Home
Deal of the day

9,500 ಉಳಿತಾಯ! 512GB ಸ್ಟೋರೇಜ್.. 64MP ಕ್ಯಾಮೆರಾ.. 5,500 ಡಿಸ್ಕೌಂಟ್; ಯಾವ ಫೋನ್?

ಪೊಕೊ ತನ್ನ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಭಾರತದಲ್ಲಿ ಹೊಸ ಪೊಕೊ M7 ಪ್ರೊ ಮತ್ತು ಪೊಕೊ C75 5G ಪೋನ್‌ಗಳನ್ನು ಬಿಡುಗಡೆ ಮಾಡಿದೆ. ಇದರ ಜೊತೆಗೆ ಮತ್ತೊಂದು ಖುಷಿ ಸುದ್ದಿ ನೀಡಿದೆ. ಹೌದು, ಕಂಪನಿಯು ಪೊಕೊ X6 5G (Poco X6 5G) ಫೋನಿನ ಬೆಲೆಯನ್ನು ಇಳಿಕೆ ಮಾಡಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಬರೋಬ್ಬರಿ 9,500 ರೂ. ಡಿಸ್ಕೌಂಟ್ ಲಭ್ಯವಿದೆ. ಜೊತೆಗೆ ಬ್ಯಾಂಕ್‌ ಆಫರ್‌ ಮತ್ತು ಕ್ಯಾಶ್‌ಬ್ಯಾಕ್‌ ಸಿಗುತ್ತದೆ. ಬನ್ನಿ, ಈ ಫೋನಿನ ಹೊಸ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಪೊಕೊ X6 5G ಫೋನ್ ಜನವರಿಯಲ್ಲಿ ಬಿಡುಗಡೆಯಾಗಿತ್ತು. ಈ ಮೊಬೈಲ್ ಮೂರು ಸ್ಟೋರೇಜ್‌ ಆಯ್ಕೆಗಳಲ್ಲಿ ಮಾರಾಟವಾಗುತ್ತಿದೆ. ನೀವು, ಮಿರರ್ ಬ್ಲ್ಯಾಕ್, ಸ್ಕೈಲೈನ್ ಬ್ಲೂ ಮತ್ತು ಸ್ನೋಸ್ಟಾರ್ಮ್ ವೈಟ್‌ ಬಣ್ಣಗಳಲ್ಲಿ ಖರೀದಿಸಬಹುದು. ಈ ಫೋನ್ 64 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಇದು ಸ್ನಾಪ್‌ಡ್ರಾಗನ್‌ 7S ಜೆನ್ 2 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಹಾಗೆಯೇ 512GB ಸ್ಟೋರೇಜ್, 6.67 ಇಂಚಿನ ಡಿಸ್ಪ್ಲೇ, 5100mAh ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

POCO X6 5G ಬೆಲೆ ಕುಸಿತ; 512GB ಸ್ಟೋರೇಜ್, 64MP ಕ್ಯಾಮೆರಾ.. 5,500 ಡಿಸ್ಕೌಂಟ್

ಪೊಕೊ X6 5G ಬೆಲೆ ಮತ್ತು ಆಫರ್‌ಗಳು

ಪೊಕೊ X6 5G ಫೋನಿನ 12GB RAM + 256GB ಸ್ಟೋರೇಜ್ ಮೇಲೆ 1,500 ರೂ. ರಿಯಾಯಿತಿ ಲಭ್ಯವಿದೆ. 8GB RAM + 256GB ಮತ್ತು 12GB RAM + 512GB ಸ್ಟೋರೇಜ್ ಖರೀದಿಯ ಮೇಲೆ 5,500 ರೂ. ಡಿಸ್ಕೌಂಟ್ ಸಿಗುತ್ತದೆ. ರಿಯಾಯಿತಿಯೊಂದಿಗೆ ಮೂಲ ರೂಪಾಂತರವನ್ನು 18,499 ರೂ.ಗೆ ಖರೀದಿಸಬಹುದು. 12GB RAM + 256GB ಸ್ಟೋರೇಜ್ 17,499 ರೂ.ಗೆ ಮತ್ತು 12GB RAM + 512GB ಸ್ಟೋರೇಜ್ 18,499 ರೂ.ಗೆ ಲಭ್ಯವಿದೆ.

ಎಸ್‌ಬಿಐ ಕ್ರೆಡಿಟ್ ಕಾರ್ಡ್ ಪಾವತಿ ಮೇಲೆ 4,500 ರೂ.ಗಳ ಫ್ಲಾಟ್ ರಿಯಾಯಿತಿ ಮತ್ತು 1,000 ರೂ.ಗಳ ಬ್ಯಾಂಕ್ ಡಿಸ್ಕಾಂಟ್ ಸಹ ಲಭ್ಯವಿದೆ. ಜೊತೆಗೆ 3 ರಿಂದ 6 ತಿಂಗಳ ನೋ ಕಾಸ್ಟ್‌ ಇಎಂಐ ಸೌಲಭ್ಯ ನೀಡಲಾಗುತ್ತಿದೆ. ನೀವು, ಆನ್‌ಲೈನ್ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಈ ಎಲ್ಲಾ ಆಫರ್‌ಗಳ ಲಾಭ ಪಡೆಯಬಹುದು.

ಪೊಕೊ X6 5G ವೈಶಿಷ್ಟ್ಯಗಳು

ಡಿಸ್ಪ್ಲೇ ಹೇಗಿದೆ

ಪೊಕೊ X6 5G ಸ್ಮಾರ್ಟ್‌ಫೋನ್ 6.67 ಇಂಚಿನ 1.5K ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ದರ, 1800 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ದರದ ಬೆಂಬಲ ಪಡೆದಿದೆ. ಡಿಸ್ಪ್ಲೇಯು ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆ ಹೊಂದಿದೆ.

ಪ್ರೊಸೆಸರ್ ಯಾವುದು?

ಪೊಕೊ X6 5G ಮೊಬೈಲ್ ಕ್ವಾಲ್ಕಾಮ್‌ನ ಸ್ನಾಪ್ಡ್ರಾಗನ್ 7S ಜೆನ್ 2 ಪ್ರೊಸೆಸರ್ ಹೊಂದಿದೆ. ಇದು ಗ್ರಾಫಿಕ್ಸ್‌ಗಾಗಿ, ಅಡ್ರಿನೊ 710 ಜಿಪಿಯು ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್‌ 13 ಆಧಾರಿತ ಹೈಪರ್ ಓಎಸ್‌ನಲ್ಲಿ ಕೆಲಸ ಮಾಡುತ್ತದೆ.

ಸ್ಟೋರೇಜ್ ಆಯ್ಕೆ

ಪೊಕೊ X6 5G ಫೋನ್ 8GB RAM + 256GB ಸ್ಟೋರೇಜ್, 12GB RAM + 256GB ಸ್ಟೋರೇಜ್ ಮತ್ತು 12GB RAM + 512GB ಸ್ಟೋರೇಜ್ ಆಯ್ಕೆಗಳಲ್ಲಿ ಲಭ್ಯವಿದೆ.

POCO X6 5G ಬೆಲೆ ಕುಸಿತ; 512GB ಸ್ಟೋರೇಜ್, 64MP ಕ್ಯಾಮೆರಾ.. 5,500 ಡಿಸ್ಕೌಂಟ್

64 ಮೆಗಾಪಿಕ್ಸೆಲ್ ಕ್ಯಾಮೆರಾ

ಪೊಕೊ X6 5G ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು OIS ನೊಂದಿಗೆ (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್‌) 64 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ಜೊತೆಗೆ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.

ಬ್ಯಾಟರಿ ಬ್ಯಾಕಪ್ ಸೂಪರ್

ಪೊಕೊ X6 5G ಮೊಬೈಲ್ 5100mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್‌ ಮಾಡಲು, 67W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ಇತರೆ ವೈಶಿಷ್ಟ್ಯಗಳು

ಪೊಕೊ X6 5G ಮೊಬೈಲ್ ಸ್ಪ್ಲಾಶ್ ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP54 ರೇಟಿಂಗ್‌ ಪಡೆದಿದೆ. ಇದು ಡಾಲ್ಬಿ ಅಟ್ಮಾಸ್ ಬೆಂಬಲದೊಂದಿಗೆ ಡ್ಯುಯಲ್ ಸ್ಟೀರಿಯೋ ಸ್ಪೀಕರ್‌ಗಳನ್ನು ಹೊಂದಿದೆ. ಭದ್ರತೆಗಾಗಿ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ ಲಭ್ಯವಿದೆ. ಜೊತೆಗೆ ಫೇಸ್ ಅನ್‌ಲಾಕ್ ವೈಶಿಷ್ಟ್ಯ, ಐಆರ್ ಬ್ಲಾಸ್ಟರ್‌ ಹೊಂದಿದೆ. ಹಾಗೆಯೇ ಬ್ಲೂಟೂತ್ 5.2, ವೈಫೈ 5 ಸೇರಿದಂತೆ ಹಲವು ಸೌಲಭ್ಯಗಳು ಲಭ್ಯವಿದೆ.

Best Mobiles in India

English summary
POCO X6 5G Available With Rs 5500 discount on flipkart: know availability, offers, specs and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+