ಸಸ್ತಾ ಬೆಲೆ..! 10399 ರಿಯಾಯಿತಿ.. ದೈತ್ಯ Samsung ಫೋನಿನ ದರ ಕಡಿತ.. ಎಷ್ಟಿತ್ತು? ಈಗ ಎಷ್ಟಿದೆ?
ಸ್ಯಾಮ್‌ಸಂಗ್ ಕಳೆದ ವರ್ಷ ಸ್ಯಾಮ್‌ಸಂಗ್ ಗ್ಯಾಲಕ್ಸಿ F55 5G (Samsung Galaxy F55 5G) ಫೋನನ್ನು ಬಿಡುಗಡೆ ಮಾಡಿತ್ತು. ಕಂಪನಿಯು ಈ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಅನ್ನು ತನ್ನ ಗ್ಯಾಲಕ್ಸಿ 'F' ಸರಣಿಯ ಅಡಿಯಲ್ಲಿ ಪರಿಚಯಿಸಿತ್ತು. ಇದು ಸೊಗಸಾದ ವಿನ್ಯಾಸ ಮತ್ತು ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಸ್ತುತ, ಈ 5G ಫೋನ್ 10,000 ರೂ.ಗಿಂತ ಹೆಚ್ಚಿನ ರಿಯಾಯಿತಿಯೊಂದಿಗೆ ಖರೀದಿಗೆ ಲಭ್ಯವಿದೆ. ಬೆಲೆ ಇಳಿಕೆಯ ಬಳಿಕ, 8GB RAM ಹೊಂದಿರುವ ಈ ಮೊಬೈಲ್ ಅನ್ನು 16,600 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
ಹೌದು, ಸ್ಯಾಮ್‌ಸಂಗ್ ಗ್ಯಾಲಕ್ಸಿ F55 5G ಫೋನಿನ ಬೆಲೆ ಭಾರೀ ಇಳಿಕೆಯಾಗಿದೆ. ಇದು ಮೂರು ಸ್ಟೋರೇಜ್ ಆಯ್ಕೆಗಳಲ್ಲಿ ಮಾರಾಟವಾಗುತ್ತಿದೆ. ಈ ಫೋನಿನ ವಿಶೇಷತೆಗಳೆಂದರೆ, ಈ ಮೊಬೈಲ್ 6.7 ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದು ಸ್ನಾಪ್‌ಡ್ರಾಗನ್ 7 ಜೆನ್ 1 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 50MP ಮುಖ್ಯ ಮತ್ತು 50MP ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 128GB ಸ್ಟೋರೇಜ್, 5000mAh ಬ್ಯಾಟರಿ ಮತ್ತು 45W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ಅತ್ಯುತ್ತಮ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಫೋನಿನ ಮೂಲ ಬೆಲೆ ಮತ್ತು ಆಫರ್ ತಿಳಿಯಲು ಮುಂದೆ ಓದಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ F55 5G ಹೊಸ ಬೆಲೆ ಮತ್ತು ರಿಯಾಯಿತಿ
ಸ್ಯಾಮ್‌ಸಂಗ್ ಗ್ಯಾಲಕ್ಸಿ F55 5G ಫೋನಿನ 8GB RAM + 128GB ಸ್ಟೋರೇಜ್‌ನ ಬಿಡುಗಡೆ ಬೆಲೆ 26,999 ರೂ. ಆಗಿದೆ. ಪ್ರಸ್ತುತ, ಅಮೆಜಾನ್‌ನಲ್ಲಿ 10,399 ರೂ. ಬೆಲೆ ಇಳಿಕೆ ಮಾಡಲಾಗಿದೆ. ನೀವು ರಿಯಾಯಿತಿಯೊಂದಿಗೆ ಕೇವಲ 16,600 ರೂ.ಗೆ ಖರೀದಿಸಬಹುದು. ಈ ಮೊಬೈಲ್ ಅನ್ನು ಕಡಿಮೆ ದರದಲ್ಲಿ ಖರೀದಿಸಲು, ಯಾವುದೇ ಕೂಪನ್ ರಿಯಾಯಿತಿ ಅಥವಾ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅಗತ್ಯವಿಲ್ಲ. ಇದು ಈ ಫೋನಿನ ರೈಸಿನ್ ಬ್ಲ್ಯಾಕ್ ಬಣ್ಣದ ಮಾದರಿಯ ದರವಾಗಿದೆ. ನೀವು ಏಪ್ರಿಕಾಟ್ ಕ್ರಷ್ ಬಣ್ಣದಲ್ಲಿಯೂ ಈ ಮೊಬೈಲ್ ಖರೀದಿಸಬಹುದು.
ಸ್ಯಾಮ್‌ಸಂಗ್ ಗ್ಯಾಲಕ್ಸಿ F55 5G ವೈಶಿಷ್ಟ್ಯಗಳು
ಸ್ಯಾಮ್‌ಸಂಗ್ ಗ್ಯಾಲಕ್ಸಿ F55 5G ಮೊಬೈಲ್ 6.7 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 1,080 x 2,400 ಪಿಕ್ಸೆಲ್ ರೆಸಲ್ಯೂಶನ್ ಬೆಂಬಲದೊಂದಿಗೆ ಬರುತ್ತದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರ ಮತ್ತು 1,000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ. ಈ ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 7 ಜೆನ್ 1 ಪ್ರೊಸೆಸರ್ ಹೊಂದಿದೆ. ಇದನ್ನು 4 ನ್ಯಾನೋಮೀಟರ್ ಪ್ರಕ್ರಿಯೆಯಲ್ಲಿ ನಿರ್ಮಿಸಲಾಗಿದೆ. ಈ ಮೊಬೈಲ್ ಆಂಡ್ರಾಯ್ಡ್ 14 ಓಎಸ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಸ್ಮಾರ್ಟ್‌ಫೋನ್ 12GB RAM + 256GB ಆಂತರಿಕ ಸ್ಟೋರೇಜ್ ಆಯ್ಕೆ ಒಳಗೊಂಡಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ F55 5G ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಲಭ್ಯವಿದೆ. ಇದು OIS ಬೆಂಬಲದೊಂದಿಗೆ ಬರುತ್ತದೆ. ಇದರೊಂದಿಗೆ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಟ್ ತೃತೀಯ ಕ್ಯಾಮೆರಾ ಹೊಂದಿದೆ. ಈ ಫೋನಿನಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 50 ಮೆಗಾಪಿಕ್ಸೆಲ್ ಫ್ರಂಕ್ಯಾಮೆರಾ ಇದೆ. ಈ ಮೊಬೈಲ್ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 45W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ F55 5G ಮೊಬೈಲ್ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು ಮತ್ತು ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿದೆ. ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP67 ರೇಟಿಂಗ್ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು ಯುಎಸ್‌ಬಿ ಟೈಪ್ ಸಿ ಪೋರ್ಟ್, ವೈ-ಫೈ 6, ಬ್ಲೂಟೂತ್ 5.2, ಎನ್‌ಎಫ್‌ಸಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.


Click it and Unblock the Notifications








