ಪೊಕೊ M6 ಪ್ಲಸ್ 5G ಮೊಬೈಲ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 4 ಜೆನ್ 2 AE ಪ್ರೊಸೆಸರ್ ಹೊಂದಿದೆ. ಇದನ್ನು 4 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳ ಮೇಲೆ ನಿರ್ಮಿಸಲಾಗಿದೆ. ಈ ಫೋನ್ ಆಂಡ್ರಾಯ್ಡ್ 14 ಆಧಾರಿತ ಹೈಪರ್ ಓಎಸ್‌ನಲ್ಲಿ ಕೆಲಸ ನಿರ್ವಹಿಸುತ್ತದೆ. ಗ್ರಾಫಿಕ್ಸ್‌ಗಾಗಿ ಇದು, ಅಡ್ರಿನೊ A613 ಜಿಪಿಯುಸಹ ಹೊಂದಿದೆ. ಇದು ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಬರುತ್ತದೆ. 6GB RAM + 128GB ಸ್ಟೋರೇಜ್ ಮತ್ತು 8GB RAM + 128GB ಸ್ಟೋರೇಜ್ ಆಯ್ಕೆಯಲ್ಲಿ ಖರೀದಿಸಬಹುದು.

ಡ್ಯುಯಲ್ ಕ್ಯಾಮೆರಾ ಸೆಟಪ್
ಪೊಕೊ M6 ಪ್ಲಸ್ 5G ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 3x ಇನ್ ಸೆನ್ಸರ್ ಜೂಮ್ ತಂತ್ರಜ್ಞಾನದೊಂದಿಗೆ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್ 13 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಪೊಕೊ M6 ಪ್ಲಸ್ 5G ಫೋನ್ 5030mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದನ್ನು ವೇಗವಾಗಿ ಚಾರ್ಜ್ ಮಾಡಲು, 33W ವೇಗದ ಚಾರ್ಜರ್ ಸೌಲಭ್ಯ ಒದಗಿಸಲಾಗಿದೆ.
ಇತರೆ ವೈಶಿಷ್ಟ್ಯಗಳು
ಪೊಕೊ M6 ಪ್ಲಸ್ 5G ಮೊಬೈಲ್ ನೀರು ಮತ್ತು ಧೂಳಿನಿಂದ ರಕ್ಷಣೆಗಾಗಿ IP53 ರೇಟಿಂಗ್ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ, ಇದು ಬ್ಲೂಟೂತ್ 5, ವೈ-ಫೈ 6, 5G, ಡ್ಯುಯಲ್ 4G VoLTE, ಜಿಪಿಎಸ್, ಯುಎಸ್‌ಬಿ ಟೈಪ್ ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.


Click it and Unblock the Notifications








