12,999 ಸಾಕು! ದೀಪಾವಳಿ 'ಧಮಾಕಾ' ಆಫರ್.. Realme P1 5G ಬೆಲೆ ಇಳಿಕೆ.. ಡಿಸ್ಕೌಂಟ್ ಎಷ್ಟು?
ಬೆಳಕಿನ ಹಬ್ಬ ದೀಪಾವಳಿ (Diwali 2024) ಸಂಭ್ರಮಕ್ಕೆ ದಿನಗಣನೆ ಆರಂಭವಾಗಿದೆ! ಹಬ್ಬದ ಖುಷಿಯಲ್ಲಿರುವ ತನ್ನ ಗ್ರಾಹಕರಿಗೆ ಮೊಬೈಲ್ ಬ್ರಾಂಡ್‌ಗಳು ಸಾಲು ಸಾಲು ಆಫರ್‌ಗಳನ್ನು ಘೋಷಿಸಿವೆ. ಈ ಪಟ್ಟಿಗೆ ರಿಯಲ್‌ಮಿ ಕೂಡ ಸೇರಿದೆ. ಹೌದು, ಕಂಪನಿಯು ತನ್ನ ರಿಯಲ್‌ಮಿ P1 5G (Realme P1 5G) ಫೋನಿನ ಮೇಲೆ ಭರ್ಜರಿ ಡಿಸ್ಕೌಂಟ್ ಮತ್ತು ಬ್ಯಾಂಕ್ ಆಫರ್‌ಗಳನ್ನು ನೀಡುತ್ತಿದೆ. ಪ್ರಸ್ತುತ, ಕೇವಲ 12,999 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಬನ್ನಿ, ಕಂಪನಿ ಯಾವೆಲ್ಲಾ ಆಫರ್‌ಗಳನ್ನು ನೀಡುತ್ತಿದೆ ತಿಳಿಯೋಣ.
ರಿಯಲ್‌ಮಿ P1 5G ಮೊಬೈಲ್ ಸ್ಟೈಲಿಶ್ ವಿನ್ಯಾಸದ ಜೊತೆಗೆ, ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಮೂರು ಸ್ಟೋರೇಜ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಫೋನಿನಲ್ಲಿ ಮೀಡಿಯಾ ಟೆಕ್ ಡೈಮೆನ್ಸಿಟಿ 7050 ಪ್ರೊಸೆಸರ್ ಅಳವಡಿಸಲಾಗಿದೆ. ಇದು 6.67 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಇದರೊಂದಿಗೆ, 50 ಮೆಗಾಪಿಕ್ಸೆಲ್ ಕ್ಯಾಮೆರಾ, 5000mAh ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ನೀವು, ಹೊಸ 5G ಮೊಬೈಲ್ ಖರೀದಿಸಲು ಬಯಸಿದರೆ, ಇದು ಉತ್ತಮ ಆಯ್ಕೆಯಾಗಿದೆ. ದೀಪಾವಳಿ ಪ್ರಯುಕ್ತ ಭಾರೀ ಡಿಸ್ಕೌಂಟ್ ಲಭ್ಯವಿದೆ.

ರಿಯಲ್‌ಮಿ P1 5G ಹೊಸ ಬೆಲೆ ಮತ್ತು ಆಫರ್‌ಗಳು
6GB RAM+128GB ಸ್ಟೋರೇಜ್ = 14,999 ರೂ.
ಆಫರ್ ಬೆಲೆ = 12,999 ರೂ.
8GB RAM+128GB ಸ್ಟೋರೇಜ್ = 15,999 ರೂ.
ಆಫರ್ ಬೆಲೆ = 13,999 ರೂ.
8GB RAM+128GB ಸ್ಟೋರೇಜ್ = 18,999 ರೂ.
ಆಫರ್ ಬೆಲೆ = 16,499 ರೂ.
ರಿಯಲ್‌ಮಿ P1 5G ಫೋನಿನ 6GB +128GB ಸ್ಟೋರೇಜ್ ರೂಪಾಂತರವು 1,000 ರೂ. ಫ್ಲಾಟ್ ರಿಯಾಯಿತಿಯೊಂದಿಗೆ 14,999 ರೂ.ಗೆ ಪಟ್ಟಿಮಾಡಲಾಗಿದೆ. ಎಸ್‌ಬಿಐ ಕಾರ್ಡ್ ಮೇಲೆ 2,000 ರೂ. ವರೆಗೆ ಡಿಸ್ಕೌಂಟ್ ನೀಡಲಾಗುತ್ತಿದೆ. ರಿಯಾಯಿತಿಯೊಂದಿಗೆ ನೀವು, ಕೇವಲ 12,999 ರೂ.ಗೆ ಖರೀದಿಸಬಹುದು. ಫೋನಿನ 8GB RAM + 128GB ಸ್ಟೋರೇಜ್ ಆಯ್ಕೆಯ ಬೆಲೆ 15,999 ರೂ. ಆಗಿದೆ. ರಿಯಾಯಿತಿಯೊಂದಿಗೆ, 13,999 ರೂ.ಗೆ ಲಭ್ಯವಿದೆ.
ಇನ್ನೂ 8GB RAM + 128GB ಸ್ಟೋರೇಜ್ ಮೇಲೆ 2,500 ರೂ.ಗಳ ಬ್ಯಾಂಕ್ ಆಫರ್ ಲಭ್ಯವಿದೆ. ನೀವು, 16,499 ರೂ.ಗೆ ಖರೀದಿಸಬಹುದು. ನೀವು, 3 ರಿಂದ 6 ತಿಂಗಳ ನೋ ಕಾಸ್ಟ್ ಇಎಂಐ ಆಯ್ಕೆಯಲ್ಲಿ ಫೋನನ್ನು ಕೊಳ್ಳಬಹುದು. ಜೊತೆಗೆ, ಎಕ್ಸ್‌ಚೇಂಜ್ ಆಫರ್ ಸಹ ಲಭ್ಯವಿದೆ. ಈ ಫೋನ್ ಫೀನಿಕ್ಸ್ ರೆಡ್ ಮತ್ತು ಪೀಕಾಕ್ ಗ್ರೀನ್ ಬಣ್ಣದಲ್ಲಿ ಬರುತ್ತದೆ. ನೀವು, ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಅಮೆಜಾನ್, ಫ್ಲಿಪ್‌ಕಾರ್ಟ್, ಕಂಪನಿಯ ವೆಬ್‌ಸೈಟ್ ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಖರೀದಿಸಬಹುದು.
ರಿಯಲ್‌ಮಿ P1 5G ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ರಿಯಲ್‌ಮಿ P1 5G ಸ್ಮಾರ್ಟ್‌ಫೋನ್ 6.67 ಇಂಚಿನ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಇದು 1200 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಮತ್ತು 120Hz ರಿಫ್ರೆಶ್ ದರವನ್ನು ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಕಂಪನಿಯು ರಿಯಲ್‌ಮಿ P1 5G ಅನ್ನು ಮೀಡಿಯಾ ಟೆಕ್ ಡೈಮೆನ್ಸಿಟಿ 7050 ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಿದೆ. ಇದು ಗೇಮಿಂಗ್ ಪ್ರಿಯರಿಗೆ ಉತ್ತಮ ಆಯ್ಕೆಯಾಗಿದೆ. ಈ ಫೋನ್ 6GB, 8GB RAM ಮತ್ತು 128GB, 256GB ಸ್ಟೋರೇಜ್ ಆಯ್ಕೆಗಳನ್ನು ಹೊಂದಿದೆ.
ಕ್ಯಾಮೆರಾ ಸೆಟಪ್
ಈ ಫೋನಿನಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಲಭ್ಯವಿದೆ. ಇದು 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಆಳ ಸಂವೇದಕ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ,16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ರಿಯಲ್‌ಮಿ P1 5G ಮೊಬೈಲ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದರೊಂದಿಗೆ 45W ವೈರ್ಡ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.
ಇತರೆ ವೈಶಿಷ್ಟ್ಯಗಳು
ಈ ಸ್ಮಾರ್ಟ್‌ಫೋನ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ, ಅಕ್ಸೆಲೆರೊಮೀಟರ್, ಗೈರೋ ಮತ್ತು ದಿಕ್ಸೂಚಿ ಸಂವೇದಕವನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ ಫೈ, ಬ್ಲೂಟೂತ್ 5.2, ಜಿಪಿಎಸ್ ಮತ್ತು ಯುಎಸ್‌ಬಿ ಟೈಪ್ ಸಿ 2.0 ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ.


Click it and Unblock the Notifications








