Home
Deal of the day

Amazon: ಈ Redmi 5G ಫೋನಿಗೆ ಧಮಾಕಾ ಆಫರ್! ಕಡಿಮೆ ಬೆಲೆಗೆ ಮಾರಾಟ

ದೀಪಾವಳಿ ಬಂದಿದೆ, ಆಫರ್‌ಗಳ ಸುರಿಮಳೆ ತಂದಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಎಲ್ಲಾ ಆನ್‌ಲೈನ್ ಶಾಪಿಂಗ್ ಸೈಟ್‌ಗಳಲ್ಲಿ ವಿಶೇಷ ಮಾರಾಟ (ಫೆಸ್ಟಿವಲ್ ಸೇಲ್) ನಡೆಯುತ್ತಿದೆ. ಇದರಲ್ಲಿ ಹಲವು ಉತ್ಪನ್ನಗಳ ಮೇಲೆ ಬಂಪರ್ ಆಫರ್‌ಗಳನ್ನು ನೀಡಲಾಗುತ್ತಿದೆ. ಅದರಂತೆಯೇ, ಇದೀಗ ಅಮೆಜಾನ್‌ನಲ್ಲಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ (Amazon Great Indian Festival 2024) ಕೂಡ ನಡೆಯುತ್ತಿದೆ. ಇದರಲ್ಲಿ ನೀವು ಅನೇಕ ಆಫರ್‌ಗಳ ಲಾಭ ಪಡೆಯಬಹುದು. ಈ ರೆಡ್ಮಿ 5G ಫೋನನ್ನು ಕಡಿಮೆ ಬೆಲೆಗೆ ಕೊಳ್ಳಬಹುದು.

ಹೌದು, ಶಿಯೋಮಿ ಕಂಪನಿಯ ರೆಡ್ಮಿ ನೋಟ್ (Redmi Note) ಸರಣಿಯ ರೆಡ್ಮಿ ನೋಟ್ 13 5G (Redmi Note 13 5G) ಸ್ಮಾರ್ಟ್‌ಫೋನ್ ಮೇಲೆ ರಿಯಾಯಿತಿ ಘೋಷಿಸಲಾಗಿದೆ. ಈ ಮೊಬೈಲ್ ಅನ್ನು 15,000 ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸುವ ಸುವರ್ಣಾವಕಾಸ ಕಲ್ಪಿಸಲಾಗಿದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6080 ಪ್ರೊಸೆಸರ್ ಹೊಂದಿದೆ. ಇದರಲ್ಲಿ 6.67 ಇಂಚಿನ ಪೋಲೆಡ್ ಡಿಸ್ಪ್ಲೇ ಲಭ್ಯವಿದೆ. 108 ಮೆಗಾಪಿಕ್ಸೆಲ್ ಕ್ಯಾಮೆರಾ, 5000mAh ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Amazon: ಈ Redmi 5G ಫೋನಿಗೆ ಧಮಾಕಾ ಆಫರ್! ಕಡಿಮೆ ಬೆಲೆಗೆ ಮಾರಾಟ

ರೆಡ್ಮಿ ನೋಟ್ 13 5G ಹೊಸ ಬೆಲೆ ಮತ್ತು ಆಫರ್‌ಗಳು

8GB RAM + 256GB ಸ್ಟೋರೇಜ್ ಬೆಲೆ = 20,999 ರೂ.

ಆಫರ್‌ ಬೆಲೆ = 14,999 ರೂ. (24% ರಿಯಾಯಿತಿ)

6GB RAM ಮತ್ತು 128GB ಸ್ಟೋರೇಜ್ ಹೊಂದಿರುವ ರೆಡ್ಮಿ ನೋಟ್ 13 5G ​​ರೂಪಾಂತರವನ್ನು ಅಮೇಜಾನ್‌ ಸೇಲ್‌ನಲ್ಲಿ 15,000 ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಲು ಅವಕಾಶವಿದೆ. ಈ ಫೋನನ್ನು ಅಮೆಜಾನ್‌ನಲ್ಲಿ 15,999 ರೂ. ಬೆಲೆಯಲ್ಲಿ ಪಟ್ಟಿ ಮಾಡಲಾಗಿದೆ. ನೀವು, ಯಾವುದೇ ಬ್ಯಾಂಕ್‌ನ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡಿದರೆ, 1,000 ರೂ. ರಿಯಾಯಿತಿ ಪಡೆಯಬಹುದು. ಡಿಸ್ಕೌಂಟ್ ಬಳಿಕ ಈ ಫೋನಿನ ಬೆಲೆ ಮತ್ತಷ್ಟು ಕಡಿಮೆಯಾಗಲಿದೆ. ನೀವು, 14,999 ರೂ.ಗೆ ಈ ಫೋನ್ ಖರೀದಿಸಬಹುದು.

ಕಂಪನಿಯು ಎಕ್ಸ್‌ಚೇಂಜ್ ಆಫರ್ ಸಹ ನೀಡುತ್ತಿದೆ. ನಿಮ್ಮ ಹಳೆಯ ಮೊಬೈಲ್ ಅನ್ನು ನೀವು ಎಕ್ಸ್‌ಚೇಂಜ್ ಮಾಡಿಕೊಳ್ಳಲು ಬಯಸಿದರೆ, 15,199 ರೂ.ಗಳ ನೇರ ರಿಯಾಯಿತಿಯನ್ನು ಪಡೆಯಬಹುದು. ಆದರೆ, ಈ ಎಕ್ಸ್‌ಚೇಂಜ್ ಆಫರ್‌ ನಿಮ್ಮ ಹಳೆಯ ಫೋನಿನ ಸ್ಥಿತಿಯನ್ನು ಅವಲಂಬಿಸಿರುತ್ತದೆ. ನೀವು, ಈ ಸ್ಮಾರ್ಟ್‌ಫೋನ್‌ ಅನ್ನು ಸ್ಟೆಲ್ತ್ ಬ್ಲಾಕ್, ಆರ್ಕ್ಟಿಕ್ ವೈಟ್, ಕ್ರೋಮ್ಯಾಟಿಕ್ ಪರ್ಪಲ್ ಮತ್ತು ಪ್ರಿಸ್ಮ್ ಗೋಲ್ಡ್ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಸಬಹುದು. ಅಮೆಜಾನ್‌ನಲ್ಲಿ ಈ ಎಲ್ಲಾ ಆಫರ್‌ಗಳ ಲಾಭ ಪಡೆಯಿರಿ.

ರೆಡ್ಮಿ ನೋಟ್ 13 5G ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ರೆಡ್ಮಿ ನೋಟ್ 13 5G ಫೋನ್ 6.67 ಇಂಚಿನ ಪೂರ್ಣ ಎಚ್‌ಡಿ ಪ್ಲಸ್ ಪೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ದರ ಮತ್ತು 1,000 ನಿಟ್ಸ್‌ಗಳ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಡಿಸ್ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಕಂಪನಿಯು ರೆಡ್ಮಿ ನೋಟ್ 13 5G ಫೋನಿನಲ್ಲಿ ಮೀಡಿಯಾ ಟೆಕ್ ಡೈಮೆನ್ಸಿಟಿ 6080 ಪ್ರೊಸೆಸರ್‌ ಅನ್ನು ಅಳವಡಿಸಿದೆ. ಇದು 12GB RAM ವರೆಗೆ ಬೆಂಬಲವನ್ನು ಹೊಂದಿದೆ.

ಕ್ಯಾಮೆರಾ ಸೆಟಪ್

ರೆಡ್ಮಿ ನೋಟ್ 13 5G ಫೋನ್‌ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 108 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಒಳಗೊಂಡಿದೆ. ಸೆಲ್ಫಿ ಪ್ರಿಯರಿಗಾಗಿ, ಈ ಫೋನಿನಲ್ಲಿ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿದೆ.

ಬ್ಯಾಟರಿ ಬ್ಯಾಕಪ್

ಕಂಪನಿಯು ರೆಡ್ಮಿ ನೋಟ್ 13 5G ಅನ್ನು 5,000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಮಾರುಕಟ್ಟೆಗೆ ಪರಿಚಯಿಸಿದೆ. ಇದು 33W ವೇಗದ ಚಾರ್ಜಿಂಗ್ ಬೆಂಬಲ ಪಡೆದಿದೆ.

Best Mobiles in India

English summary
Redmi Note 13 5G available With 24% discount on Amazon: know offer price and specs
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+