Home
Deal of the day

Realme: 5G ಫೋನಿನ ಬೆಲೆ ಕುಸಿತ; 2,500 ಡಿಸ್ಕೌಂಟ್.. ಹೊಸ ಬೆಲೆ ಎಷ್ಟು?

ಸ್ಮಾರ್ಟ್‌ಫೋನ್ ಪ್ರಿಯರಿಗೆ ಸಿಹಿಸುದ್ದಿ ಇಲ್ಲಿದೆ. ದೀಪಾವಳಿ ಪ್ರಯುಕ್ತ ಮೊಬೈಲ್‌ಗಳ ಮೇಲೆ ಭಾರೀ ಡಿಸ್ಕೌಂಟ್ ಲಭ್ಯವಿತ್ತು. ಇದೀಗ, ಹಬ್ಬದ ಬಳಿಕವೂ ಕೆಲವು ಫೋನ್‌ಗಳ ಬೆಲೆ ಇಳಿಕೆ ಕಂಡಿದೆ. ಹೌದು, ನೀವು ರಿಯಲ್‌ಮಿ ನಾರ್ಜೋ N65 5G (Realme Narzo N65 5G) ಸ್ಮಾರ್ಟ್‌ಫೋನ್ ಅನ್ನು ಕಡಿಮೆ ಬೆಲೆಯಲ್ಲಿ ಖರೀದಿಸಬಹುದು. ಬ್ಯಾಂಕ್ ಕಾರ್ಡ್‌ಗಳ ಅಗತ್ಯವಿಲ್ಲದೇ ಕೂಪನ್ ಕೋಡ್ ಮೂಲಕ 2,500 ರೂ. ರಿಯಾಯಿತಿ ಲಭ್ಯವಿದೆ. ಜೊತೆಗೆ ನೀವು, ಬ್ಯಾಂಕ್ ಕಾರ್ಡ್‌ಗಳೊಂದಿಗೆ ಹೆಚ್ಚಿನ ಡಿಸ್ಕೌಂಟ್ ಪಡೆಯಬಹುದು.

ಕಂಪನಿಯು ರಿಯಲ್‌ಮಿ ನಾರ್ಜೋ N65 5G ಅನ್ನು ಮೂರು ಸ್ಟೋರೇಜ್‌ ರೂಪಾಂತರಗಳಲ್ಲಿ ಮಾರಾಟ ಮಾಡುತ್ತಿದೆ. ನೀವು 4GB RAM + 128GB ಸ್ಟೋರೇಜ್‌, 6GB RAM + 128GB ಸ್ಟೋರೇಜ್‌ ಮತ್ತು 8GB RAM + 128GB ಸ್ಟೋರೇಜ್ ರೂಪಾಂತರಗಳಲ್ಲಿ ಖರೀದಿಸಬಹುದು. ಈ ಮೊಬೈಲ್ ಅಮೆಜಾನ್‌ನಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿದೆ. ಈ ಫೋನಿನ ಹೊಸ ಬೆಲೆ, ಆಫರ್‌ಗಳು ಮತ್ತು ವೈಶಿಷ್ಟ್ಯಗಳನ್ನು ತಿಳಿಯಲು ಮುಂದೆ ಓದಿ.

Realme: 5G ಫೋನಿನ ಬೆಲೆ ಇಳಿಕೆ; 2,500 ಡಿಸ್ಕೌಂಟ್.. ಹೊಸ ಬೆಲೆ ಎಷ್ಟು?

ರಿಯಲ್‌ಮಿ ನಾರ್ಜೋ N65 5G ಹೊಸ ಬೆಲೆ

ಫೋನಿನ 4GB RAM ಸ್ಟೋರೇಜ್ ರೂಪಾಂತರವನ್ನು 10,499 ರೂ.ಗೆ ಬಿಡುಗಡೆ ಮಾಡಲಾಗಿತ್ತು. ಪ್ರಸ್ತುತ, ನೀವು ಅಮೆಜಾನ್‌ನಲ್ಲಿ ಕೂಪನ್ ಕೋಡ್ ರಿಯಾಯಿತಿ ಮೂಲಕ 9,749 ರೂ.ಗೆ ಖರೀದಿಸಬಹುದು. ನೀವು 6GB RAM ರೂಪಾಂತರದ ಮೇಲೆ 2,250 ರೂ. ಡಿಸ್ಕೌಂಟ್ ಪಡೆಯಬಹುದು. 8GB RAM ರೂಪಾಂತರದಲ್ಲಿ 2,500 ರೂ. ರಿಯಾಯಿತಿ ಲಭ್ಯವಿದೆ. ರಿಯಾಯಿತಿಯ ನಂತರ, ಕ್ರಮವಾಗಿ 10,248 ರೂ. ಮತ್ತು 10,998 ರೂ.ಗೆ ಮಾರಾಟ ಮಾಡಲಾಗುತ್ತಿದೆ. ನೀವು, ಅಮೆಜಾನ್‌ನಲ್ಲಿ Realme Narzo N65 5G ಸ್ಮಾರ್ಟ್‌ಫೋನ್ ಅನ್ನು ಖರೀದಿಸಬಹುದು.

ರಿಯಲ್‌ಮಿ ನಾರ್ಜೋ N65 5G ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ರಿಯಲ್‌ಮಿ ನಾರ್ಜೋ N65 5G ಫೋನ್ 6.67 ಇಂಚಿನ ಎಚ್‌ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ದರದೊಂದಿಗೆ ಬರುತ್ತದೆ. ಫೋನ್ 625 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್ ಮತ್ತು ಶೇ.89.97 ರಷ್ಟು ಸ್ಕ್ರೀನ್ ಟು ಬಾಡಿ ಅನುಪಾತ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ರಿಯಲ್‌ಮಿ ನಾರ್ಜೋ N65 5G ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಡೈಮೆನ್ಶನ್ 6300 5G ಪ್ರೊಸೆಸರ್ ಹೊಂದಿದೆ. ಇದು ಆಂಡ್ರಾಯ್ಡ್‌ 14 ಆಧಾರಿತ ರಿಯಲ್‌ಮಿ ಯುಐ 5.0 ಓಎಸ್‌ನಲ್ಲಿ ಕೆಲಸ ನಿರ್ವಹಿಸುತ್ತದೆ. ಡೈನಾಮಿಕ್ RAM ವೈಶಿಷ್ಟ್ಯದ ಮೂಲಕ RAM ಅನ್ನು 12GB ವರೆಗೆ ವಿಸ್ತರಿಸಬಹುದು. ಮೈಕ್ರೋ SD ಕಾರ್ಡ್ ಮೂಲಕ 2TB ವರೆಗೆ ಸ್ಟೋರೇಜ್‌ ಹೆಚ್ಚಿಸಬಹುದು.

ಕ್ಯಾಮೆರಾ ಸೆಟಪ್

ರಿಯಲ್‌ಮಿ ನಾರ್ಜೋ N65 5G ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಕಂಪನಿಯು ರಿಯಲ್‌ಮಿ ನಾರ್ಜೋ N65 5G ಅನ್ನು 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಿದೆ. ಇದನ್ನು ಚಾರ್ಜ್‌ ಮಾಡಲು, 15W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಇದು ಕ್ವಿಚ್ ಚಾರ್ಜಿಂಗ್ ಮತ್ತು ರಿವರ್ಸ್ ಚಾರ್ಜಿಂಗ್ ಸಹ ಬೆಂಬಲಿಸುತ್ತದೆ.

ಇತರೆ ವೈಶಿಷ್ಟ್ಯಗಳು

ರಿಯಲ್‌ಮಿ ನಾರ್ಜೋ N65 5G ಸ್ಮಾರ್ಟ್‌ಫೋನ್ ನೀರು ಮತ್ತು ಧೂಳು ನಿರೋಧಕ IP54 ರೇಟಿಂಗ್‌ ಪಡೆದಿದೆ. ಇದು ಮಿನಿ ಕ್ಯಾಪ್ಸುಲ್ 2.0, ಸ್ಮಾರ್ಟ್ ಟಚ್‌ ವೈಶಿಷ್ಟ್ಯಗಳನ್ನು ಹೊಂದಿದೆ. ಮಿನಿ ಕ್ಯಾಪ್ಸುಲ್ ಮೂಲಕ ಪ್ರಮುಖ ನೋಟಿಫಿಕೇಶನ್ ಪಡೆಯಬಹುದು. ಸ್ಮಾರ್ಟ್ ಟಚ್ ವೈಶಿಷ್ಟ್ಯದ ಮೂಲಕ ಒದ್ದೆಯಾದ ಕೈಗಳಿಂದ ಫೋನನ್ನು ಬಳಸಬಹುದು.

Best Mobiles in India

English summary
realme NARZO N65 5G gets Rs 2500 price drop in india: know offers, availability, specs and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+