Home
Deal of the day

ಕೇವಲ 12,499 ಸಾಕು! 4,500 ಉಳಿತಾಯ.. ಈ Realme 5G ಫೋನಿನ ಬೆಲೆ ಭಾರೀ ಇಳಿಕೆ

ರಿಯಲ್‌ಮಿ ಮೊಬೈಲ್‌ಗಳು ಭಾರತದಲ್ಲಿ ಭಾರೀ ಸದ್ದು ಮಾಡುತ್ತಿವೆ. ಕಂಪನಿಯು ಸಹ ವಿಭಿನ್ನ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಿದೆ. ಆಗಾಗ್ಗೆ, ತನ್ನ ಫೋನ್‌ಗಳ ಬೆಲೆ ಇಳಿಕೆ ಮಾಡಿ ಮೊಬೈಲ್‌ ಪ್ರಿಯರನ್ನು ಸೆಳೆಯುವಲ್ಲಿ ಸೈ ಎನಿಸಿಕೊಂಡಿದೆ. ಹೌದು, ಪ್ರಸ್ತುತ ರಿಯಲ್‌ಮಿ ನಾರ್ಜೋ 70x 5G (Realme NARZO 70x 5G) ದರವನ್ನು ಭಾರೀ ಕಡಿತಗೊಳಿಸಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಕಡಿಮೆ ಬೆಲೆಗೆ ಮತ್ತು ಆಕರ್ಷಕ ರಿಯಾಯಿತಿಯೊಂದಿಗೆ ಖರೀದಿಸಬಹುದು. ಬನ್ನಿ, ಈ ಫೋನಿನ ಹೊಸ ಬೆಲೆ, ಆಫರ್‌ಗಳು ಮತ್ತು ವಿಶೇಷತೆಗಳನ್ನು ತಿಳಿಯೋಣ.

ರಿಯಲ್‌ಮಿ ನಾರ್ಜೋ 70x 5G ಫೋನ್‌ ಮೂರು ಸ್ಟೋರೇಜ್ ಆಯ್ಕೆಗಳಲ್ಲಿ ಮಾರಾಟವಾಗುತ್ತಿದೆ. ಪ್ರಸ್ತುತ,ಕಂಪನಿಯು ಶೇ.26 ರಷ್ಟು ರಿಯಾಯಿತಿ ಘೋಷಿಸಿದೆ.ಈ ಫೋನ್ 50 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಫೋನಿನಲ್ಲಿ 6.72 ಇಂಚಿನ ಡಿಸ್ಪ್ಲೇ ಲಭ್ಯವಿದೆ. ಜೊತೆಗೆ 128GB ಸ್ಟೋರೇಜ್, 5000mAh ಬ್ಯಾಟರಿ ಮತ್ತು 45W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಕೇವಲ 12,499 ಸಾಕು! 4,500 ಉಳಿತಾಯ.. ಅದೂ Realme 5G ಫೋನ್

ರಿಯಲ್‌ಮಿ ನಾರ್ಜೋ 70x 5G ಬೆಲೆ ಮತ್ತು ಆಫರ್‌ಗಳು

4GB RAM + 128GB ಸ್ಟೋರೇಜ್ = 12,499 ರೂ.
6GB RAM + 128GB ಸ್ಟೋರೇಜ್ = 13,362 ರೂ.
8GB RAM + 128GB ಸ್ಟೋರೇಜ್ = 13,998 ರೂ.

ರಿಯಲ್‌ಮಿ ನಾರ್ಜೋ 70x 5G ಫೋನಿನ ಮೂಲ ರೂಪಾಂತರವು 12,499 ರೂ.ಗೆ ಮಾರಾಟವಾಗುತ್ತಿದೆ. ನೀವು 4,500 ರೂ. ಉಳಿತಾಯ ಮಾಡಬಹುದು. ಜೊತೆಗೆ ಶೇ.5 ರಷ್ಟು ಕ್ಯಾಶ್‌ಬ್ಯಾಕ್‌ ಮತ್ತು ನೋ ಕಾಸ್ಟ್‌ ಇಎಂಐ ಸಹ ಲಭ್ಯವಿದೆ. ನೀವು, ಐಸ್ ಬ್ಲೂ ಮತ್ತು ಫಾರೆಸ್ಟ್ ಗ್ರೀನ್ ಬಣ್ಣದಲ್ಲಿ ಖರೀದಿಸಬಹುದು. ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ನಲ್ಲಿ ಈ ಎಲ್ಲಾ ಆಫರ್‌ಗಳ ಲಾಭ ಪಡೆಯಬಹುದು.

ರಿಯಲ್‌ಮಿ ನಾರ್ಜೊ 70x 5G ವೈಶಿಷ್ಟ್ಯಗಳು

ಡಿಸ್ಪ್ಲೇ ಹೇಗಿದೆ

ರಿಯಲ್‌ಮಿ ನಾರ್ಜೊ 70x 5G ಮೊಬೈಲ್ 6.72 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಎಲ್‌ಸಿಡಿ ಡಿಸ್ಪ್ಲೇಯನ್ನು ಹೊಂದಿದೆ. ಇದು 1080 x 2400 ಪಿಕ್ಸೆಲ್ ರೆಸಲ್ಯೂಶನ್, 120Hz ರಿಫ್ರೆಶ್ ದರ ಮತ್ತು 800 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಜೊತೆಗೆ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿದೆ.

ಪ್ರೊಸೆಸರ್ ಯಾವುದು?

ರಿಯಲ್‌ಮಿ ನಾರ್ಜೊ 70x 5G ಫೋನನ್ನು ಮೀಡಿಯಾ ಟೆಕ್ ಡೈಮೆನ್ಸಿಟಿ 6100 ಪ್ಲಸ್ ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಲಾಗಿದೆ. ಇದು ಗ್ರಾಫಿಕ್ಸ್‌ಗಾಗಿ, ಮಾಲಿ G57 ಜಿಪಿಯು ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಆಧಾರಿತ ರಿಯಲ್‌ಮಿ ಯುಐ 5.0 ನೊಂದಿಗೆ ಕೆಲಸ ಮಾಡುತ್ತದೆ

ಸ್ಟೋರೇಜ್‌ ಆಯ್ಕೆ

ರಿಯಲ್‌ಮಿ ನಾರ್ಜೊ 70x 5G ಸ್ಮಾರ್ಟ್‌ಫೋನ್ 8GB RAM + 128GB ಸ್ಟೋರೇಜ್‌ ಒಳಗೊಂಡಿದೆ. RAM ಅನ್ನು ಹೆಚ್ಚಿಸಲು ಡೈನಾಮಿಕ್ ಬೆಂಬಲವೂ ಇದೆ. ನೀವು ಹೆಚ್ಚುವರಿ RAM ಬಳಸಬಹುದು.

ಡ್ಯುಯಲ್ ಕ್ಯಾಮೆರಾ ಸೆಟಪ್

ರಿಯಲ್‌ಮಿ ನಾರ್ಜೊ 70x 5G ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್‌ ಹೊಂದಿಗೆ. ಫೋನಿನಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಲಭ್ಯವಿದೆ. ಜೊತೆಗೆ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಈ ಫೋನಿನಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.

ಶಕ್ತಿಶಾಲಿ ಬ್ಯಾಟರಿ

ರಿಯಲ್‌ಮಿ ನಾರ್ಜೊ 70x 5G ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 45W ಸೂಪರ್‌ವೂಕ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ಇತರೆ ವೈಶಿಷ್ಟ್ಯಗಳು

ರಿಯಲ್‌ಮಿ ನಾರ್ಜೊ 70x 5G ಸ್ಮಾರ್ಟ್‌ಫೋನ್ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP54 ರೇಟಿಂಗ್ ಪಡೆದಿದೆ. ಜೊತೆಗೆ ರೈನ್ ವಾಟರ್ ಟಚ್ ಫೀಚರ್, ಏರ್ ಗೆಸ್ಚರ್ ಫೀಚರ್, ಡ್ಯುಯಲ್ ಸ್ಟೀರಿಯೋ ಸ್ಪೀಕರ್ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್ 5G, 4G, ವೈ ಫೈ, ಬ್ಲೂಟೂತ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Best Mobiles in India

English summary
realme NARZO 70X 5G with 6GB RAM price slashed on flipkart: price, offers, specifications and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+