Realme: ಈಗಲೇ ಖರೀದಿಸಿ.. 6000mAh ಬ್ಯಾಟರಿ.. 50MP ಕ್ಯಾಮೆರಾ.. ಈ ಹೊಸ ಫೋನಿಗೆ ಭಾರೀ ರಿಯಾಯಿತಿ ಘೋಷಣೆ!
ರಿಯಲ್‌ಮಿ ಕಳೆದ ತಿಂಗಳು ಭಾರತದಲ್ಲಿ ಕಡಿಮೆ ಬೆಲೆಗೆ 5G ಫೋನನ್ನು ಬಿಡುಗಡೆ ಮಾಡಿತ್ತು. ಇದೀಗ, ಕಂಪನಿಯು ಈ ರಿಯಲ್‌ಮಿ ಫೋನಿನ ಖರೀದಿ ಮೇಲೆ 1,000 ರೂ.ಗಳ ರಿಯಾಯಿತಿ ಮತ್ತು 1,555 ರೂ.ಗಳ ಇಎಂಐ ಅನ್ನು ನೀಡುತ್ತಿದೆ. ಹೌದು, ರಿಯಲ್‌ಮಿ P3x 5G (realme P3x 5G) ಫೋನಿನ ಬೆಲೆ ದಿಢೀರ್ ಇಳಿಕೆಯಾಗಿದೆ. ಇದರ ಆರಂಭಿಕ ಬೆಲೆ 13,999 ರೂ. ಆಗಿದೆ. ಪ್ರಸ್ತುತ, ಈ ಕಡಿಮೆ ಬೆಲೆಯ 5G ಫೋನನ್ನು ಮತ್ತಷ್ಟು ಅಗ್ಗದ ದರದಲ್ಲಿ ಖರೀದಿಸಬಹುದು. ಈ ಫೋನಿನ ಹೊಸ ಬೆಲೆ, ಆಫರ್ ಮತ್ತು ವಿಶೇಷತೆಗಳನ್ನು ತಿಳಿಯೋಣ ಬನ್ನಿ.
ಕಂಪನಿಯು ತನ್ನ 'ಪಿ' ಸರಣಿಯ ಅಡಿಯಲ್ಲಿ ರಿಯಲ್‌ಮಿ P3x 5G ಫೋನನ್ನು ಬಿಡುಗಡೆ ಮಾಡಿದೆ. ಇದರ ಜೊತೆಗೆ ರಿಯಲ್‌ಮಿ P3 ಪ್ರೊ 5G (realme P3 Pro 5G) ಸಹ ಬಂದಿತ್ತು. ಈ ಮೊಬೈಲ್‌ನ ವಿಶೇಷತೆಗಳನ್ನು ನೋಡುವುದಾದರೆ, ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6400 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇದೆ. ಇದು 6.83 ಇಂಚಿನ ಡಿಸ್ಪ್ಲೇ ಹೊಂದಿದೆ. ಜೊತೆಗೆ 128GB ಸ್ಟೋರೇಜ್, 6000mAh ಬ್ಯಾಟರಿ ಮತ್ತು 45W ವೇಗದ ಚಾರ್ಜಿಂಗ್ ಒಳಗೊಂಡಿದೆ.

ರಿಯಲ್‌ಮಿ P3x 5G ರಿಯಾಯಿತಿ
6GB RAM + 128GB ಸ್ಟೋರೇಜ್ = 13,999 ರೂ.
ರಿಯಾಯಿತಿ ಬೆಲೆ = 12,999 ರೂ.
8GB RAM + 128GB ಸ್ಟೋರೇಜ್ = 14,999 ರೂ.
ರಿಯಾಯಿತಿ ಬೆಲೆ = 13,999 ರೂ.
ರಿಯಲ್‌ಮಿ P3x 5G ಮೊಬೈಲ್ ಎರಡು RAM ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. ಈ ರಿಯಲ್‌ಮಿ 5G ಫೋನ್ ಖರೀದಿಸುವಾಗ ಯುಪಿಐ (UPI) ಪಾವತಿ ಮಾಡಿದರೆ, ಕಂಪನಿಯು 1,000 ರೂ.ಗಳ ರಿಯಾಯಿತಿ ನೀಡುತ್ತದೆ. ಈ ರಿಯಾಯಿತಿಯ ಬಳಿಕ, ಈ ಫೋನಿನ ಬೆಲೆ 12,999 ರೂ. ಮತ್ತು 13,999 ರೂ.ಗೆ ಇಳಿಕೆಯಾಗಲಿದೆ. ನೀವು, ಇಎಂಐನಲ್ಲಿ ಈ ಮೊಬೈಲ್ ಖರೀದಿಸಲು ಬಯಸಿದರೆ, ಉತ್ತಮ ಯೋಜನೆ ಸಹ ಲಭ್ಯವಿದೆ.
ತಿಂಗಳಿಗೆ ಕೇವಲ 1555 ರೂ.ಗಳ ಇಎಂಐನಲ್ಲಿ ರಿಯಲ್‌ಮಿ P3x 5G ಅನ್ನು ಖರೀದಿಸಬಹುದು. ಐಡಿಎಫ್‌ಸಿ ಫಸ್ಟ್ ಬ್ಯಾಂಕ್, ಬಜಾಜ್ ಫಿನ್‌ಸರ್ವ್, ಹೋಮ್ ಕ್ರೆಡಿಟ್, ಟಿವಿಎಸ್ ಕ್ರೆಡಿಟ್ ಮತ್ತು ಎಚ್‌ಡಿಬಿ ಫೈನಾನ್ಷಿಯಲ್ ಸರ್ವೀಸಸ್‌ನಿಂದ ಇಎಂಐ ಮಾಡುವ ಮೂಲಕ ಈ ಆಫರ್ ಪ್ರಯೋಜನ ಪಡೆಯಬಹುದು. ಈ ಆಫರವ ಸೀಮಿತ ಅವಧಿಗೆ ಮಾತ್ರ ಲಭ್ಯವಿದೆ. ಈ ಕೊಡುಗೆ ಆಫ್‌ಲೈನ್ ಚಿಲ್ಲರೆ ಅಂಗಡಿಗಳು ಮತ್ತು ಮೊಬೈಲ್ ಅಂಗಡಿಗಳಲ್ಲಿ ಲಭ್ಯವಿರುತ್ತದೆ. ಈ ಫೋನನ್ನು ಮಿಡ್‌ನೈಟ್ ಬ್ಲೂ, ಲೂನಾರ್ ಸಿಲ್ವರ್ ಮತ್ತು ಸ್ಟೆಲ್ಲಾರ್ ಪಿಂಕ್ ಬಣ್ಣಗಳಲ್ಲಿ ಖರೀದಿಸಬಹುದು.

ರಿಯಲ್‌ಮಿ P3x 5G ವೈಶಿಷ್ಟ್ಯಗಳು
ಡಿಸ್ಪ್ಲೇ ಹೇಗಿದೆ
ರಿಯಲ್‌ಮಿ P3x 5G ಫೋನ್ 6.83 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು 1.5K ಕ್ವಾಡ್ ಕರ್ವ್ಡ್ ಅಮೋಲೆಡ್ ಡಿಸ್ಪ್ಲೇ ಆಗಿದೆ. ಈ ಡಿಸ್ಪ್ಲೇಯು 1,500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲಮತ್ತು 120Hz ರಿಫ್ರೆಶ್ ದರ ಹೊಂದಿದೆ.
ಪ್ರೊಸೆಸರ್ ಯಾವುದು
ರಿಯಲ್‌ಮಿ P3x 5G ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6400 ಪ್ರೊಸೆಸರ್ ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 15 ಓಎಸ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಮೊಬೈಲ್ 6GB RAM ಮತ್ತು 8GB RAM ಆಯ್ಕೆ ಒಳಗೊಂಡಿದೆ.
ಹೀಗಿದೆ ಕ್ಯಾಮೆರಾ ಸೆಟಪ್
ರಿಯಲ್‌ಮಿ P3x 5G ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದು ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಬರುತ್ತದೆ. ಹಾಗೆಯೇ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಈ ಫೋನಿನಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.
ಬೊಂಬಾಟ್ ಬ್ಯಾಟರಿ ಬ್ಯಾಕಪ್
ರಿಯಲ್‌ಮಿ P3x 5G ಫೋನ್ 6000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 45W ವೇಗದ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಲಾಗಿದೆ. ಇದರೊಂದಿಗೆ OTG ಮತ್ತು ರಿವರ್ಸ್ ಚಾರ್ಜಿಂಗ್ ತಂತ್ರಜ್ಞಾನ ಸಹ ಲಭ್ಯವಿದೆ.


Click it and Unblock the Notifications








