Home
Deal of the day

ಧಮಾಕಾ ಆಫರ್! ಕೇವಲ 13,719 ರೂ.! 108MP ಕ್ಯಾಮೆರಾ, 5000mAh ಬ್ಯಾಟರಿ; ಯಾವ ಫೋನ್?

ಅಮೆಜಾನ್ ಬಂಪರ್‌ ಆಫರ್‌ಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ಪ್ರಸಿದ್ಧ ಕಂಪನಿಗಳ ಒಂದಿಲ್ಲೊಂದು ಮೊಬೈಲ್‌ನ ಮೇಲೆ ಭರ್ಜರಿ ಡಿಸ್ಕೌಂಟ್ ನೀಡುತ್ತಿದೆ. ಅದರಂತೆ, ಶಿಯೋಮಿ ಕಂಪನಿಯ ರೆಡ್ಮಿ ನೋಟ್ 13 5G (Redmi Note 13 5G) ಫೋನನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ನೀವು, ಈ ಮೊಬೈಲ್ ಖರೀದಿ ಮೇಲೆ 4,000 ರೂ. ಗಿಂತ ಹೆಚ್ಚು ರಿಯಾಯಿತಿಯ ಲಾಭ ಪಡೆಯಬಹುದು. ಬನ್ನಿ, ಈ ಫೋನಿನ ಬೆಲೆ, ಆಫರ್‌ಗಳು ಮತ್ತು ವಿಶೇಷತೆಗಳನ್ನು ತಿಳಿಯೋಣ.

ರೆಡ್ಮಿ ನೋಟ್ 13 5G ಸ್ಮಾರ್ಟ್‌ಫೋನ್ ಈ ವರ್ಷದ ಜನವರಿಯಲ್ಲಿ ಬಿಡುಗಡೆಯಾಗಿತ್ತು. ಇದು ಕಂಪನಿಯ ಹಗುರ ಮತ್ತು ತೆಳ್ಳಗಿನ 5G ಮೊಬೈಲ್ ಆಗಿದೆ. ನೀವು ಮೂರು ಸ್ಟೋರೇಜ್ ಆಯ್ಕೆಗಳಲ್ಲಿ ಖರೀದಿಸಬಹುದು. ಈ ಫೋನ್ 108 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6080 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಈ ಫೋನ್ 6.67 ಇಂಚಿನ ಡಿಸ್ಪ್ಲೇ, 5000mAh ಬ್ಯಾಟರಿ ಮತ್ತು 33W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಕೇವಲ 13,719 ರೂ.! 108MP ಕ್ಯಾಮೆರಾ.. 5000mAh ಬ್ಯಾಟರಿ.. ಅದೂ Redmi ಫೋನ್?

ರೆಡ್ಮಿ ನೋಟ್ 13 5G ಬೆಲೆ ಮತ್ತು ಆಫರ್‌ಗಳು

ಕಂಪನಿಯು ರೆಡ್ಮಿ ನೋಟ್ 13 5G ಫೋನಿನ 6GB RAM + 128GB ಸ್ಟೋರೇಜ್ ರೂಪಾಂತರವನ್ನು 17,999 ರೂ.ಗೆ ಬಿಡುಗಡೆ ಮಾಡಿತ್ತು. ಪ್ರಸ್ತುತ, ಅಮೆಜಾನ್‌ನಲ್ಲಿ ಶೇ.24 ರಷ್ಟು ರಿಯಾಯಿತಿ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ. ನೀವು, ಈ ಫೋನನ್ನು 3,780 ರೂ.ಗಳ ಡಿಸ್ಕೌಂಟ್‌ನೊಂದಿಗೆ ಕೇವಲ 14,219 ರೂ.ಗೆ ಖರೀದಿಸಬಹುದು.

ಜೊತೆಗೆ, ಸೌತ್ ಇಂಡಿಯನ್ ಬ್ಯಾಂಕ್ ಡೆಬಿಟ್ ಕಾರ್ಡ್ ಪಾವತಿ ಮೇಲೆ 500 ರೂ. ರಿಯಾಯಿತಿ ಸಹ ಲಭ್ಯವಿದೆ. ಬಳಿಕ, ಈ ಫೋನಿನ ಬೆಲೆ 13,719 ರೂ.ಗೆ ಇಳಿಕೆಯಾಗಲಿದೆ. ಈ ಮೊಬೈಲ್ ಸ್ಟೆಲ್ತ್ ಬ್ಲಾಕ್, ಆರ್ಕ್ಟಿಕ್ ವೈಟ್, ಕ್ರೋಮ್ಯಾಟಿಕ್ ಪರ್ಪಲ್ ಮತ್ತು ಪ್ರಿಸ್ಮ್ ಗೋಲ್ಡ್ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ.

ರೆಡ್ಮಿ ನೋಟ್ 13 5G ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ರೆಡ್ಮಿ ನೋಟ್ 13 5G ಮೊಬೈಲ್ 6.67 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಪೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಇದು 1000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಮತ್ತು 120Hz ರಿಫ್ರೆಶ್ ದರದ ಬೆಂಬಲ ಪಡೆದಿದೆ. ಡಿಸ್ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ರೆಡ್ಮಿ ನೋಟ್ 13 5G ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6080 ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಿದೆ. ಈ ಮೊಬೈಲ್ 12GB RAM ಮತ್ತು 128GB ಸ್ಟೋರೇಜ್ ಆಯ್ಕೆ ಹೊಂದಿದೆ.

ಕೇವಲ 13,719 ರೂ.! 108MP ಕ್ಯಾಮೆರಾ.. 5000mAh ಬ್ಯಾಟರಿ.. ಅದೂ Redmi ಫೋನ್?

ಕ್ಯಾಮೆರಾ ಸೆಟಪ್

ರೆಡ್ಮಿ ನೋಟ್ 13 5G ಸ್ಮಾರ್ಟ್‌ಫೋನ್‌ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಫೋನಿನಲ್ಲಿ 108 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಇದೆ. ಜೊತೆಗೆ, 8 ಮೆಗಾಪಿಕ್ಸೆಲ್ ದ್ವಿತೀಯ (ಅಲ್ಟ್ರಾ ವೈಡ್) ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ತೃತೀಯ (ಮ್ಯಾಕ್ರೋ) ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ರೆಡ್ಮಿ ನೋಟ್ 13 5G ಮೊಬೈಲ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್‌ ಮಾಡಲು, 33W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ಇತರೆ ವೈಶಿಷ್ಟ್ಯಗಳು

ರೆಡ್ಮಿ ನೋಟ್ 13 5G ಫೋನ್ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP54 ರೇಟಿಂಗ್ ಪಡೆದಿದೆ. ಡ್ಯುಯಲ್ ಸಿಮ್ ಸಂಪರ್ಕ, 3.5 ಎಂಎಂ ಹೆಡ್‌ಫೋನ್ ಜ್ಯಾಕ್, ಐಆರ್ ಬ್ಲಾಸ್ಟ್ ಮತ್ತು ಸೈಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಸಹ ಹೊಂದಿದೆ.

Best Mobiles in India

English summary
Redmi Note 13 5G available with 30 percent discount on amazon: check new price, offers, availability specs and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+