Home
Deal of the day

10,000ಕ್ಕಿಂತ ಕಡಿಮೆ! ಮೊದಲೇ ಅಗ್ಗದ ಬೆಲೆ.. ಮತ್ತೆ ಡಿಸ್ಕೌಂಟ್ ಘೋಷಣೆ.. ಅದೂ Realme ಫೋನ್

ರಿಯಲ್‌ಮಿ ಪ್ರಿಯರಿಗೆ ಇಲ್ಲಿದೆ ಬಂಪರ್ ಆಫರ್‌! ನೀವು, ಈ ಅಗ್ಗದ 5G ಫೋನನ್ನು ಮತ್ತಷ್ಟು ಕಡಿಮೆ ಬೆಲೆಗೆ ಖರೀದಿಸಬಹುದು. ಹೌದು, ಕಂಪನಿಯು ರಿಯಲ್‌ಮಿ C63 5G (Realme C63 5G) ಫೋನನ್ನು ಈ ವರ್ಷದ ಆಗಸ್ಟ್‌ ತಿಂಗಳಲ್ಲಿ ಬಿಡುಗಡೆ ಮಾಡಿತ್ತು. ಪ್ರಸ್ತುತ, ಈ ಫೋನನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ನೀವು, ಬ್ಯಾಂಕ್‌ ಆಫರ್‌, ನೋ ಕಾಸ್ಟ್‌ ಇಎಂಐ ಮತ್ತು ಎಕ್ಸ್‌ಚೇಂಜ್ ಆಫರ್‌ಗಳ ಲಾಭ ಪಡೆಯಬಹುದು. ಬನ್ನಿ, ಈ ಫೋನಿನ ಹೊಸ ಬೆಲೆ, ಆಫರ್‌ಗಳು ಮತ್ತು ವಿಶೇಷತೆಗಳನ್ನು ತಿಳಿಯೋಣ.

ಕಂಪನಿಯು ರಿಯಲ್‌ಮಿ C63 5G ಫೋನನ್ನು ಮೂರು ಸ್ಟೋರೇಜ್‌ ಆಯ್ಕೆಗಳಲ್ಲಿ ಮಾರಾಟ ಮಾಡುತ್ತಿದೆ. ನೀವು, ಸ್ಟಾರ್ರಿ ಗೋಲ್ಡ್ ಮತ್ತು ಫಾರೆಸ್ಟ್ ಗ್ರೀನ್ ಬಣ್ಣಗಳಲ್ಲಿ ಖರೀದಿಸಬಹುದು. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಆಕ್ಟಾಕೋರ್ ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಇದು 32MP ಮುಖ್ಯ ಕ್ಯಾಮೆರಾ ಹೊಂದಿದೆ. ಫೋನಿನಲ್ಲಿ 6.67 ಇಂಚಿನ ಡಿಸ್ಪ್ಲೇ ಲಭ್ಯವಿದೆ. ಜೊತೆಗೆ 128GB ಸ್ಟೋರೇಜ್‌, 5000mAh ಬ್ಯಾಟರಿ, 10W ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Realme: ಮೊದಲೇ ಅಗ್ಗದ ಬೆಲೆ.. ಮತ್ತೆ ಡಿಸ್ಕೌಂಟ್.. ಯಾವ ಫೋನ್?

ರಿಯಲ್‌ಮಿ C63 5G ಫೋನಿನ ಬೆಲೆ ಮತ್ತು ಆಫರ್‌ಗಳು

ರಿಯಲ್‌ಮಿ C63 5G ಫೋನ್ ಮೂರು ಸ್ಟೋರೇಜ್‌ ಆಯ್ಕೆಗಳಲ್ಲಿ ಬಿಡುಗಡೆಯಾಗಿದೆ. ಫೋನಿನ 4GB+128GB ಸ್ಟೋರೇಜ್‌ ಬೆಲೆ 10,999 ರೂ. ಆಗಿದೆ. 6GB+128GB ಸ್ಟೋರೇಜ್‌ ರೂಪಾಂತರವು 11,999 ರೂ.ಗೆ ಬಿಡುಗಡೆಯಾಗಿದೆ. 8GB+128GB ಸ್ಟೋರೇಜ್‌ ಆಯ್ಕೆ ಬೆಲೆ 12,999 ರೂ. ಇದೆ. ಕಂಪನಿಯು ಮೂಲ ಮಾದರಿಯ ಮೇಲೆ 1,000 ರೂ. ಮತ್ತು ಇತರೆ ಎರಡು ಮಾದರಿಗಳ ಮೇಲೆ 1,500 ರೂ. ಬ್ಯಾಂಕ್ ರಿಯಾಯಿತಿ ನೀಡುತ್ತಿದೆ.

ರಿಯಾಯಿತಿ ಬಳಿಕ ಫೋನಿನ 8GB RAM+128GB ಸ್ಟೋರೇಜ್‌ ಆಯ್ಕೆಯನ್ನು11,499 ರೂ.ಗೆ ಖರೀದಿಸಬಹುದು. 6GB RAM+128GB ರೂಪಾಂತರವು 10,499 ರೂ.ಗೆ ಲಭ್ಯವಿದೆ. ಖರೀದಿಸಬಹುದು. 4GB+128GB ಸ್ಟೋರೇಜ್ ವೇರಿಯಂಟ್ ಕೇವಲ 9,999 ರೂ.ಗೆ ಮಾರಾಟವಾಗುತ್ತಿದೆ. ನೀವು, 3 ತಿಂಗಳ ನೋ ಕಾಸ್ಟ್‌ ಇಎಂಐ ಮೂಲಕ ಈ ಫೋನನ್ನು ಕೊಳ್ಳಬಹುದು. ಜೊತೆಗೆ 7,250 ರೂ.ವರೆಗೆ ಎಕ್ಸ್‌ಚೇಂಜ್ ಆಫರ್ ಸಿಗುತ್ತದೆ. ಇದು ಫ್ಲಿಪ್‌ಕಾರ್ಟ್, ಕಂಪನಿಯ ವೆಬ್‌ಸೈಟ್ ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಲಭ್ಯವಿದೆ.

ರಿಯಲ್‌ಮಿ C63 5G ಫೋನಿನ ವೈಶಿಷ್ಟ್ಯಗಳು

ಡಿಸ್ಲ್ಪೇ ವಿವರ

ರಿಯಲ್‌ಮಿ C63 5G ಮೊಬೈಲ್ 6.67 ಇಂಚಿನ ಹೆಚ್‌ಡಿ ಪ್ಲಸ್ ಡಿಸ್ಲ್ಪೇಯನ್ನು ಹೊಂದಿದೆ. ಇದು 720×1604 ಪಿಕ್ಸೆಲ್‌ ರೆಸಲ್ಯೂಶನ್ ಬೆಂಬಲದೊಂದಿಗೆ ಬರುತ್ತದೆ. ಡಿಸ್ಪ್ಲೇಯು 120Hz ರಿಫ್ರೆಶ್ ದರ, 240Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 625 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಇದು ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ರಿಯಲ್‌ಮಿ C63 5G ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಆಕ್ಟಾಕೋರ್ ಪ್ರೊಸೆಸರ್ ಹೊಂದಿದೆ. ಗ್ರಾಫಿಕ್ಸ್‌ಗಾಗಿ ಇದು ಆರ್ಮ್ ಮಾಲಿ G57 MC2 ಜಿಪಿಯು ಹೊಂದಿದೆ. ಈ ಮೊಬೈಲ್ ಆಂಡ್ರಾಯ್ಡ್‌ 14 ಆಧಾರಿತ ರಿಯಲ್‌ಮಿ UI 5.0 ನೊಂದಿಗೆ ಕೆಲಸ ಮಾಡುತ್ತದೆ.

ಸ್ಟೋರೇಜ್ ಆಯ್ಕೆ

ರಿಯಲ್‌ಮಿ C63 5G ಸ್ಮಾರ್ಟ್‌ಫೋನ್ 8GB RAM ಮತ್ತು 128GB ಸ್ಟೋರೇಜ್‌ ಆಯ್ಕೆ ಒಳಗೊಂಡಿದೆ. ಇದು 8GB ಡೈನಾಮಿಕ್ RAM ಬೆಂಬಲದೊಂದಿಗೆ ಬರುತ್ತದೆ. ನೀವು 16GB RAM ವರೆಗೆ ಬಳಸಬಹುದು.

Realme: ಮೊದಲೇ ಅಗ್ಗದ ಬೆಲೆ.. ಮತ್ತೆ ಡಿಸ್ಕೌಂಟ್.. ಯಾವ ಫೋನ್?

ಕ್ಯಾಮೆರಾ ಸೆಟಪ್

ರಿಯಲ್‌ಮಿ C63 5G ಮೊಬೈಲ್ ಟ್ರಿಪಲ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಫೋನಿನಲ್ಲಿ ಇದು ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ 32 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಸೆಲ್ಫಿಗಳು ಮತ್ತು ವಿಡಿಯೋ ಕರೆಗಾಗಿ, 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ರಿಯಲ್‌ಮಿ C63 5G ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್‌ ಮಾಡಲು, 10W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಇದು ರಿವರ್ಸ್ ಚಾರ್ಜಿಂಗ್ ಸಹ ಹೊಂದಿದೆ.

ಇತರೆ ವೈಶಿಷ್ಟ್ಯಗಳು

ರಿಯಲ್‌ಮಿ C63 5G ಸ್ಮಾರ್ಟ್‌ಫೋನ್ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP54 ರೇಟಿಂಗ್ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು 3.5 ಎಂಎಂ ಆಡಿಯೋ ಜ್ಯಾಕ್, ಹೈಬ್ರಿಡ್ ಡ್ಯುಯಲ್ ಸಿಮ್, 5G, ಡ್ಯುಯಲ್ 4G VoLTE, ವೈ-ಫೈ, ಬ್ಲೂಟೂತ್ 5.3, ಜಿಪಿಎಸ್‌5, ಯುಎಸ್‌ಬಿ ಟೈಪ್ ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ.

Best Mobiles in India

English summary
Realme C63 5G available with 1500 discount on flipkart sale: check new price, offers, availability specs and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+