ಕಡಿಮೆ ಬೆಲೆಗೆ Realme 12x 5G ಮಾರಾಟ: ಜೊತೆಗೆ ಸಖತ್ ಡಿಸ್ಕೌಂಟ್.. ಖರೀದಿ ಎಲ್ಲಿ?
ಭಾರತದಲ್ಲಿ ಹಬ್ಬದ ಸೀಸನ್ ಶುರುವಾಗಿದೆ. ಇತ್ತ, ಸ್ಮಾರ್ಟ್‌ಫೋನ್ ಪ್ರಿಯರಿಗೆ ಸಾಲು ಸಾಲು ಆಫರ್‌ಗಳು ಲಭ್ಯವಾಗುತ್ತಿದೆ. ಹೌದು, ಸ್ಮಾರ್ಟ್‌ಫೋನ್ ಕಂಪನಿಗಳು ಫೋನ್‌ಗಳ ಮೇಲೆ ಭರ್ಜರಿ ಆಫರ್‌ಗಳನ್ನು ಘೋಷಿಸುತ್ತಿವೆ. ರಿಯಲ್‌ಮಿ (Realme) ಕಂಪನಿಯು ತನ್ನ ರಿಯಲ್‌ಮಿ 12x 5G (Realme 12x 5G) ಅನ್ನು ರಿಯಾಯಿತಿ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ. ಕಂಪನಿ ಯಾವೆಲ್ಲಾ ಆಫರ್ ನೀಡುತ್ತಿದೆ ಮತ್ತು ರಿಯಲ್‌ಮಿ 12X 5G ಫೋನಿನ ವೈಶಿಷ್ಟ್ಯಗಳನ್ನು ತಿಳಿಯೋಣ ಬನ್ನಿ.
ಕಡಿಮೆ ಬೆಲೆಯಲ್ಲಿ ಅತ್ಯಾಕರ್ಷಕ ಫೀಚರ್ಸ್ ಹೊಂದಿರುವ 5G ಫೋನ್ ಖರೀದಿಸಲು ಬಯಸುವವರಿಗೆ ರಿಯಲ್‌ಮಿ 12x 5G ಉತ್ತಮ ಆಯ್ಕೆಯಾಗಿದೆ. ಈ ಫೋನನ್ನು ಏಪ್ರಿಲ್‌ನಲ್ಲಿ ಬಿಡುಗಡೆ ಮಾಡಲಾಯಿತು. ಇದು 8GB RAM, ಮೀಡಿಯಾ ಟೆಕ್ ಡೈಮೆನ್ಶನ್ 6100+ ಪ್ರೊಸೆಸರ್ ಅನ್ನು ಹೊಂದಿದೆ. 120 ರಿಫ್ರೆಶ್ ದರದೊಂದಿಗೆ 6.72 ಇಂಚಿನ ಹೆಚ್‌ಎಫ್‌ಡಿ ಪ್ಲಸ್ ಡಿಸ್ಪ್ಲೇ, 50 ಮೆಗಾಪಿಕ್ಸೆಲ್ ಕ್ಯಾಮೆರಾ, 5000mAh ಬ್ಯಾಟರಿ, 45W ಚಾರ್ಜಿಂಗ್ ಸೇರಿದಂತೆ ಮುಂತಾದ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ರಿಯಲ್‌ಮಿ 12x 5G ಹೊಸ ಬೆಲೆ ಮತ್ತು ಆಫರ್‌ಗಳು
ರಿಯಲ್‌ಮಿ 12x 5G ಸ್ಮಾರ್ಟ್‌ಫೋನ್ 4GB, 6GB, 8GB RAM ಮತ್ತು 128GB ಸ್ಟೋರೇಜ್ ಆಯ್ಕೆಗಳಲ್ಲಿ ಮಾರಾಟವಾಗುತ್ತಿದೆ. ಕಂಪನಿಯು 6GB ಮತ್ತು 8GB ಸ್ಟೋರೇಜ್ ಮೇಲೆ ರಿಯಾಯಿತಿಯನ್ನು ಘೋಷಿಸಿದೆ. 8GB RAM + 128GB ಸ್ಟೋರೇಜ್ ರೂಪಾಂತರವನ್ನು 1,500 ರಿಯಾಯಿತಿಯೊಂದಿಗೆ ಖರೀದಿಸಬಹುದು. ಈ ಫೋನ್ 13,499 ರೂ.ಗೆ ಮಾರಾಟವಾಗುತ್ತಿದೆ. ಇದರ ಮೂಲ ಬೆಲೆ 14,999 ರೂ. ಆಗಿದೆ.
ನೀವು 6GB RAM+128GB ಸ್ಟೋರೇಜ್ ರೂಪಾಂತರವನ್ನು ಖರೀದಿಸಿದರೆ 1,000 ರೂ. ರಿಯಾಯಿತಿ ಸಿಗುತ್ತದೆ. ಡಿಸ್ಕೌಂಟ್ ಬಳಿಕ ನೀವು ಈ ಮೊಬೈಲ್ ಅನ್ನು 12,499 ರೂ.ಗೆ ಕೊಳ್ಳಬಹುದು. ಇದರ ಮೂಲ ಬೆಲೆ 13,499 ರೂ. ಆಗಿದೆ. 4GB RAM+128GB ಸ್ಟೋರೇಜ್ 11,999 ರೂ. ಬೆಲೆಯಲ್ಲಿ ಲಭ್ಯವಿದೆ. ಫ್ಲಿಪ್‌ಕಾರ್ಟ್ ಆಕ್ಸಿಸ್ ಕಾರ್ಡ್ ಕ್ರೆಡಿಟ್ ಕಾರ್ಡ್ ಪಾವತಿ ಮೇಲೆ ಶೆ.5 ರಷ್ಟು ಕ್ಯಾಶ್‌ಬ್ಯಾಕ್ ಪಡೆಯಬಹುದು. ಜೊತೆಗೆ, 8,650 ರೂ. ವರೆಗೆ ಎಕ್ಸ್‌ಚೇಂಜ್ ಆಫರ್ ಲಭ್ಯವಿದೆ.
ರಿಯಲ್‌ಮಿ 12X 5G ಖರೀದಿ ಎಲ್ಲಿ?
ರಿಯಲ್‌ಮಿ 12X 5G ಸ್ಮಾರ್ಟ್‌ಫೋನ್ ಅನ್ನು ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಬಹುದು. ಕಂಪನಿಯ ವೆಬ್‌ಸೈಟ್‌ನಲ್ಲಿಯೂ ಲಭ್ಯವಿದೆ. ನೀವು, ಕೋರಲ್ ರೆಡ್, ಟ್ವಿಲೈಟ್ ಪರ್ಪಲ್ ಮತ್ತು ವುಡ್‌ಲ್ಯಾಂಡ್ ಗ್ರೀನ್ ಬಣ್ಣದ ಆಯ್ಕೆಗಳಲ್ಲಿ ಈ ಫೋನನ್ನು ಖರೀದಿಸಬಹುದು. ಫ್ಲಿಪ್‌ಕಾರ್ಟ್‌ನಲ್ಲಿ ಈ ಆಫರ್ ಪಡೆಯಿರಿ.
ರಿಯಲ್‌ಮಿ 12x 5G ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ರಿಯಲ್‌ಮಿ 12x 5G ಮೊಬೈಲ್ 6.72 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಇದು ಎಲ್‌ಸಿಡಿ ಪ್ಯಾನೆಲ್, 120 Hz ರಿಫ್ರೆಶ್ ದರ, 240 Hz ಟಚ್ ಸ್ಯಾಂಪ್ಲಿಂಗ್ ದರ, 950 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ರಿಯಲ್‌ಮಿ 12x 5G ಫೋನ್ ಮೀಡಿಯಾ ಟೆಕ್ ಡೈಮೆನ್ಶನ್ 6100+ ಚಿಪ್‌ಸೆಟ್ ಅನ್ನು ಹೊಂದಿದೆ. ಜೊತೆಗೆ, ಮಾಲಿ G57 ಜಿಪಿಯು ಅನ್ನು ಬಳಸುತ್ತದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಓಎಸ್ ಆಧಾರಿತ Realme UI 5.0 ಕಸ್ಟಮ್ ಸ್ಕಿನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
ಸ್ಟೋರೇಜ್ ಆಯ್ಕೆಗಳು
ರಿಯಲ್‌ಮಿ 12x 5G ಸ್ಮಾರ್ಟ್‌ಫೋನ್ 4GB, 6GB, 8GB RAM ಮತ್ತು 128GB ಸ್ಟೋರೇಜ್ ಆಯ್ಕೆಗಳಲ್ಲಿ ಲಭ್ಯವಿದೆ.
ಕ್ಯಾಮೆರಾ ಸೆಟಪ್
ರಿಯಲ್‌ಮಿ 12x 5G ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಸೆಕೆಂಡರಿ ಲೆನ್ಸ್ ಹೊಂದಿದೆ. ಸೆಲ್ಫಿ ಪ್ರಿಯರಿಗಾಗಿ ಈ ಫೋನಿನಲ್ಲಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಲಭ್ಯವಿದೆ.
ಬ್ಯಾಟರಿ ಬ್ಯಾಕಪ್
ರಿಯಲ್‌ಮಿ 12x 5G ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 45W ಸೂಪರ್ ವುಕ್ ವೇಗದ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ ಬರುತ್ತದೆ.
ಇತರೆ ವೈಶಿಷ್ಟ್ಯಗಳು
ರಿಯಲ್‌ಮಿ 12x 5G ಫೋನ್ ಡ್ಯುಯಲ್ ಸಿಮ್, 5G, 4G, ಬ್ಲೂಟೂತ್, ವೈ ಫೈ ಸೇರಿದಂತೆ ಹಲವು ಆಯ್ಕೆಗಳನ್ನು ಹೊಂದಿದೆ. ಇದು ಏರ್ ಗೆಸ್ಚರ್‌ಗಳು ಮತ್ತು ಡೈನಾಮಿಕ್ ಬಟನ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಫೋನ್ ನೀರು ಮತ್ತು ಧೂಳಿನ ನಿರೋಧಕ IP54 ರೇಟಿಂಗ್, ಮಳೆ ನೀರು ಸ್ಮಾರ್ಟ್ ಟಚ್ ವೈಶಿಷ್ಟ್ಯ, ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳನ್ನು ಹೊಂದಿದೆ.


Click it and Unblock the Notifications








