Home
Deal of the day

ಯುಗಾದಿ ಆಫರ್! 9000 ಕಡಿಮೆ ಬೆಲೆ.. 5500mAh ಬ್ಯಾಟರಿ.. 32MP ಸೆಲ್ಫಿ ಕ್ಯಾಮೆರಾ.. ಯಾವ ಫೋನ್, ವಿಶೇಷತೆಗಳೇನು?

ಯುಗಾದಿ ಹಬ್ಬದ ಸಂಭ್ರಮದಲ್ಲಿರುವವರಿಗೆ ಇಲ್ಲಿದೆ ಸಿಹಿಸುದ್ದಿ. ರಿಯಲ್‌ಮಿ ತನ್ನ 5G ಫೋನಿನ ಬೆಲೆಯನ್ನು ಮತ್ತೆ ಇಳಿಕೆ ಮಾಡಿದೆ. ಈ ಮೊಬೈಲ್‌ ಪ್ರಸ್ತುತ 9,000 ರೂ.ಗಳ ಅಗ್ಗದ ದರದಲ್ಲಿ ಮಾರಾಟವಾಗುತ್ತಿದೆ. ಹೌದು, ರಿಯಲ್‌ಮಿ GT 6T 5G (Realme GT 6T 5G) ಸ್ಮಾರ್ಟ್‌ಫೋನ್ ಆಕರ್ಷಕ ರಿಯಾಯಿತಿ ಪಡೆದಿದೆ. ನೀವು ಅಮೆಜಾನ್‌ನಲ್ಲಿ ಈ ಕೊಡುಗೆಗೆ ಲಾಭ ಪಡೆಯಬಹುದು. ಈ ಫೋನಿನ ಮೂಲ ಬೆಲೆ, ಆಫರ್ ಮತ್ತು ಇದು ಯಾವೆಲ್ಲಾ ವೈಶಿಷ್ಟ್ಯಗಳನ್ನು ಹೊಂದಿದೆ ತಿಳಿಯಲು ಮುಂದ ಓದಿ.

ರಿಯಲ್‌ಮಿ GT 6T 5G ಮೊಬೈಲ್ ಕಳೆದ ವರ್ಷ ಮೇ ತಿಂಗಳಲ್ಲಿ ದೇಶೀಯ ಮಾರುಕಟ್ಟೆಯನ್ನು ಪ್ರವೇಶಿಸಿತ್ತು. ಈ ಫೋನಿನ ವಿಶೇಷತೆಗಳೆಂದರೆ, ಈ ಫೋನಿನಲ್ಲಿ 50MP ಮುಖ್ಯ ಕ್ಯಾಮೆರಾ ಮತ್ತು 32MP ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7+ ಜೆನ್ 3 ಪ್ರೊಸೆಸರ್‌ ಹೊಂದಿದೆ. ಈ ಮೊಬೈಲ್ 6.78 ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದರೊಂದಿಗೆ 5500mAh ಬ್ಯಾಟರಿ, 120W ಫಾಸ್ಟ್ ಚಾರ್ಜಿಂಗ್, 12GB RAM ಮತ್ತು 512GB ಸ್ಟೋರೇಜ್‌ ಸೇರಿದಂತೆ ಇನ್ನಿತರ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

9000 ಕಡಿಮೆ ಬೆಲೆ! 5500mAh ಬ್ಯಾಟರಿ, 32MP ಸೆಲ್ಫಿ ಕ್ಯಾಮೆರಾ.. ಯಾವ ಫೋನ್?

ರಿಯಲ್‌ಮಿ GT 6T 5G ಬೆಲೆ ಮತ್ತು ಆಫರ್

ರಿಯಲ್‌ಮಿ GT 6T 5G ಫೋನಿನ 8GB RAM + 256GB ಸ್ಟೋರೇಜ್ ರೂಪಾಂತರವನ್ನು 32,999 ರೂ.ಗೆ ಬಿಡುಗಡೆ ಮಾಡಲಾಗಿತ್ತು. ಕಂಪನಿಯು ಮೊದಲು ಇದರ ಬೆಲೆಯನ್ನು 4,000 ರೂ. ಕಡಿಮೆ ಮಾಡಿತ್ತು. ಪ್ರಸ್ತುತ, 5000 ರೂ.ಗಳ ಕೂಪನ್ ರಿಯಾಯಿತಿಯನ್ನು ಘೋಷಿಸಿದೆ. ನೀವು ಈ ರಿಯಾಯಿತಿಯೊಂದಿಗೆ ಈ ಫೋನನ್ನು ಬಿಡುಗಡೆ ಬೆಲೆಗಿಂತ 9 ಸಾವಿರ ರೂ.ಗಳ ಅಗ್ಗದ ದರದಲ್ಲಿ ಖರೀದಿಸಬಹುದು.

ಆನ್‌ಲೈನ್ ಶಾಪಿಂಗ್ ಸೈಟ್ ಅಮೆಜಾನ್‌ನಲ್ಲಿ 5,000 ರೂ.ಗಳ ರಿಯಾಯಿತಿ ಲಭ್ಯವಿದೆ. ವಿಶೇಷವೆಂದರೆ, 5000 ರೂ.ಗಳ ರಿಯಾಯಿತಿ ಪಡೆಯಲು, ಯಾವುದೇ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಅಗತ್ಯವಿಲ್ಲ. ಎಲ್ಲಾ ಗ್ರಾಹಕರು ಈ ರಿಯಾಯಿತಿಯ ಲಾಭ ಪಡೆಯಬಹುದು. ಇ-ಕಾಮರ್ಸ್ ಸೈಟ್ ಫೋನಿನ ಮೇಲೆ 1 ರೂ. ಹೆಚ್ಚುವರಿ ಡಿಸ್ಕೌಂಟ್ ಸಹ ಲಭ್ಯವಿದೆ. ಈ ರಿಯಾಯಿತಿ ಬಳಿಕ ರಿಯಲ್‌ಮಿ GT 6T ಫೋನನ್ನು ಕೇವಲ 23,998 ರೂ.ಗೆ ಖರೀದಿಸಬಹುದು.

ರಿಯಲ್‌ಮಿ GT 6T 5G ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ರಿಯಲ್‌ಮಿ GT 6T 5G ಸ್ಮಾರ್ಟ್‌ಫೋನ್ 6.78 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 2,780 x 1,264 ಪಿಕ್ಸೆಲ್ ರೆಸಲ್ಯೂಶನ್ ಬೆಂಬಲದೊಂದಿಗೆ ಬರುತ್ತದೆ. ಇದರೊಂದಿಗೆ 120Hz ರಿಫ್ರೆಶ್ ದರ ಮತ್ತು 6,000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ. ಈ ಫೋನಿನ ಡಿಸ್ಪ್ಲೇಯು ಕಾರ್ನಿಂಗ್ ಗ್ಲಾಸ್ ವಿಕ್ಟಸ್ 2 ರಕ್ಷಣೆಯನ್ನು ಹೊಂದಿದೆ.

ಪ್ರೊಸೆಸರ್‌ ಯಾವುದು?

ರಿಯಲ್‌ಮಿ GT 6T 5G ಮೊಬೈಲ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 7+ ಜೆನ್ 3 ಪ್ರೊಸೆಸರ್ ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 14 ಓಎಸ್ ಆಧಾರಿತ ರಿಯಲ್‌ಮಿ ಯುಐ 5 ಜೊತೆಗೆ ಕೆಲಸ ಮಾಡುತ್ತದೆ. ಗ್ರಾಫಿಕ್ಸ್‌ಗಾಗಿ ಇದು, ಅಡ್ರಿನೊ 732 ಜಿಪಿಯು ಸಹ ಹೊಂದಿದೆ. ಈ ಮೊಬೈಲ್ 12GB RAM + 512GB ಸ್ಟೋರೇಜ್‌ ಆಯ್ಕೆ ಒಳಗೊಂಡಿದೆ.

32MP ಸೆಲ್ಫಿ ಕ್ಯಾಮೆರಾ

ರಿಯಲ್‌ಮಿ GT 6T 5G ಫೋನಿನಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅಳವಡಿಸಲಾಗಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಇದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಲೆನ್ಸ್ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಅಳವಡಿಸಲಾಗಿದೆ.

ಬ್ಯಾಟರಿ ಬ್ಯಾಕಪ್ ಹೇಗಿದೆ?

ರಿಯಲ್‌ಮಿ GT 6T 5G ಸ್ಮಾರ್ಟ್‌ಫೋನ್ 5,500mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 120W ವೇಗದ ಚಾರ್ಜಿಂಗ್ ತಂತ್ರಜ್ಞಾನ ಅಳವಡಿಸಲಾಗಿದೆ. ಈ ಫೋನ್ ನೀರು ಮತ್ತು ಧೂಳಿನಿಂದ ರಕ್ಷಣೆಗಾಗಿ IP65 ರೇಟಿಂಗ್ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಮೊಬೈಲ್ 5G ಬ್ಯಾಂಡ್‌, ಬ್ಲೂಟೂತ್ 5.4, ವೈ-ಫೈ 6, ಜಿಪಿಎಸ್, ಯುಎಸ್‌ಬಿ 2.0 ಸಿ ಪೋರ್ಟ್ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

Best Mobiles in India

English summary
Realme GT 6T with 8GB RAM Huge Price Drop in Amazon: check new price, offers and Specifications
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+