Home
Deal of the day

7000ಕ್ಕಿಂತ ಕಡಿಮೆ ಬೆಲೆ! 5000mAh ಬ್ಯಾಟರಿ.. 32MP ಕ್ಯಾಮೆರಾ.. ಯಾವ ಫೋನ್? ಡಿಸ್ಕೌಂಟ್ ಎಷ್ಟು?

ರಿಯಲ್‌ಮಿ ಫೋನ್ 7000 ರೂ.ಗಿಂತ ಕಡಿಮೆ ಬೆಲೆಗೆ ಲಭ್ಯವಿದೆ. ಆನ್‌ಲೈನ್ ಶಾಪಿಂಗ್ ಸೈಟ್ ಅಮೆಜಾನ್‌ನಲ್ಲಿ ಈ ಮೊಬೈಲ್‌ಗೆ ಬೊಂಬಾಟ್ ರಿಯಾಯಿತಿ ಘೋಷಿಸಲಾಗಿದೆ. ಹೌದು, ನೀವು ಅಗ್ಗದ ಬೆಲೆಯಲ್ಲಿ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಫೋನ್ ಖರೀದಿಸಲು ಬಯಸಿದರೆ, ಈ ಅವಕಾಶ ಕಳೆದುಕೊಳ್ಳಬೇಡಿ. 7,000 ರೂ.ಗಿಂತ ಕಡಿಮೆ ಬೆಲೆಯ ರಿಯಲ್‌ಮಿ ನಾರ್ಜೊ N61 (Realme Narzo N61) ಸ್ಮಾರ್ಟ್‌ಫೋನ್ ನಿಮಗೆ ಉತ್ತಮ ಆಯ್ಕೆಯಾಗಲಿದೆ. ಈ ರಿಯಲ್‌ಮಿ ಫೋನನ್ನು ಕಡಿಮೆ ದರದಲ್ಲಿ ಹೇಗೆ ಖರೀದಿಸಬಹುದು? ಮತ್ತು ಇದರ ವಿಶೇಷತೆಗಳೇನು? ಎಂಬ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ರಿಯಲ್‌ಮಿ ನಾರ್ಜೊ N61 ಮೊಬೈಲ್ ಅಮೆಜಾನ್‌ನಲ್ಲಿ ಅಗ್ಗದ ಬೆಲೆಗೆ ಲಭ್ಯವಿದೆ. ಇದು ಯುನಿಸಾಕ್ T612 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ. ಈ ಮೊಬೈಲ್ 6.74 ಡಿಸ್ಪ್ಲೇ ಹೊಂದಿದೆ. ಇದರೊಂದಿಗೆ 5000mAh ಬ್ಯಾಟರಿ, 10W ಫಾಸ್ಟ್ ಚಾರ್ಜಿಂಗ್, 6GB RAM + 128GB ಸ್ಟೊರೇಜ್ ಸೇರಿದಂತೆ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಈ ಫೋನನ್ನು ಬೊಂಬಾಟ್ ರಿಯಾಯಿತಿಯೊಂದಿಗೆ ಮಾರಾಟ ಮಾಡಲಾಗುತ್ತಿದೆ.

7000ಕ್ಕಿಂತ ಕಡಿಮೆ! 5000mAh ಬ್ಯಾಟರಿ, 32MP ಕ್ಯಾಮೆರಾ; ಯಾವ ಫೋನ್?

7000 ರೂ.ಗಿಂತ ಕಡಿಮೆ ಬೆಲೆಗೆ ಲಭ್ಯ

4GB RAM + 64GB ಸ್ಟೋರೇಜ್‌ ಆಯ್ಕೆ ಹೊಂದಿರುವ ರಿಯಲ್‌ಮಿ ನಾರ್ಜೊ N61 ಫೋನನ್ನು 7,499 ರೂ.ಗೆ ಬಿಡುಗಡೆ ಮಾಡಲಾಗಿತ್ತು. ಪ್ರಸ್ತುತ, ಅಮೆಜಾನ್ ಈ ಮೊಬೈಲ್ ಖರೀದಿ ಮೇಲೆ 500 ರೂ.ಗಳ ಫ್ಲಾಟ್ ರಿಯಾಯಿತಿ ಘೋಷಿಸಿದೆ. ಈ ರಿಯಾಯಿತಿಯನ್ನು ಕೂಪನ್ ರೂಪದಲ್ಲಿ ನೀಡಲಾಗುತ್ತಿದೆ. ಇದು ಎಲ್ಲಾ ಗ್ರಾಹಕರಿಗೆ ಲಭ್ಯವಿರುತ್ತದೆ. ಇದಕ್ಕಾಗಿ, ಯಾವುದೇ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅಗತ್ಯವಿಲ್ಲ. ನೀವು 500 ರೂ.ಗಳ ರಿಯಾಯಿತಿಯೊಂದಿಗೆ ಈ ಅಗ್ಗದ ಫೋನನ್ನು 7 ಸಾವಿರ ರೂ.ಗಿಂತ ಕಡಿಮೆಗೆ ಖರೀದಿಸಬಹುದು.

ಅಮೆಜಾನ್ ಈ ರಿಯಲ್‌ಮಿ ಫೋನಿಗೆ 1 ರೂ. ಹೆಚ್ಚುವರಿ ರಿಯಾಯಿತಿ ನೀಡುತ್ತಿದೆ. ನೀವು 6,998 ರೂ.ಗೆ ಈ ಸ್ಮಾರ್ಟ್‌ಫೋನ್ ಅನ್ನು ಖರೀದಿಸಬಹುದು. ಇದು ವಾಯೇಜ್ ಬ್ಲೂ ಮತ್ತು ಮಾರ್ಬಲ್ ಬ್ಲ್ಯಾಕ್ ಬಣ್ಣಗಳಲ್ಲಿ ಮಾರಾಟವಾಗುತ್ತಿದೆ. ಇನ್ನು 6GB RAM + 128GB ಸ್ಟೋರೇಜ್‌ ಹೊಂದಿರುವ ಈ ಫೋನನ್ನು 8,499 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ರಿಯಲ್‌ಮಿ ನಾರ್ಜೊ N61 ವೈಶಿಷ್ಟ್ಯಗಳು

7000ಕ್ಕಿಂತ ಕಡಿಮೆ! 5000mAh ಬ್ಯಾಟರಿ, 32MP ಕ್ಯಾಮೆರಾ; ಯಾವ ಫೋನ್?

ಡಿಸ್ಪ್ಲೇ ಮತ್ತು ಪ್ರೊಸೆಸರ್ ವಿವರ

ರಿಯಲ್‌ಮಿ ನಾರ್ಜೊ N61 ಫೋನ್ 6.74 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು 1600 x 720 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯ ಹೊಂದಿದೆ. ಈ ಡಿಸ್ಪ್ಲೇಯು 90Hz ರಿಫ್ರೆಶ್ ದರ, 180Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 560 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಈ ರಿಯಲ್‌ಮಿ ಸ್ಮಾರ್ಟ್‌ಫೋನ್ ಯುನಿಸಾಕ್ T612 ಆಕ್ಟಾಕೋರ್ ಪ್ರೊಸೆಸರ್ ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಆಧಾರಿತ ರಿಯಲ್‌ಮಿ ಯುಐ (Realme UI) ಓಎಸ್‌ನಲ್ಲಿ ಕೆಲಸ ಮಾಡುತ್ತದೆ. ಗ್ರಾಫಿಕ್ಸ್‌ಗಾಗಿ, ಈ ಫೋನ್ ಮಾಲಿ G57 ಜಿಪಿಯು ಸಹ ಹೊಂದಿದೆ.

ಕ್ಯಾಮೆರಾ ಮತ್ತು ಸ್ಟೋರೇಜ್ ಮಾಹಿತಿ

ರಿಯಲ್‌ಮಿ ನಾರ್ಜೊ N61 ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಈ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಸೂಪರ್ ಕ್ಲಿಯರ್ ಕ್ಯಾಮೆರಾ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಸ್ಮಾರ್ಟ್‌ಫೋನ್ 5 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸಹ ಹೊಂದಿದೆ. ಈ ರಿಯಲ್‌ಮಿ ಫೋನ್ 6GB ಡೈನಾಮಿಕ್ RAM ತಂತ್ರಜ್ಞಾನ ಹೊಂದಿದೆ. ನೀವು 6GB ವರ್ಚುವಲ್ RAM ಅನ್ನು 6GB ಭೌತಿಕ RAMಗೆ ಸೇರಿಸುವ ಮೂಲಕ ಒಟ್ಟು 12GB RAM ಬಳಸಬಹುದು. ಹಾಗೆಯೇ ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ 2TB ವರೆಗೆ ಸ್ಟೋರೇಜ್ ವಿಸ್ತರಿಸಬಹುದು.

ಬ್ಯಾಟರಿ ಮತ್ತು ಇತರೆ ವೈಶಿಷ್ಟ್ಯಗಳು

ರಿಯಲ್‌ಮಿ ನಾರ್ಜೊ N61 ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದನ್ನು ಚಾರ್ಜ್ ಮಾಡಲು, 10W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಈ ಫೋನ್ ಎಐ ಬೂಸ್ಟ್ ಎಂಜಿನ್ ಹೊಂದಿದೆ. ಇದು ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗೆ IP54 ರೇಟಿಂಗ್ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಮೊಬೈಲ್ 3.5 ಎಂಎಂ ಹೆಡ್‌ಫೋನ್ ಜ್ಯಾಕ್, ಯುಎಸ್‌ಬಿ ಟೈಪ್ ಸಿ ಪೋರ್ಟ್, ಬ್ಲೂಟೂತ್ 5.0 ಮತ್ತು ವೈ-ಫೈ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

Best Mobiles in India

English summary
Realme Narzo N61 Available under 7,000 in Amazon sale: check price, offers, specifications and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+