Home
Deal of the day

Realme 12 Pro+ 5G ಬೆಲೆ ಇಳಿಕೆ; ಬರೋಬ್ಬರಿ 9,000 ಡಿಸ್ಕೌಂಟ್.. ಹೊಸ ಬೆಲೆ ಎಷ್ಟು?

ಹೊಸ ಮೊಬೈಲ್ ಖರೀದಿಸುವ ಯೋಚನೆಯಲ್ಲಿದ್ದರೆ, ನಿಮಗಿದೋ ಖುಷಿಯ ವಿಚಾರ. ರಿಯಲ್‌ಮಿ ಮೊಬೈಲ್‌ಗಳಿಗೆ ಭಾರತದಲ್ಲಿ ಭಾರೀ ಬೇಡಿಕೆ ಇದೆ. ಕಂಪನಿಯು, ಒಂದಿಲ್ಲಾ ಒಂದು ಹೊಸ ತಂತ್ರಜ್ಞಾನಗಳಿಂದ ಕೂಡಿದ ಮೊಬೈಲ್ ಬಿಡುಗಡೆ ಮಾಡುತ್ತಲೇ ಇರುತ್ತವೆ. ಜೊತೆಗೆ, ಈ ಹಿಂದೆ ಪರಿಚಯಿಸಿರುವ ಫೋನ್‌ಗಳ ಮೇಲೆ ಭಾರೀ ರಿಯಾಯಿತಿಯನ್ನು ಘೋಷಿಸುತ್ತದೆ. ಅದರಂತೆಯೇ, ರಿಯಲ್‌ಮಿ 12 ಪ್ರೊ ಪ್ಲಸ್ 5G (Realme 12 Pro+ 5G) ಮೊಬೈಲ್‌ನ ಬೆಲೆ ಇಳಿಕೆ ಮಾಡಲಾಗಿದೆ. ಬನ್ನಿ, ಫೋನಿನ ಹೊಸ ಬೆಲೆ, ಆಫರ್‌ಗಳು ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.

ಕಂಪನಿಯು ರಿಯಲ್‌ಮಿ 12 ಪ್ರೊ ಪ್ಲಸ್ 5G ಅನ್ನು ಈ ವರ್ಷದ ಆರಂಭದಲ್ಲಿ ಬಿಡುಗಡೆ ಮಾಡಿತ್ತು. ಬಳಿಕ, ರಿಯಲ್‌ಮಿ 13 ಸರಣಿಯ ಫೋನ್‌ಗಳು ಸಹ ಮಾರುಕಟ್ಟೆಗೆ ಬಂದಿವೆ. ಈ ಮಧ್ಯೆಯೇ, ಕಂಪನಿಯು ರಿಯಲ್‌ಮಿ 12 ಪ್ರೊ ಪ್ಲಸ್ 5G ಅನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಜೊತೆಗೆ, ಬ್ಯಾಂಕ್ ಆಫರ್‌ಗಳನ್ನು ನೀಡುತ್ತಿದೆ. ಈ ಫೋನ್ 6.7 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7s ಜೆನ್ 2 ಪ್ರೊಸೆಸರ್ ಹೊಂದಿದೆ.

Realme 12 Pro+ 5G ಬೆಲೆ ಇಳಿಕೆ; 9,000 ಡಿಸ್ಕೌಂಟ್.. ಹೊಸ ಬೆಲೆ ಎಷ್ಟು?

ರಿಯಲ್‌ಮಿ 12 ಪ್ರೊ ಪ್ಲಸ್ 5G ಬೆಲೆ ಮತ್ತು ಆಫರ್‌ಗಳು

ಕಂಪನಿಯು ರಿಯಲ್‌ಮಿ 12 ಪ್ರೊ ಪ್ಲಸ್ 5G ಫೋನಿನ 12GB + 256GB ಸ್ಟೋರೇಜ್ ರೂಪಾಂತರದ ಮೇಲೆ 6,000 ರೂ. ಫ್ಲಾಟ್ ರಿಯಾಯಿತಿ ನೀಡುತ್ತಿದೆ. ಇದರೊಂದಿಗೆ 3,000 ರೂ.ಗಳ ಬ್ಯಾಂಕ್ ಆಫರ್‌ ಲಭ್ಯವಿದೆ. ಇದರೊಂದಿಗೆ, ನೀವು, ಒಟ್ಟಾರೆ 9,000 ರೂ.ಗಳ ವರೆಗೆ ರಿಯಾಯಿತಿಯನ್ನು ಪಡೆಯಬಹುದು. ರಿಯಾಯಿತಿ ಬಳಿಕ, ಈ ಫೋನಿನ 12GB + 256GB ಸ್ಟೋರೇಜ್ ರೂಪಾಂತರವನ್ನು 24,999 ರೂ.ಗೆ ಖರೀದಿಸಬಹುದು.

ಫೋನಿನ 8GB RAM + 256GB ಸ್ಟೋರೇಜ್‌ ರೂಪಾಂತರದ ಮೇಲೆ 8,000 ರೂ.ಗಳ ರಿಯಾಯಿತಿ ಲಭ್ಯವಿದೆ. ಇದು 5,000 ರೂ.ಗಳ ಫ್ಲಾಟ್ ರಿಯಾಯಿತಿ ಮತ್ತು 3,000 ರೂ.ಗಳ ಬ್ಯಾಂಕ್ ಆಫರ್‌ ಅನ್ನು ಒಳಗೊಂಡಿದೆ. ರಿಯಾಯಿತಿ ಬಳಿಕ, ಈ ಮೊಬೈಲ್‌ ಅನ್ನು ಕೇವಲ 22,999 ರೂ.ಗೆ ಖರೀದಿಸಬಹುದು. ಜೊತೆಗೆ, ಕಂಪನಿಯು ನೋ ಕಾಸ್ಟ್ ಇಎಂಐ ಆಯ್ಕೆಯನ್ನು ಸಹ ನೀಡುತ್ತದೆ. ನೀವು, 3 ತಿಂಗಳ ಸುಲಭ ಕಂತುಗಳಲ್ಲಿ ಫೋನನ್ನು ಖರೀದಿಸಬಹುದು.

ನೀವು, ರಿಯಲ್‌ಮಿ 12 ಪ್ರೊ ಪ್ಲಸ್ 5G ಮೊಬೈಲ್ ಅನ್ನು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಅಗ್ಗದ ಬೆಲೆಗೆ ಖರೀದಿಸಬಹುದು. ಈ ಸ್ಮಾರ್ಟ್‌ಫೋನ್ ಎಕ್ಸ್‌ಪ್ಲೋರರ್ ರೆಡ್, ಸಬ್‌ಮರೀನ್ ಬ್ಲೂ ಮತ್ತು ನ್ಯಾವಿಗೇಟರ್ ಬ್ಯಾಗಿ ಎಂಬ ಮೂರು ಬಣ್ಣಗಳಲ್ಲಿ ಬರುತ್ತದೆ. ರಿಯಲ್‌ಮಿ ವೆಬ್‌ಸೈಟ್‌ನಲ್ಲಿ ಈ ಎಲ್ಲಾ ಆಫರ್‌ಗಳನ್ನು ಪಡೆಯಿರಿ.

ರಿಯಲ್‌ಮಿ 12 ಪ್ರೊ ಪ್ಲಸ್ 5G ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ರಿಯಲ್‌ಮಿ 12 ಪ್ರೊ ಪ್ಲಸ್ 5G ಮೊಬೈಲ್ 6.7 ಇಂಚಿನ ಪೂರ್ಣ ಎಚ್‌ಡಿ ಪ್ಲಸ್ ಕರ್ವ್ OLED ProXDR ಡಿಸ್ಪ್ಲೇಯನ್ನು ಹೊಂದಿದೆ. ಇದು 2,412×1,080 ಪಿಕ್ಸೆಲ್ ರೆಸಲ್ಯೂಶನ್, 120Hz ರಿಫ್ರೆಶ್ ದರ, 240Hz ಟಚ್ ಸ್ಯಾಂಪ್ಲಿಂಗ್ ದರ, 950 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಕಂಪನಿಯು ಈ ಫೋನನ್ನು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7s ಜೆನ್ 2 ಪ್ರೊಸೆಸರ್‌ನೊಂದಿಗೆ ಪರಿಚಯಿಸಿದೆ. ಇದು ಗ್ರಾಫಿಕ್ಸ್‌ಗಾಗಿ, ಅಡ್ರಿನೊ GPU ನೊಂದಿಗೆ ಬರುತ್ತದೆ. ಈ ಮೊಬೈಲ್ 12GB RAM + 256GB ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಇದು 12GB ವರೆಗೆ ಡೈನಾಮಿಕ್ RAM ಬೆಂಬಲವನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್‌ 14 ಆಧಾರಿತ ರಿಯಲ್‌ಮಿ ಯುಐ 5.0 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಕೆಲಸ ನಿರ್ವಹಿಸಲಿದೆ.

ಕ್ಯಾಮೆರಾ ಸೆಟಪ್

ರಿಯಲ್‌ಮಿ 12 ಪ್ರೊ ಪ್ಲಸ್ 5G ಮೊಬೈಲ್ 50 ಮೆಗಾಪಿಕ್ಸೆಲ್ ಸೋನಿ IMX890 ಪ್ರಾಥಮಿಕ ಕ್ಯಾಮೆರಾ ಹೊಂದಿದೆ. 32 ಮೆಗಾಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ ಸೆನ್ಸಾರ್ ಮತ್ತು 8 ಮೆಗಾಪಿಕ್ಸೆಲ್ ಅಲ್ಟ್ರಾಲೆನ್ ಅನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 32 ಮೆಗಾಪಿಕ್ಸೆಲ್ ಲೆನ್ಸ್ ಲಭ್ಯವಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಕಂಪನಿಯು ರಿಯಲ್‌ಮಿ 12 ಪ್ರೊ ಪ್ಲಸ್ 5G ಫೋನನ್ನು 5000mAh ಸಾ ಬ್ಯಾಟರಿಯನ್ನು ಹೊಂದಿದೆ. ಇದು 67W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ.

ಇತರೆ ವೈಶಿಷ್ಟ್ಯಗಳು

ಈ ಫೋನ್ 3D VC ಲಿಕ್ವಿಡ್ ಕೂಲಿಂಗ್ ವ್ಯವಸ್ಥೆಯನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, ಡ್ಯುಯಲ್ ಬ್ಯಾಂಡ್, ವೈ-ಫೈ, ಬ್ಲೂಟೂತ್, ಜಿಪಿಎಸ್ ಮತ್ತು ಚಾರ್ಜಿಂಗ್‌ಗಾಗಿ ಯುಎಸ್‌ಬಿ ಟೈಪ್ ಸಿ ಪೋರ್ಟ್ ಹೊಂದಿದೆ.

Best Mobiles in India

English summary
realme 12 Pro Plus 5G Available with Rs 9000 discount : check price, specs and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+