Home
Deal of the day

ಆಫರ್‌ ಹುಡುಕುತ್ತಿರುವವರು ಇದನ್ನು ನೋಡಿ..! Redmi Note 13 5G ಫೋನ್ ಬೆಲೆ ಭಾರಿ ಕಡಿತ

ಡಿಸ್ಕೌಂಟ್‌ ಹುಡುಕುತ್ತಿರುವವರು ತಪ್ಪದೇ ಈ ಸುದ್ದಿ ಓದಿ. Redmiಯ ಈ ಮೊಬೈಲ್‌ ಬೆಲೆಯಲ್ಲಿ ಭಾರಿ ಕಡಿತವಾಗಿದೆ. ಹೌದು, ಉತ್ತಮ ಫೀಚರ್‌ಗಳೊಂದಿಗೆ ಬಿಡುಗಡೆಯಾಗಿರುವ ಸ್ಮಾರ್ಟ್‌ಫೋನ್‌ಗಳು ಕೆಲ ದಿನಗಳ ನಂತರ ಬೆಲೆ ಇಳಿಕೆಯಾಗುವುದು ಸಾಮಾನ್ಯ. ಹೊಸ ಫೋನ್‌ಗಳು ಉತ್ತಮ ಫೀಚರ್ಸ್‌ಗಳೊಂದಿಗೆ ಬಂದರೂ ಬೆಲೆಗಳು ಕಡಿಮೆಯಾಗದಿದ್ದರೆ ಆಶ್ಚರ್ಯವಾಗುತ್ತದೆ. Redmi Note 13 5G ಕಳೆದ ವರ್ಷ ಬಿಡುಗಡೆಯಾದ Redmi Note 13 ಸರಣಿಯ ಅಗ್ಗದ ಮೊಬೈಲ್‌ ಆಗಿದೆ. ಈ ಸ್ಮಾರ್ಟ್‌ಫೋನ್ ಈಗ ಅದರ ಮೂಲ ಬೆಲೆಗಿಂತ ಕಡಿಮೆ ಬೆಲೆಗೆ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯವಿದೆ. ಇದಲ್ಲದೆ, ಅಮೆಜಾನ್‌ನಲ್ಲಿಯೂ ಡಿಸ್ಕೌಂಟ್‌ನಲ್ಲಿ ಲಭ್ಯವಿದೆ. ಆದರೆ, ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಿದರೆ ನಿಮ್ಮ ಜೇಬಿನ ಭಾರ ಮನ್ನಷ್ಟು ಕಡಿಮೆಯಾಗಲಿದೆ.

Realme Note 13 5Gಯ ​​ಆರಂಭಿಕ ರೂಪಾಂತರವು ಭಾರತದಲ್ಲಿ ಬಿಡುಗಡೆಯಾದ ಸಮಯದಲ್ಲಿ 17,999 ರೂ. ಇತ್ತು. ಆದರೆ, ಪ್ರಸ್ತುತ ಫ್ಲಿಪ್‌ಕಾರ್ಟ್ ಈ 5G ಸ್ಮಾರ್ಟ್‌ಫೋನ್ ಅನ್ನು 16,245 ರೂ.ಗೆ ಪಟ್ಟಿ ಮಾಡಿದೆ. Amazon ನಿಂದ Redmi Note 13 5G ಅನ್ನು 15,499 ರೂ.ಗೆ ಖರೀದಿಸಬಹುದು. ಇದಲ್ಲದೆ, ಮತ್ತೆ ಬೆಲೆಯನ್ನು ಕಡಿಮೆ ಮಾಡಲು ಸಹಾಯವಾಗುವಂತೆ ಕೆಲವು ಆಫರ್‌ಗಳನ್ನು ಸಹ ಘೋಷಿಸಿದೆ.

ಆಫರ್‌ ಹುಡುಕುತ್ತಿರುವವರು ಇದನ್ನು ನೋಡಿ..! Redmi Note 13 5G ಬೆಲೆ ಭಾರಿ ಕಡಿತ

14,999 ರೂ.ಗೆ ಖರೀದಿಸುವ ಅವಕಾಶ

HDFC ಕ್ರೆಡಿಟ್ ಕಾರ್ಡ್ EMI ವಹಿವಾಟುಗಳನ್ನು ಬಳಸಿಕೊಂಡು ನೀವು Redmi Note 13 5G ಅನ್ನು ಖರೀದಿಸಿದರೆ, 1,250 ರೂ.ಗಳ ಡಿಸ್ಕೌಂಟ್‌ ಅನ್ನು ಪಡೆಯಬಹುದು. ನೀವು ಈ ಆಫರ್‌ನ ಲಾಭವನ್ನು ಪಡೆದರೆ ಫ್ಲಿಪ್‌ಕಾರ್ಟ್‌ನಲ್ಲಿ ಈ ಸ್ಮಾರ್ಟ್‌ಫೋನ್ 14,999 ರೂ. ಬೆಲೆಯಲ್ಲಿ ಲಭ್ಯವಿದೆ. ಈ Redmi 5G ಫೋನ್ Amazon ನಲ್ಲಿಯೂ ಲಭ್ಯವಿದೆ.

Amazonನಲ್ಲಿ 1,500 ರೂ. ಡಿಸ್ಕೌಂಟ್

Redmi Note 13 5Gನ ಮೂಲ ಮಾದರಿಯ ಬೆಲೆ Amazon ನಲ್ಲಿ 16,999 ರೂ. ಇದೆ. ಇದಲ್ಲದೇ ಆಯ್ದ ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿದರೆ 1,500 ರೂ. ವರೆಗೆ ಡಿಸ್ಕೌಂಟ್ ದೊರೆಯಲಿದೆ. ಈ ಕೊಡುಗೆಯ ಲಾಭವನ್ನು ಪಡೆದರೆ, ನೀವು Amazon ನಿಂದ Redmi Note 13 5G ಅನ್ನು 15,499 ರೂ. ದರದಲ್ಲಿ ಖರೀದಿಸಬಹುದು. ನೀವು Amazon ಮತ್ತು Flipkart ನಲ್ಲಿನ ಆಫರ್‌ಗಳನ್ನು ಪರಿಶೀಲಿಸಿದರೆ, Flipkart ಹೆಚ್ಚು ಲಾಭದಾಯಕವಾಗಿದೆ.

Redmi Note 13 5Gನ ಪ್ರಮುಖ ವಿಶೇಷತೆಗಳು

Redmi Note 13 5G ಭಾರತದಲ್ಲಿ ಅತ್ಯಂತ ಜನಪ್ರಿಯ Redmi ಸ್ಮಾರ್ಟ್‌ಫೋನ್ ಮಾದರಿಯಾಗಿದೆ. ಈ ಫೋನ್ 108MP ಕ್ಯಾಮೆರಾ, 5000mAh ಸಾಮರ್ಥ್ಯದ ಬ್ಯಾಟರಿ ಮತ್ತು ವೇಗದ ಚಾರ್ಜಿಂಗ್ ಸೌಲಭ್ಯದಂತಹ ಅನೇಕ ಉತ್ತಮ ಫೀಚರ್ಸ್‌ಗಳನ್ನು ಹೊಂದಿದೆ. ಇದು MediaTek ಡೈಮೆನ್ಸಿಟಿ 6080 ಪ್ರೊಸೆಸರ್‌ನೊಂದಿಗೆ ಕೆಲಸ ನಿರ್ವಹಿಸಲಿದೆ. ಇದು 6.67-ಇಂಚಿನ AMOLED ಡಿಸ್ಪ್ಲೇ, 120Hz ರಿಫ್ರೆಶ್ ರೇಟ್, 1080x2400 ಪಿಕ್ಸೆಲ್‌ಗಳು, 11,000nits ಬ್ರೈಟ್‌ನೆಸ್ ಮತ್ತು ಗೊರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಪಡೆದಿದೆ.

108MP ಮುಖ್ಯ ಕ್ಯಾಮೆರಾ, 16 MP ಫ್ರಂಟ್‌ ಕ್ಯಾಮೆರಾ

ರೆಡ್ಮಿ ನೋಟ್ 13 5G ಸ್ಮಾರ್ಟ್‌ಫೋನ್ 108MP ಮುಖ್ಯ ಕ್ಯಾಮೆರಾದಿಂದ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಮುಖ್ಯ ಸಂವೇದಕದೊಂದಿಗೆ 8MP ಅಲ್ಟ್ರಾ-ವೈಡ್ ಸಂವೇದಕ ಮತ್ತು 2MP ಮ್ಯಾಕ್ರೋ ಸಂವೇದಕ ಬರುತ್ತದೆ. ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 16 MP ಫ್ರಂಟ್‌ ಕ್ಯಾಮೆರಾ ಹೊಂದಿದೆ. ಈ ರೆಡ್ಮಿ ನೋಟ್ 13 5G ಫೋನ್, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಸೇರಿದಂತೆ ಹಲವು ವಿಶೇಷತೆಗಳನ್ನು ಹೊಂದಿದೆ.

5,000mAh ಬ್ಯಾಟರಿ ಬ್ಯಾಕಪ್‌, 33W ಸ್ಪೀಡ್ ಚಾರ್ಜಿಂಗ್

ಈ ಫೋನ್ 33W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್‌ ಅನ್ನು ಹೊಂದಿದೆ. ಇದು 6GB, 8GB ಮತ್ತು 12GBಯ ಮೂರು RAM ಆಯ್ಕೆಗಳನ್ನು ಮತ್ತು 128GB ಮತ್ತು 256GBಯ ಎರಡು ಸ್ಟೋರೇಜ್‌ ಆಯ್ಕೆಗಳನ್ನು ಒಳಗೊಂಡಿದೆ. ರೆಡ್ಮಿ ನೋಟ್ 13 5G ಅನ್ನು Android 13 ಆಧರಿಸಿ ಬಿಡುಗಡೆ ಮಾಡಲಾಗಿದೆ. ಆದರೆ, ಕಂಪನಿಯು ಮೂರು ವರ್ಷಗಳ Android ಅಪ್ಡೇಟ್‌ಗಳನ್ನು ಮತ್ತು ನಾಲ್ಕು ವರ್ಷಗಳ ಭದ್ರತಾ ಅಪ್ಡೇಟ್‌ಗಳನ್ನು ನೀಡುತ್ತಿದೆ.

Best Mobiles in India

English summary
Redmi Note 13 5G Now Available in a huge discount on flipkart: Check price, offers and specifications
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+