Realme NARZO N63 ಬೆಲೆ ಇಳಿಕೆ: ಕೇವಲ 7,000 ರೂ.ಗೆ ಲಭ್ಯ! ಹೇಗಿದೆ?
ರಿಯಲ್‌ಮಿ ಕಂಪನಿಯ ಸ್ಮಾರ್ಟ್‌ಫೋನ್‌ಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಿದೆ. ಮೊಬೈಲ್ ಪ್ರಿಯರು ಸಹ ರಿಯಲ್‌ಮಿ ಫೋನ್‌ಗಳನ್ನು ಬಹಳ ಇಷ್ಟಪಟ್ಟು ಕೊಳ್ಳುತ್ತಾರೆ. ರಿಯಲ್‌ಮಿ ಕೂಡ ಆಗಾಗ್ಗೆ ತನ್ನ ಗ್ರಾಹಕರಿಗೆ ಸಂತಸದ ಸುದ್ದಿಯನ್ನು ನೀಡುತ್ತದೆ. ಅದರಂತೆ ಇದೀಗ, ರಿಯಲ್‌ಮಿ ನಾರ್ಜೊ N63 (Realme NARZO N63) ಫೋನ್ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ. ನೀವು, ಈ ಮೊಬೈಲ್ ಖರೀದಿಸಿದರೆ ಶೇ.21 ರಷ್ಟು ರಿಯಾಯಿತಿ ಸಿಗುತ್ತದೆ. ಬನ್ನಿ, ಈ ಫೋನಿನ ಹೊಸ ಬೆಲೆ, ಆಫರ್‌ಗಳು ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.
ರಿಯಲ್‌ಮಿ ನಾರ್ಜೊ N63 ಫೋನನ್ನು ಜೂನ್ 5 ರಂದು ಭಾರತದಲ್ಲಿ ಬಿಡುಗಡೆ ಮಾಡಲಾಯಿತು. ಈ ಮೊಬೈಲ್ ಪ್ರೀಮಿಯಂ ಲುಕ್ ವ್ಯಾಗನ್ ಲೆದರ್ ಪ್ಯಾನೆಲ್ ವಿನ್ಯಾಸದೊಂದಿಗೆ ಬರುತ್ತದೆ. ಇದು 6.74 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. 50 ಮೆಗಾಪಿಕ್ಸೆಲ್ ಕ್ಯಾಮೆರಾ, 2 TB ಮೆಮೊರಿ, 8GB RAM, 5000mAh ಬ್ಯಾಟರಿ ಮತ್ತು 45W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವಿಶೇಷತೆಗಳನ್ನು ಹೊಂದಿದೆ. ಪ್ರಸ್ತುತ, ಅಮೇಜಾನ್‌ನಲ್ಲಿ ಈ ಫೋನ್ ರಿಯಾಯಿತಿ ದರದಲ್ಲಿ ಖರೀದಿಗೆ ಲಭ್ಯವಿದೆ.

ರಿಯಲ್‌ಮಿ ನಾರ್ಜೊ N63 ಬೆಲೆ ಮತ್ತು ಆಫರ್‌ಗಳು
ರಿಯಲ್‌ಮಿ ನಾರ್ಜೊ N63 ಫೋನ್ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಮಾರಾಟವಾಗುತ್ತಿದೆ. ಇದರ 4GB ಮತ್ತು 64GB ಸ್ಟೋರೇಜ್ ಬೆಲೆ 8,499 ರೂ.ಗೆ ಬಿಡುಗಡೆ ಮಾಡಲಾಗಿತ್ತು. 4GB ಮತ್ತು 128GB ಸ್ಟೋರೇಜ್ ರೂಪಾಂತರವನ್ನು 8,999 ರೂ.ಗೆ ಪರಿಚಯಿಸಲಾಗಿತ್ತು. ಪ್ರಸ್ತುತ, 4GB RAM ಮತ್ತು 64GB ಸ್ಟೋರೇಜ್ ಮಾದರಿಯ ಬೆಲೆ 7,948 ರೂ.ಗೆ ಲಭ್ಯವಿದೆ. ನೀವು ಟ್ವಿಲೈಟ್ ಪರ್ಪಲ್ ಮತ್ತು ಲೆದರ್ ಬ್ಲೂ ಬಣ್ಣಗಳಲ್ಲಿ ಖರೀದಿಸಬಹುದು.
ಕಂಪನಿಯು 794 ರೂ.ಗಳ ತ್ವರಿತ ರಿಯಾಯಿತಿಯೊಂದಿಗೆ ಮಾರಾಟ ಮಾಡುತ್ತಿದೆ. ಅಮೇಜಾನ್ ಸೈಟ್‌ನಲ್ಲಿ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಸಿ ನೀವು ಈ ರಿಯಾಯಿತಿಯನ್ನು ಪಡೆಯಬಹುದು. ಇದಲ್ಲದೆ, ನೀವು 7,550 ರೂ. ಮೌಲ್ಯದ ಎಕ್ಸ್‌ಚೇಂಜ್ ಆಫರ್ ಕೂಡ ಪಡೆಯಬಹುದು. ನೀವು ಈ ಲೆದರ್ ಪ್ಯಾನೆಲ್ಡ್ ರಿಯಲ್‌ಮಿ ನಾರ್ಜೊ N63 ಫೋನನ್ನು ಇ-ಕಾಮರ್ಸ್ ವೆಬ್‌ಸೈಟ್‌ನಲ್ಲಿ ಕೇವಲ 7,153 ರೂ.ಗಳ ಕೈಗೆಟುಕುವ ಬೆಲೆಯಲ್ಲಿ ಆರ್ಡರ್ ಮಾಡಬಹುದು.
ರಿಯಲ್‌ಮಿ ನಾರ್ಜೊ N63 ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ: ರಿಯಲ್‌ಮಿ ನಾರ್ಜೊ N63 ಫೋನ್ ಹೆಚ್‌ಡಿ ಪ್ಲಸ್ ರೆಸಲ್ಯೂಶನ್‌ನೊಂದಿಗೆ 6.74 ಇಂಚಿನ ಎಲ್‌ಸಿಡಿ ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇಯು 90Hz ರಿಫ್ರೆಶ್ ರೇಟ್, 180Hz ಟಚ್ ಸ್ಯಾಂಪ್ಲಿಂಗ್ ದರ, 450 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ಬೆಂಬಲಿಸುತ್ತದೆ. ಇದಲ್ಲದೆ, ರೈನ್‌ವಾಟರ್ ಸ್ಮಾರ್ಟ್ ಟಚ್, ಮಿನಿ ಕ್ಯಾಪ್ಸುಲ್ 2.0 ಮತ್ತು ಏರ್ ಗೆಸ್ಚರ್‌ಗಳಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.
ಪ್ರೊಸೆಸರ್: ರಿಯಲ್‌ಮಿ ನಾರ್ಜೊ N63 ಮೊಬೈಲ್ ಯುನಿಸಾಕ್ T612 ಆಕ್ಟಾ-ಕೋರ್ ಪ್ರೊಸೆಸರ್ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 14 OS ಆಧಾರಿತ Realme UI ನೊಂದಿಗೆ ಬರುತ್ತದೆ.
ಸ್ಟೋರೇಜ್: ಈ ರಿಯಲ್‌ಮಿ ನಾರ್ಜೊ N63 ಫೋನ್ ಎರಡು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. 8GB RAM ಮತ್ತು 64GB ಸ್ಟೋರೇಜ್, 8GB RAM ಮತ್ತು 128GB ಸ್ಟೋರೇಜ್ ಆಯ್ಕೆ ಹೊಂದಿದೆ. ವರ್ಚುವಲ್ RAM ಅನ್ನು ಹೊರತುಪಡಿಸಿ, ಇದು 2TB ಗಾಗಿ ಮೈಕ್ರೊ SD ಕಾರ್ಡ್ ಸ್ಲಾಟ್ ಅನ್ನು ಸಹ ಹೊಂದಿದೆ.
ಕ್ಯಾಮೆರಾ: ರಿಯಲ್‌ಮಿ ನಾರ್ಜೊ N63 ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 50 ಮೆಗಾಪಿಕ್ಸೆಲ್ ಎಐ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಕ್ಯಾಮೆರಾ ಸೆಟಪ್ ಸ್ಪಷ್ಟವಾದ ಫೋಟೋ ವಿವರಗಳಿಗಾಗಿ ಎಐ ಬೂಸ್ಟ್‌ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಬ್ಯಾಟರಿ: ರಿಯಲ್‌ಮಿ ನಾರ್ಜೊ N63 ಮೊಬೈಲ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದನ್ನು ಚಾರ್ಜ್ ಮಾಡಲು, ಸೂಪರ್‌ವೂಕ್ ವೇಗದ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ. ಇದು ಬ್ಯಾಟರಿಯೊಂದಿಗೆ 7.74 ಎಂಎಂ ದಪ್ಪದಲ್ಲಿ ಸ್ಲಿಮ್ ಲುಕ್ ನೀಡುತ್ತದೆ.
ಇತರೆ ವೈಶಿಷ್ಟ್ಯಗಳು: ಈ ಫೋನ್ ಧೂಳು ಮತ್ತು ನೀರಿನ ಸ್ಪ್ಲಾಶ್‌ಗಳ ವಿರುದ್ಧ ರಕ್ಷಿಸಲು IP54 ರೇಟಿಂಗ್ ಅನ್ನು ಹೊಂದಿದೆ. ಇದು ಡ್ಯುಯಲ್ ಸಿಮ್ ಸ್ಲಾಟ್, 3.5 ಎಂಎಂ ಆಡಿಯೋ ಜ್ಯಾಕ್, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಏರ್ ಗೆಸ್ಚರ್, ಎಐ ಬೂಸ್ಟ್ ಮತ್ತು ಶಬ್ದ ರದ್ದತಿ, ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.


Click it and Unblock the Notifications








