Home
Deal of the day

ಕೇವಲ 7000 ರೂ.! ಅಗ್ಗದ ಬೆಲೆಗೆ 32 ಇಂಚಿನ ಸ್ಮಾರ್ಟ್ ಟಿವಿ.. ವಿಶೇಷತೆಗಳೇನು?

ಸ್ಮಾರ್ಟ್‌ ಟಿವಿ ಪ್ರಿಯರಿಗೆ ಇಲ್ಲಿದೆ ಸಿಹಿಸುದ್ದಿ. 32 ಇಂಚಿನ ಸ್ಮಾರ್ಟ್ ಟಿವಿ (Smart TV) ಕೇವಲ 7000 ರೂ.ಗೆ ಸಿಗುತ್ತೆ. ಹೌದು, ರಿಲಯನ್ಸ್‌ (Reliance) ತನ್ನ ಸ್ಮಾರ್ಟ್ ಟಿವಿ ಬೆಲೆಯನ್ನು ಇಳಿಕೆ ಮಾಡಿದೆ. ಈ ಆಂಡ್ರಾಯ್ಡ್ ಟಿವಿಯ ಬೆಲೆ ಈಗಾಗಲೇ ಕಡಿಮೆಯಾಗಿದೆ. ಪ್ರಸ್ತುತ, ಕಂಪನಿಯು ಟಿವಿ ಖರೀದಿ ಮೇಲೆ ಹೆಚ್ಚುವರಿ ರಿಯಾಯಿತಿ ಸಹ ನೀಡುತ್ತಿದೆ. ನೀವು, ಸ್ಟೈಲಿಶ್ ಡಿಸೈನ್ ಮತ್ತು ಅತ್ಯಾಕರ್ಷಕ ಫೀಚರ್ಸ್‌ ಹೊಂದಿರುವ ಈ ಸ್ಮಾರ್ಟ್ ಟಿವಿಯನ್ನು ಜಿಯೋಮಾರ್ಟ್‌ನಲ್ಲಿ (JioMart) ಖರೀದಿಸಬಹುದು. ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಹೌದು, 32 ಇಂಚಿನ ಡಿಸ್ಪ್ಲೇ ಹೊಂದಿರುವ ರಿಲಯನ್ಸ್‌ನ ರಿಕನೆಕ್ಟ್ ಹೆಚ್‌ಡಿ ಸ್ಮಾರ್ಟ್ ನಿಯೋ ಟಿವಿ (Reconnect HD Smart Neo TV) ಕಡಿಮೆ ಬೆಲೆಗೆ ಲಭ್ಯವಿದೆ. ಈ 32 ಇಂಚಿನ ಟಿವಿಯನ್ನು 8 ಸಾವಿರ ರೂ. ಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಪ್ರಸ್ತುತ, JioMart ನಲ್ಲಿ ಈ ಆಂಡ್ರಾಯ್ಡ್ ಟಿವಿಯ ಬೆಲೆ 7,999 ರೂ. ಇದೆ. ನೀವು, ಯಾವುದೇ ಬ್ಯಾಂಕ್ ಕಾರ್ಡ್ ಅಥವಾ ಕೂಪನ್ ರಿಯಾಯಿತಿ ಇಲ್ಲದೇ ಈ ಟಿವಿಯನ್ನು ಖರೀದಿಸಬಹುದು.

7000 ಸಾಕು! ಅಗ್ಗದ ಬೆಲೆಗೆ 32 ಇಂಚಿನ ಸ್ಮಾರ್ಟ್ ಟಿವಿ.. ವಿಶೇಷತೆಗಳೇನು?

ಸ್ಮಾರ್ಟ್ ಟಿವಿಯ ಹೊಸ ಬೆಲೆ ಮತ್ತು ಆಫರ್‌ಗಳು

ಎಚ್‌ಡಿಎಫ್‌ಸಿ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ ಬಳಸಿ ಈ ಸ್ಮಾರ್ಟ್‌ ಟಿವಿ ಖರೀದಿಸಿದರೆ, ನೀವು ಶೇ.10 ರಷ್ಟು ಹೆಚ್ಚುವರಿ ರಿಯಾಯಿತಿ ಪಡೆಯಬಹುದು. ಅಂದರೆ 799 ರೂ.ಗಳ ಡಿಸ್ಕೌಂಟ್ ಲಭ್ಯವಿದೆ. ಡಿಸ್ಕೌಂಟ್‌ ಬಳಿಕ ಈ 32 ಇಂಚಿನ ಸ್ಮಾರ್ಟ್ ಟಿವಿಯ ಬೆಲೆ 7,200 ರೂ.ಗೆ ಇಳಿಕೆಯಾಗಲಿದೆ.

ನೀವು, ಪೇಟಿಯಮ್ (Paytm) ಮೂಲಕ ಟಿವಿ ಕೊಂಡರೆ, ಪೇಟಿಯಮ್ ಯುಪಿಐನಲ್ಲಿ (Paytm UPI) 100 ರೂ. ಮತ್ತು ಪೇಟಿಯಮ್ ಯುಪಿಐ ಲೈಟ್‌ನಲ್ಲಿ 200 ರೂ. ವರೆಗೆ ಕ್ಯಾಶ್‌ಬ್ಯಾಕ್ ಲಭ್ಯವಿದೆ. ಇದಲ್ಲದೆ, ಈ 32 ಇಂಚಿನ ಸ್ಮಾರ್ಟ್ ಟಿವಿಯನ್ನು ಭೀಮ್ ಯುಪಿಐ (BHIM UPI) ಮೇಲೆ ಖರೀದಿಸಿದರೆ, ಕಂಪನಿಯು 50 ರೂ. ಕ್ಯಾಶ್‌ಬ್ಯಾಕ್ ನೀಡುತ್ತದೆ.

ಈ ಸುದ್ದಿ ಓದಿದ್ದೀರಾ?: 12000 ಅಗ್ಗ! 200MP ಕ್ಯಾಮೆರಾ.. 5100mAh ಬ್ಯಾಟರಿ.. ಕಡಿಮೆ ಬೆಲೆಗೆ Redmi ಫೋನ್ ಸೇಲ್

32 ಇಂಚಿನ ಸ್ಮಾರ್ಟ್ ಟಿವಿ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ರಿಕನೆಕ್ಟ್ ಹೆಚ್‌ಡಿ ಸ್ಮಾರ್ಟ್ ನಿಯೋ ಟಿವಿಯು 32 ಇಂಚಿನ ಹೆಚ್‌ಡಿ ಡಿಸ್ಪ್ಲೇಯನ್ನು ಹೊಂದಿದೆ. ಇದು 1366 x 768 ಪಿಕ್ಸೆಲ್‌ಗಳ ರೆಸಲ್ಯೂಶನ್‌ ಹೊಂದಿದೆ. ಡಿಸ್ಪ್ಲೇಯು 60Hz ರಿಫ್ರೆಶ್ ದರದ ಬೆಂಬಲ ಪಡೆದಿದೆ. ಈ ಟಿವಿಯಲ್ಲಿ, 3000:1 ಕಾಂಟ್ರಾಸ್ಟ್ ಅನುಪಾತ ಲಭ್ಯವಿದೆ.

ಸ್ಟೋರೇಜ್ ಆಯ್ಕೆ

32 ಇಂಚಿನ ಸ್ಮಾರ್ಟ್ ಟಿವಿಯು 1GB RAM ಹೊಂದಿದೆ. ಕಂಪನಿಯು ಕೂಲಿಟಾ 2.0 ಆಪರೇಟಿಂಗ್ ಸಿಸ್ಟಂನಲ್ಲಿ ಈ ಆಂಡ್ರಾಯ್ಡ್ ಟಿವಿಯನ್ನು ಬಿಡುಗಡೆ ಮಾಡಿದೆ. ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಲು ಮತ್ತು ಇನ್‌ಸ್ಟಾಲ್ ಮಾಡಲು ಟಿವಿಯಲ್ಲಿ, 8GB ಸ್ಟೋರೇಜ್‌ ಅನ್ನು ಒದಗಿಸಲಾಗಿದೆ.

ಕನೆಕ್ಟಿವಿಟಿ ಆಯ್ಕೆಗಳು

ಈ ಆಂಡ್ರಾಯ್ಡ್ ಟಿವಿಯು ಎರಡು 10W ಸ್ಟಿರಿಯೊ ಸ್ಪೀಕರ್‌ಗಳನ್ನು ಹೊಂದಿದೆ. ಇದು ನಿಮಗೆ 20W ಶಕ್ತಿಯನ್ನು ನೀಡುತ್ತದೆ. ರೀಕನೆಕ್ಟ್‌ನ ಈ ಸ್ಮಾರ್ಟ್ ಟಿವಿ 2 ಹೆಚ್‌ಡಿಎಂಐ (HDMI) ಪೋರ್ಟ್‌ಗಳು ಮತ್ತು ಎರಡು ಯುಎಸ್‌ಬಿ ಪೋರ್ಟ್‌ಗಳನ್ನು ಹೊಂದಿದೆ. ಅಲ್ಲದೆ LAN ಕನೆಕ್ಷನ್ ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಸಹ ಒದಗಿಸಲಾಗಿದೆ.

Best Mobiles in India

English summary
Reconnect HD Smart Neo TV available with huge Discount: know new price, offers, availability specs and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+