Home
Deal of the day

Realme GT 6 ಸ್ಮಾರ್ಟ್‌ಫೋನ್ ಫಸ್ಟ್‌ ಸೇಲ್: ಮಸ್ತ್ ಫೀಚರ್ಸ್, ಭರಪೂರ ಆಫರ್!

ದಿ ವೇಟ್‌ ಈಸ್ ಓವರ್! ಕಳೆದ ವಾರ ಲಾಂಚ್‌ ಆಗಿದ್ದ Realme GT 6 ಸ್ಮಾರ್ಟ್‌ಫೋನ್ 5,500mAh ಬ್ಯಾಟರಿ ಜೊತೆಗೆ ಅತ್ಯಾಕರ್ಷಕ ಫೀಚರ್ಸ್‌ನಿಂದ ಮೊಬೈಲ್‌ ಪ್ರಿಯರನ್ನು ಆಕರ್ಷಿಸಿತ್ತು. ಈ ಸ್ಮಾರ್ಟ್‌ಫೋನ್‌ ಇಂದಿನಿಂದ ತನ್ನ ಮಾರಾಟ ಆರಂಭಿಸಲಿದೆ. ಸ್ಮಾರ್ಟ್‌ಫೋನ್ ಸ್ಯಾಮ್‌ಸಂಗ್ ಮತ್ತು ಗೂಗಲ್‌ ಸ್ಮಾರ್ಟ್‌ಫೋನ್‌ಗಳ ರೀತಿಯಲ್ಲಿ ಗಮನಾರ್ಹ AI ಆಧಾರಿತ ಫೀಚರ್ಸ್‌ಗಳನ್ನು ಹೊಂದಿದೆ. Realme GT 6 ಜನರೇಟಿವ್ AI (Gen AI) ವೈಶಿಷ್ಟ್ಯಗಳನ್ನು ಒಳಗೊಂಡಿರುವ ಕಂಪನಿಯ ಮೊದಲ ಸ್ಮಾರ್ಟ್‌ಫೋನ್ ಸಹ ಆಗಿದೆ. ಹಾಗಿದ್,ರೆ ಇಂದು ಸೇಲ್‌ ಆರಂಭಿಸಲಿರುವ ಈ ಸ್ಮಾರ್ಟ್‌ಫೋನ್ ಬೆಲೆ ಎಷ್ಟು? ಎಲ್ಲಿ ಖರೀದಿಸಬೇಕು? ಏನೆಲ್ಲಾ ಆಫರ್‌ಗಳಿವೆ? ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ರಿಯಲ್‌ಮಿ ಸಂಸ್ಥೆಯ ಈ 5G ಸ್ಮಾರ್ಟ್‌ಫೋನ್ ಫುಲ್ HD+ ರೆಸಲ್ಯೂಶನ್‌ ಜೊತೆಗೆ ಅಮೋಲ್ಡ್‌ ಡಿಸ್‌ಪ್ಲೇ ಹೊಂದಿದೆ ಮತ್ತು ಉತ್ತಮ ಗುಣಮಟ್ಟದ 50MP Sony LYT 808 ಪ್ರಾಥಮಿಕ ಸೆನ್ಸಾರ್ ಕ್ಯಾಮೆರಾ ಜೊತೆಗೆ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. 120W SuperVOOC ಚಾರ್ಜಿಂಗ್ ಬೆಂಬಲದೊಂದಿಗೆ 5,500mAh ಬ್ಯಾಟರಿ ಸೌಲಭ್ಯ ಪಡೆದಿದೆ.

Realme GT 6 ಫಸ್ಟ್‌ ಸೇಲ್ ಯಾವಾಗ..?
ಬಹುನಿರೀಕ್ಷಿತ ಈ ಸ್ಮಾರ್ಟ್‌ಫೋನ್‌ ಜೂನ್ 20ರಂದು ಅಧಿಕೃತವಾಗಿ ಲಾಂಚ್ ಆಗಿದ್ದರೂ ಕೂಡ ಇದು ಇಂದು ಅಂದರೆ ಜೂನ್ 24ರ ಮಧ್ಯಾಹ್ನ 12 ಗಂಟೆಯಿಂದ ತನ್ನ ಮೊದಲ ಸೇಲ್ ಆರಂಭಿಸಲಿದೆ. ಈಗಾಗಲೆ ಮುಂಗಡ ಬುಕಿಂಗ್ ಆರಂಭವಾಗಿದ್ದು. ಫ್ಲೂಟ್‌ ಸಿಲ್ವರ್, ರಾಜರ್‌ ಗ್ರೀನ್‌ ಕಲರ್‌ನ ಆಯ್ಕೆಯಲ್ಲಿ ಈ ಫೋನ್‌ ಲಭ್ಯವಿರಲಿದೆ. ಇನ್ನು ಈ ಫೋನ್‌ 8GB ಮತ್ತು 256GB ಸ್ಟೋರೆಜ್, 12GB ಮತ್ತು 256GB ಸ್ಟೋರೆಜ್, 8GB ಹಾಗೂ 126GB ಸ್ಟೋರೆಜ್, 12GB ಮತ್ತು 512GB ಸ್ಟೋರೆಜ್‌ ವೇರಿಯಂಟ್‌ಗಳಲ್ಲಿ ಲಭ್ಯವಿರಲಿದೆ.

Realme GT 6 ಬೆಲೆ ಹಾಗೂ ಆರಂಭಿಕ ಕೊಡುಗೆಗಳು:
8GB+256GB ವೇರಿಯಂಟ್‌ ಸ್ಮಾರ್ಟ್‌ಫೋನ್‌ ₹40,999 ಮೂಲ ಬೆಲೆ ಹೊಂದಿದೆ, 12GB ಮತ್ತು 256GB ವೇರಿಯಂಟ್‌ನ ₹42,999 ಮೂಲ ಬೆಲೆ ಹೊಂದಿದೆ. 16GB+512GB ವೇರಿಯಂಟ್ 44,999 ರೂ. ಬೆಲೆ ಹೊಂದಿದೆ. ಇದರ ಹೊರತಾಗಿ ಕಂಪನಿಯು ಈ ಸ್ಮಾರ್ಟ್‌ಫೋನ್‌ನ ಆರಂಭೀಕ ಸೇಲ್‌ಗಾಗಿ ಹಲವಾರು ಕೊಡುಗೆಗಳನ್ನು ಸಹ ಘೊಷಿಸಿದೆ.

Realme GT 6 ಫಸ್ಟ್‌ ಸೇಲ್ ಆರಂಭ: ಮಸ್ತ್‌ ಆಫರ್!

ಇದರ 8GB+256GB ಹಾಗೂ 16GB+512GB ಮೇಲೆ ಫ್ಲಾಟ್ ₹4000 ಬ್ಯಾಂಕ್ ಆಫರ್ ಜೊತೆಗೆ ವಿನಿಮಯದಲ್ಲಿ ₹1000 ವರೆಗೆ ಹೆಚ್ಚುವರಿ ರಿಯಾಯಿತಿ ಪಡೆಯಬಹುದು. 12GB+256GB ಮೇಲೆ ತ್ವರಿತ ರಿಯಾಯಿತಿ ಹಾಗೂ ಫ್ಲಾಟ್ ₹3000 ಬ್ಯಾಂಕ್ ಆಫರ್ ಪಡೆಯಬಹುದು ಇದರ ಜೊತೆಗೆ ಹಳೆ ಫೋನ್ ವಿನಿಮಯದ ಮೇಲೆ ₹1000 ಹೆಚ್ಚುವರಿ ರಿಯಾಯಿತಿ ಪಡೆಯಬಹುದು.

ಇದರ ಜೊತೆಗೆ 12 ತಿಂಗಳವರೆಗಿನ EMI ಖರೀದಿ ಮೇಲೆ ಯಾವುದೇ ಹೆಚ್ಚುವರಿ EMI ವೆಚ್ಚ ಇರುವುದಿಲ್ಲ. MobiKwik ಮೂಲಕ ₹1,500 ವರೆಗಿನ ಕ್ಯಾಶ್‌ ಬ್ಯಾಕ್‌ ಪಡೆಯಹುದಾಗಿದೆ.

Realme GT 6 ಲಭ್ಯತೆ:
ಇನ್ನೂ ಈ ಸ್ಮಾರ್ಟ್‌ಫೋನ್‌ ರಿಯಲ್‌ ಅಧಿಕೃತ ವೆಬ್‌ಸೈಟ್ Realme.com ಹಾಗೂ ಪ್ರಸಿದ್ದ ಇ-ಕಾಮರ್ಸ್‌ ತಾಣವಾಗಿರುವ ಫ್ಲಿಪ್‌ಕಾರ್ಟ್‌ (Flipkart) ನಲ್ಲಿ ಲಭ್ಯವಿರಲಿದೆ.

Realme GT 6 ಫೀಚರ್ಸ್‌:
ಇದು ಆಂಡ್ರಾಯ್ಡ್‌ 14 ಆಧಾರಿತ Realme UI 5 ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು 6.78 ಇಂಚಿನ ಫುಲ್ HD+ (1,264x2,780 ಪಿಕ್ಸೆಲ್‌ಗಳ) 8T LTPO ಅಮೋಲ್ಡ್‌ ಡಿಸ್‌ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್, HDR 10+ ಬೆಂಬಲ ಮತ್ತು ಡಾಲ್ಬಿ ವಿಷನ್ ಬೆಂಬಲ ಹೊಂದಿದೆ. ಡಿಸ್‌ಪ್ಲೇ 6,000 ನಿಟ್ಸ್‌ಗಳ ಗರಿಷ್ಟ ಬ್ರೈಟ್‌ನೆಸ್ ಮತ್ತು 360Hz ಟಚ್ ಸ್ಯಾಂಪ್ಲಿಂಗ್ ರೇಟ್ ಹೊಂದಿರಲಿದೆ.

ಹೊಸ ಫೋನ್ 4nm ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 8s Gen 3 SoC ಯಿಂದ ಚಾಲಿತವಾಗಿದೆ ಜೊತೆಗೆ 16GB RAM ಮತ್ತು 512B ವರೆಗಿನ ಗರಿಷ್ಠ ಸ್ಟೋರೆಜ್ ಸಾಮರ್ಥ್ಯ ಹೊಂದಿದೆ. ಇದು ಕೂಲಿಂಗ್ ದಕ್ಷತೆಯನ್ನು ಹೆಚ್ಚಿಸಲು 10,014mm ಚದರ 3D ಟೆಂಪರ್ಡ್ ಡ್ಯುಯಲ್ VC ವ್ಯವಸ್ಥೆಯನ್ನು ಹೊಂದಿದೆ.

ಕ್ಯಾಮೆರಾ:
ಈ ಸ್ಮಾರ್ಟ್‌ಫೋನ್ ಟ್ರಿಪಲ್ ಬ್ಯಾಕ್ ಕ್ಯಾಮೆರಾ ಘಟಕ ಹೊಂದಿದ್ದು, 50MP Sony LYT 808 ಸೆನ್ಸಾರ್‌, f/1.69 ಅಪರ್ಚರ್ ಮತ್ತು OIS ಬೆಂಬಲ ಹೊಂದಿದೆ. ಕ್ಯಾಮೆರಾ ಸೆಟಪ್ 50MP ಸ್ಯಾಮ್‌ಸಂಗ್ JN5 ಟೆಲಿಫೋಟೋ ಸೆನ್ಸಾರ್ ಮತ್ತು 8MP ಸೋನಿ IMX355 ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾವನ್ನು ಸಹ ಒಳಗೊಂಡಿದೆ.
ಸೆಲ್ಫಿ ಮತ್ತು ವೀಡಿಯೊ ಚಾಟ್‌ಗಳಿಗಾಗಿ ಇದು ಮುಂಭಾಗದಲ್ಲಿ f/2.45 ದ್ಯುತಿರಂಧ್ರದೊಂದಿಗೆ 32MP ಕ್ಯಾಮೆರಾ ಹೊಂದಿದೆ. ಕ್ಯಾಮೆರಾ ಸೆಟಪ್ ಡಾಲ್ಬಿ ವಿಷನ್ ಬೆಂಬಲದೊಂದಿಗೆ 30fps ನಲ್ಲಿ 4K ವೀಡಿಯೊ ಸೆರೆ ಹಿಡಿಯಬಹುದಾಗಿದೆ.

Best Mobiles in India

English summary
Realme GT 6 smartphone will go on sale from today. The smartphone has significant AI based features similar to Samsung and Google smartphones.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+