Redmi Note 14 Pro ಖರೀದಿಗೆ ಭಾರಿ ರಿಯಾಯಿತಿ!..ಮಿಸ್ ಮಾಡದಿರುವ ಆಫರ್!
ನೀವು ಮಧ್ಯಮ ಬೆಲೆಯ ವಿಭಾಗದಲ್ಲಿ ಶಕ್ತಿಶಾಲಿ ಮತ್ತು ಸ್ಟೈಲಿಶ್ ಸ್ಮಾರ್ಟ್‌ಫೋನ್ ಒಂದನ್ನು ಹುಡುಕುತ್ತಿದ್ದೀರಾ?. ಹಾಗಾದರೆ, ಇದೀಗ ನಿಮಗೆ Redmi Note 14 Pro ಫೋನ್ ಅತ್ಯಂತ ಆಕರ್ಷಕ ಆಯ್ಕೆಯಾಗಬಹುದು. ಭಾರತದಲ್ಲಿ ಜನವರಿ 6, 2026 ರಂದು Redmi Note 15 5G ಸರಣಿ ಬಿಡುಗಡೆಯಾಗಲಿದೆ. ಇದಕ್ಕೂ ಮೊದಲೇ Redmi Note 14 Pro ಫೋನ್ ಬೆಲೆಯನ್ನು ಇಳಿಸಲಾಗಿದೆ. ಜೊತೆಗೆ ಫ್ಲಿಪ್‌ಕಾರ್ಟ್‌ನಲ್ಲಿ ನಡೆಯುತ್ತಿರುವ ವಿಶೇಷ ರಿಯಾಯಿತಿ ಮತ್ತು ಬ್ಯಾಂಕ್ ಆಫರ್‌ಗಳ ಕಾರಣ, ಈ ಫೋನಿನ ಬೆಲೆ ಗಣನೀಯವಾಗಿ ಇಳಿಕೆಯಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ.
Redmi Note 14 Pro: ಆಫರ್ ವಿವರಗಳು
₹28,999 ರೂ. ಬೆಲೆ ಹೊಂದಿರುವ Redmi Note 14 Pro ಫೋನ್ ಈಗ ಫ್ಲಿಪ್‌ಕಾರ್ಟ್‌ನಲ್ಲಿ ₹20,897ಕ್ಕೆ ಲಭ್ಯವಾಗುತ್ತಿದೆ. ಅಂದರೆ, ನೇರವಾಗಿ ₹8,102 ರಿಯಾಯಿತಿ ದೊರೆಯುತ್ತದೆ. ಇದಲ್ಲದೆ Flipkart SBI ಅಥವಾ Flipkart Axis Bank ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿದರೆ 5% ಹೆಚ್ಚುವರಿ ಕ್ಯಾಶ್‌ಬ್ಯಾಕ್ ಸಿಗುತ್ತದೆ. ಈ ಆಫರ್ ಉಪಯೋಗಿಸಿದರೆ ಫೋನಿನ ಪರಿಣಾಮಕಾರಿ ಬೆಲೆ ಸುಮಾರು ₹16,897ಕ್ಕೆ ಇಳಿಯುತ್ತದೆ. ಇಷ್ಟೇ ಅಲ್ಲದೆ, EMI ಗೆ ಬಯಸುವವರಿಗೆ ₹737 ರಿಂದ ಆರಂಭವಾಗುವ 'ನೋ-ಕಾಸ್ಟ್ EMI' ಆಯ್ಕೆಯಿದೆ. ಹಳೆಯ ಫೋನ್‌ನ್ನು ವಿನಿಮಯ ಮಾಡಲು ಬಯಸುವವರಿಗೆ ಗರಿಷ್ಠ ₹20,210 ವರೆಗೆ ಎಕ್ಸ್‌ಚೇಂಜ್ ಮೌಲ್ಯ ಸಿಗಬಹುದು, ಇದು ಖರೀದಿಯ ಬೆಲೆಯನ್ನು ಇನ್ನಷ್ಟು ಕಡಿಮೆ ಮಾಡುತ್ತದೆ.
Redmi Note 14 Pro: ಖರೀದಿಸಬಹುದೇ?
Redmi Note 14 Pro ನಲ್ಲಿ 6.67 ಇಂಚಿನ 1.5K AMOLED ಡಿಸ್‌ಪ್ಲೇ ಇದೆ. ಇದು ವೀಕ್ಷಣಾ ಅನುಭವವನ್ನು ಇನ್ನಷ್ಟು ಸ್ಪಷ್ಟ, ಜೀವಂತ ಮತ್ತು ತೀಕ್ಷ್ಣವಾಗಿಸುತ್ತದೆ. ಇದರಲ್ಲಿರುವ 120Hz ರಿಫ್ರೆಶ್‌ರೇಟ್ ಸಹಾಯದಿಂದ ಸ್ಕ್ರೋಲಿಂಗ್, ಗೇಮಿಂಗ್ ಮತ್ತು ವಿಡಿಯೋ ವೀಕ್ಷಣೆ ಅತ್ಯಂತ ನೈಸರ್ಗಿಕ ಮತ್ತು ಸ್ಮೂತ್ ಆಗಿರುತ್ತದೆ. ಪ್ರಭಾವಶಾಲಿ MediaTek Dimensity 7300 Ultra ಚಿಪ್‌ಸೆಟ್ ಇರುವುದರಿಂದ ಬಹು ಅಪ್ಲಿಕೇಶನ್‌ಗಳನ್ನು ಒಂದೇ ಸಮಯದಲ್ಲಿ ಬಳಸಿದರೂ ಲ್ಯಾಗ್ ಕಾಣಿಸದು. ದಿನನಿತ್ಯದ ಬಳಕೆ ಆರಂಭಿಸಿ ಗೇಮಿಂಗ್ ವರೆಗೆ ಎಲ್ಲ ಕೆಲಸಗಳನ್ನೂ ಫೋನ್ ಸುಲಭವಾಗಿ ನಿರ್ವಹಿಸಬಲ್ಲದು.

ಕ್ಯಾಮೆರಾ ವಿಭಾಗದಲ್ಲಿ, ಈ ಫೋನ್ ಹಿಂಭಾಗದಲ್ಲಿ 50MP ಮುಖ್ಯ ಕ್ಯಾಮೆರಾ, 8MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು 2MP ಮ್ಯಾಕ್ರೋ ಕ್ಯಾಮೆರಾ ಹೊಂದಿದೆ. ವಿಸ್ತಾರವಾದ ಲ್ಯಾಂಡ್‌ಸ್ಕೇಪ್‌ಗಳು, ಕ್ಲೋಸ್-ಅಪ್ ಶಾಟ್‌ಗಳು ಹಾಗೂ ದಿನನಿತ್ಯದ ಫೋಟೋಗಳು ಎಲ್ಲವೂ ಸ್ಪಷ್ಟವಾಗಿರುತ್ತವೆ. ಬ್ಯಾಟರಿ ಈ ವಿಭಾಗದಲ್ಲಿ, 5,500mAh ದೊಡ್ಡ ಬ್ಯಾಟರಿ ಇದ್ದು ಒಂದು ದಿನದ ಮಟ್ಟಿಗೆ ವಿಶ್ವಾಸಾರ್ಹ ಬ್ಯಾಕಪ್ ನೀಡುತ್ತದೆ. 45W ವೇಗದ ಚಾರ್ಜಿಂಗ್ ಸಪೋರ್ಟ್ ಇರುವುದರಿಂದ ಚಾರ್ಜ್ ಮಾಡಲು ಹೆಚ್ಚು ಸಮಯ ಬೇಕಾಗುವುದಿಲ್ಲ.
Redmi Note 14 Pro ನಲ್ಲಿ ಮುಂದೆ Gorilla Glass Victus 2 ರಕ್ಷಣೆ ನೀಡಲಾಗಿರುವುದರಿಂದ ಸ್ಕ್ರೀನ್ ಸ್ಕ್ರಾಚ್‌ಗಳು ಮತ್ತು ಸಣ್ಣ ಬಿದ್ದುಹೋಗುವಿಕೆಗಳಿಂದ ಉತ್ತಮವಾಗಿ ಕಾಪಾಡಲ್ಪಡುತ್ತದೆ. ಇದರಿಂದ Redmi Note 14 Pro ದೈನಂದಿನ ಬಳಕೆ, ಗೇಮಿಂಗ್ ಮತ್ತು ಫೋಟೋಗ್ರಫಿ ಸೇರಿದಂತೆ ಆಲ್‌ರೌಂಡ್ ಅನುಭವ ಬಯಸುವವರಿಗೆ ಅತ್ಯುತ್ತಮ ಆಯ್ಕೆಯಾಗಿ ತೋರುತ್ತದೆ. 20 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಪ್ರಸ್ತುತ Redmi Note 14 Pro ಒಂದು ಖರೀದಿಸಬಹುದಾದ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದು ಹೇಳಬಹುದು. ಈ ಕುರಿತಂತೆ ನಿಮ್ಮ ಅನಿಸಿಕೆ ಏನು? ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








