Realme Days Sale: ಬರೋಬ್ಬರಿ 6000 ಉಳಿತಾಯ.. ಯಾವೆಲ್ಲ ಫೋನ್‌ಗಳಿಗೆ ಡಿಸ್ಕೌಂಟ್? ಇಲ್ಲಿದೆ ಪಟ್ಟಿ
ರಿಯಲ್‌ಮಿ ತನ್ನ ಅಭಿಮಾನಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಬಹುನಿರೀಕ್ಷಿತ 'ರಿಯಲ್‌ಮಿ ಡೇಸ್ ಸೇಲ್' (Realme Days Sale) ಅನ್ನು ಘೋಷಿಸಿದೆ. ಈ ಮಾರಾಟದಲ್ಲಿ ಭರ್ಜರಿ ಆಫರ್‌ಗಳು ಗ್ರಾಹಕರಿಗೆ ಕೈಗೆ ಸಿಗುತ್ತದೆ. ಡಿಸೆಂಬರ್ 3 ರಿಂದ ಆರಂಭವಾಗಿರುವ ಈ ಮಾರಾಟ ಇದೇ ಡಿಸೆಂಬರ್ 6 ಮಧ್ಯರಾತ್ರಿ 12ರ ವರೆಗೆ ನಡೆಯಲಿದೆ. ಈ ಸೇಲ್‌ನಲ್ಲಿ ಹಲವು ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳ ಮೇಲೆ ಬೊಂಬಾಟ್ ರಿಯಾಯಿತಿ ಲಭ್ಯವಿದೆ. ಬನ್ನಿ, ಯಾವೆಲ್ಲಾ ಫೋನ್‌ಗಳ ಮೇಲೆ ಎಷ್ಟು ಡಿಸ್ಕೌಂಟ್ ಲಭ್ಯವಿದೆ ಎನ್ನುವುದನ್ನು ತಿಳಿಯೋಣ.
ರಿಯಲ್‌ಮಿ ದೇಶದ ಯುವಜನತೆಗೆ ಅತ್ಯಂತ ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿದೆ. ತನ್ನ ಗ್ರಾಹಕರಿಗೆ ಬಂಪರ್ ಗಿಫ್ಟ್ ನೀಡುತ್ತಿದೆ. ನೀವು, ಯಾವುದೇ ಮೊಬೈಲ್ ಖರೀದಿಸಿದರೂ, 6000 ರೂ.ಗಳ ಡಿಸ್ಕೌಂಟ್ ಮತ್ತು ಇಎಂಐ ಆಫರ್‌ಗಳನ್ನು ಪಡೆಯಬಹುದು. ಈ ಪೈಕಿ ರಿಯಲ್‌ಮಿ GT6, ರಿಯಲ್‌ಮಿ 13 ಪ್ರೊ + 5G ಮತ್ತು ರಿಯಲ್‌ಮಿ 12x 5G ಫೋನ್‌ಗಳ ಮೇಲೆ ದೊಡ್ಡ ರಿಯಾಯಿತಿ ಲಭ್ಯವಿದೆ. ಜೊತೆಗೆ, ಬ್ಯಾಂಕ್ ಆಫರ್ ಮತ್ತು ಕ್ಯಾಶ್‌ಬ್ಯಾಕ್ ಸಹ ಸಿಗುತ್ತದೆ.

ರಿಯಲ್‌ಮಿ GT6 ಬೆಲೆ ಮತ್ತು ಆಫರ್
ರಿಯಲ್‌ಮಿ GT6 (realme GT6) ಫೋನ್ ರೇಜರ್ ಹಸಿರು ಮತ್ತು ಬೆಳ್ಳಿ ಬಣ್ಣದ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಫೋನಿನ 8GB + 256GB ಸ್ಟೋರೇಜ್ ಆಯ್ಕೆಯ ಬೆಲೆ 40,999 ರೂ. ಆಗಿದೆ. 12GB + 256GB ಸ್ಟೋರೇಜ್ ರೂಪಾಂತರವು 42,999 ರೂ.ಗೆ ಲಭ್ಯವಿದೆ. ಮತ್ತು 16GB + 512GB ಸ್ಟೋರೇಜ್ ವೇರಿಯಂಟ್ 44,999 ರೂ.ಗೆ ಮಾರಾಟವಾಗುತ್ತಿದೆ.
ಪ್ರಸ್ತುತ, ಕಂಪನಿಯು ಎಲ್ಲಾ ರೂಪಾಂತರಗಳ ಮೇಲೆ 6,000 ರೂ. ಬ್ಯಾಂಕ್ ಡಿಸ್ಕೌಂಟ್ ಅಥವಾ 5,000 ರೂ. ಎಕ್ಸ್‌ಚೇಂಜ್ ಆಫರ್ ಘೋಷಿಸಿದೆ. ರಿಯಾಯಿತಿಯೊಂದಿಗೆ ನೀವು, ಫೋನನ್ನು ಕ್ರಮವಾಗಿ 34,999 ರೂ., 36,999 ರೂ. ಮತ್ತು 38,999 ರೂ.ಗೆ ಖರೀದಿಸಬಹುದು.
ರಿಯಲ್‌ಮಿ 13 ಪ್ರೊ ಪ್ಲಸ್ 5G ಬೆಲೆ ಮತ್ತು ಆಫರ್
ರಿಯಲ್‌ಮಿ 13 ಪ್ರೊ+ 5G (realme 13 Pro+ 5G) ಮೊಬೈಲ್ ಹಸಿರು ಬಣ್ಣದಲ್ಲಿ ಖರೀದಿಗೆ ಲಭ್ಯವಿದೆ. ಫೋನಿನ 8GB + 256GB ಸ್ಟೋರೇಜ್ ಆಯ್ಕೆಯ ಬೆಲೆ 32,999 ರೂ. ಇದೆ. 12GB + 256GB ಸ್ಟೋರೇಜ್ ರೂಪಾಂತರವು 34,999 ರೂ.ಗೆ ಲಭ್ಯವಿದೆ. 12GB + 512GB ಸ್ಟೋರೇಜ್ ವೇರಿಯಂಟ್ 36,999 ರೂ.ಗೆ ಮಾರಾಟವಾಗುತ್ತಿದೆ.
ಪ್ರಸ್ತುತ, ಕಂಪನಿಯು ಎಲ್ಲಾ ರೂಪಾಂತರಗಳ ಮೇಲೆ 4,000 ರೂ. ಬ್ಯಾಂಕ್ ಡಿಸ್ಕೌಂಟ್ ಅಥವಾ 3,000 ರೂ. ಎಕ್ಸ್‌ಚೇಂಜ್ ಆಫರ್ ಘೋಷಿಸಿದೆ. ರಿಯಾಯಿತಿಯೊಂದಿಗೆ ನೀವು, ಫೋನನ್ನು ಕ್ರಮವಾಗಿ 28,999 ರೂ., 30,999 ರೂ. ಮತ್ತು 32,999 ರೂ.ಗೆ ಕೊಳ್ಳಬಹುದು.
ರಿಯಲ್‌ಮಿ 12x 5G ಬೆಲೆ ಮತ್ತು ಆಫರ್
ರಿಯಲ್‌ಮಿ 12x 5G (realme 12x 5G) ಸ್ಮಾರ್ಟ್‌ಫೋನ್ ಗ್ರೀನ್, ಟ್ವಿಲೈಟ್ ಪರ್ಪಲ್ ಮತ್ತು ಕೋರಲ್ ರೆಡ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಫೋನಿನ 6GB + 128GB ಸ್ಟೋರೇಜ್ ಆಯ್ಕೆಯ ಬೆಲೆ 12,499 ರೂ. ಇದೆ. ಪ್ರಸ್ತುತ 1,250 ರೂ. ಬ್ಯಾಂಕ್ ಡಿಸ್ಕೌಂಟ್ ಲಭ್ಯವಿದೆ. ನೀವು, 11,249 ರೂ.ಗೆ ಖರಿದಿಸಬಹುದು. 8GB + 128GB ಸ್ಟೋರೇಜ್ ರೂಪಾಂತರವು 13,499 ರೂ.ಗೆ ಮಾರಾಟವಾಗುತ್ತಿದೆ. ಪ್ರಸ್ತುತ 1,900 ಬ್ಯಾಂಕ್ ರಿಯಾಯಿತಿ ನೀಡಲಾಗುತ್ತಿದೆ. ನೀವು 11,599 ರೂ.ಗೆ ಕೊಳ್ಳಬಹುದು.
ನೀವು, ಫ್ಲಿಪ್‌ಕಾರ್ಟ್ (Flipkart) ಮತ್ತು ರಿಯಲ್‌ಮಿಯ (realme.com) ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಎಲ್ಲಾ ಆಫರ್‌ಗಳ ಲಾಭ ಪಡೆಯಬಹುದು. 9 ತಿಂಗಳ ನೋ ಕಾಸ್ಟ್ ಇಎಂಐ ಸೌಲಭ್ಯ ನೀಡಲಾಗುತ್ತದೆ. ಈ ವಿಶೇಷ ಮಾರಾಟವು ಡಿಸೆಂಬರ್ 6 ರಂದು ಕೊನೆಗೊಳ್ಳುತ್ತದೆ.


Click it and Unblock the Notifications








