Home
Deal of the day

40% ಡಿಸ್ಕೌಂಟ್‌! 108MP ಕ್ಯಾಮೆರಾ.. 256GB ಸ್ಟೋರೇಜ್‌.. ಕಮ್ಮಿ ಬೆಲೆಗೆ POCO 5G ಫೋನ್

ಪೊಕೊ ಅಭಿಮಾನಿಗಳಿಗೆ ಇಲ್ಲಿದೆ ಭರ್ಜರಿ ಗುಡ್‌ ನ್ಯೂಸ್‌. ಖ್ಯಾತ ಟೆಕ್‌ ಕಂಪನಿ ಪೊಕೊ ತನ್ನ ಪೊಕೊ X6 ನಿಯೋ 5G (POCO X6 Neo 5G) ಫೋನಿನ ಬೆಲೆಯನ್ನು ಕಡಿತಗೊಳಿಸಿದೆ. ಹೌದು, ಪೊಕೊ M7 ಪ್ರೊ (POCO M7 Pro 5G) ಮತ್ತು ಪೊಕೊ C75 (POCO C75 5G) ಫೋನ್‌ಗಳ ಬಿಡುಗಡೆ ದಿನಾಂಕ ಘೋಷಣೆ ಬೆನ್ನಲ್ಲೇ, ಕಂಪನಿ ದರ ಇಳಿಕೆ ಮಾಡಿದೆ. ಇದರಿಂದ ಈ ಫೋನಿನ ಬೆಲೆ 6,000 ರೂ.ನಷ್ಟು ಕಡಿಮೆಯಾಗಿದೆ. ಜೊತೆಗೆ ಶೇ.10 ರಷ್ಟು ಕ್ಯಾಶ್‌ಬ್ಯಾಕ್ ಸಿಗುತ್ತದೆ.

ಹೌದು, ಅಮೆಜಾನ್‌ನಲ್ಲಿ ಪೊಕೊ X6 ನಿಯೋ 5G ಫೋನಿನ ಖರೀದಿ ಮೇಲೆ ಶೇ.40 ರಷ್ಟು ಡಿಸ್ಕೌಂಟ್‌ ಲಭ್ಯವಿದೆ. ಇದು ಎರಡು ಸ್ಟೋರೇಜ್‌ ಆಯ್ಕೆಗಳಲ್ಲಿ ಮಾರಾಟವಾಗುತ್ತಿದೆ. ನೀವು ಆಸ್ಟ್ರಲ್ ಬ್ಲ್ಯಾಕ್, ಹರೈಸನ್ ಬ್ಲೂ ಮತ್ತು ಆರೆಂಜ್‌ ಬಣ್ಣದಲ್ಲಿ ಖರೀದಿಸಬಹುದು. ಈ ಮೊಬೈಲ್ 108 ಮೆಗಾಪಿಕ್ಸೆಲ್ ಮುಖ್ಯ ಮತ್ತು 16 ಸೆಲ್ಫಿ ಕ್ಯಾಮೆರಾ ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಜೊತೆಗೆ 128GB ಸ್ಟೋರೇಜ್, 5000mAh ಬ್ಯಾಟರಿ ಹೊಂದಿದೆ.

POCO X6 Neo 5G ಬೆಲೆ ಇಳಿಕೆ; 40% ಡಿಸ್ಕೌಂಟ್‌.. 10% ಕ್ಯಾಶ್‌ಬ್ಯಾಕ್!

ಪೊಕೊ X6 ನಿಯೋ 5G ಬೆಲೆ ಮತ್ತು ಆಫರ್‌ಗಳು

ಪೊಕೊ X6 ನಿಯೋ 5G ಫೋನಿನ 8GB RAM + 128GB ಸ್ಟೋರೇಜ್‌ ಆಯ್ಕೆಯು 15,999 ರೂ. ಮತ್ತು 12GB RAM + 256GB ಸ್ಟೋರೇಜ್‌ ರೂಪಾಂತರವು 17,999 ರೂ.ಗೆ ಬಿಡುಗಡೆಯಾಗಿತ್ತು. ಪ್ರಸ್ತುತ, ಶೇ.40 ರಷ್ಟು ರಿಯಾಯಿತಿಯೊಂದಿಗೆ ಮಾರಾಟವಾಗುತ್ತಿದೆ. ಜೊತೆಗೆ ಶೇ.10 ರಷ್ಟು ಕ್ಯಾಶ್‌ಬ್ಯಾಕ್ ಪಡೆಯಬಹುದು. ನೀವು, 8GB RAM + 128GB ಸ್ಟೋರೇಜ್‌ ಆಯ್ಕೆಯನ್ನು ಕೇವಲ 11,999 ರೂ.ಗೆ ಖರೀದಿಸಬಹುದು. ಇದಲ್ಲದೆ, ನೋ ಕಾಸ್ಟ್ ಇಎಂಐ ಸೌಲಭ್ಯ ಮತ್ತು ಎಕ್ಸ್‌ಚೇಂಜ್‌ ಆಫರ್‌ ಸಹ ನೀಡಲಾಗುತ್ತಿದೆ.

ಪೊಕೊ X6 ನಿಯೋ 5G ವೈಶಿಷ್ಟ್ಯಗಳು

ಡಿಸ್ಪ್ಲೇ ಹೇಗಿದೆ

ಪೊಕೊ X6 ನಿಯೋ 5G ಮೊಬೈಲ್ 6.67 ಇಂಚಿನ ಪೂರ್ಣ ಎಚ್‌ಡಿ ಪ್ಲಸ್‌ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 1080 x 2400 ಪಿಕ್ಸೆಲ್ ರೆಸಲ್ಯೂಶನ್‌ ಬೆಂಬಲ ಪಡೆದಿದೆ. ಡಿಸ್ಪ್ಲೇಯು 120Hz ರಿಫ್ರೆಶ್‌ ದರ, 1000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ. ಇದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆ ಪಡೆದಿದೆ.

ಪ್ರೊಸೆಸರ್ ಯಾವುದು?

ಪೊಕೊ X6 ನಿಯೋ 5G ಫೋನನ್ನು ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಲಾಗಿದೆ. ಈ ಫೋನಿನಲ್ಲಿ 12GB RAM + 256GB ಸ್ಟೋರೇಜ್‌ ಲಭ್ಯವಿದೆ. ಜೊತೆಗೆ 8GB ವರ್ಚುವಲ್ RAM ಮತ್ತು 16GB RAM ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 13 ಆಧಾರಿತ MIUI 14 ಓಎಸ್‌ನೊಂದಿಗೆ ಕೆಲಸ ಮಾಡುತ್ತದೆ.

POCO X6 Neo 5G ಬೆಲೆ ಇಳಿಕೆ; 40% ಡಿಸ್ಕೌಂಟ್‌.. 10% ಕ್ಯಾಶ್‌ಬ್ಯಾಕ್!

ಅದ್ಭುತ ಕ್ಯಾಮೆರಾ

ಪೊಕೊ X6 ನಿಯೋ 5G ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಫೋನಿನಲ್ಲಿ 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಹಾಗೆಯೇ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.

ಶಕ್ತಿಶಾಲಿ ಬ್ಯಾಟರಿ

ಪೊಕೊ X6 ನಿಯೋ 5G ಮೊಬೈಲ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್‌ ಮಾಡಲು, 33W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ಇತರೆ ವೈಶಿಷ್ಟ್ಯಗಳು

ಪೊಕೊ X6 ನಿಯೋ 5G ಫೋನ್ ಇನ್‌ಫ್ರಾರೆಡ್ ಮತ್ತು ಸೈಡ್ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಹೊಂದಿದೆ. ಜೊತೆಗೆ ಡ್ಯುಯಲ್ ಸಿಮ್ 5G, ಯುಎಸ್‌ಬಿ ಟೈಪ್ ಸಿ, ವೈಫೈ, ಬ್ಲೂಟೂತ್‌ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

Best Mobiles in India

English summary
POCO X6 Neo 5G Available With 40 percent discount on amazon sale: know new price, offers, availability specs and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+