Home
Deal of the day

6,000 ಉಳಿತಾಯ! Realme 12 Pro ಬೆಲೆ ಭಾರೀ ಇಳಿಕೆ.. 34% ಡಿಸ್ಕೌಂಟ್.. ವಿಶೇಷತೆಗಳೇನು?

ದೇಶದ ಜನತೆ ಹೊಸ ವರ್ಷವನ್ನು (New Year 2025) ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಈ ಸಂಭ್ರಮದಲ್ಲಿ ನೀವು, ಹೊಸ ಮೊಬೈಲ್ ಖರೀದಿಸಲು ಬಯಸಿದರೆ, ನಿಮಗಿದೋ ಬಂಪರ್ ಆಫರ್‌ ಇದೆ. ಹೌದು, ರಿಯಲ್‌ಮಿ ಮೊಬೈಲ್‌ಗಳಿಗೆ ಭಾರತದಲ್ಲಿ ಭಾರೀ ಬೇಡಿಕೆ ಇದೆ. ಕಂಪನಿಯು, ಒಂದಿಲ್ಲಾ ಒಂದು ಹೊಸ ವೈಶಿಷ್ಟ್ಯಗಳಿಂದ ಕೂಡಿದ ಫೋನನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಜೊತೆಗೆ, ಈ ಹಿಂದೆ ಪರಿಚಯಿಸಿರುವ ಫೋನ್‌ಗಳ ಮೇಲೆ ಭಾರೀ ಡಿಸ್ಕೌಂಟ್ ಸಹ ನೀಡುತ್ತದೆ. ಅದರಂತೆಯೇ, ರಿಯಲ್‌ಮಿ 12 ಪ್ರೊ (Realme 12 Pro 5G) ಫೋನಿನ ಬೆಲೆ ಇಳಿಕೆ ಮಾಡಿದೆ. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ರಿಯಲ್‌ಮಿ 12 ಪ್ರೊ ಮೊಬೈಲ್ 50 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಇದು ಸ್ನಾಪ್‌ಡ್ರಾಗನ್ 6 ಜೆನ್ 1 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಫೋನಿನಲ್ಲಿ 6.7 ಇಂಚಿನ ಡಿಸ್ಪ್ಲೇ ಲಭ್ಯವಿದೆ. ಹಾಗೆಯೇ 16GB RAM, 5000mAh ಬ್ಯಾಟರಿ ಮತ್ತು 67W ಫಾಸ್ಟ್ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಸ್ತುತ, ಕಂಪನಿಯು ರಿಯಲ್‌ಮಿ 12 ಪ್ರೊ ಖರೀದಿ ಮೇಲೆ ಶೇ.34 ರಷ್ಟು ರಿಯಾಯಿತಿ ಘೋಷಿಸಿದೆ. ಜೊತೆಗೆ, ಕ್ಯಾಶ್‌ಬ್ಯಾಕ್, ಎಕ್ಸ್‌ಚೇಂಜ್ ಆಫರ್‌ ಮತ್ತು ಬ್ಯಾಂಕ್ ಡಿಸ್ಕೌಂಟ್ ಸಹ ನೀಡುತ್ತಿದೆ. ಈ ಫೋನಿನ ಹೊಸ ಬೆಲೆ ತಿಳಿಯಲು ಮುಂದೆ ಓದಿ.

Realme 12 Pro ಬೆಲೆ ಭಾರೀ ಇಳಿಕೆ! 34% ಡಿಸ್ಕೌಂಟ್, 6000 ಉಳಿತಾಯ ಖರೀದಿ ಎಲ್ಲಿ?

ರಿಯಲ್‌ಮಿ 12 ಪ್ರೊ ವೈಶಿಷ್ಟ್ಯಗಳು

ಡಿಸ್ಪ್ಲೇ ಹೇಗಿದೆ

ರಿಯಲ್‌ಮಿ 12 ಪ್ರೊ ಮೊಬೈಲ್ 6.7 ಇಂಚಿನ 3D ಕರ್ವ್ಡ್ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು ಪೂರ್ಣ ಹೆಚ್‌ಡಿ ಪ್ಲಸ್ ಡಿಸ್ಪ್ಲೇ ಆಗಿದೆ. ಈ ಡಿಸ್ಪ್ಲೇಯು 2412 × 1080 ಪಿಕ್ಸೆಲ್‌ಗಳ ರೆಸಲ್ಯೂಶನ್, 120Hz ರಿಫ್ರೆಶ್ ದರ ಮತ್ತು 360Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 950 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ.

ಸ್ನಾಪ್‌ಡ್ರಾಗನ್ ಪ್ರೊಸೆಸರ್

ರಿಯಲ್‌ಮಿ 12 ಪ್ರೊ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 6 ಜೆನ್ 1 ಪ್ರೊಸೆಸರ್‌ ಹೊಂದಿದೆ. ಇದು 4nm ಆಕ್ಟಾಕೋರ್ ಪ್ರೊಸೆಸರ್ ಆಗಿದೆ. ಇದು ಗ್ರಾಫಿಕ್ಸ್‌ಗಾಗಿ, ಅಡ್ರಿನೊ 710 ಜಿಪಿಯು ಸಹ ಹೊಂದಿದೆ. ಈ ಫೊನ್ ಆಂಡ್ರಾಯ್ಡ್‌ 14 ಆಧಾರಿತ ರಿಯಲ್‌ಮಿ ಯುಐ ಓಎಸ್‌ನಲ್ಲಿ ಕೆಲಸ ಮಾಡುತ್ತದೆ.

ಮೂರು ಅದ್ಭುತ ಕ್ಯಾಮೆರಾಗಳು

ರಿಯಲ್‌ಮಿ 12 ಪ್ರೊ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ತಂತ್ರಜ್ಞಾನವನ್ನು ಹೊಂದಿದೆ. ಜೊತೆಗೆ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 32 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಹೊಂದಿದೆ. ಅಲ್ಲದೆ, 20X ಡಿಜಿಟಲ್ ಜೂಮಿಂಗ್ ಬೆಂಬಲ ಪಡೆದಿದೆ.

ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ ಈ ಫೋನ್, 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ. ಈ ಫೋನಿನಲ್ಲಿ ಹಲವು ಎಐ (AI) ವೈಶಿಷ್ಟ್ಯಗಳು ಲಭ್ಯವಿದೆ. ಸ್ಟ್ರೀಟ್ ಫೋಟೋಗ್ರಫಿ ಮೋಡ್, ಪೋರ್ಟ್ರೇಟ್ ಮೋಡ್, ಸೂಪರ್ ಗ್ರೂಪ್ ಪೋರ್ಟ್ರೇಟ್ ಮೋಡ್, ಮೂನ್ ಮೋಡ್, ಸ್ಟಾರಿ ಮೋಡ್ ಪ್ರೊ ಇತ್ಯಾದಿ ಫೀಚರ್ಸ್‌ ಲಭ್ಯವಿದೆ. ಎಐ ಬ್ಯೂಟಿ ಮತ್ತು ಎಐ ಸೀನ್ ಸೇರಿದಂತೆ ಹಲವು ವೈಶಿಷ್ಟ್ಯಗಳು ಇವೆ.

Realme 12 Pro ಬೆಲೆ ಭಾರೀ ಇಳಿಕೆ! 34% ಡಿಸ್ಕೌಂಟ್, 6000 ಉಳಿತಾಯ ಖರೀದಿ ಎಲ್ಲಿ?

ಬ್ಯಾಟರಿ ಮತ್ತು ಚಾರ್ಜಿಂಗ್

ರಿಯಲ್‌ಮಿ 12 ಪ್ರೊ ಮೊಬೈಲ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 67W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ರಿಯಲ್‌ಮಿ 12 ಪ್ರೊ ಬೆಲೆ ಮತ್ತು ಆಫರ್‌ಗಳು

ರಿಯಲ್‌ಮಿ 12 ಪ್ರೊ ಫೋನಿನ 8GB RAM + 256GB ಸ್ಟೋರೇಜ್‌ ರೂಪಾಂತರವನ್ನು 26,999 ರೂ.ಗೆ ಬಿಡುಗಡೆ ಮಾಡಲಾಗಿತ್ತು. ಪ್ರಸ್ತುತ, ಫ್ಲಿಪ್‌ಕಾರ್ಟ್ ಇಯರ್ ಎಂಡ್ ಸೇಲ್‌ನಲ್ಲಿ ಕೇವಲ 20,999 ರೂ.ಗೆ ಲಭ್ಯವಿದೆ. ನೀವು, ಬರೋಬ್ಬರಿ 6,000 ರೂ. ಉಳಿತಾಯ ಮಾಡಬಹುದು. ಈ ಆಫರ್‌ಗಳ ಲಾಭ ಪಡೆಯಲು ಯಾವುದೇ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳ ಅಗತ್ಯವಿಲ್ಲ. ನೀವು, ಬೀಜ್ ಮತ್ತು ನೀಲಿ ಬಣ್ಣಗಳಲ್ಲಿ ಈ ಮೊಬೈಲ್‌ ಖರೀದಿಸಬಹುದು.

Best Mobiles in India

English summary
Realme 12 Pro 5G Available With 34 Percent Discount on Flipkart Sale: know new price, offers, availability specs and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+