Home
Deal of the day

ಒಂದೇ ತಿಂಗಳೊಳಗೆ.. ಹೊಸ Realme ಫೋನಿನ ಬೆಲೆ ಕುಸಿತ; 2000 ರಿಯಾಯಿತಿ.. ಖರೀದಿಗೆ ಕ್ಯೂ.. ವಿಶೇಷತೆಗಳೇನು?

ವಾವ್..! ಇಂಥಾ ಅವಕಾಶ ಮತ್ತ ಮತ್ತೆ ಸಿಗಲ್ಲ. ಕಳೆದ ತಿಂಗಳು ಬಿಡುಗಡೆಯಾದ ರಿಯಲ್‌ಮಿ ಫೋನಿಗೆ ಬೊಂಬಾಟ್ ಆಫರ್. ಹೌದು, ಕಂಪನಿಯು ರಿಯಲ್‌ಮಿ P3 ಪ್ರೊ 5G (realme P3 Pro 5G) ಫೋನನ್ನು 2,000 ರೂ.ಗಳ ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದೆ. ವಿಶೇಷವೆಂದರೆ, ಬಿಡುಗಡೆಯಾದ ಒಂದೇ ತಿಂಗಳೊಳಗೆ, ಈ ಫೋನಿನ ಬೆಲೆ ಭಾರೀ ಕುಸಿತ ಕಂಡಿದೆ. ರಿಯಲ್‌ಮಿ ಪ್ರಿಯರು ಮುಗಿಬಿದ್ದು ಈ ಫೋನನ್ನು ಖರೀದಿಸುತ್ತಿದ್ದಾರೆ. ಬನ್ನಿ, ಈ ರಿಯಲ್‌ಮಿ 5G ಫೋನಿಗೆ ಲಭ್ಯವಿರುವ ಆಫರ್ ಮತ್ತು ವಿಶೇಷತೆಗಳನ್ನು ತಿಳಿಯೋಣ.

ರಿಯಲ್‌ಮಿ P3 ಪ್ರೊ 5G ಮೊಬೈಲ್ ಮೂರು ಸ್ಟೋರೇಜ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಈ ಫೋನಿನ ವಿಶೇಷತೆಗಳನ್ನು ನೋಡುವುದಾದರೆ, ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7s ಜೆನ್ 3 ಪ್ರೊಸೆಸರ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ. ಈ ಮೊಬೈಲ್ 6.83 ಡಿಸ್ಪ್ಲೇ ಹೊಂದಿದೆ. ಇದರೊಂದಿಗೆ 12GB RAM + 256GB ಸ್ಟೋರೇಜ್, 6000mAh ಬ್ಯಾಟರಿ ಮತ್ತು 80W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Realme P3 Pro ಬೆಲೆ ಇಳಿಕೆ; 2000 ರಿಯಾಯಿತಿ.. ಖರೀದಿಗೆ ಕ್ಯೂ.. ವಿಶೇಷತೆಗಳೇನು?

ರಿಯಲ್‌ಮಿ P3 ಪ್ರೊ 5G ಹೊಸ ಬೆಲೆ ಮತ್ತು ಆಫರ್

8GB RAM + 128GB ಸ್ಟೋರೇಜ್ = 23,999 ರೂ.
ರಿಯಾಯಿತಿ ಬೆಲೆ = 21,999 ರೂ.

8GB RAM + 256GB ಸ್ಟೋರೇಜ್ = 24,999 ರೂ.
ರಿಯಾಯಿತಿ ಬೆಲೆ = 22,999 ರೂ.

12GB RAM + 512GB ಸ್ಟೋರೇಜ್ = 26,999 ರೂ.
ರಿಯಾಯಿತಿ ಬೆಲೆ = 24,999 ರೂ.

ಕಂಪನಿಯು ರಿಯಲ್‌ಮಿ P3 ಪ್ರೊ 5G ಫೋನನ್ನು 2,000 ರೂ. ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಮೊಬೈಲ್‌ನ ಎಲ್ಲಾ ರೂಪಾಂತರಗಳ ಮೇಲೆ 2,000 ರೂ.ಗಳ ಬ್ಯಾಂಕ್ ರಿಯಾಯಿತಿ ನೀಡುತ್ತಿದೆ. ಆಫ್‌ಲೈನ್ ಮಾರುಕಟ್ಟೆಯಲ್ಲಿ ಸಹ ಈ ರಿಯಲ್‌ಮಿ ಫೋನಿನ ಖರೀದಿ ಮೇಲೆ 2,000 ರೂ.ಗಳ ಡಿಸ್ಕೌಂಟ್‌ ಲಭ್ಯವಿದೆ. ನೀವು ಚಿಲ್ಲರೆ ಅಂಗಡಿಗಳು ಮತ್ತು ಮೊಬೈಲ್ ಅಂಗಡಿಗಳಲ್ಲಿ ಕೊಳ್ಳಬಹುದು. ಈ ರಿಯಲ್‌ಮಿ 5G ಮೊಬೈಲ್ ನೆಬ್ಯುಲಾ ಗ್ಲೋ, ಗ್ಯಾಲಕ್ಸಿ ಪರ್ಪಲ್ ಮತ್ತು ಸ್ಯಾಟರ್ನ್ ಬ್ರೌನ್ ಬಣ್ಣಗಳ ಆಯ್ಕೆಗಳಲ್ಲಿ ಮಾರಾಟವಾಗುತ್ತಿದೆ.

ರಿಯಲ್‌ಮಿ P3 ಪ್ರೊ 5G ವೈಶಿಷ್ಟ್ಯಗಳು

ಡಿಸ್ಪ್ಲೇ ಹೇಗಿದೆ

ರಿಯಲ್‌ಮಿ P3 ಪ್ರೊ 5G ಮೊಬೈಲ್ 6.83 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು ಕ್ವಾಡ್ ಕರ್ವ್ಡ್ ಅಮೋಲೆಡ್ ಸ್ಕ್ರೀನ್‌ ಆಗಿದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರ ಮತ್ತು 1,500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲದೊಂದಿಗೆ ಬರುತ್ತದೆ. ಈ ಮೊಬೈಲ್ ವೆಟ್ ಟಚ್ ತಂತ್ರಜ್ಞಾನ ಹೊಂದಿದೆ. ಒದ್ದೆಯಾದ ಕೈಗಳಿಂದಲೂ ಈ ಫೋನನ್ನು ಬಳಕೆ ಮಾಡಬಹುದು.

ಕ್ವಾಲ್ಕಾಮ್‌ ಪ್ರೊಸೆಸರ್‌

ರಿಯಲ್‌ಮಿ P3 ಪ್ರೊ 5G ಸ್ಮಾರ್ಟ್‌ಫೋನ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 7S ಜೆನ್ 3 ಪ್ರೊಸೆಸರ್‌ ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 15 ಓಎಸ್‌ ಜೊತೆಗೆ ಕೆಲಸ ಮಾಡುತ್ತದೆ. ಈ ರಿಯಲ್‌ಮಿ 5G ಮೊಬೈಲ್ 8GB RAM ಮತ್ತು 12GB RAM ಹೊಂದಿದೆ. ಇದಕ್ಕೆ ಪೂರಕವಾಗಿ 128GB ಮತ್ತು 256GB ಸ್ಟೋರೇಜ್‌ ಆಯ್ಕೆ ಲಭ್ಯವಿದೆ.

ಎರಡು ಅದ್ಭುತ ಕ್ಯಾಮೆರಾಗಳು

ರಿಯಲ್‌ಮಿ P3 ಪ್ರೊ 5G ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದು ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಬರುತ್ತದೆ. ಇದರೊಂದಿಗೆ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಈ ಫೋನಿನಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 16 ಮೆಗಾಪಿಕ್ಸೆಲ್ ಶೂಟರ್ ಸಹ ಲಭ್ಯವಿದೆ.

ದೊಡ್ಡ ಬ್ಯಾಟರಿ

ರಿಯಲ್‌ಮಿ P3 ಪ್ರೊ 5G ಸ್ಮಾರ್ಟ್‌ಫೋನ್ 6000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಲಾಗಿದೆ. ಈ ರಿಯಲ್‌ಮಿ 5G ಮೊಬೈಲ್ ನೀರು ಮತ್ತು ಧೂಳಿನಿಂದ ರಕ್ಷಣೆಗಾಗಿ IP69 ರೇಟಿಂಗ್ ಪಡೆದಿದೆ. ಇದು ಹಲವು ಎಐ ತಂತ್ರಜ್ಞಾನ ಹೊಂದಿದೆ. ಎಐ (AI) ಎರೇಸ್, ಬೆಸ್ಟ್ ಫೇಸ್, ಮೋಷನ್ ಡಿಬಲ್ರ್, ಎಐ ರೆಕಾರ್ಡಿಂಗ್ ಸಾರಾಂಶ, ಎಐ ರೈಟರ್, ಗೂಗಲ್ ಸರ್ಕಲ್ ಟು ಸರ್ಚ್ ಮತ್ತು ಎಐ ರಿಪ್ಲೈ ಸೇರಿದಂತೆ ಹಲವು ಫೀಚರ್ಸ್‌ ಲಭ್ಯವಿದೆ.

Best Mobiles in India

English summary
Realme P3 Pro 5G Price Drop in India with Rs 2000 discount Offer: check new price, specifications and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+