12 ಸಾವಿರಕ್ಕೆ ಸಿಗುತ್ತಿದೆ 8GB RAM ಮತ್ತು 108MP ಕ್ಯಾಮೆರಾದ ಈ POCO 5G ಫೋನ್!
ಬಜೆಟ್ ಬೆಲೆಯ ಉತ್ತಮ ಸ್ಮಾರ್ಟ್‌ಫೋನ್ 5G ಒಂದನ್ನು ಖರೀದಿಸಲು ನೀವು ಯೋಚಿಸುತ್ತಿದ್ದರೆ, ಉತ್ತಮ RAM, ಸ್ಟೋರೇಜ್ ಮತ್ತು ಉತ್ತಮ ಕ್ಯಾಮೆರಾ ಹೊಂದಿರುವ POCO X6 Neo 5G ಸ್ಮಾರ್ಟ್‌ಫೋನ್ ಇದೀಗ ನಿಮ್ಮ ಮೊದಲ ಆಯ್ಕೆಯಾಗಬಹುದು. ಏಕೆಂದರೆ, ಇದರ 8GB RAM ಮತ್ತು 108MP ಕ್ಯಾಮೆರಾ ಹೊಂದಿರುವ ಈ ಹೊಸ ಸ್ಮಾರ್ಟ್‌ಫೋನ್ ಈಗ ಅಮೆಜಾನ್‌ನಲ್ಲಿ ಕೇವಲ ₹13,999 ರೂ.ಗಳಿಗೆ ಮಾರಾಟವಾಗುತ್ತಿದೆ. ಈ ಸ್ಮಾರ್ಟ್‌ಫೋನ್ ಖರೀದಿಯ ಮೇಲೆ ಅಮೆಜಾನ್ ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೇಲೆ ₹1,399 ರೂ.ಗಳ ವರೆಗೆ ಡಿಸ್ಕೌಂಟ್ ಒದಗಿಸುತ್ತಿದ್ದು, ಇದರೊಂದಿಗೆ ಕೇವಲ ₹12,600 ರೂಗಳಿಗೆ POCO X6 Neo 5G ಸ್ಮಾರ್ಟ್‌ಫೋನ್ ಖರೀದಿಸಲು ಅವಕಾಶವಿದೆ. ಇಷ್ಟೇ ಅಲ್ಲದೆ, ಈ ಸ್ಮಾರ್ಟ್‌ಫೋನ್ ಮೇಲೆ ಸಂಪೂರ್ಣ ಬೆಲೆಯ ಎಕ್ಸ್‌ಚೇಂಜ್ ಆಫರ್ ಸಹ ಲಭ್ಯವಿದೆ. ಆದರೆ, ಇದು ನಿಮ್ಮ ಹಳೆಯ ಫೋನಿನ ಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ.
ಇಲ್ಲಿ ನಾವು ಗಮನಿಸುವುದಾದರೆ, 8GB RAM + 128GB ಸ್ಟೋರೇಜ್ ಮಾದರಿಯ POCO X6 Neo 5G ಸ್ಮಾರ್ಟ್‌ಫೋನನ್ನು ಭಾರತದಲ್ಲಿ 15,999 ರೂ.ಗೆ ಪರಿಚಯಿಸಲಾಗಿತ್ತು. ಈ ಸ್ಮಾರ್ಟ್‌ಫೋನಿನಲ್ಲಿ 6.67 ಇಂಚಿನ ಡಿಸ್‌ಪ್ಲೇ, ಮೀಡಿಯಾಟೆಕ್ ಡೈಮೆನ್ಸಿಟಿ 6100+ ಪ್ರೊಸೆಸರ್, 108 ಮೆಗಾಪಿಕ್ಸೆಲ್ ಕ್ಯಾಮೆರಾ, 5000mAh ಬ್ಯಾಟರಿ ಮತ್ತು 33W ಫಾಸ್ಟ್ ಚಾರ್ಜಿಂಗ್ ಸೇರಿದಂತೆ ಹಲವು ಅತ್ಯುತ್ತಮ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಹಾಗೂ ಆಸ್ಟ್ರಲ್ ಬ್ಲ್ಯಾಕ್, ಹರೈಸನ್ ಬ್ಲೂ ಮತ್ತು ಆರೆಂಜ್ ಬಣ್ಣದಲ್ಲಿ ಖರೀದಿಗೆ ಲಭ್ಯವಿದೆ. ಹಾಗಾದರೆ, POCO X6 Neo 5G ಸ್ಮಾರ್ಟ್‌ಫೋನ್ ಹೊಂದಿರುವ ಸಂಪೂರ್ಣ ವೈಶಿಷ್ಟ್ಯಗಳು ಯಾವುವು ಎಂಬುದನ್ನು ಮುಂದೆ ಓದಿ ತಿಳಿಯೋಣ ಬನ್ನಿ.

POCO X6 Neo 5G ಸ್ಮಾರ್ಟ್‌ಫೋನಿನ ಸಂಪೂರ್ಣ ವೈಶಿಷ್ಟ್ಯಗಳು ಹೀಗಿವೆ,
POCO X6 Neo 5G ಸ್ಮಾರ್ಟ್‌ಫೋನಿನ ಡಿಸ್‌ಪ್ಲೇ ಹೇಗಿದೆ?
POCO X6 Neo 5G ಸ್ಮಾರ್ಟ್‌ಫೋನ್ ಪಂಚ್ ಹೋಲ್ ಶೈಲಿಯ 6.72 ಇಂಚಿನ ಫುಲ್ ಹೆಚ್‌ಡಿ ಪ್ಲಸ್ AMOLED ತಂತ್ರಜ್ಞಾನನದ ಡಿಸ್‌ಪ್ಲೆಯನ್ನು ಹೊಂದೆ. ಈ ಡಿಸ್‌ಪ್ಲೇಯು 1,080 x 2,400 ಪಿಕ್ಸೆಲ್ ರೆಸಲ್ಯೂಶನ್, 120Hz ರಿಫ್ರೆಶ್ ದರ ಮತ್ತು 1,000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ಬೆಂಬಲಿಸುತ್ತದೆ. ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆ ಇದೆ.
POCO X6 Neo 5G ಸ್ಮಾರ್ಟ್‌ಫೋನಿನ ಪ್ರೊಸೆಸರ್
POCO X6 Neo 5G ಸ್ಮಾರ್ಟ್‌ಫೋನಿನಲ್ಲಿ 6nm ತಂತ್ರಜ್ಞಾನದಲ್ಲಿ ತಯಾರಿಸಲಾಗಿರುವ ಮೀಡಿಯಾಟೆಕ್ ಡೈಮೆನ್ಸಿಟಿ 6100+ ಪ್ರೊಸೆಸರ್ ಇದೆ. ಆಂಡ್ರಾಯ್ಡ್ 13 ಆಧಾರಿತ MIUI 14 ಓಎಸ್‌ನಲ್ಲಿ ಕಾರ್ಯನಿರ್ವಹಿಸಲಿರುವ ಈ ಸ್ಮಾರ್ಟ್‌ಫೋನಿನಲ್ಲಿ ಗ್ರಾಫಿಕ್ಸ್‌ಗಾಗಿ ಆರ್ಮ್ ಮಾಲಿ G57 MP2 ಜಿಪಿಯು ಅನ್ನು ನೀಡಲಾಗಿದೆ. ಹಾಗೂ 8GB ಮತ್ತು 12GB RAM ಆಯ್ಕೆಗಳಲ್ಲಿ ಲಭ್ಯವಿದೆ.
POCO X6 Neo 5G ಸ್ಮಾರ್ಟ್‌ಫೋನಿನ ಕ್ಯಾಮೆರಾ ಸೆಟಪ್
POCO X6 Neo 5G ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು 108MP 3X ಇನ್-ಸೆನ್ಸರ್ ಜೂಮ್ AI ಡ್ಯುಯಲ್ ಕ್ಯಾಮೆರಾ ಆಗಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, 16 ಮೆಗಾಪಿಕ್ಸೆಲ್ ಸೆಲ್ಪಿ ಶೂಟರ್ ಅನ್ನು ಒಳಗೊಂಡಿದೆ.
POCO X6 Neo 5G ಸ್ಮಾರ್ಟ್‌ಫೋನಿನ ಬ್ಯಾಟರಿ ಮತ್ತು ಚಾರ್ಜಿಂಗ್
POCO X6 Neo 5G ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಹಾಗೂ 33W ವೇಗದ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸುತ್ತದೆ. ಕಂಪನಿಯ ಪ್ರಕಾರ, ಈ ಬ್ಯಾಟರಿ ಸಂಪೂರ್ಣವಾಗಿ ಚಾರ್ಜ್ ಆದ ನಂತರ 18 ಗಂಟೆಗಳ ಕಾಲ ಯೂಟ್ಯೂಬ್ ವೀಕ್ಷಣೆಗೆ ಸಾಧ್ಯವಾಗುತ್ತದೆ.
POCO X6 Neo 5G ಸ್ಮಾರ್ಟ್‌ಫೋನಿನ ಇತರೆ ವೈಶಿಷ್ಟ್ಯಗಳು
POCO X6 Neo 5G ಫೋನ್ ಇನ್‌ಫ್ರಾರೆಡ್ ಮತ್ತು ಸೈಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್ 5G, ಯುಎಸ್‌ಬಿ ಟೈಪ್-C, ವೈ-ಫೈ ಮತ್ತು ಬ್ಲೂಟೂತ್ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಒಳಗೊಂಡಿದೆ.


Click it and Unblock the Notifications








