Home
Deal of the day

realme: ಮೊನ್ನೆಯಷ್ಟೇ ಬಿಡುಗಡೆ.. ಈಗ ಭರ್ಜರಿ ಆಫರ್ ಘೋಷಣೆ.. 13000ಕ್ಕಿಂತ ಅಗ್ಗ! ಯಾವ ಫೋನ್?

ರಿಯಲ್‌ಮಿ ಪ್ರಿಯರೇ, ಈ ಹೊಸ ಆಫರ್ ನಿಮಗಾಗಿ! 6000mAh ದೊಡ್ಡ ಬ್ಯಾಟರಿ ಹೊಂದಿರುವ ಫೋನಿಗೆ ಬಂಪರ್ ಆಫರ್ ಘೋಷಣೆ. ಹೌದು, ರಿಯಲ್‌ಮಿ ಕೆಲವು ದಿನಗಳ ಹಿಂದೆ ಎರಡು ಹೊಸ ಮೊಬೈಲ್‌ಗಳನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ರಿಯಲ್‌ಮಿ P3x 5G (realme P3x 5G) ಸಹ ಒಂದಾಗಿದೆ. ಪ್ರಸ್ತುತ, ಈ ಫೋನಿಗೆ ರಿಯಾಯಿತಿ ಘೋಷಿಸಲಾಗಿದೆ. ಈ ಕಡಿಮೆ ಬಜೆಟ್ ಸ್ಮಾರ್ಟ್‌ಫೋನ್ ಮತ್ತಷ್ಟು ಕಡಿಮೆ ದರಕ್ಕೆ ಮಾರಾಟವಾಗುತ್ತಿದೆ. ಈ ಫೋನಿಗೆ ಯಾವೆಲ್ಲಾ ಆಫರ್ ಲಭ್ಯವಿದೆ, ಕಡಿಮೆ ಬೆಲೆಗೆ ಎಲ್ಲಿ ಮತ್ತು ಹೇಗೆ ಖರೀದಿಸಬೇಕು? ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ರಿಯಲ್‌ಮಿ P3x 5G ಮೊಬೈಲ್ 15,000 ರೂ.ಗಿಂತ ಕಡಿಮೆ ಬೆಲೆಯನ್ನು ಹೊಂದಿದೆ. ಇದು ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಮಾರಾಟವಾಗುತ್ತಿದೆ. ಈ ಫೋನಿನ ವಿಶೇಷತೆಗಳೆಂದರೆ, ಇದು ಮೀಡಿಯಾ ಟೆಕ್‌ನ ಡೈಮೆನ್ಸಿಟಿ 6400 ಪ್ರೊಸೆಸರ್‌ ಹೊಂದಿದೆ. ಈ ಮೊಬೈಲ್ 6.83 ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಲಭ್ಯವಿದೆ. ಇದರೊಂದಿಗೆ 8GB RAM + 128GB ಸ್ಟೋರೇಜ್, 45W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳಿವೆ. ಈ ಫೋನಿನ ಹೊಸ ಬೆಲೆ ತಿಳಿಯಲು ಮುಂದೆ ಓದಿ.

realme: ಮೊನ್ನೆಯಷ್ಟೇ ಬಿಡುಗಡೆ.. ಈಗ ಭರ್ಜರಿ ಆಫರ್ ಘೋಷಣೆ.. 13000ಕ್ಕಿಂತ ಅಗ್ಗ!

ರಿಯಲ್‌ಮಿ P3x 5G ಹೊಸ ಬೆಲೆ

6GB RAM + 128GB ಸ್ಟೋರೇಜ್ = 13,999 ರೂ.
ರಿಯಾಯಿತಿ ಬೆಲೆ = 11,999 ರೂ.

8GB RAM + 128GB ಸ್ಟೋರೇಜ್ = 14,999 ರೂ.
ರಿಯಾಯಿತಿ ಬೆಲೆ = 12,999 ರೂ.

ರಿಯಲ್‌ಮಿ P3x 5G ಫೋನಿನ 6GB RAM ರೂಪಾಂತರದ ಮೇಲೆ 1,000 ರೂ.ಗಳ ಫ್ಲಾಟ್ ರಿಯಾಯಿತಿ ನೀಡಲಾಗುತ್ತಿದೆ. ಇದರೊಂದಿಗೆ 1,000 ರೂ.ಗಳ ಬ್ಯಾಂಕ್ ಕಾರ್ಡ್ ಆಫರ್ ಸಹ ಲಭ್ಯವಿರುತ್ತದೆ. ಅದೇ ರೀತಿ, 8GB RAM ಹೊಂದಿರುವ ಫೋನಿಗೆ ಕಂಪನಿಯು 1,000 ರೂ.ಗಳ ಕೂಪನ್ ರಿಯಾಯಿತಿ ಮತ್ತು 1,000 ರೂ.ಗಳ ಫ್ಲಾಟ್ ರಿಯಾಯಿತಿ ಘೋಷಿಸಿದೆ. ನೀವು, ಎರಡೂ ರೂಪಾಂತರಗಳನ್ನು 2,000 ರೂ. ಕಡಿಮೆ ಬೆಲೆಗೆ ಖರೀದಿಸಬಹುದು. ಈ ಫೋನ್ ಮಿಡ್‌ನೈಟ್ ಬ್ಲೂ, ಲೂನಾರ್ ಸಿಲ್ವರ್ ಮತ್ತು ಸ್ಟೆಲ್ಲಾರ್ ಪಿಂಕ್ ಬಣ್ಣಗಳಲ್ಲಿ ಬರುತ್ತದೆ. ಈ ಫೋನನ್ನು ಕಡಿಮೆ ಬೆಲೆಗೆ ಖರೀದಿಸಲು ಈ ಲಿಂಕ್ ಕ್ಲಿಕ್ ಮಾಡಿ.

realme: ಮೊನ್ನೆಯಷ್ಟೇ ಬಿಡುಗಡೆ.. ಈಗ ಭರ್ಜರಿ ಆಫರ್ ಘೋಷಣೆ.. 13000ಕ್ಕಿಂತ ಅಗ್ಗ!

ರಿಯಲ್‌ಮಿ P3x 5G ವೈಶಿಷ್ಟ್ಯಗಳು

ರಿಯಲ್‌ಮಿ P3x 5G ಸ್ಮಾರ್ಟ್‌ಫೋನ್ 6.83 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ದರ ಮತ್ತು 1500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಈ ಫೋನ್ ವೆಟ್ ಟಚ್ ತಂತ್ರಜ್ಞಾನ ಹೊಂದಿದ್ದು, ಒದ್ದೆಯಾದ ಕೈಗಳಿಂದಲೂ ಫೋನನ್ನು ಬಳಸಬಹುದು. ಈ ಮೊಬೈಲ್ ಮೀಡಿಯಾಟೆಕ್‌ ಡೈಮೆನ್ಸಿಟಿ 6400 ಪ್ರೊಸೆಸರ್‌ ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 15 ಓಎಸ್‌ ಜೊತೆಗೆ ಕೆಲಸ ಮಾಡುತ್ತದೆ. ಈ ಫೋನ್ 6GB RAM ಮತ್ತು 8GB RAM ಹೊಂದಿದೆ.

ರಿಯಲ್‌ಮಿ P3x 5G ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿದೆ. ಈ ಮೊಬೈಲ್ 6,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 45W ವೇಗದ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಲಾಗಿದೆ. ಈ ಫೋನ್ OTG ಮತ್ತು ರಿವರ್ಸ್ ಚಾರ್ಜಿಂಗ್ ತಂತ್ರಜ್ಞಾನ ಸಹ ಹೊಂದಿದೆ. ಈ ಫೊನಿನಲ್ಲಿ ಎಐ (AI) ಎರೇಸ್, ಬೆಸ್ಟ್ ಫೇಸ್, ಮೋಷನ್ ಡಿಬಲ್ರ್, ಎಐ ರೆಕಾರ್ಡಿಂಗ್ ಸಾರಾಂಶ, ಎಐ ರೈಟರ್, ಗೂಗಲ್ ಸರ್ಕಲ್ ಟು ಸರ್ಚ್ ಮತ್ತು ಎಐ ರಿಪ್ಲೈ ಸೇರಿದಂತೆ ಹಲವು ವೈಶಿಷ್ಟ್ಯಗಳಿವೆ.

Best Mobiles in India

English summary
Rs 2000 discount on realme P3x 5G with 8GB RAM: check price, offers, specifications and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+