108MP ಕ್ಯಾಮೆರಾ, 256GB ಸ್ಟೋರೇಜ್.. ಕಡಿಮೆ ಬೆಲೆಗೆ Realme 5G ಫೋನ್ ಸೇಲ್!
ರಿಯಲ್‌ಮಿ ಕಂಪನಿಯು ತನ್ನ ಗ್ರಾಹಕರಿಗೆ ಶುಭ ಸುದ್ದಿ ನೀಡಿದೆ. ದಸರಾ ಮತ್ತು ದೀಪಾವಳಿ ಹಬ್ಬಕ್ಕೆ ಹೊಸ 5G ಫೋನ್ ಖರೀದಿಸುವವರಿಗೆ ಒಂದೊಳ್ಳೆ ಸುವರ್ಣಾವಕಾಶ ಕಲ್ಪಿಸಿದೆ. ಹೌದು, ಕಂಪನಿಯು ರಿಯಲ್‌ಮಿ 11 5G (Realme 5G) ಫೋನಿನ ಬೆಲೆಯಲ್ಲಿ ಇಳಿಕೆ ಮಾಡಿದೆ. ನೀವು, ಹಳೆಯ ಮೊಬೈಲ್‌ಗೆ ಗುಡ್ ಬೈ ಹೇಳಿ.. ಹೊಸ 5G ಫೋನ್ ಖರೀದಿಸಲು ಬಯಸಿದರೆ, ಇದು ಉತ್ತಮ ಆಯ್ಕೆಯಾಗಿದೆ. ಈ ಫೋನ್ ಖರೀದಿ ಮೇಲೆ 6,000 ರೂ.ಗಳ ರಿಯಾಯಿತಿ ಲಭ್ಯವಿದೆ. ಜೊತೆಗೆ, ಬ್ಯಾಂಕ್ ಡಿಸ್ಕೌಂಟ್ ಮತ್ತು ಎಕ್ಸ್‌ಚೇಂಜ್ ಆಫರ್ ಸಹ ಪಡೆಯಬಹುದು.
ಕಂಪನಿಯು ರಿಯಲ್‌ಮಿ 11 5G (Realme 5G) ಅನ್ನು ಕಳೆದ ವರ್ಷ ಭಾರತದಲ್ಲಿ ಬಿಡುಗಡೆ ಮಾಡಿತ್ತು. ಈ ಫೋನ್ ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಮಾರಾಟವಾಗುತ್ತಿದೆ. ಇದು 6.72 ಇಂಚಿನ ಪೂರ್ಣ ಎಚ್‌ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 6100 ಪ್ಲಸ್ ಪ್ರೊಸೆಸರ್‌ನೊಂದಿಗೆ ಈ ಫೋನ್ ಕೆಲಸ ನಿರ್ವಹಿಸಲಿದೆ. ಇದರಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಲಭ್ಯವಿದ್ದು, 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. 5000mAh ಬ್ಯಾಟರಿ ಸೇರಿದಂತೆ ಇನ್ನಿತರ ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿದೆ.

ರಿಯಲ್‌ಮಿ 11 5G ಫೋನಿನ ಹೊಸ ಬೆಲೆ ಮತ್ತು ಆಫರ್‌ಗಳು
8GB RAM + 128GB ಸ್ಟೋರೇಜ್ ಬೆಲೆ = 18,999 ರೂ.
ಆಫರ್ ಬೆಲೆ = 13,299 ರೂ.
8GB RAM + 256GB ಸ್ಟೋರೇಜ್ ಬೆಲೆ = 19,999 ರೂ.
ಆಫರ್ ಬೆಲೆ = 13,999 ರೂ.
ಫ್ಲಾಟ್ ರಿಯಾಯಿತಿಯೊಂದಿಗೆ 8GB RAM + 256GB ಸ್ಟೋರೇಜ್ ರೂಪಾಂತರವು ಕೇವಲ 13,999 ರೂ.ಗಳಲ್ಲಿ ಲಭ್ಯವಿದೆ. ಇನ್ನೂ 8GB RAM + 128GB ಸ್ಟೋರೇಜ್ ರೂಪಾಂತರದ ಮೇಲೆ 5,700 ರೂ.ಗಳ ರಿಯಾಯಿತಿಯನ್ನು ನೀಡಲಾಗುತ್ತಿದೆ. ಡಿಸ್ಕೌಂಟ್ ನಂತರ ಇದರ ಬೆಲೆ 13,299 ರೂ.ಗೆ ಇಳಿಕೆಯಾಗಲಿದೆ. ನೀವು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ಬಳಸಿದರೆ, ಶೇ.5 ರಷ್ಟು ಹೆಚ್ಚುವರಿ ಕ್ಯಾಶ್‌ಬ್ಯಾಕ್ ಪಡೆಯಬಹುದು.
ನೀವು ಹಳೆಯ ಫೋನ್ ಎಕ್ಸ್‌ಚೇಂಜ್ ಮಾಡಿಕೊಳ್ಳುವ ಮೂಲಕ ಈ ಫೋನ್ ಖರೀದಿಸಬಹುದು. ಆಗ ನಿಮಗೆ 8,150 ರೂ. ವರೆಗೆ ರಿಯಾಯಿತಿ ಸಿಗುತ್ತದೆ. ನೀವು ಇಎಂಐನಲ್ಲಿ ಈ ಮೊಬೈಲ್ ಖರೀದಿಸಲು ಬಯಸಿದರೆ, 24 ತಿಂಗಳವರೆಗೆ ಆಯ್ಕೆ ಇರುತ್ತದೆ. ನೀವು, ಆನ್‌ಲೈನ್ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ರಿಯಲ್‌ಮಿ 11 5G ಅನ್ನು ಖರೀದಿಸಬಹುದು. ಫ್ಲಿಪ್‌ಕಾರ್ಟ್‌ನಲ್ಲಿ ಈ ಆಫರ್ ಪಡೆಯಿರಿ.
ರಿಯಲ್‌ಮಿ 11 5G ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ರಿಯಲ್‌ಮಿ 11 5G ಫೋನ್ 6.72 ಇಂಚಿನ ಪೂರ್ಣ ಎಚ್‌ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಇದು 2400×1080 ಪಿಕ್ಸೆಲ್ ರೆಸಲ್ಯೂಶನ್, 120Hz ರಿಫ್ರೆಶ್ ದರ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ದರವನ್ನು ಬೆಂಬಲಿಸುತ್ತದೆ.
ಪ್ರೊಸೆಸರ್ ಸಾಮರ್ಥ್ಯ
ಈ ರಿಯಲ್‌ಮಿ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 6100 ಪ್ಲಸ್ ಆಕ್ಟಾಕೋರ್ ಪ್ರೊಸೆಸರ್ ಅನ್ನು ಹೊಂದಿದೆ. ರಿಯಲ್‌ಮಿ 11 5G ಫೋನಿನಲ್ಲಿ 8GB ಡೈನಾಮಿಕ್ RAM ಮತ್ತು 256GB ವರೆಗಿನ ಆಂತರಿಕ ಸ್ಟೋರೇಜ್ ಆಯ್ಕೆ ಲಭ್ಯವಿದೆ. ಇದು ಆಂಡ್ರಾಯ್ಡ್ 13 ಆಧಾರಿತ ರಿಯಲ್‌ಮಿ ಯುಐ 4.0 ನೊಂದಿಗೆ ಕಾರ್ಯನಿರ್ವಹಿಸುತ್ತದೆ.
ಕ್ಯಾಮೆರಾ ಸೆಟಪ್
ಕಂಪನಿಯು ರಿಯಲ್‌ಮಿ 11 5G ಫೋನನ್ನು ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬಿಡುಗಡೆ ಮಾಡಿದೆ. ಇದರಲ್ಲಿ 108 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ ಪ್ರಾಥಮಿಕ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಲಭ್ಯವಿದೆ. ಸೆಲ್ಫಿ ಪ್ರಿಯರಿಗಾಗಿ, ಈ ಫೋನಿನಲ್ಲಿ 16 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ.
ಬ್ಯಾಟರಿ ಬ್ಯಾಕಪ್
ರಿಯಲ್‌ಮಿ 11 5G ಮೊಬೈಲ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ವೇಗವಾಗಿ ಚಾರ್ಜ್ ಮಾಡಲು, 67W ವೇಗದ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ.


Click it and Unblock the Notifications








