Redmi: 5G ಫೋನ್ ಬೆಲೆ ಇಳಿಕೆ; 200MP ಕ್ಯಾಮೆರಾ, 67W ಚಾರ್ಜಿಂಗ್.. ಈ ಆಫರ್ ಬಿಡಬೇಡಿ!
ರೆಡ್ಮಿ ತನ್ನ ಅಭಿಮಾನಿಗಳಿಗೆ ಖುಷಿ ಸುದ್ದಿಯೊಂದನ್ನು ನೀಡಿದೆ. ತನ್ನ ಬಹುನಿರೀಕ್ಷಿತ ರೆಡ್ಮಿ ನೋಟ್ 13 ಪ್ರೊ 5G (Redmi Note 13 Pro 5G) ಮೊಬೈಲ್‌ನ ಬೆಲೆಯನ್ನು ಇಳಿಕೆ ಮಾಡಿದೆ. ನೀವು ಹೊಸ 5G ಫೋನ್ ಖರೀದಿಸಲು ಬಯಸಿದರೆ ರೆಡ್ಮಿ ನೋಟ್ 13 ಪ್ರೊ 5G ಉತ್ತಮ ಆಯ್ಕೆಯಾಗಿದೆ. ಈ ಸ್ಮಾರ್ಟ್‌ಫೋನ್ 200 ಮೆಗಾಪಿಕ್ಸೆಲ್ ಕ್ಯಾಮೆರಾ, 5100mAh ಬ್ಯಾಟರಿ ಮತ್ತು 67W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ಅತ್ಯಾಕರ್ಷಕ ವೈಶಿಷ್ಟ್ಯಗಳೊಂದಿಗೆ ಮಾರಾಟವಾಗುತ್ತಿದೆ.
ಹೌದು, ಫ್ಲಿಪ್‌ಕಾರ್ಟ್ ವಿಶೇಷ ಮಾರಾಟದಲ್ಲಿ ರೆಡ್ಮಿ ನೋಟ್ 13 ಪ್ರೊ 5G ಸ್ಮಾರ್ಟ್‌ಫೋನ್ ಬರೋಬ್ಬರಿ 18,982 ರೂ.ಗಳ ರಿಯಾಯಿತಿಯಲ್ಲಿ ಮಾರಾಟವಾಗುತ್ತಿದೆ. ಆಯ್ದ ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿ ಈ ಫೋನ್ ಖರೀದಿಸಿದರೆ, ಹೆಚ್ಚುವರಿಯಾಗಿ 1,500 ರೂ. ರಿಯಾಯಿತಿಯೂ ಸಿಗುತ್ತದೆ. ಇದರೊಂದಿಗೆ ಈ ಫೋನನ್ನು 17,482 ರೂ. ಬೆಲೆಯಲ್ಲಿ ಖರೀದಿಸಬಹುದು. ರೆಡ್ಮಿ ನೋಟ್ 13 ಪ್ರೊ 5G ಫೋನಿನ ಇನ್ನಿತರ ವೈಶಿಷ್ಟ್ಯಗಳನ್ನು ತಿಳಿಯಲು ಮುಂದೆ ಓದಿ.

ಕಂಪನಿಯು ರೆಡ್ಮಿ ನೋಟ್ 13 ಪ್ರೊ 5G ಸ್ಮಾರ್ಟ್‌ಫೋನ್ ಅನ್ನು ಕಳೆದ ವರ್ಷ ಬಿಡುಗಡೆ ಮಾಡಿತ್ತು. ಆಗ ಮಿಡ್‌ನೈಟ್ ಬ್ಲಾಕ್, ಅರೋರಾ ಪರ್ಪಲ್ ಮತ್ತು ಓಷನ್ ಟೀಲ್ ಬಣ್ಣದ ಆಯ್ಕೆಗಳಲ್ಲಿ ಪರಿಚಯಿಸಿತ್ತು. ಬಳಿಕ ಆಲಿವ್ ಗ್ರೀನ್ ಬಣ್ಣದ ರೂಪಾಂತರವನ್ನು ಬಿಡುಗಡೆ ಮಾಡಿತ್ತು. ಇದು ಮೂರು ವೇರಿಯಂಟ್ ಆಯ್ಕೆ ಪಡೆದಿದೆ. 8GB + 128GB, 12GB + 256GB, 16GB + 512GB ಸ್ಟೋರೇಜ್ ಆಯ್ಕೆಯಲ್ಲಿ ಮಾರಾಟವಾಗುತ್ತಿದೆ.
ರೆಡ್ಮಿ ನೋಟ್ 13 ಪ್ರೊ 5G ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ರೆಡ್ಮಿ ನೋಟ್ 13 ಪ್ರೊ 5G ಸ್ಮಾರ್ಟ್‌ಫೋನ್ 6.67 ಇಂಚಿನ ಪೂರ್ಣ ಎಚ್‌ಡಿ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿವೆ. ಇದು 1220 x 2712 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್, 1800 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ. ಡಿಸ್ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆ ಪಡೆದಿದೆ.
ಪ್ರೊಸೆಸರ್ ಸಾಮರ್ಥ್ಯ
ರೆಡ್ಮಿ ನೋಟ್ 13 ಪ್ರೊ 5G ಮೊಬೈಲ್ ಸ್ನಾಪ್‌ಡ್ರಾಗನ್ 7s ಜೆನ್ 2 ಪ್ರೊಸೆಸರ್ ಅನ್ನು ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಕೆಲಸ ನಿರ್ವಹಿಸಲಿದೆ. ಇದರೊಂದಿಗೆ, ಇತ್ತೀಚೆಗೆ ಹೈಪರ್ ಓಎಸ್‌ನೊಂದಿಗೆ ಆಂಡ್ರಾಯ್ಡ್ 14 ನವೀಕರಣವನ್ನು ಪಡೆದುಕೊಂಡಿದೆ. ಈ ಸ್ಮಾರ್ಟ್‌ಫೋನ್ 8GB RAM ಮತ್ತು 128GB ಸ್ಟೋರೇಜ್ ಹೊಂದಿದೆ. ಮೆಮೊರಿ ಕಾರ್ಡ್ ಅನ್ನು ಬಳಸಲು ಮೈಕ್ರೋ SD ಕಾರ್ಡ್ ಸ್ಲಾಟ್ ಬೆಂಬಲವನ್ನು ಹೊಂದಿದೆ.
ಕ್ಯಾಮೆರಾ ಸೆಟಪ್
ರೆಡ್ಮಿ ನೋಟ್ 13 5G ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ 200 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಇದೆ. ದ್ವಿತೀಯ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಒಳಗೊಂಡಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 16 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ.
ಬ್ಯಾಟರಿ ಬ್ಯಾಕಪ್
ಈ ರೆಡ್ಮಿ ಸ್ಮಾರ್ಟ್‌ಫೋನ್ 5,100mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಫೋನ್ ಬ್ಯಾಟರಿಯನ್ನು ಚಾರ್ಜ್ ಮಾಡಲು 67W ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ. ಈ ಫೋನ್ ಇಡೀ ದಿನ ಬ್ಯಾಟರಿ ಬ್ಯಾಕಪ್ ನೀಡುತ್ತದೆ.
ಇತರೆ ವೈಶಿಷ್ಟ್ಯಗಳು
ರೆಡ್ಮಿ ನೋಟ್ 13 5G ಮೊಬೈಲ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP54 ರೇಟಿಂಗ್ ಪಡೆದಿದೆ. ಇದು ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ ಬೆಂಬಲದೊಂದಿಗೆ ಬರುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, ಡ್ಯುಯಲ್ ಬ್ಯಾಂಡ್, ವೈ-ಫೈ, ಬ್ಲೂಟೂತ್ 5.3, ಜಿಪಿಎಸ್, 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಮತ್ತು ಯುಎಸ್‌ಬಿ ಟೈಪ್ ಸಿ ಪೋರ್ಟ್ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.


Click it and Unblock the Notifications








