Realme: ಹೊಸ ಫೋನಿಗೆ ಭರ್ಜರಿ ಆಫರ್; 6000mAh ಬ್ಯಾಟರಿ, 50MP ಕ್ಯಾಮೆರಾ.. ಎಷ್ಟಿತ್ತು? ಎಷ್ಟಾಗಿದೆ?
ರಿಯಲ್‌ಮಿ ಕಳೆದ ತಿಂಗಳು ಭಾರತದಲ್ಲಿ ಹೊಸ ಫೋನನ್ನು ಬಿಡುಗಡೆ ಮಾಡಿತ್ತು. ಕಂಪನಿಯು ಇದನ್ನು ತನ್ನ 'P' ಸರಣಿಯ ಅಡಿಯಲ್ಲಿ ಪರಿಚಯಿಸಿತ್ತು. ಹೌದು, ಈ 5G ಫೋನ್ ರಿಯಲ್‌ಮಿ P3 (Realme P3 5G) ಹೆಸರಿನೊಂದಿಗೆ ಮಾರುಕಟ್ಟೆಗೆ ಬಂದಿತ್ತು. ಇದರ ಟಾಪ್ ರೂಪಾಂತರವು 8GB RAM + 256GB ಸ್ಟೋರೇಜ್ ಆಯ್ಕೆ ಹೊಂದಿದೆ. ಇದನ್ನು 19,999 ರೂ. ಬೆಲೆಗೆ ಬಿಡುಗಡೆ ಮಾಡಲಾಗಿತ್ತು. ಪ್ರಸ್ತುತ ಕಂಪನಿಯು ಈ ರೂಪಾಂತರದ ಬೆಲೆಯನ್ನು ಇಳಿಕೆ ಮಾಡಿದೆ. ನೀವು, 8GB RAM ಹೊಂದಿರುವ ಈ 5G ಫೋನನ್ನು ಅಗ್ಗದ ದರದಲ್ಲಿ ಖರೀದಿಸಬಹುದು.
ರಿಯಲ್‌ಮಿ P3 5G ಸ್ಮಾರ್ಟ್‌ಫೋನ್ ಮೂರು ಸ್ಟೋರೇಜ್ ಆಯ್ಕೆಗಳಲ್ಲಿ ಬುರತ್ತದೆ. ಈ ಫೋನಿನ ವಿಶೇಷತೆಗಳನ್ನು ನೋಡುವುದಾದರೆ, ಈ ಮೊಬೈಲ್ 6.67 ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಲಭ್ಯವಿದೆ. ಇದು ಸ್ನಾಪ್‌ಡ್ರಾಗನ್ 6 ಜೆನ್ 4 ಪ್ರೊಸೆಸರ್ ಹೊಂದಿದೆ. ಇದರೊಂದಿಗೆ 6000mAh ಬ್ಯಾಟರಿ ಮತ್ತು 45W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ಅತ್ಯುತ್ತಮ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಪ್ರಸ್ತುತ, ಕಂಪನಿಯು ತನ್ನ ಗ್ರಾಹಕರನ್ನು ಸೆಳೆಯಲು ಈ ಫೋನನ್ನು ರಿಯಾಯಿತಿ ದರದೊಂದಿಗೆ ಮಾರಾಟ ಮಾಡುತ್ತಿದೆ.

ರಿಯಲ್‌ಮಿ P3 5G ಹೊಸ ಬೆಲೆ ಮತ್ತು ಆಫರ್
ರಿಯಲ್‌ಮಿ ತನ್ನ ಅಭಿಮಾನಿಗಳಿಗಾಗಿ ರಿಯಲ್‌ಮಿ P3 5G ಫೋನಿನ ಬೆಲೆಯನ್ನು 1,000 ರೂ. ಇಳಿಕೆ ಮಾಡಿದೆ. ಈ ರಿಯಾಯಿತಿ ಏಪ್ರಿಲ್ 14 ರಿಂದ ಪ್ರಾರಂಭವಾಗಿದ್ದು, ಸೀಮಿತ ಅವಧಿಗೆ ಮಾತ್ರ ಲಭ್ಯವಿದೆ. ಅಂದರೆ, ಏಪ್ರಿಲ್ 16 ರವರೆಗೆ ಮಾತ್ರ ಲಭ್ಯವಿರುತ್ತದೆ. ನೀವು 19,999 ರೂ.ಗೆ ಬಿಡುಗಡೆಯಾದ 8GB + 256GB ರೂಪಾಂತರವನ್ನು 18,999 ರೂ.ಗೆ ಖರೀದಿಸಬಹುದು. ಈ ಆಫರ್ ಆಫ್‌ಲೈನ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ನೀವು ಹತ್ತಿರದ ಚಿಲ್ಲರೆ ಅಂಗಡಿ ಮತ್ತು ಮೊಬೈಲ್ ಅಂಗಡಿಯಲ್ಲಿ ಇದರ ಲಾಭ ಪಡೆಯಬಹುದು. ಈ ಫೋನನ್ನು ಸ್ಪೇಸ್ ಸಿಲ್ವರ್, ಕಾಮೆಟ್ ಗ್ರೇ ಮತ್ತು ನೆಬ್ಯುಲಾ ಪಿಂಕ್ ಬಣ್ಣಗಳಲ್ಲಿ ಖರೀದಿಸಬಹುದು.
ರಿಯಲ್‌ಮಿ P3 5G ವೈಶಿಷ್ಟ್ಯಗಳು
ರಿಯಲ್‌ಮಿ P3 5G ಸ್ಮಾರ್ಟ್‌ಫೋನ್ 6.67 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು 2,400 × 1,080 ಪಿಕ್ಸೆಲ್‌ಗಳ ರೆಸಲ್ಯೂಶನ್ ಬೆಂಬಲದೊಂದಿಗೆ ಬರುತ್ತದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರ, 1500Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 2000 ನೀಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ. ಇದು ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಹೊಂದಿದೆ. ಈ 5G ಮೊಬೈಲ್ ಸ್ನಾಪ್‌ಡ್ರಾಗನ್ 6 ಜೆನ್ 4 ಆಕ್ಟಾಕೋರ್ ಪ್ರೊಸೆಸರ್ ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 15 ಆಧಾರಿತ ರಿಯಲ್‌ಮಿ ಯುಐ 6.0 ಜೊತೆಗೆ ಕೆಲಸ ಮಾಡುತ್ತದೆ. ಗ್ರಾಫಿಕ್ಸ್‌ಗಾಗಿ, ಇದು ಅಡ್ರಿನೊ 810 ಜಿಪಿಯು ಇದೆ.

ರಿಯಲ್‌ಮಿ P3 5G ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು ಎಲ್‌ಇಡಿ ಫ್ಲ್ಯಾಶ್‌ನೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ಇದರೊಂದಿಗೆ 2 ಮೆಗಾಪಿಕ್ಸೆಲ್ ಎರಡನೇ ಕ್ಯಾಮೆರಾ ಲಭ್ಯವಿದೆ. ಇದು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ. ಈ ರಿಯಲ್‌ಮಿ ಫೋನ್ 6000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದನ್ನು ಚಾರ್ಜ್ ಮಾಡಲು, 45W ವೇಗದ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ.
ರಿಯಲ್‌ಮಿ P3 5G ಫೋನ್ 6GB RAM ಮತ್ತು 8GB RAM ಹೊಂದಿದೆ. ಹಾಗೆಯೇ 128GB ಮತ್ತು 256GB ಸ್ಟೋರೇಜ್ ಇದೆ. ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP69 ರೇಟಿಂಗ್ ಪಡೆದಿದೆ. ಯುಎಸ್‌ಬಿ ಟೈಪ್ ಸಿ ಆಡಿಯೋ, ಸ್ಟೀರಿಯೊ ಸ್ಪೀಕರ್‌ಗಳು ಲಭ್ಯವಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, ಡ್ಯುಯಲ್ 4G VoLTE, ವೈ-ಫೈ 6, ಬ್ಲೂಟೂತ್ 5.2, ಜಿಪಿಎಸ್, ಎನ್‌ಎಫ್‌ಸಿ, ಯುಎಸ್‌ಬಿ ಟೈಪ್ ಸಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.


Click it and Unblock the Notifications








