Home
Deal of the day

ಬೆಸ್ಟ್ ಕ್ಯಾಮೆರಾ ಫೋನ್ ಬೇಕಾ? Realme P1 5G ಬೆಲೆ ಇಳಿಕೆಯಾಗಿದೆ ನೋಡಿ.. ಆಫರ್‌, ವಿಶೇಷತೆಗಳೇನು?

ಹೊಸ ವರ್ಷದ ಖುಷಿಯಲ್ಲಿರುವ ತನ್ನ ಅಭಿಮಾನಿಗಳಿಗೆ ರಿಯಲ್‌ಮಿ ಒಳ್ಳೆಯ ಸುದ್ದಿ ನೀಡಿದೆ. ರಿಯಲ್‌ಮಿ P1 5G (Realme P1 5G) ಫೋನಿನ ಬೆಲೆಯನ್ನು ಇಳಿಕೆ ಮಾಡಿದೆ. ಹೌದು, ಕಂಪನಿಯು ರಿಯಲ್‌ಮಿ P1 5G ಖರೀದೆ ಮೇಲೆ ಸಖತ್ ಬ್ಯಾಂಕ್ ಆಫರ್‌ ನೀಡುತ್ತಿದೆ. ಈ ಆಫರ್‌ ಸೀಮಿತ ಅವಧಿಗೆ ಮಾತ್ರ ಲಭ್ಯವಿದೆ. ನೀವು, ಫ್ಲಿಪ್‌ಕಾರ್ಟ್ ಮತ್ತು ಕಂಪನಿಯ ವೆಬ್‌ಸೈಟ್‌ನಲ್ಲಿ ಬಿಡುಗಡೆ ಬೆಲೆಗಿಂತ ಕಡಿಮೆ ದರದಲ್ಲಿ ಈ ಮೊಬೈಲ್ ಖರೀದಿಸಬಹುದು. ಬನ್ನಿ, ಕಂಪನಿ ಯಾವೆಲ್ಲಾ ಆಫರ್‌ಗಳನ್ನು ನೀಡುತ್ತಿದೆ ತಿಳಿಯೋಣ.

ರಿಯಲ್‌ಮಿ P1 5G ಮೊಬೈಲ್ 50 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7050 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 6.67 ಇಂಚಿನ ಡಿಸ್ಪ್ಲೇ ಲಭ್ಯವಿದೆ. ಹಾಗೆಯೇ 256GB ಸ್ಟೋರೇಜ್‌, 5000mAh ಬ್ಯಾಟರಿ ಮತ್ತು 45W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಕಂಪನಿಯು ಪ್ರಸ್ತುತ, ಈ ಫೋನಿನ ಎರಡು ಸ್ಟೋರೇಜ್‌ ರೂಪಾಂತರಗಳ ದರ ಕಡಿತಗೊಳಿಸಿದೆ. ಹೊಸ ಬೆಲೆ ತಿಳಿಯಲು ಮುಂದೆ ಓದಿ.

12,999 ರೂ.! Realme P1 5G ಬೆಲೆ ಇಳಿಕೆ.. ಏನೆಲ್ಲಾ ಆಫರ್‌ ಇದೆ?

ರಿಯಲ್‌ಮಿ P1 5G ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ ಹೇಗಿದೆ

ರಿಯಲ್‌ಮಿ P1 5G ಸ್ಮಾರ್ಟ್‌ಫೋನ್ 6.67 ಇಂಚಿನ ಹೆಚ್‌ಡಿ ಪ್ಲಸ್‌ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 2400 × 1080 ಪಿಕ್ಸೆಲ್‌ ರೆಸಲ್ಯೂಶನ್, 2000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಮತ್ತು 120Hz ರಿಫ್ರೆಶ್ ದರದ ಬೆಂಬಲ ಹೊಂದಿದೆ.

ಪ್ರೊಸೆಸರ್ ಯಾವುದು?

ರಿಯಲ್‌ಮಿ P1 5G ಮೊಬೈಲ್ ಮೀಡಿಯಾಟೆಕ್ ಡೈಮೆನ್ಸಿಟಿ 7050 ಪ್ರೊಸೆಸರ್‌ ಆಕ್ಟಾಕೋರ್ ಹೊಂದಿದೆ. ಇದು ಗೇಮಿಂಗ್ ಪ್ರಿಯರಿಗೆ ಉತ್ತಮ ಆಯ್ಕೆಯಾಗಿದೆ. ಗ್ರಾಫಿಕ್ಸ್‌ಗಾಗಿ, ಈ ಫೋನ್ ಮಾಲಿ G68 MC4 ಜಿಪಿಯು ಸಹ ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್‌ 14 ಆಧಾರಿತ ರಿಯಲ್‌ಮಿ ಯುಐ 5.0 ಓಎಸ್‌ನಲ್ಲಿ ಕೆಲಸ ಮಾಡುತ್ತದೆ.

ಸ್ಟೋರೇಜ್‌ ಆಯ್ಕೆ

ರಿಯಲ್‌ಮಿ P1 5G ಫೋನ್ 6GB, 8GB RAM ಹೊಂದಿದೆ. ಹಾಗೆಯೇ 128GB, 256GB ಸ್ಟೋರೇಜ್‌ ಆಯ್ಕೆಗಳನ್ನು ಹೊಂದಿದೆ. ನೀವು, ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ ಸ್ಟೋರೇಜ್‌ ವಿಸ್ತರಿಸಬಹುದು.

ಎರಡು ಬೊಂಬಾಟ್ ಕ್ಯಾಮೆರಾ

ರಿಯಲ್‌ಮಿ P1 5G ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ ಎಲ್‌ಇಡಿ ಫ್ಲ್ಯಾಶ್‌ನೊಂದಿಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.

ಶಕ್ತಿಶಾಲಿ ಬ್ಯಾಟರಿ

ರಿಯಲ್‌ಮಿ P1 5G ಮೊಬೈಲ್ 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್‌ ಮಾಡಲು, 45W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ಇತರೆ ವೈಶಿಷ್ಟ್ಯಗಳು

ರಿಯಲ್‌ಮಿ P1 5G ಫೋನ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ ಹೊಂದಿದೆ. ಇದು ಸ್ಪ್ಲಾಶ್ ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP54 ರೇಟಿಂಗ್ ಪಡೆದಿದೆ. ಹಾಗೆಯೇ 3.5 ಎಂಎಂ ಆಡಿಯೊ ಜಾಕ್ ಮತ್ತು ಸ್ಟಿರಿಯೊ ಸ್ಪೀಕರ್‌ಗಳು ಲಭ್ಯವಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು ಹೈಬ್ರಿಡ್ ಡ್ಯುಯಲ್ ಸಿಮ್, ವೈ-ಫೈ 6, ಬ್ಲೂಟೂತ್ 5.2, ಜಿಪಿಎಸ್ ಮತ್ತು ಯುಎಸ್‌ಬಿ ಟೈಪ್ ಸಿ 2.0 ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ.

ರಿಯಲ್‌ಮಿ P1 5G ಹೊಸ ಬೆಲೆ ಮತ್ತು ಆಫರ್‌ಗಳು

​​6GB RAM + 128GB ಸ್ಟೋರೇಜ್ ರೂಪಾಂತರವನ್ನು 14,999 ರೂ.ಗೆ ಬಿಡುಗಡೆ ಮಾಡಲಾಗಿತ್ತು. ಪ್ರಸ್ತುತ, 2000 ರೂ.ಗಳ ಬ್ಯಾಂಕ್‌ ಆಫರ್‌ನೊಂದಿಗೆ 12,999 ರೂ.ಗೆ ಖರೀದಿಸಬಹುದು. 8GB RAM + 128GB ಸ್ಟೋರೇಜ್ ವೇರಿಯಂಟ್ ಬೆಲೆ 15,999 ರೂ. ಆಗಿದೆ. ಇದರ ಮೇಲೆಯೂ 2,000 ರೂ.ಗಳ ಬ್ಯಾಂಕ್‌ ಆಫರ್‌ ಲಭ್ಯವಿದೆ. ನೀವು, ಡಿಸ್ಕೌಂಟ್‌ನೊಂದಿಗೆ 13,999 ರೂ.ಗೆ ಕೊಳ್ಳಬಹುದು. ಈ ಫೋನ್ ಫೀನಿಕ್ಸ್ ರೆಡ್ ಮತ್ತು ಪೀಕಾಕ್ ಗ್ರೀನ್ ಬಣ್ಣದಲ್ಲಿ ಬರುತ್ತದೆ. ನೀವು, ಫ್ಲಿಪ್‌ಕಾರ್ಟ್ ಮತ್ತು ಕಂಪನಿಯ ವೆಬ್‌ಸೈಟ್‌ನಲ್ಲಿ ಈ ಮೊಬೈಲ್ ಖರೀದಿಸಬಹುದು.

Best Mobiles in India

English summary
Realme P1 5G Price Drop in India with Rs 2,000 Bank Offer: Check new Price, availability, specs and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+