ದೀಪಾವಳಿ ಆಫರ್: 10,999 ಸಾಕು! Realme 5G ಫೋನ್.. ಖರೀದಿ ಎಲ್ಲಿ?
ಭಾರತೀಯ ಮಾರುಕಟ್ಟೆಯಲ್ಲಿ ರಿಯಲ್‌ಮಿ (Realme) 'Narzo' ಸರಣಿಯ ಸ್ಮಾರ್ಟ್‌ಫೋನ್‌ಗಳಿಗೆ ಭಾರೀ ಬೇಡಿಕೆಯಿದೆ. ಅದರಂತೆ, ಕಂಪನಿಯು ರಿಯಲ್‌ಮಿ ನಾರ್ಜೊ 70x 5G (realme NARZO 70x 5G) ಅನ್ನು ಈ ವರ್ಷ ಬಿಡುಗಡೆ ಮಾಡಿದೆ. ಇದೀಗ, ದೀಪಾವಳಿ ಹಬ್ಬದ (Diwali 2024) ಪ್ರಯುಕ್ತ ಈ ಫೋನಿನ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ. ರಿಯಾಯಿತಿಯೊಂದಿಗೆ ಈ ಮೊಬೈಲ್ ಅನ್ನು ಕೇವಲ 10,999 ರೂ.ಗಳಿಗೆ ಖರೀದಿಸಬಹುದು. ಜೊತೆಗೆ, ಎಕ್ಸ್‌ಚೇಂಜ್ ಆಫರ್ ಮತ್ತು ನೋ ಕಾಸ್ಟ್ ಇಎಂಐ ಪ್ರಯೋಜನ ಸಹ ಪಡೆಯಬಹುದು.
ಕಂಪನಿಯು ಈ ಮೊಬೈಲ್ ಅನ್ನು ಮೂರು ಸ್ಟೋರೇಜ್ ರೂಪಾಂತರಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6100 ಪ್ಲಸ್ ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸಲಿವೆ. ಇದು 6.72 ಇಂಚಿನ ಎಲ್‌ಸಿಡಿ ಡಿಸ್ಪ್ಲೇಯನ್ನು ಹೊಂದಿದೆ. ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ, 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಈ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಮತ್ತು 45W SuperVOOC ಚಾರ್ಜಿಂಗ್ ಸೇರಿದಂತೆ ಮುಂತಾದ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ರಿಯಲ್‌ಮಿ ನಾರ್ಜೊ 70x 5G ಹೊಸ ಬೆಲೆ ಮತ್ತು ಆಫರ್‌ಗಳು
ರಿಯಲ್‌ಮಿ ನಾರ್ಜೊ 70x 5G ಖರೀದಿ ಮೇಲೆ ಕಂಪನಿಯು, 500 ರೂ.ಗಳ ಫ್ಲಾಟ್ ಡಿಸ್ಕೌಂಟ್ ಮತ್ತು 1,500 ರೂ.ಗಳ ಕೂಪನ್ ರಿಯಾಯಿತಿಯನ್ನು ನೀಡುತ್ತದೆ. ಒಟ್ಟಾರೆಯಾಗಿ ನಿಮಗೆ 2,000 ರೂ. ಆಫರ್ ಸಿಗುತ್ತದೆ. ವಿಶೇಷವೆಂದರೆ, ಈ ಆಫರ್ ಫೋನಿನ 6GB ಮತ್ತು 8GB RAM ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಡಿಸ್ಕೌಂಟ್‌ನೊಂದಿಗೆ 6GB RAM + 128GB ಸ್ಟೋರೇಜ್ ರೂಪಾಂತರವನ್ನು ಕೇವಲ 10,999 ರೂ.ಗೆ ಮತ್ತು 8GB RAM + 128GB ಸ್ಟೋರೇಜ್ ರೂಪಾಂತರವನ್ನಿ 11,999 ರೂ.ಗೆ ಖರೀದಿಸಬಹುದು.
ನೀವು, ನೋ ಕಾಸ್ಟ್ ಇಎಂಐನೊಂದಿಗೆ ಈ ಮೊಬೈಲ್ ಖರೀದಿಸಬಹುದು. ಕಂಪನಿಯು 3 ರಿಂದ 6 ತಿಂಗಳ ಸುಲಭ ಕಂತುಗಳ ಆಯ್ಕೆಯನ್ನು ನೀಡುತ್ತದೆ. ಜೊತೆಗೆ, 12,800 ರೂ. ವರೆಗೆ ಎಕ್ಸ್‌ಚೇಂಜ್ ಆಫರ್ ಪಡೆಯಬಹುದು. ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಅಮೆಜಾನ್‌ನಲ್ಲಿ ಈ ಫೋನನ್ನು ಖರೀದಿಸಬಹುದು. ಈ ಮೊಬೈಲ್ ಫಾರೆಸ್ಟ್ ಗ್ರೀನ್ ಮತ್ತು ಐಸ್ ಬ್ಲೂ ಬಣ್ಣಗಳಲ್ಲಿ ಲಭ್ಯವಿದೆ. ಅಮೆಜಾನ್‌ನಲ್ಲಿ ಈ ಆಫರ್‌ಗಳನ್ನು ಪಡೆಯಿರಿ.
ರಿಯಲ್‌ಮಿ ನಾರ್ಜೊ 70x 5G ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ರಿಯಲ್‌ಮಿ ನಾರ್ಜೊ 70x 5G ಮೊಬೈಲ್ 6.72 ಇಂಚಿನ ಎಲ್‌ಸಿಡಿ ಡಿಸ್ಪ್ಲೇಯನ್ನು ಹೊಂದಿದೆ. ಇದು 1080 x 2400 ಎಚ್‌ಡಿ ಪ್ಲಸ್ ರೆಸಲ್ಯೂಶನ್, 120Hz ರಿಫ್ರೆಶ್ ದರ ಮತ್ತು 800 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಕಂಪನಿಯು ಈ ಫೋನನ್ನು ಮೀಡಿಯಾ ಟೆಕ್ ಡೈಮೆನ್ಸಿಟಿ 6100 ಪ್ಲಸ್ ಪ್ರೊಸೆಸರ್‌ನೊಂದಿಗೆ ಪರಿಚಯಿಸಿದೆ. ಗ್ರಾಫಿಕ್ಸ್‌ಗಾಗಿ, ಮಾಲಿ G57 ಜಿಪಿಯು ಇದೆ. ಈ ಸ್ಮಾರ್ಟ್‌ಫೋನ್ 8GB RAM + 128GB ವರೆಗೆ ಸ್ಟೋರೇಜ್ ಒಳಗೊಂಡಿದೆ. RAM ಅನ್ನು ಹೆಚ್ಚಿಸಲು ಡೈನಾಮಿಕ್ ಬೆಂಬಲವೂ ಇದೆ. ನೀವು, ಹೆಚ್ಚುವರಿ RAM ಅನ್ನು ಬಳಸಬಹುದು. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಆಧಾರಿತ ರಿಯಲ್‌ಮಿ ಯುಐ 5.0 ನೊಂದಿಗೆ ಕೆಲಸ ನಿರ್ವಹಿಸಲಿದೆ.
ಕ್ಯಾಮೆರಾ ಸೆಟಪ್
ರಿಯಲ್‌ಮಿ ನಾರ್ಜೊ 70x 5G ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿಗೆ. ಇದು 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಕಂಪನಿಯು ಈ ಮೊಬೈಲ್‌ನಲ್ಲಿ 5000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಅಳವಡಿಸಿದೆ. ಇದನ್ನು ವೇಗವಾಗಿ ಚಾರ್ಜ್ ಮಾಡಲು, 45W SuperVOOC ಚಾರ್ಜಿಂಗ್ ಸೌಲಭ್ಯ ಪಡೆದಿದೆ.
ಇತರೆ ವೈಶಿಷ್ಟ್ಯಗಳು
ಈ ಫೋನ್ ರೈನ್ ವಾಟರ್ ಟಚ್ ಫೀಚರ್, ಏರ್ ಗೆಸ್ಚರ್ ಫೀಚರ್, ಇನ್ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್, ಡ್ಯುಯಲ್ ಸ್ಟೀರಿಯೋ ಸ್ಪೀಕರ್, ವಾಟರ್ ಮತ್ತು ಡಸ್ಟ್ ರೆಸಿಸ್ಟೆನ್ಸ್‌ಗಾಗಿ IP54 ರೇಟಿಂಗ್ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್ 5G, 4G, ವೈ ಫೈ, ಬ್ಲೂಟೂತ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.


Click it and Unblock the Notifications








