POCO X6 5G ಫೋನ್ ಬೆಲೆ ಕಡಿತ: ಅಗ್ಗದ ಬೆಲೆಯಲ್ಲಿ ಖರೀದಿಸಲು ಸುವರ್ಣಾವಕಾಶ
ಪೊಕೊ ಫೋನ್ ಖರೀದಿಸುವವರಿಗೆ ಸುವರ್ಣಾವಕಾಶ. ಈಗ ಮಿಸ್ ಮಾಡಿಕೊಂಡರೆ ಮತ್ತೆ ಈ ರೀತಿಯ ಆಫರ್ ಸಿಗೋದೇ ಇಲ್ಲ. ಹೌದು, ಆನ್‌ಲೈನ್ ಮಾರುಕಟ್ಟೆಯಲ್ಲಿ ಇ-ಕಾಮರ್ಸ್ ದಿಗ್ಗಜ ಎಂದೇ ಗುರುತಿಸಿಕೊಂಡಿರುವ Amazon ಪ್ಲಾಟ್‌ಫಾರ್ಮ್ ಎಲ್ಲ ಉತ್ಪನ್ನಗಳಿಗೂ ಡಿಸ್ಕೌಂಟ್ ಘೋಷಿಸುತ್ತದೆ. ಮುಖ್ಯವಾಗಿ ಕೆಲವು ಆಯ್ದ ಮೊಬೈಲ್‌ಗಳಿಗೂ ಭರ್ಜರಿ ರಿಯಾಯಿತಿಗಳನ್ನು ನೀಡುತ್ತಾ ಬಂದಿದೆ. ಇದೀಗ, ಪೊಕೊನ ಈ ಸ್ಟೈಲಿಶ್ ಫೋನ್ ಬೊಂಬಾಟ್ ಡಿಸ್ಕೌಂಟ್‌ನಲ್ಲಿ ಖರೀದಿಗೆ ಲಭ್ಯವಿದೆ. ಅಮೇಜಾನ್ ಈ ಫೋನ್‌ನ ಲಭ್ಯವಿರುವ ಎಲ್ಲಾ ಸ್ಟೋರೇಜ್ ಮಾಡೆಲ್‌ಗಳಿಗೆ ಶೇ.26% ರಷ್ಟು ರಿಯಾಯಿತಿಯನ್ನು ನೀಡುತ್ತಿದೆ. ಆ ಫೋನ್ ಯಾವುದು? ಬೆಲೆ ಎಷ್ಟು? ನೀವು ಎಷ್ಟು ಹಣ ಸೇವ್ ಮಾಡಬಹುದು? ಎಂಬ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಹೌದು, ಅಮೆಜಾನ್ ಇ-ಕಾಮರ್ಸ್ ವೆಬ್‌ಸೈಟ್‌ನಲ್ಲಿ POCO X6 5G ಮೊಬೈಲ್ 26% ರಷ್ಟು ಆಕರ್ಷಕ ರಿಯಾಯಿತಿ ಪಡೆದುಕೊಂಡಿದೆ. ಈ ಮೊಬೈಲ್‌ನ 12GB + 512GB ಸ್ಟೋರೇಜ್ ವೇರಿಯಂಟ್ ಅನ್ನು ಜನವರಿಯಲ್ಲಿ 24,999 ರೂ.ಗೆ ಬಿಡುಗಡೆ ಮಾಡಲಾಗಿತ್ತು. ಪ್ರಸ್ತುತ Amazonನಲ್ಲಿ 21,999 ರೂ.ಗೆ ಮಾರಾಟವಾಗುತ್ತಿದೆ. ಬೆಲೆ ಕಡಿತದ ಹೊರತಾಗಿ, ಅಮೆಜಾನ್ ICICI ಅಥವಾ HDFC ಬ್ಯಾಂಕ್ ಕಾರ್ಡ್ ಹೊಂದಿರುವ ಗ್ರಾಹಕರಿಗೆ 1,000 ರೂ.ಗಳ ಹೆಚ್ಚುವರಿ ರಿಯಾಯಿತಿಯನ್ನು ಸಹ ನೀಡುತ್ತಿದೆ.

ಮುಖ್ಯಾಂಶಗಳು
- POCO X6 5G ಮೇಲೆ 26% ರಷ್ಟು ಆಕರ್ಷಕ ರಿಯಾಯಿತಿಗಳು ಲಭ್ಯವಿದೆ.
- ಸ್ಮಾರ್ಟ್‌ಫೋನ್ 5,100mAh ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ.
- ಇದು IP54 ರೇಟಿಂಗ್ ಅನ್ನು ಪಡೆದುಕೊಂಡಿದೆ.
ಪೊಕೊ ಎಕ್ಸ್6 5G ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 7s Gen 2 ಚಿಪ್‌ಸೆಟ್ ಮತ್ತು ಹೆಚ್ಚಿನ ರೆಸಲ್ಯೂಶನ್ AMOLED ಡಿಸ್ಲ್ಪೇಯನ್ನು ಹೊಂದಿದೆ. 8GB + 256 GB ರೂಪಾಂತರದ ಬೆಲೆಯನ್ನು ಇತ್ತೀಚೆಗೆ ಕಡಿಮೆ ಮಾಡಲಾಗಿದೆ. ಈ ಕಾರಣದಿಂದಾಗಿ ಪರಿಣಾಮಕಾರಿ ಆರಂಭಿಕ ಬೆಲೆ ಕೇವಲ 17,999 ರೂ. ಬ್ರ್ಯಾಂಡ್ ಈಗ 12GB + 512GB ಸ್ಟೋರೇಜ್ ಮಾದರಿಯ ಬೆಲೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ. ಇದೀಗ, ನೀವು ಈ ಫೋನ್ ಅನ್ನು ಕಡಿಮೆ ಬೆಲೆಗೆ ಖರೀದಿಸಬಹುದು.
20,999 ರೂ.ನ ಬಜೆಟ್ ಬೆಲೆಯಲ್ಲಿ ಲಭ್ಯ
ಜನವರಿಯಲ್ಲಿ 24,999 ರೂ.ಗೆ ಬಿಡುಗಡೆಯಾದ ಈ ಸ್ಮಾರ್ಟ್‌ಫೋನ್‌ನ 12GB+512GB ಸ್ಟೋರೇಜ್ ಮಾದರಿಯು ಪ್ರಸ್ತುತ Amazonನಲ್ಲಿ 21,999 ರೂ.ಗೆ ಮಾರಾಟವಾಗುತ್ತಿದೆ. ಬೆಲೆ ಕಡಿತದ ಹೊರತಾಗಿ, ಅಮೆಜಾನ್ ICICI ಅಥವಾ HDFC ಬ್ಯಾಂಕ್ ಕಾರ್ಡ್ ಹೊಂದಿರುವ ಗ್ರಾಹಕರಿಗೆ 1,000 ರೂ.ಗಳ ಹೆಚ್ಚುವರಿ ರಿಯಾಯಿತಿಯನ್ನು ಸಹ ನೀಡುತ್ತಿದೆ. ಇದರಿಂದಾಗಿ ಈ ಸ್ಮಾರ್ಟ್‌ಫೋನ್ 20,999 ರೂ.ನ ಬಜೆಟ್ ಬೆಲೆಯಲ್ಲಿ ನಿಮಗೆ ಲಭ್ಯವಾಗಲಿದೆ.
ಇನ್ನೂ, ಪೊಕೊ ಎಕ್ಸ್6 5Gನ 8GB RAM + 256GB ಸ್ಟೋರೇಜ್ ಮತ್ತು 12GB RAM + 256GB ಸ್ಟೋರೇಜ್ ಮಾದರಿಗಳಿಗೆ ಇದೇ ರೀತಿಯ ಕೊಡುಗೆಗಳು ಲಭ್ಯವಿದೆ. ಅವುಗಳ ಬೆಲೆಗಳನ್ನು ಕ್ರಮವಾಗಿ 21,999 ರೂ. ಮತ್ತು 23,999 ರೂ.ನಿಂದ 17,999 ರೂ. ಮತ್ತು 18,999 ರೂ.ಗೆ ಇಳಿಕೆ ಕಂಡಿದೆ.
ಪೊಕೊ ಎಕ್ಸ್6 5G ವಿಶೇಷತೆಗಳು
ಪೊಕೊ ಎಕ್ಸ್6 5G ಫೋನ್ 6.67-ಇಂಚಿನ AMOLED ಡಿಸ್ಪ್ಲೇ ಹೊಂದಿದೆ. 1.5K ರೆಸಲ್ಯೂಶನ್ (1220 x 2712 ಪಿಕ್ಸೆಲ್‌ಗಳು) ಜೊತೆಗೆ 120Hz ರಿಫ್ರೆಶ್ ರೇಟ್ ಸಪೋರ್ಟ್ ಪಡೆದಿದೆ. ಡಿಸ್ಲ್ಪೇನಲ್ಲಿ ಇನ್-ಸ್ಕ್ರೀನ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಸಹ ಅಳವಡಿಸಲಾಗಿದೆ. ಈ ಸ್ಮಾರ್ಟ್‌ಫೋನ್ ಗೊರಿಲ್ಲಾ ಗ್ಲಾಸ್ ವಿಕ್ಟಸ್‌ನ ರಕ್ಷಣೆಯನ್ನು ಸಹ ಹೊಂದಿದೆ. ಫೋನ್ IP54-ರೇಟೆಡ್ ಚಾಸಿಸ್‌ನೊಂದಿಗೆ ಬರುತ್ತದೆ. ಪೊಕೊ ಎಕ್ಸ್6 5G ಮೂರು Android OS ನವೀಕರಣಗಳನ್ನು ಮತ್ತು ನಾಲ್ಕು ವರ್ಷಗಳ ಭದ್ರತಾ ಪ್ಯಾಚ್ ನವೀಕರಣಗಳನ್ನು ಸ್ವೀಕರಿಸುವ ನಿರೀಕ್ಷೆಯಿದೆ.
ಬೊಂಬಾಟ್ ಕ್ಯಾಮೆರಾ, ಸೂಪರ್ ಬ್ಯಾಟರಿ
ಈ ಫೋನ್ Android 13 ಆಧಾರಿತ MIUI 14 ನೊಂದಿಗೆ ಬರುತ್ತದೆ. ಮತ್ತು ಶೀಘ್ರದಲ್ಲೇ HyperOS ಅಪ್‌ಗ್ರೇಡ್ ಪಡೆಯುವ ನಿರೀಕ್ಷೆಯಿದೆ. ಇದು Snapdragon 7s Gen 2 ಚಿಪ್‌ಸೆಟ್, LPDDR4x RAM, UFS 2.2 ಸ್ಟೋರೇಜ್ ಮತ್ತು 67W ವೇಗದ ಚಾರ್ಜಿಂಗ್‌ನೊಂದಿಗೆ 5,100mAh ಸಾಮರ್ಥ್ಯದ ಬ್ಯಾಟರಿಯಿಂದ ಚಾಲಿತವಾಗಿದೆ.
ಈ ಫೋನ್ ಕೊಳ್ಳಲು ಪರ್ಫೆಕ್ಟ್ ಟೈಮ್!
ಇನ್ನೂ ಈ ಫೋನ್ ಕ್ಯಾಮೆರಾ ಸೆಟಪ್ ಬಗ್ಗೆ ಹೇಳುವುದಾದರೆ, ಇದು 16MP ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ. ಮತ್ತು ಹಿಂದಿನ ಕ್ಯಾಮೆರಾ ಸೆಟಪ್ OIS ಜೊತೆಗೆ 64MP ಮುಖ್ಯ ಕ್ಯಾಮೆರಾ, 8MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು 2MP ಮ್ಯಾಕ್ರೋ ಕ್ಯಾಮೆರಾವನ್ನು ಒಳಗೊಂಡಿದೆ. ಪೊಕೊನ ಈ ಸ್ಮಾರ್ಟ್‌ಫೋನ್ ಕೊಳ್ಳಲು ಪರ್ಫೆಕ್ಟ್ ಟೈಮ್!
ಒಟ್ಟಾರೆ, ಭಾರತೀಯ ಮಾರುಕಟ್ಟೆಯಲ್ಲಿ ಪೊಕೊ ಕಂಪನಿಯು ತನ್ನದೇ ಆದ ವಿಭಿನ್ನ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳ ಮೂಲಕ ಗ್ರಾಹಕರನ್ನು ಆಕರ್ಷಿಸಿದೆ. ಈ ಫೋನ್‌ಗಳಿಗೆ ಈಗಂತೂ ಭರ್ಜರಿ ಬೇಡಿಕೆ ಇದೆ. ಹೊಸ ಮೊಬೈಲ್ ಬಿಡುಗಡೆ ಜೊತೆಗೆ, ಆಗಾಗ್ಗೆ ಹಳೆ ಫೋನ್‌ಗಳ ಮೇಲೆ ಡಿಸ್ಕೌಂಟ್ ಘೋಷಿಸುತ್ತದೆ. ಸಾಕಷ್ಟು ಗ್ರಾಹಕರು ಈ ಕಂಪನಿಯ ಸ್ಮಾರ್ಟ್‌ಫೋನ್‌ಗಳಿಗಾಗಿ ಕಾದು ಕುಳಿತಿರುತ್ತಾರೆ. ಅದರಂತೆ ಈಗ POCO X6 5G ಸ್ಮಾರ್ಟ್‌ಫೋನ್ ಮೇಲೆ ಆಕರ್ಷಕ ರಿಯಾಯಿತಿ ಘೋಷಿಸಲಾಗಿದೆ.


Click it and Unblock the Notifications








