Home
Deal of the day

ಜನ ಮೆಚ್ಚಿದ ಫೋನ್; 50MP ಕ್ಯಾಮೆರಾ.. 5160mAh ಬ್ಯಾಟರಿ.. ಜಸ್ಟ್ 8,299 ರೂ.!

ರೆಡ್ಮಿ ಸಂಸ್ಥೆಯು 2024 ರಲ್ಲಿ ಬಿಡುಗಡೆ ಮಾಡಿದ್ದ ಅಗ್ಗದ ಫೋನಿನ ಬೆಲೆಯನ್ನು ಭಾರೀ ಇಳಿಕೆ ಮಾಡಿದೆ. ಇದು ಅಮೆಜಾನ್‌ನಲ್ಲಿ 8,500 ರೂ.ಗಿ ಕಡಿಮೆಗೆ ದರದಲ್ಲಿ ಮಾರಾಟವಾಗುತ್ತಿದೆ. ಹೌದು, ಹೌದು, ರೆಡ್ಮಿ A4 5G (Redmi A4 5G) ಫೋನಿನ ಖರೀದಿ ಮೇಲೆ ಆಕರ್ಷಕ ರಿಯಾಯಿತಿ ಘೋಷಿಸಿದೆ. ಪ್ರಸ್ತುತ, ಅಮೆಜಾನ್‌ನಲ್ಲಿ ಶೇ.25 ರಷ್ಟು ನೇರ ಡಿಸ್ಕೌಂಟ್ ನೀಡಲಾಗುತ್ತಿದೆ. ಈ ಮೂಲಕ ತನ್ನ ಅಭಿಮಾನಿಗಳಿಗೆ ವ್ಯಾಲೆಂಟೈನ್ಸ್ ಡೇ ಉಡುಗೊರೆ ನೀಡಿದೆ. ಬನ್ನಿ, ಈ ಫೋನಿನ ಹೊಸ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಪ್ರೇಯಸಿ ಅಥವಾ ಪತ್ನಿಗೆ 9,000 ರೂ.ಗಿಂತ ಕಡಿಮೆ ಬೆಲೆಯಲ್ಲಿ ಹೊಸ ಫೋನ್‌ ಗಿಫ್ಟ್‌ ಕೊಡಲು ಬಯಸಿದರೆ, ರೆಡ್ಮಿ A4 5G ಫೋನ್ ಉತ್ತಮ ಆಯ್ಕೆಯಾಗಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಲಭ್ಯವಿದೆ. ಇದು ಸ್ನಾಪ್‌ಡ್ರಾಗನ್ 4s ಜೆನ್ 2 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಮೊಬೈಲ್ 6.88 ಇಂಚಿನ ಡಿಸ್ಪ್ಲೇ ಹೊಂದಿದೆ. ಜೊತೆಗೆ 128GB ಸ್ಟೋರೇಜ್‌, 5160mAh ಬ್ಯಾಟರಿ ಒಳಗೊಂಡಿದೆ. ಅಮೆಜಾನ್‌ನಲ್ಲಿ ಈ ಫೋನಿಗೆ ಯಾವೆಲ್ಲಾ ಆಫರ್‌ಗಳಿವೆ ಎಂಬುವುದನ್ನು ತಿಳಿಯಲು ಮುಂದೆ ಓದಿ.

ಜನ ಮೆಚ್ಚಿದ ಫೋನ್; 50MP ಕ್ಯಾಮೆರಾ.. 5160mAh ಬ್ಯಾಟರಿ.. ಜಸ್ಟ್ 8,299 ರೂ.!

ರೆಡ್ಮಿ A4 5G ಬೆಲೆ ಮತ್ತು ಆಫರ್‌ಗಳು

ರೆಡ್ಮಿ A4 5G ಮೊಬೈಲ್ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. ಈ ಫೋನಿನ 4GB + 64GB ಸ್ಟೋರೇಜ್‌ ವೇರಿಯಂಟ್ ಬೆಲೆ 8,499 ರೂ. ಆಗಿದೆ. ಮತ್ತು 4GB + 128GB ಸ್ಟೋರೇಜ್‌ ರೂಪಾಂತರವು 9,499 ರೂ.ಗೆ ಬಿಡುಗಡೆಯಾಗಿದೆ. ಪ್ರಸ್ತುತ, ಇದು ರಿಯಾಯಿತಿಯೊಂದಿಗೆ ಕೇವಲ 8,299 ರೂ.ಗೆ ಮಾರಾಟವಾಗುತ್ತಿದೆ. ಅಂದರೆ ಇದರ ಮೂಲ ಬೆಲೆಗಿಂತ ಶೇ.25 ರಷ್ಟು ನೇರ ಡಿಸ್ಕೌಂಟ್ ಪಡೆದಿದೆ. ಈ ಮೊಬೈಲ್ ಸ್ಪಾರ್ಕಲ್ ಪರ್ಪಲ್ ಮತ್ತು ಸ್ಟಾರ್ರಿ ಬ್ಲ್ಯಾಕ್ ಬಣ್ಣದಲ್ಲಿ ಖರೀದಿಗೆ ಲಭ್ಯವಿದೆ. ನೀವು ಅಮೆಜಾನ್‌ನಲ್ಲಿ ಈ ಎಲ್ಲಾ ಆಫರ್‌ಗಳ ಲಾಭ ಪಡೆಯಬಹುದು.

ರೆಡ್ಮಿ A4 5G ಫೋನಿನ ಟಾಪ್ 5 ವೈಶಿಷ್ಟ್ಯಗಳು

ದೊಡ್ಡ ಡಿಸ್ಪ್ಲೇ

ರೆಡ್ಮಿ A4 5G ಸ್ಮಾರ್ಟ್‌ಫೋನ್ 6.88 ಇಂಚಿನ ಎಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದು 1640 X 720 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರ, 240Hz ಸ್ಪರ್ಶ ಮಾದರಿ ದರ ಮತ್ತು 600 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಬೆಂಬಲ ಹೊಂದಿದೆ.

ಕ್ವಾಲ್ಕಾಮ್‌ ಪ್ರೊಸೆಸರ್‌

ರೆಡ್ಮಿ A4 5G ಫೋನ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 4s ಜೆನ್ 2 ಪ್ರೊಸೆಸರ್‌ ಹೊಂದಿದೆ. ಇದನ್ನು 4 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ತಯಾರಿಸಲಾಗಿದೆ. ಗ್ರಾಫಿಕ್ಸ್‌ಗಾಗಿ, ಇದು ಅಡ್ರಿನೊ ಜಿಪಿಯು ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್‌ 14 ಆಧಾರಿತ ಹೈಪರ್‌ ಓಎಸ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಸ್ಮಾರ್ಟ್‌ಫೋನ್ 4GB RAM ಮತ್ತು 4GB ವರ್ಚುವಲ್ RAM ಬೆಂಬಲ ಪಡೆದಿದೆ. ಈ ಫೋನಿನಲ್ಲಿ 64GB ಮತ್ತು 128GB ಸ್ಟೋರೇಜ್‌ ಆಯ್ಕೆ ಲಭ್ಯವಿದೆ. ನೀವು, ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ 1TB ವರೆಗೆ ಸ್ಟೋರೇಜ್ ಹೆಚ್ಚಿಸಬಹುದು.

50MP ಡ್ಯುಯಲ್ ಕ್ಯಾಮೆರಾ

ರೆಡ್ಮಿ A4 5G ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದು ಎಲ್ಇಡಿ ಫ್ಲ್ಯಾಷ್ ಮತ್ತು ದ್ವಿತೀಯ ಕ್ಯಾಮೆರಾ ಹೊಂದಿದೆ. ಈ ಫೋನಿನಲ್ಲಿ, ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 5 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾಇದೆ.

ಬೊಂಬಾಟ್ ಬ್ಯಾಟರಿ ಬ್ಯಾಕಪ್

ರೆಡ್ಮಿ A4 5G ಸ್ಮಾರ್ಟ್‌ಫೋನ್ 5160mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 18W ವೇಗದ ಚಾರ್ಜಿಂಗ್ ಸೌಲಭ್ಯ ಮತ್ತು 33W ಅಡಾಪ್ಟರ್ ಒದಗಿಸಲಾಗಿದೆ. ಇದು ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕ ಹೊಂದಿದೆ. ಈ ಮೊಬೈಲ್ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP52 ರೇಟಿಂಗ್ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು 5G, 4G LTE, ಡ್ಯುಯಲ್ ಬ್ಯಾಂಡ್ ವೈ-ಫೈ 5, ಬ್ಲೂಟೂತ್ 5, ಜಿಪಿಎಸ್ ಮತ್ತು ಯುಎಸ್‌ಬಿ ಟೈಪ್ ಸಿ ಪೋರ್ಟ್ ಮತ್ತು 3.5 ಎಂಎಂ ಆಡಿಯೊ ಪೋರ್ಟ್ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ.

Best Mobiles in India

English summary
Redmi A4 5G Available With 25 percent discount in amazon: Check new Price, offers, specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+