Home
Deal of the day

Realme GT 6T 5G ಬೆಲೆ ಇಳಿಕೆ: 5,000 ರಿಯಾಯಿತಿ.. ಹೊಸ ಬೆಲೆ ಎಷ್ಟು?

ರಿಯಲ್‌ಮಿ ಪ್ರಿಯರ ಮೆಚ್ಚಿನ ಸ್ಮಾರ್ಟ್‌ಫೋನ್‌ ಅಮೆಜಾನ್‌ನಲ್ಲಿ ಭರ್ಜರಿ ಡಿಸ್ಕೌಂಟ್‌ಗೆ ಲಭ್ಯವಿದೆ. ಈ 5G ಫೋನ್ ಖರೀದಿಸಿದರೆ 5,000 ರೂ.ಗಳ ರಿಯಾಯಿತಿ ಮತ್ತು ಇನ್ನಿತರ ಆಫರ್‌ಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಹೌದು, ರಿಯಲ್‌ಮಿ GT 6T 5G (Realme GT 6T 5G) ಸ್ಮಾರ್ಟ್‌ಫೋನ್ ಅನ್ನು ಇದೀಗ, ಈ ಅಮೆಜಾನ್ ಮಾರಾಟದಲ್ಲಿ ರಿಯಾಯಿತಿ ದರದಲ್ಲಿ ಖರೀದಿಸಬಹುದು. ಈ ಮೊಬೈಲ್ ಆಕರ್ಷಕ ವಿನ್ಯಾಸದೊಂದಿಗೆ ಬರುತ್ತದೆ. ನಾಲ್ಕು ಸ್ಟೋರೇಜ್‌ ರೂಪಾಂತರಗಳಲ್ಲಿ ಲಭ್ಯವಿದೆ.

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2024 ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಮಾರಾಟದಲ್ಲಿ ಅನೇಕ ಸ್ಮಾರ್ಟ್‌ಫೋನ್‌ಗಳು ಮತ್ತು ಇತರೆ ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ರಿಯಲ್‌ಮಿ GT 6T 5G ಫೋನ್‌ ಕೂಡ ಆಫರ್‌ನೊಂದಿಗೆ ಮಾರಾಟವಾಗುತ್ತಿದೆ. ಈ ಮೊಬೈಲ್‌ ಅನ್ನು ಈ ವರ್ಷದ ಮೇ ತಿಂಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇದು 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, ಜೊತೆಗೆ 5500mAh ಬ್ಯಾಟರಿಯನ್ನು ಹೊಂದಿದೆ.

Realme GT 6T 5G ಬೆಲೆ ಇಳಿಕೆ: 5,000 ರಿಯಾಯಿತಿ.. ಹೊಸ ಬೆಲೆ ಎಷ್ಟು?

ರಿಯಲ್‌ಮಿ GT 6T 5G ಫೋನಿನ ಹೊಸ ಬೆಲೆ

ರಿಯಲ್‌ಮಿ GT 6T 5G (Realme GT 6T 5G) ಸ್ಮಾರ್ಟ್‌ಫೋನ್ ಪ್ರಸ್ತುತ ನಾಲ್ಕು ಸ್ಟೋರೇಜ್ ರೂಪಾಂತರಗಳಲ್ಲಿ ಲಭ್ಯವಿದೆ. 8GB RAM + 128GB ಸ್ಟೋರೇಜ್, 8GB RAM + 256GB ಸ್ಟೋರೇಜ್, 12GB RAM + 256GB ಸ್ಟೋರೇಜ್, 12GB RAM + 512GB ಸ್ಟೋರೇಜ್ ರೂಪಾಂತರಗಳಲ್ಲಿ ಮಾರಾಟವಾಗುತ್ತಿದೆ. ಪ್ರಸ್ತುತ, ಈ ಫೋನಿನ ಆರಂಭಿಕ ಬೆಲೆ 29,998 ರೂ. ಆಗಿದೆ.

ಅಮೆಜಾನ್ ಲೈವ್ ಪುಟವನ್ನು ಆಧರಿಸಿ (Realme GT 6T 5G) ಈ ಮಾರಾಟದ ಭಾಗವಾಗಿ ನೀವು ಕೂಪನ್ ಕೋಡ್ ಮೂಲಕ 3,000 ರೂ. ರಿಯಾಯಿತಿಯನ್ನು ಪಡೆಯಬಹುದು. ಜೊತೆಗೆ, ನೀವು ಎಸ್‌ಬಿಐ ಕಾರ್ಡ್‌ಗಳ ಮೂಲಕ ಖರೀದಿಸಿದರೆ, ನೀವು ಗರಿಷ್ಠ 2,500 ರೂ. ರಿಯಾಯಿತಿಯನ್ನು ಪಡೆಯಬಹುದು. ಈ ಮೂಲಕ ನೀವು ಈ ಮೊಬೈಲ್ ಅನ್ನು 24,999 ರೂ.ಗೆ ನಿಮ್ಮದಾಗಿಸಿಕೊಳ್ಳಬಹುದು. ಇದು ಪ್ಲುಮಿಡ್ ಸಿಲ್ವರ್ ಮತ್ತು ರೇಜರ್ ಗ್ರೀನ್ ಬಣ್ಣಗಳಲ್ಲಿ ಲಭ್ಯವಿದೆ.

ರಿಯಲ್‌ಮಿ GT 6T 5G ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ: ರಿಯಲ್‌ಮಿ GT 6T 5G ಸ್ಮಾರ್ಟ್‌ಫೋನ್ 6.78 ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಇದು 2780 x 1264 ಪಿಕ್ಸೆಲ್ ರೆಸಲ್ಯೂಶನ್, 120Hz ರಿಫ್ರೆಶ್ ರೇಟ್ ಹೊಂದಿದೆ. 6000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್, 2500Hz ಮಾದರಿ ದರವನ್ನು ಹೊಂದಿದೆ. ಇದು ಮುಂಭಾಗದಲ್ಲಿ ಕಾರ್ನಿಂಗ್ ಗ್ಲಾಸ್ ವಿಕ್ಟಸ್ 2 ರಕ್ಷಣೆಯನ್ನು ಹೊಂದಿದೆ.

ಪ್ರೊಸೆಸರ್‌: ರಿಯಲ್‌ಮಿ GT 6T 5G ಫೋನ್ 4nm Qualcomm Snapdragon 7+ Gen 3 ಚಿಪ್‌ಸೆಟ್ ಅನ್ನು ಹೊಂದಿದೆ. ಇದನ್ನು Adreno 732 GPU ನೊಂದಿಗೆ ಪರಿಚಯಿಸಲಾಗಿದೆ. 12 GB ವರೆಗೆ LPDDR5X RAM ಮತ್ತು 512 GB UFS 4.0 ಸ್ಟೋರೇಜ್‌ ಒಳಗೊಂಡಿದೆ.

ಕ್ಯಾಮೆರಾ: ರಿಯಲ್‌ಮಿ GT 6T 5G ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು OIS ಜೊತೆಗೆ 50 ಮೆಗಾಪಿಕ್ಸೆಲ್ Sony LYT ಪ್ರಾಥಮಿಕ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಶೂಟರ್ ಅನ್ನು ಒಳಗೊಂಡಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 32 ಮೆಗಾಪಿಕ್ಸೆಲ್ ಸೋನಿ IMX615 ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ: ಈ ಸ್ಮಾರ್ಟ್‌ಫೋನ್ 5,500mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಇದು 120W ಸೂಪರ್ ವೋಕ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಕೇವಲ 26 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿದೆ.

ಇತರೆ ವೈಶಿಷ್ಟ್ಯಗಳು: ಇದು 5G, ಬ್ಲೂಟೂತ್ 5.2, ವೈಫೈ 6, ಜಿಪಿಎಸ್, ಯುಎಸ್‌ಬಿ 2.0 ಸಿ ಚಾರ್ಜಿಂಗ್ ಪೋರ್ಟ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

Best Mobiles in India

English summary
Realme GT 6T 5G gets huge discount on amazon great indian festival sale 2024: know price, specs
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+