Redmi: ದೀಪಾವಳಿ ಆಫರ್.. ಕೇವಲ 8,999 ರೂ.! ಯಾವ ಫೋನ್?
ದೀಪಾವಳಿ ಹಬ್ಬದ (Deepavali 2024) ಅಂಗವಾಗಿ ಅಮೇಜಾನ್, 'ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್' (Amazon Great Indian Festival Diwali Sale) ಪ್ರಾರಂಭಿಸಿದೆ. ಈ ವಿಶೇಷ ಮಾರಾಟದಲ್ಲಿ ನೀವು, ಕಡಿಮೆ ಬೆಲೆಯಲ್ಲಿ 5G ಸ್ಮಾರ್ಟ್‌ಫೋನ್‌ಗಳನ್ನು ಕೊಳ್ಳಬಹುದು. ಈ ಮೂಲಕ ಸಾವಿರಾರು ರೂ.ಗಳನ್ನು ಉಳಿಸಬಹುದು. ಹೌದು, ನೀವು ಹೊಸ 5G ಫೋನ್ ಖರೀದಿಸಲು ಬಯಸಿದ್ದರೆ, ಇಲ್ಲಿದೆ ಬಂಪರ್ ಆಫರ್. ನೀವು, ಅಮೆಜಾನ್ ಸೇಲ್‌ನಲ್ಲಿ ರೆಡ್ಮಿ 13C 5G (Redmi 13C 5G) ಫೋನನ್ನು ದೊಡ್ಡ ರಿಯಾಯಿತಿಯಲ್ಲಿ ಖರೀದಿಸಬಹುದು.
ಹೌದು, ಅಮೆಜಾನ್ ವಿಶೇಷ ಮಾರಾಟದಲ್ಲಿ ಅನೇಕ ಉತ್ಪನ್ನಗಳನ್ನು ದೊಡ್ಡ ರಿಯಾಯಿತಿಯಲ್ಲಿ ಖರೀದಿಸಬಹುದು. ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಸ್ಮಾರ್ಟ್ ವಾಚ್‌ಗಳು, ಹೆಡ್ ಫೋನ್‌ಗಳು, ಇಯರ್‌ಪಾಡ್‌ಗಳು ಸೇರಿದಂತೆ ಇತರೆ ಗೃಹೋಪಯೋಗಿ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಕಡಿಮೆ ಬೆಲೆಯಲ್ಲಿ ಖರೀದಿಸಬಹುದು. ರೆಡ್ಮಿ 13C 5G ಸಹ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ನೀವು, 9,000 ರೂ. ಒಳಗೆ 5G ಫೋನ್ ಹುಡುಕುತ್ತಿದ್ದರೆ, ರೆಡ್ಮಿ 13C 5G ಉತ್ತಮ ಆಯ್ಕೆಯಾಗಿದೆ. ಅಮೆಜಾನ್‌ನಲ್ಲಿ ಈ ಫೋನಿಗೆ ಯಾವೆಲ್ಲಾ ಆಫರ್‌ಗಳು ಲಭ್ಯವಿದೆ ಎನ್ನುವುದನ್ನು ತಿಳಿಯೋಣ ಬನ್ನಿ.

ರೆಡ್ಮಿ 13C 5G ಫೋನಿನ ಬೆಲೆ ಮತ್ತು ಆಫರ್‌ಗಳು
ಕಂಪನಿಯು ರೆಡ್ಮಿ 13C 5G ಸ್ಮಾರ್ಟ್‌ಫೋನ್ ಅನ್ನು ಮೂರು ಸ್ಟೋರೇಜ್ ರೂಪಾಂತರಗಳಲ್ಲಿ ಮಾರಾಟ ಮಾಡುತ್ತಿದೆ. ಫೋನ್ 4GB RAM + 128GB ಸ್ಟೋರೇಜ್, 6GB RAM + 128GB ಸ್ಟೋರೇಜ್ ಮತ್ತು 8GB RAM + 256GB ಸ್ಟೋರೇಜ್ ರೂಪಾಂತರಗಳಲ್ಲಿ ಲಭ್ಯವಿದೆ. ಅಮೆಜಾನ್‌ನಲ್ಲಿ 4GB RAM ರೂಪಾಂತರವನ್ನು 8,999 ರೂ.ಗೆ ಖರೀದಿಸಬಹುದು. ಉಳಿದ ಎರಡು ರೂಪಾಂತರಗಳು 11,499 ರೂ. ಮತ್ತು 13,499 ರೂ.ಗೆ ಲಭ್ಯವಿದೆ. ನೀವು, ಅಮೆಜಾನ್‌ನಲ್ಲಿ ಈ ರಿಯಾಯಿತಿ ಪಡೆಯಬಹುದು.
ರೆಡ್ಮಿ 13C 5G ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ರೆಡ್ಮಿ 13C 5G ಮೊಬೈಲ್ 6.74 ಇಂಚಿನ ಎಚ್‌ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಇದು 90Hz ರಿಫ್ರೆಶ್ ದರ ಮತ್ತು 600 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ. ಡಿಸ್ಪ್ಲೇ ರಕ್ಷಣೆಗೆ ಗೊರಿಲ್ಲಾ ಗ್ಲಾಸ್ ಒದಗಿಸಲಾಗಿದೆ. ಈ ಫೋನಿನ ವಿನ್ಯಾಸ ಆಕರ್ಷಕವಾಗಿದೆ.
ಪ್ರೊಸೆಸರ್ ಸಾಮರ್ಥ್ಯ
ಕಂಪನಿಯು ರೆಡ್ಮಿ 13C 5G ಫೋನಿನಲ್ಲಿ ಮೀಡಿಯಾ ಟೆಕ್ ಡೈಮೆನ್ಶನ್ 6100 ಪ್ಲಸ್ ಪ್ರೊಸೆಸರ್ ಅನ್ನು ಅಳವಡಿಸಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 13 ಆಧಾರಿತ MIUI 14 ಆಪರೇಟಿಂಗ್ ಸಿಸ್ಟಮ್‌ನಲ್ಲಿ (OS) ಕೆಲಸ ನಿರ್ವಹಿಸುತ್ತದೆ. ಈ ಫೋನ್ 8GB RAM ಮತ್ತು 256GB ಸ್ಟೋರೇಜ್ ಒಳಗೊಂಡಿದೆ. ವರ್ಚುವಲ್ RAMನ 8GB ವರೆಗೆ ಬೆಂಬಲಿಸುತ್ತದೆ.
ಕ್ಯಾಮೆರಾ ಸೆಟಪ್
ರೆಡ್ಮಿ 13C 5G ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 50 ಮೆಗಾಪಿಕ್ಸೆಲ್ ಎಐ (AI) ಕ್ಯಾಮೆರಾಗಳನ್ನು ಹೊಂದಿದೆ. ಜೊತೆಗೆ, 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಸಹ ಲಭ್ಯವಿದೆ. ಇದು, ನೈಟ್ ಮೋಡ್ ಮತ್ತು ಪೋರ್ಟ್ರೇಟ್ ಮೋಡ್ ಅನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 8 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಕಂಪನಿಯು ರೆಡ್ಮಿ 13C 5G ಮೊಬೈಲ್ ಅನ್ನು 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಮಾರುಕಟ್ಟೆಗೆ ಪರಿಚಯಿಸಿದೆ. ಇದನ್ನು ಚಾರ್ಜ್ ಮಾಡಲು, 18W ವೇಗದ ಚಾರ್ಜಿಂಗ್ ಬೆಂಬಲ ಒದಗಿಸಲಾಗಿದೆ.
ಇತರೆ ವೈಶಿಷ್ಟ್ಯಗಳು
ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್ ವೈಫೈ, ಬ್ಲೂಟೂತ್, ಯುಎಸ್‌ಬಿ ಟೈಪ್ ಸಿ ಪೋರ್ಟ್, ಡ್ಯುಯಲ್ ಸಿಮ್ ಕಾರ್ಡ್‌ಗಳನ್ನು ಹೊಂದಿದೆ. ಜಿಪಿಎಸ್ / ಎಜಿಪಿಎಸ್, ಗ್ಲೋನಾಸ್ (Glonass), ಬೀಡೌ (Beidou) ಸಂವೇದಕ ಮತ್ತು 3.5 ಎಂಎಂ ಆಡಿಯೋ ಜಾಕ್ ಒಳಗೊಂಡಿದೆ.


Click it and Unblock the Notifications








