Home
Deal of the day

ಹೊಸ Redmi A5 ಬಿಡುಗಡೆಗೂ ಮೊದಲೇ.. ಹಳೆಯ ಫೋನಿನ ಬೆಲೆ ಭಾರೀ ಇಳಿಕೆ! ಜಸ್ಟ್ 8,299ಕ್ಕೆ ಸೇಲ್.. ಖರೀದಿ ಎಲ್ಲಿ?

ರೆಡ್ಮಿ ಪ್ರಿಯರಿಗೆ ಮೂರು ಖುಷಿ ಪಡುವ ಸುದ್ದಿ ಇದೆ. ಶಿಯೋಮಿ ಸಂಸ್ಥೆಯು ಏಪ್ರಿಲ್ 15 ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸ್ಮಾರ್ಟ್‌ವಾಚ್ ಮತ್ತು ಮತ್ತು ಏಪ್ರಿಲ್ 21 ರಂದು ಹೊಸ Redmi A5 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಿದೆ. ಇದಕ್ಕೂ ಮೊದಲೇ ಶಿಯೋಮಿ ಕಂಪನಿಯು ರೆಡ್ಮಿ A4 5G (Redmi A4 5G) ಫೋನಿನ ಬೆಲೆಯನ್ನು ಇಳಿಕೆ ಮಾಡಿದೆ. ನೀವು ಆನ್‌ಲೈನ್ ಶಾಪಿಂಗ್ ಸೈಟ್ ಅಮೆಜಾನ್‌ನಲ್ಲಿ ಈ ಆಫರ್‌ನ ಲಾಭ ಪಡೆಯಬಹುದು. ಈ ಫೋನಿನ ಮೂಲ ಬೆಲೆ, ರಿಯಾಯಿತಿ ಮತ್ತು ವಿಶೇಷತೆಗಳ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಹೌದು, ಆನ್‌ಲೈನ್ ಶಾಪಿಂಗ್ ಸೈಟ್ ಅಮೆಜಾನ್‌ನಲ್ಲಿ ರೆಡ್ಮಿ A4 5G ಮೊಬೈಲ್ ಶೇ.23 ರಷ್ಟು ರಿಯಾಯಿತಿ ಪಡೆದಿದೆ. ನೀವು 9,000 ರೂ.ಗಿಂತಲೂ ಕಡಿಮೆ ಬೆಲೆಗೆ ಈ ಮೊಬೈಲ್‌ ಅನ್ನು ಖರೀದಿಸಬಹುದು. ಈ ಫೋನಿನ ವಿಶೇಷತೆಗಳೆಂದರೆ, ಇದು ಸ್ನಾಪ್‌ಡ್ರಾಗನ್ 4s ಜೆನ್ 2 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಮೊಬೈಲ್ 6.88 ಇಂಚಿನ ದೊಡ್ಡ ಡಿಸ್ಪ್ಲೇ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಎಐ ಡ್ಯುಯಲ್ ಕ್ಯಾಮೆರಾ ಹೊಂದಿದೆ. ಇದು 5160mAh ಬ್ಯಾಟರಿ ಮತ್ತು 128GB ಸ್ಟೋರೇಜ್‌ ಹೊಂದಿದೆ. ಈ ಸ್ಮಾರ್ಟ್‌ಫೋನ್ ರೆಡ್ಮಿ A3 5G ಫೋನಿನ ಉತ್ತರಾಧಿಕಾರಿಯಾಗಿದೆ.

ಜಸ್ಟ್ 8,299 ರೂ.! ಹೊಸ Redmi A5 ಬಿಡುಗಡೆಗೂ ಮೊದಲೇ.. ಹಳೆ ಫೋನಿನ ಬೆಲೆ ಇಳಿಕೆ

ರೆಡ್ಮಿ A4 5G ಹೊಸ ಬೆಲೆ ಮತ್ತು ಆಫರ್‌ಗಳು

ರೆಡ್ಮಿ A4 5G ಫೋನಿನ 4GB + 64GB ಸ್ಟೋರೇಜ್‌ ಆಯ್ಕೆಯನ್ನು 8,499 ರೂ.ಗೆ ಬಿಡುಗಡೆ ಮಾಡಲಾಗಿತ್ತು. 4GB + 128GB ಸ್ಟೋರೇಜ್‌ ರೂಪಾಂತರದ ಬೆಲೆ 9,499 ರೂ. ಆಗಿದೆ. ಈ ಮೊಬೈಲ್ ಸ್ಪಾರ್ಕಲ್ ಪರ್ಪಲ್ ಮತ್ತು ಸ್ಟಾರ್ರಿ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ನೀವು, ರಿಯಾಯಿತಿಯೊಂದಿಗೆ 64GB ಸ್ಟೋರೇಜ್‌ ಆಯ್ಕೆಯನ್ನು 8,299 ರೂ.ಗೆ ಖರೀದಿಸಬಹುದು. ಅಮೆಜಾನ್‌ನಲ್ಲಿ ಈ ಎಲ್ಲಾ ಆಫರ್‌ಗಳ ಲಾಭ ಪಡೆಯಬಹುದು.

ರೆಡ್ಮಿ A4 5G ವೈಶಿಷ್ಟ್ಯಗಳು

ರೆಡ್ಮಿ A4 5G ಮೊಬೈಲ್ 6.88 ಇಂಚಿನ ಹೆಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದು 1640 X 720 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರ, 240Hz ಸ್ಪರ್ಶ ಮಾದರಿ ದರ ಮತ್ತು 600 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಬೆಂಬಲ ಹೊಂದಿದೆ. ಈ ಫೋನ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 4s ಜೆನ್ 2 ಪ್ರೊಸೆಸರ್‌ ಹೊಂದಿದೆ. ಈ ಪ್ರೊಸೆಸರ್ ಅನ್ನು 4 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ನಿರ್ಮಿಸಲಾಗಿದೆ. ಇದು ಗ್ರಾಫಿಕ್ಸ್‌ಗಾಗಿ, ಅಡ್ರಿನೊ ಜಿಪಿಯು ಸಹ ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್‌ 14 ಆಧಾರಿತ ಹೈಪರ್‌ ಆಪರೇಟಿಂಗ್ ಸಿಸ್ಟಂನಲ್ಲಿ ಕೆಲಸ ಮಾಡುತ್ತದೆ.

ರೆಡ್ಮಿ A4 5G ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇದೆ. ಇದು ಎಲ್ಇಡಿ ಫ್ಲ್ಯಾಷ್ ಮತ್ತು ಸೆಕೆಂಡರಿ ಕ್ಯಾಮೆರಾ ಹೊಂದಿದೆ. ಈ ಫೋನಿನಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 5 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಲಭ್ಯವಿದೆ. ಈ ಫೋನ್ 5160mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 18W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಹಾಗೆಯೇ, 33W ಅಡಾಪ್ಟರ್ ಸಹ ಲಭ್ಯವಿದೆ.

ರೆಡ್ಮಿ A4 5G ಫೋನ್ 4GB RAM ಹೊಂದಿದೆ. ಈ ಫೋನಿನಲ್ಲಿ 64GB ಮತ್ತು 128GB ಸ್ಟೋರೇಜ್‌ ಆಯ್ಕೆ ಲಭ್ಯವಿದೆ. ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ 1TB ವರೆಗೆ ಸ್ಟೋರೇಜ್ ವಿಸ್ತರಿಸಬಹುದು. ಈ ಮೊಬೈಲ್ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP52 ರೇಟಿಂಗ್ ಪಡೆದಿದೆ. ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್ 5G, 4G LTE, ಡ್ಯುಯಲ್ ಬ್ಯಾಂಡ್ ವೈ-ಫೈ 5, ಬ್ಲೂಟೂತ್ 5, ಜಿಪಿಎಸ್ ಮತ್ತು ಯುಎಸ್‌ಬಿ ಟೈಪ್ ಸಿ ಪೋರ್ಟ್ ಮತ್ತು 3.5 ಎಂಎಂ ಆಡಿಯೊ ಪೋರ್ಟ್ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

Best Mobiles in India

English summary
Redmi A4 5G Price Drop in India Ahead of Redmi A5 Launch on April 15: Check offer Price, specifications and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+