Valentine's Day Offer: ಪ್ರೇಮಿಗಳ ದಿನಕ್ಕೆ ಬಂಪರ್ ಆಫರ್! ಈ Realme ಫೋನ್‌ಗಳಿಗೆ 10,000 ಡಿಸ್ಕೌಂಟ್.. ಇಲ್ಲಿದೆ ಪಟ್ಟಿ
ಪ್ರೇಮಿಗಳ ದಿನಕ್ಕೆ ಕೆಲವೇ ದಿನ ಬಾಕಿಯಿದೆ. ಏನಪ್ಪಾ ಮಾಡೋದು ಕೈಯಲ್ಲಿ ಬೇರೆ ದುಡ್ಡಿಲ್ಲ.. ತನ್ನ ಸಂಗಾತಿಗೆ ಏನಾದರೂ ಉಡುಗೊರೆ ಕೊಡಲೇಬೇಕಲ್ಲಾ ಅಂತ ಟೆನ್ಶನ್ ಇದ್ಯಾ? ರಿಯಲ್‌ಮಿ (Realme) ನಿಮ್ಮ ಚಿಂತೆಯನ್ನು ದೂರ ಮಾಡಿದೆ. ಈ ಮೂರು ಸೊಗಸಾದ ಫೋನ್‌ಗಳ ಬೆಲೆ ಕಡಿಮೆ ಮಾಡಿದೆ. ನೀವು ಬೊಂಬಾಟ್ ಆಫರ್‌ಗಳೊಂದಿಗೆ ಈ ಫೋನ್ ಖರೀದಿಸಬಹುದು. ಅಮೆಜಾನ್‌ನಲ್ಲಿ ನೀವು ಉತ್ತಮ ಡೀಲ್‌ಗಳನ್ನು ಪಡೆಯಬಹುದು. ಯಾವೆಲ್ಲಾ ಫೋನ್‌ಗಳ ಮೇಲೆ ಆಫರ್ ಲಭ್ಯವಿದೆ ಮತ್ತು ವಿಶೇಷತೆಗಳೇನು ಎನ್ನುವುದನ್ನು ತಿಳಿಯಲು ಮುಂದೆ ಓದಿ.
ಹೌದು, ರಿಯಲ್‌ಮಿ ತನ್ನ ಸ್ಮಾರ್ಟ್‌ಫೋನ್‌ಗಳ ಮೇಲೆ ವಿಶೇಷ ವ್ಯಾಲೆಂಟೈನ್ಸ್ ವೀಕ್ ಆಫರ್‌ಗಳನ್ನು (Realme Valentine's Week Sale) ಬಿಡುಗಡೆ ಮಾಡಿದೆ. ತನ್ನ ಗ್ರಾಹಕರಿಗೆ 10,000 ರೂ.ಗಳ ವರೆಗಿನ ರಿಯಾಯಿತಿಯಲ್ಲಿ ಆಯ್ದ ಫೋನ್‌ಗಳನ್ನು ಖರೀದಿಸುವ ಅವಕಾಶವನ್ನು ನೀಡಿದೆ. ಈ ಮಾರಾಟವು ಫೆಬ್ರವರಿ 6 ರಿಂದ ಫೆಬ್ರವರಿ 14 ರವರೆಗೆ ನಡೆಯಲಿದೆ. ಅಮೆಜಾನ್ (Amazon), ಕಂಪನಿಯ ವೆಬ್‌ಸೈಟ್ (realme.com) ಮತ್ತು ಆಫ್‌ಲೈನ್ ಚಿಲ್ಲರೆ ಅಂಗಡಿಗಳಲ್ಲಿ ಈ ಆಫರ್ ಲಭ್ಯವಿದೆ. ಪ್ರೇಮಿಗಳ ದಿನದ ಸಂದರ್ಭದಲ್ಲಿ, ನೀವು ಇಲ್ಲಿಂದ ವಿಶೇಷ ಡೀಲ್‌ಗಳಲ್ಲಿ ಫೋನ್‌ಗಳನ್ನು ಖರೀದಿ ಮಾಡಬಹುದು.

ನೀವು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಅಪ್‌ಗ್ರೇಡ್ ಮಾಡಲು ಅಥವಾ ನಿಮ್ಮ ಸಂಗಾತಿಗೆ ವ್ಯಾಲೆಂಟೈನ್ಸ್ ಡೇ (Valentine's Day) ಉಡುಗೊರೆ ನೀಡಲು ಬಯಸಿದರೆ, ಈ ಸೀಮಿತ ಅವಧಿಯ ಆಫರ್‌ಗಳ ಲಾಭ ಪಡೆಯಬಹುದು. ಈ ಆಫರ್ ಬೆಲೆ ಇಳಿಕೆ, ನೋ ಕಾಸ್ಟ್ ಇಎಂಐ ಆಯ್ಕೆಗಳು ಮತ್ತು ಎಕ್ಸ್‌ಚೇಂಜ್ ಆಫರ್‌ಗಳನ್ನು ಒಳಗೊಂಡಿದೆ. ನೀವು, ಕಂಪನಿಯ ರಿಯಲ್‌ಮಿ ನಾರ್ಜೊ 70 ಟರ್ಬೊ 5G, ರಿಯಲ್‌ಮಿ GT 6T ಮತ್ತು ರಿಯಲ್‌ಮಿ GT 7 ಪ್ರೊ ಫೋನ್‌ಗಳನ್ನು ಬಿಡುಗಡೆ ಬೆಲೆಗಿಂತ ಕಡಿಮೆಗೆ ಖರೀದಿಸಬಹುದು.
ರಿಯಲ್‌ಮಿ ವ್ಯಾಲೆಂಟೈನ್ಸ್ ಡೇ ಸ್ಮಾರ್ಟ್‌ಫೋನ್ ಡೀಲ್‌ಗಳು
ಅಮೆಜಾನ್ ಹಲವು ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳ ಖರೀದಿ ಮೇಲೆ ಆಕರ್ಷಕ ಆಫರ್‌ಗಳನ್ನು ನೀಡುತ್ತಿದೆ. ಇದು ಹೆಚ್ಚುವರಿ ರಿಯಾಯಿತಿಗಳು ಮತ್ತು ಇಎಂಐ ಆಯ್ಕೆಗಳೊಂದಿಗೆ ಬರುತ್ತದೆ.
ರಿಯಲ್‌ಮಿ ನಾರ್ಜೊ 70 ಟರ್ಬೊ 5G ಬೆಲೆ
- 6GB + 128GB ಸ್ಟೋರೇಜ್ = 13,999 ರೂ. (3,000 ರೂ. ರಿಯಾಯಿತಿ)
- 8GB + 128GB ಸ್ಟೋರೇಜ್ = 14,999 ರೂ. (3,000 ರೂ. ರಿಯಾಯಿತಿ)
- 12GB + 256GB ಸ್ಟೋರೇಜ್ = 18,999 ರೂ. (2,000 ರೂ. ರಿಯಾಯಿತಿ)
ರಿಯಲ್‌ಮಿ GT 6T ಬೆಲೆ
- 8GB + 256GB ಸ್ಟೋರೇಜ್ = 25,999 ರೂ. (7,000 ರೂ. ರಿಯಾಯಿತಿ)
- 12GB + 256GB ಸ್ಟೋರೇಜ್ = 27,999 ರೂ. (8,000 ರೂ. ರಿಯಾಯಿತಿ)
ರಿಯಲ್‌ಮಿ GT 7 ಪ್ರೊ ಬೆಲೆ
- 12GB + 256GB ಸ್ಟೋರೇಜ್ = 54,999 ರೂ. (5,000 ರೂ. ರಿಯಾಯಿತಿ)
- 16GB + 512GB ಸ್ಟೋರೇಜ್ = 59,999 ರೂ. (6,000 ರೂ. ರಿಯಾಯಿತಿ)
ರಿಯಲ್‌ಮಿಯ ಅಧಿಕೃತ ವೆಬ್‌ಸೈಟ್ ಮತ್ತು ಆಫ್‌ಲೈನ್ ಅಂಗಡಿಗಳಲ್ಲಿ ಈ ಎಲ್ಲಾ ರಿಯಾಯಿತಿಗಳು ಲಭ್ಯವಿದೆ. ಆಯ್ದ ಕೆಲವು ರಿಯಲ್‌ಮಿ ಫೋನ್‌ಗಳಲ್ಲಿ ಹೆಚ್ಚುವರಿ ಎಕ್ಸ್‌ಚೇಂಜ್ ಬೋನಸ್‌ಗಳು ಮತ್ತು ಇಎಂಐ ಆಯ್ಕೆ ಲಭ್ಯವಿದೆ. ಕೆಲವು ಫೋನ್‌ಗಳ ಖರೀದಿ ಮೇಲೆ ನೀವು, ರಿಯಲ್‌ಮಿಯ ಟೆಕ್‌ಲೈಫ್ ಸ್ಟುಡಿಯೋ H1 ಹೆಡ್‌ಫೋನ್‌ಗಳನ್ನು ಉಚಿತವಾಗಿ ಪಡೆಯಬಹುದು. ನೀವು, ನಿಮ್ಮ ಗರ್ಲ್ ಫ್ರೆಂಡ್ಗೆ ವ್ಯಾಲೆಂಟೈನ್ಸ್ ಡೇ ಗಿಫ್ಟ್ ನೀಡಲು ಬಯಸಿದರೆ, ಈ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಬಹುದು.


Click it and Unblock the Notifications








