ಇದೇ ಅದೃಷ್ಟ ಅಂದ್ರೆ! ಮತ್ತೆ ಭಾರೀ ರಿಯಾಯಿತಿ.. 15000ಕ್ಕಿಂತ ಕಡಿಮೆ ಬೆಲೆಗೆ ಮಾರಾಟ.. ಯಾವ ಫೋನ್? ವಿಶೇಷತೆಗಳೇನು?
ವಾವ್..! ಈ 8GB RAM ಹೊಂದಿರುವ ರಿಯಲ್‌ಮಿ 5G ಫೋನ್ 15,000 ರೂ.ಗಿಂತ ಕಡಿಮೆ ಬೆಲೆ ಮಾರಾಟ. ಈ ಫೋನ್ ಖರೀದಿ ಮೇಲೆ 3000 ರೂ.ಗಳ ಭಾರೀ ರಿಯಾಯಿತಿ ಲಭ್ಯ. ಹೌದು, ರಿಯಲ್‌ಮಿ ನಾರ್ಜೊ 70 ಟರ್ಬೊ 5G (Realme Narzo 70 Turbo 5G) ಫೋನ್ ಬೊಂಬಾಟ್ ಡಿಸ್ಕೌಂಟ್ ಪಡೆದಿದೆ. ನೀವು ಆನ್‌ಲೈನ್ ಶಾಪಿಂಗ್ ಸೈಟ್ ಅಮೆಜಾನ್‌ನಲ್ಲಿ ಪ್ರಸ್ತುತ 3,000 ರೂ.ಗಳ ರಿಯಾಯಿತಿಯೊಂದಿಗೆ ಈ ಫೋನನ್ನು ಖರೀದಿಸಬಹುದು. ಈ ಫೋನಿನ ಆಫರ್ ಹೇಗೆ ಮತ್ತು ಎಲ್ಲಿ ಲಭ್ಯವಿದೆ ತಿಳಿಯಲು ಮುಂದೆ ಓದಿ.
ಕಂಪನಿಯು ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ರಿಯಲ್‌ಮಿ ನಾರ್ಜೊ 70 ಟರ್ಬೊ 5G ಫೋನನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಈ ಫೋನಿನ ವಿಶೇಷತೆಗಳೆಂದರೆ, ಈ ಮೊಬೈಲ್ 6.67 ಇಂಚಿನ ಡಿಸ್ಪ್ಲೇ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಕ್ಯಾಮೆರಾ ಲಭ್ಯವಿದೆ. ಇದು ಮಿಡಿಯಾಟೆಕ್ ಡೈಮೆನ್ಸಿಟಿ 7300 ಎನರ್ಜಿ ಪ್ರೊಸೆಸರ್ ಹೊಂದಿದೆ. ಹಾಗೆಯೇ 5,000mAh ಸಾಮರ್ಥ್ಯದ ಬ್ಯಾಟರಿ ಮತ್ತು 45W ಫಾಸ್ಟ್ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಫೋನಿನ ಮೂಲ ಬೆಲೆ, ಆಫರ್ ಮತ್ತು ವೈಶಿಷ್ಟ್ಯಗಳ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ರಿಯಲ್‌ಮಿ ನಾರ್ಜೊ 70 ಟರ್ಬೊ 5G ಬೆಲೆ ಮತ್ತು ಆಫರ್
ರಿಯಲ್‌ಮಿ ನಾರ್ಜೊ 70 ಟರ್ಬೊ 5G ಫೋನಿನ 6GB RAM + 128GB ಸ್ಟೋರೇಜ್ ಆಯ್ಕೆಯ ಬಿಡುಗಡೆ ಬೆಲೆ 16,999 ರೂ. ಆಗಿದೆ. 8GB RAM + 128GB ಸ್ಟೋರೇಜ್ ರೂಪಾಂತರವನ್ನು 17,999 ರೂ.ಗೆ ಬಿಡುಗಡೆ ಮಾಡಲಾಗಿತ್ತು. ಇನ್ನು 12GB RAM + 256GB ಸ್ಟೋರೇಜ್ ಆಯ್ಕೆಯನ್ನ 20,999 ರೂ.ಗೆ ಪರಿಚಯಿಸಲಾಗಿತ್ತು.
ಪ್ರಸ್ತುತ, 8GB RAM + 128GB ಸ್ಟೋರೇಜ್ ರೂಪಾಂತರವನ್ನು ಅಮೆಜಾನ್‌ನಲ್ಲಿ 3,000 ರೂ.ಗಳ ರಿಯಾಯಿತಿಯೊಂದಿಗೆ ಮಾರಾಟ ಮಾಡಲಾಗುತ್ತಿದೆ. ರಿಯಾಯಿತಿಯೊಂದಿಗೆ, ಈ ಫೋನನ್ನು 14,999 ರೂ.ಗೆ ಖರೀದಿಸಬಹುದು. ಈ ಮೊಬೈಲ್‌ನಲ್ಲಿ 1 ರೂ. ಹೆಚ್ಚುವರಿ ಪ್ರಯೋಜನ ನೀಡಲಾಗುತ್ತಿದೆ. ಬಳಿಕ ಈ ಫೋನ್ 14,998 ರೂ.ಗಳ ಹೊಸ ಬೆಲೆಯೊಂದಿಗೆ ಮಾರಾವಾಗುತ್ತಿದೆ.
ರಿಯಲ್‌ಮಿ ನಾರ್ಜೊ 70 ಟರ್ಬೊ 5G ವೈಶಿಷ್ಟ್ಯಗಳು
ರಿಯಲ್‌ಮಿ ನಾರ್ಜೊ 70 ಟರ್ಬೊ 5G ಸ್ಮಾರ್ಟ್‌ಫೋನ್ 6.67 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ದರ, 180Hz ಟಚ್ ಸ್ಯಾಂಪ್ಲಿಂಗ್ ದರದ ಬೆಂಬಲ ಪಡೆದಿದೆ. ಇದರೊಂದಿಗೆ 1,200 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ. ಈ ಡಿಸ್ಪ್ಲೇಯು AG DT Star 2 ಗಾಜಿನ ರಕ್ಷಣೆಯೊಂದಿಗೆ ಬರುತ್ತದೆ. ಈ ರಿಯಲ್‌ಮಿ ಮೊಬೈಲ್ ಮೀಡಿಯಾಟೆಕ್ ಡೈಮೆನ್ಸಿಟಿ 7300 ಎನರ್ಜಿ 5G ಪ್ರೊಸೆಸರ್ ಹೊಂದಿದೆ. ಇದನ್ನು 4 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ತಯಾರಿಸಲಾಗಿದೆ. ಈ ಮೊಬೈಲ್ ಆಂಡ್ರಾಯ್ಡ್ 14 ಆಧಾರಿತ ರಿಯಲ್‌ಮಿ ಯುಐ 5.0 ಜೊತೆಗೆ ಕೆಲಸ ಮಾಡುತ್ತದೆ.
ರಿಯಲ್‌ಮಿ ನಾರ್ಜೊ 70 ಟರ್ಬೊ 5G ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನ ಪ್ರಾಥಮಿಕ ಕ್ಯಾಮೆರಾ 50 ಮೆಗಾಪಿಕ್ಸೆಲ್ ಲೆನ್ಸ್ ಹೊಂದಿದೆ. ಇದರೊಂದಿಗೆ ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಲೆನ್ಸ್ ಪಡೆದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 16 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಸಹ ಲಭ್ಯವಿದೆ. ಈ ರಿಯಲ್‌ಮಿ 5G ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 45W ಅಲ್ಟ್ರಾ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ನೀವು ಕೇವಲ 30 ನಿಮಿಷಗಳಲ್ಲಿ ಶೇ.50 ರಷ್ಟು ಚಾರ್ಜ್ ಮಾಡಬಹುದು.


Click it and Unblock the Notifications








