Home
Deal of the day

ಹೊಸ ವರ್ಷದ ಗಿಫ್ಟ್! Realme 13+ 5G ಬೆಲೆ ಇಳಿಕೆ.. 2000 ಡಿಸ್ಕೌಂಟ್.. ವಿಶೇಷತೆಗಳೇನು?

ಹೊಸ ವರ್ಷ ಬಂದಿದೆ.. ಸಾಲು ಸಾಲು ಆಫರ್‌ಗಳನ್ನು ಹೊತ್ತು ತರುತ್ತಿದೆ. ಹೌದು, ರಿಯಲ್‌ಮಿ ತನ್ನ ಅಭಿಮಾನಿಗಳಿಗೆ ಹೊಸ ವರ್ಷದ ಉಡುಗೊರೆ ಘೋಷಿಸಿದೆ. ಕಂಪನಿಯು ತನ್ನ ರಿಯಲ್‌ಮಿ 13+ 5G (Realme 13+ 5G) ಫೋನಿನ ದರ ಕಡಿಮೆ ಮಾಡಿದೆ. 2,000 ರೂ. ಡಿಸ್ಕೌಂಟ್ ನೀಡಲಾಗುತ್ತಿದೆ. ನೀವು, 20 ಸಾವಿರ ರೂ.ಗಳ ಬಜೆಟ್‌ನಲ್ಲಿ ಈ ಫೋನನ್ನು ಖರೀದಿಸಬಹುದು. ಬನ್ನಿ, ಫೋನಿನ ಹೊಸ ಬೆಲೆ, ಆಫರ್‌ಗಳು ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.

ರಿಯಲ್‌ಮಿ 13+ 5G ಮೊಬೈಲ್ ಮೂರು ಸ್ಟೋರೇಜ್‌ ಆಯ್ಕೆಗಳಲ್ಲಿ ಮಾರಾಟವಾಗುತ್ತಿದೆ. ಈ ಫೋನ್ 6.67 ಇಂಚಿನ ಡಿಸ್ಲ್ಪೇಯನ್ನು ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಹಾಗೆಯೇ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಇದು 12GB RAM + 256GB ಸ್ಟೋರೇಜ್, 5000mAh ಬ್ಯಾಟರಿ ಮತ್ತು 80W ವೇಗದ ಚಾರ್ಜಿಂಗ್‌ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಫೋನಿನ ಹೊಸ ಬೆಲೆ ತಿಳಿಯಲು ಮುಂದೆ ಓದಿ.

ಹೊಸ ವರ್ಷದ ಗಿಫ್ಟ್! Realme 13+ 5G ಬೆಲೆ ಇಳಿಕೆ.. 2000 ಡಿಸ್ಕೌಂಟ್.. ಹೇಗಿದೆ?

ರಿಯಲ್‌ಮಿ 13+ 5G ವೈಶಿಷ್ಟ್ಯಗಳು

ಡಿಸ್ಪ್ಲೇ ಹೇಗಿದೆ

ರಿಯಲ್‌ಮಿ 13+ 5G ಫೋನ್ 6.67 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಅಮೋಲೆಡ್ ಡಿಸ್ಲ್ಪೇಯನ್ನು ಹೊಂದಿದೆ. ಇದು 2400 × 1080 ಪಿಕ್ಸೆಲ್‌ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರ, 180Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 2000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ ಬೆಂಬಲ ಹೊಂದಿದೆ. ಹಾಗೆಯೇ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಜೊತೆಗೆ ರೈನ್‌ವಾಟರ್ ಸ್ಮಾರ್ಟ್ ಟಚ್ ವೈಶಿಷ್ಟ್ಯವೂ ಲಭ್ಯವಿದೆ.

ಪ್ರೊಸೆಸರ್ ಯಾವುದು?

ರಿಯಲ್‌ಮಿ 13+ 5G ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಎನರ್ಜಿ ಆಕ್ಟಾಕೋರ್ ಪ್ರೊಸೆಸರ್‌ ಹೊಂದಿದೆ. ಈ ಫೋನ್ ಆಂಡ್ರಾಯ್ಡ್‌ 14 ಆಧಾರಿತ ರಿಯಲ್‌ಮಿ ಯುಐ 5 ಓಎಸ್‌ನಲ್ಲಿ ಕೆಲಸ ನಿರ್ವಹಿಸುತ್ತದೆ. ಗ್ರಾಫಿಕ್ಸ್‌ಗಾಗಿ, ಈ ಫೋನ್ ಮಾಲಿ G615 ಜಿಪಿಯು ಸಹ ಹೊಂದಿದೆ.

ಸ್ಟೋರೇಜ್‌ ಆಯ್ಕೆ

ರಿಯಲ್‌ಮಿ 13+ 5G ಸ್ಮಾರ್ಟ್‌ಫೋನ್ 8GB ಮತ್ತು 12GB RAM ಹೊಂದಿದೆ. ಈ ಫೋನ್ 14GB ಡೈನಾಮಿಕ್ RAM ತಂತ್ರಜ್ಞಾನ ಸಹ ಹೊಂದಿದೆ. ನೀವು 26GB RAM ವರೆಗೆ ಬಳಸಬಹುದು. ಈ ಫೋನಿನಲ್ಲಿ 128GB ಮತ್ತು 256GB ಸ್ಟೋರೇಜ್‌ ಆಯ್ಕೆ ಒಳಗೊಂಡಿದೆ.

ಡ್ಯುಯಲ್ ಕ್ಯಾಮೆರಾ ಸೆಟಪ್

ರಿಯಲ್‌ಮಿ 13+ 5G ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದು ಎಲ್‌ಇಡಿ ಫ್ಲಾಶ್‌ನೊಂದಿಗೆ ಬರುತ್ತದೆ. 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಇದೆ. ಸೆಲ್ಪಿ ಮತ್ತು ವಿಡಿಯೋ ಕೆರೆಗಾಗಿ, ಈ ಮೊಬೈಲ್ 16 ಮೆಗಾಪಿಕ್ಸೆಲ್ ಫ್ರಂಟ್‌ ಕ್ಯಾಮೆರಾ ಇದೆ.

ಹೊಸ ವರ್ಷದ ಗಿಫ್ಟ್! Realme 13+ 5G ಬೆಲೆ ಇಳಿಕೆ.. 2000 ಡಿಸ್ಕೌಂಟ್.. ಹೇಗಿದೆ?

ಬೊಂಬಾಟ್ ಬ್ಯಾಟರಿ

ರಿಯಲ್‌ಮಿ 13+ 5G ಮೊಬೈಲ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್‌ ಸೌಲಭ್ಯ ಒದಗಿಸಲಾಗಿದೆ.

ಇತರೆ ವೈಶಿಷ್ಟ್ಯಗಳು

ರಿಯಲ್‌ಮಿ 13+ 5G ಸ್ಮಾರ್ಟ್‌ಫೊನ್ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP65 ರೇಟಿಂಗ್ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್ 3.5 ಎಂಎಂ ಆಡಿಯೊ ಜಾಕ್, ಸ್ಟಿರಿಯೊ ಸ್ಪೀಕರ್‌ಗಳು, 5G, ಡ್ಯುಯಲ್ 4G VoLTE, ವೈ-ಫೈ 6, ಬ್ಲೂಟೂತ್ 5.4, ಜಿಪಿಎಸ್, ಗೆಲಿಲಿಯೊ, ಯುಎಸ್‌ಬಿ ಟೈಪ್ ಸಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ರಿಯಲ್‌ಮಿ 13+ 5G ಬೆಲೆ ಮತ್ತು ಆಫರ್‌ಗಳು

8GB RAM + 128GB ಸ್ಟೋರೇಜ್ = 22,999 ರೂ.
ಆಫರ್‌ ಬೆಲೆ = 20,999 ರೂ.

8GB RAM + 256GB ಸ್ಟೋರೇಜ್ = 24,999 ರೂ.
ಆಫರ್‌ ಬೆಲೆ = 22,999 ರೂ.

12GB RAM + 512GB ಸ್ಟೋರೇಜ್ = 26,999 ರೂ.
ಆಫರ್‌ ಬೆಲೆ = 24,999 ರೂ.

ಕಂಪನಿಯು ಹೊಸ ವರ್ಷದ ಪ್ರಯುಕ್ತ ರಿಯಲ್‌ಮಿ 13 ಪ್ರೊ ಮತ್ತು ರಿಯಲ್‌ಮಿ 13 ಪ್ರೊ+ ಬೆಲೆಯನ್ನು 3,000 ರೂ.ಗಳಷ್ಟು ಇಳಿಕೆ ಮಾಡಿದೆ. ಹಾಗೆಯೇ ರಿಯಲ್‌ಮಿ 13+ 5G ಫೋನಿನ ಬೆಲೆಯನ್ನು 2,000 ರೂ. ಕಡಿಮೆ ಮಾಡಿದೆ. ನೀವು, ರಿಯಾಯಿತಿಯೊಂದಿಗೆ ರಿಯಲ್‌ಮಿ 13 ಪ್ಲಸ್‌ 5G ಫೋನನ್ನು 20 ಸಾವಿರ ಬಜೆಟ್‌ನಲ್ಲಿ ಖರೀದಿಸಬಹುದು. ಇದು ವಿಕ್ಟರಿ ಗೋಲ್ಡ್, ಸ್ಪೀಡ್ ಗ್ರೀನ್ ಮತ್ತು ಡಾರ್ಕ್ ಪರ್ಪಲ್ ಬಣ್ಣಗಳಲ್ಲಿ ಲಭ್ಯವಿದೆ.

Best Mobiles in India

English summary
Realme 13+ 5G price drop in india: Check offers, availability, specs and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+