ಸಸ್ತಾ ಬೆಲೆ! 50MP ಕ್ಯಾಮೆರಾ.. ಬಿಗ್ ಬ್ಯಾಟರಿ.. 2000 ಡಿಸ್ಕೌಂಟ್.. ಯಾವ ಫೋನ್?
ರಿಯಲ್‌ಮಿ ಮೊಬೈಲ್‌ಗಳಿಗೆ ಹೆಚ್ಚು ಬೇಡಿ ಇದೆ. ಕಂಪನಿಯ ರಿಯಲ್‌ಮಿ 13 5G (Realme 13 5G) ಮೊಬೈಲ್ ಹಲವು ಅತ್ಯಾಕರ್ಷಕ ಫೀಚರ್ಸ್‌ಗಳಿಂದಲೂ ಸಹ ಸದ್ದು ಮಾಡಿದೆ. ಪ್ರಸ್ತುತ, ಈ ಸ್ಮಾರ್ಟ್‌ಫೋನ್ ಖರೀದಿ ಮೇಲೆ ಭರ್ಜರಿ ರಿಯಾಯಿತಿ ಲಭ್ಯವಿದೆ. ಹೌದು, ರಿಯಲ್‌ಮಿ ತನ್ನ ನಂಬರ್ ಸರಣಿಯ ಅಡಿಯಲ್ಲಿ ರಿಯಲ್‌ಮಿ 13 5G ಫೋನನ್ನು ಬಿಡುಗಡೆ ಮಾಡಿದೆ. ಇದರ ಆರಂಭಿಕ ಬೆಲೆ 17,999 ರೂ. ಆಗಿದೆ. ಪ್ರಸ್ತುತ ಕಂಪನಿಯು ತನ್ನ ಗ್ರಾಹಕರಿಗೆ ಅನುಕೂಲವಾಗುವಂತೆ, ಈ ಫೋನಿಗೆ ಬೊಂಬಾಟ್ ಆಫರ್ ನೀಡಿದೆ. ನೀವು ಫೋನನ್ನು ಅಗ್ಗದ ಬೆಲೆಗೆ ಖರೀದಿಸಬಹುದು.
ರಿಯಲ್‌ಮಿ 13 5G ಮೊಬೈಲ್ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಮಾರಾಟವಾಗುತ್ತಿದೆ. ಈ ಫೋನಿನಲ್ಲಿ 6.72 ಇಂಚಿನ ಡಿಸ್ಪ್ಲೇ ಲಭ್ಯವಿದೆ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಈ ಮೊಬೈಲ್ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಜೊತೆಗೆ 8GB RAM + 256GB ಸ್ಟೋರೇಜ್, 5000mAh ಬ್ಯಾಟರಿ ಮತ್ತು 45W ಫಾಸ್ಟ್ ಚಾರ್ಜಿಂಗ್ ಒಳಗೊಂಡಿದೆ. ಈ ಫೋನಿನ ಹೊಸ ಬೆಲೆ ತಿಳಿಯಲು ಮುಂದೆ ಓದಿ.

ರಿಯಲ್‌ಮಿ 13 5G ಆಫರ್‌ಗಳು
ರಿಯಲ್‌ಮಿ 13 5G ಫೋನಿನ 8GB RAM + 128GB ಸ್ಟೋರೇಜ್ ರೂಪಾಂತರವನ್ನು 17,999 ರೂ.ಗೆ ಪರಿಚಯಿಸಲಾಗಿದೆ. ಪ್ರಸ್ತುತ, 2000 ರೂ. ರಿಯಾಯಿತಿ ನೀಡಲಾಗುತ್ತಿದೆ. ನೀವು ಕೇವಲ 15,999 ರೂ.ಗೆ ಖರೀದಿಸಬಹುದು. ಹಾಗೆಯೇ 8GB RAM + 256GB ಸ್ಟೋರೇಜ್ ಆಯ್ಕೆಯನ್ನು 19,999 ರೂ.ಗೆ ಬಿಡುಗಡೆ ಮಾಡಲಾಗಿತ್ತು. ಈಗ ಇದನ್ನು 17,999 ರೂ.ಗೆ ಮಾರಾಟ ಮಾಡಲಾಗುತ್ತಿದೆ. ನೀವು 2,000 ರೂ.ಗಳ ರಿಯಾಯಿತಿ ಪಡೆಯಬಹುದು. ಈ ರಿಯಲ್‌ಮಿ ಫೋನ್ ಡಾರ್ಕ್ ಪರ್ಪಲ್ ಮತ್ತು ಸ್ಪೀಡ್ ಗ್ರೀನ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.
ರಿಯಲ್‌ಮಿ 13 5G ವೈಶಿಷ್ಟ್ಯಗಳು
ಡಿಸ್ಪ್ಲೇ ಹೇಗಿದೆ
ರಿಯಲ್‌ಮಿ 13 5G ಫೋನ್ 6.72 ಇಂಚಿನ ಪೂರ್ಣ ಎಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದು 2400 × 1080 ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರ, 240Hz ಸ್ಪರ್ಶ ಮಾದರಿ ದರ ಮತ್ತು 580 ನಿಟ್ಸ್ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಜೊತೆಗೆ ರೈನ್‌ವಾಟರ್ ಸ್ಮಾರ್ಟ್ ಟಚ್ ಮತ್ತು ಐ ಕಂಫರ್ಟ್ ಫೀಚರ್ ಸಹ ಲಭ್ಯವಿದೆ.
ಪ್ರೊಸೆಸರ್ ಯಾವುದು?
ರಿಯಲ್‌ಮಿ 13 5G ಮೊಬೈಲ್ ಮೀಡಿಯಾಟೆಕ್ ಡೈಮೆನ್ಸಿಟಿ 6300 ಆಕ್ಟಾಕೋರ್ ಪ್ರೊಸೆಸರ್ ಹೊಂದಿದೆ. ಈ ಫೋನ್ ಆಂಡ್ರಾಯ್ಡ್ ಆಧಾರಿತ ರಿಯಲ್‌ಮಿ UI 5.0 ಓಎಸ್‌ನಲ್ಲಿ ಕೆಲಸ ನಿರ್ವಹಿಸುತ್ತದೆ. ಈ ಫೋನ್ ಗ್ರಾಫಿಕ್ಸ್‌ಗಾಗಿ, ಆರ್ಮ್ G57 ಜಿಪಿಯು ಹೊಂದಿದೆ. ಈ ಮೊಬೈಲ್ 8GB RAM ಹೊಂದಿದೆ. ಹಾಗೆಯೇ 128GB ಮತ್ತು 256GB ಸ್ಟೋರೇಜ್ ಲಭ್ಯವಿದೆ. ಈ ಮೊಬೈಲ್ 10GB ಡೈನಾಮಿಕ್ RAM ತಂತ್ರಜ್ಞಾನ ಹೊಂದಿದ್ದು, ನೀವು 20GB RAM ವರೆಗೆ ಬಳಸಬಹುದು.
ಎರಡು ಸೂಪರ್ ಕ್ಯಾಮೆರಾಗಳು
ರಿಯಲ್‌ಮಿ 13 5G ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ OIS ಜೊತೆಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ದ್ವಿತೀಯ (ಮೊನೊ ಲೆನ್ಸ್) ಕ್ಯಾಮೆರಾ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.
ಶಕ್ತಿಶಾಲಿ ಬ್ಯಾಟರಿ
ರಿಯಲ್‌ಮಿ 13 5G ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 45W ಅಲ್ಟ್ರಾ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.


Click it and Unblock the Notifications








