ಹೋಳಿ ಮತ್ತಷ್ಟು ರಂಗು! 3000 ರಿಯಾಯಿತಿ.. ಡ್ಯುಯಲ್ ಡಿಸ್ಪ್ಲೇ.. 50MP ಟ್ರಿಪಲ್ ಕ್ಯಾಮೆರಾ; ಕಮ್ಮಿ ಬೆಲೆಗೆ 5G ಫೋನ್
ಲಾವಾ ಮೊಬೈಲ್ ಖರೀದಿಸುವವರಿಗೆ ಇದಕ್ಕಿಂತ ಒಳ್ಳೆಯ ಸುದ್ದಿ ಮತ್ತೊಂದಿಲ್ಲ. ದೇಶೀಯ ಮೊಬೈಲ್ ತಯಾರಕಾ ಕಂಪನಿ ಲಾವಾ ಕಳೆದ ವರ್ಷ ಭಾರತದಲ್ಲಿ ಡ್ಯುಯಲ್ ಅಮೋಲೆಡ್ ಡಿಸ್ಪ್ಲೇಯೊಂದಿಗೆ 5G ಫೋನನ್ನು ಬಿಡುಗಡೆ ಮಾಡಿತ್ತು. ಪ್ರಸ್ತುತ, ಕಂಪನಿಯು ಈ ಸೊಗಸಾದ ಲಾವಾ ಅಗ್ನಿ 3 5G (Lava Agni 3 5G) ಸ್ಮಾರ್ಟ್‌ಫೋನ್ ಅನ್ನು 3,000 ರೂ.ಗಳ ರಿಯಾಯಿತಿಯೊಂದಿಗೆ ಮಾರಾಟ ಮಾಡುತ್ತಿದೆ. ಲಾವಾ ಅಗ್ನಿ 3 5G ಫೋನನ್ನು ಹೇಗೆ ಮತ್ತು ಎಲ್ಲಿ ಅಗ್ಗದ ದರದಲ್ಲಿ ಖರೀದಿಸಬಹುದು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಲಾವಾ ಅಗ್ನಿ 3 5G ಮೊಬೈಲ್ ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಈ ಫೋನಿನ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಎಕ್ಸ್ ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ ಲಭ್ಯವಿದೆ. ಈ ಮೊಬೈಲ್ 6.78 ಇಂಚಿನ ಡಿಸ್ಪ್ಲೇ ಹೊಂದಿದೆ. ಜೊತೆಗೆ 8GB RAM + 256GB ಸ್ಟೋರೇಜ್, 5000mAh ಬ್ಯಾಟರಿ ಮತ್ತು 66W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಮಾರಾಟವಾಗುತ್ತಿದೆ. ನೀವು 20 ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದು.

ಲಾವಾ ಅಗ್ನಿ 3 5G ಹೊಸ ಬೆಲೆ ಮತ್ತು ಆಫರ್
ಲಾವಾ ಅಗ್ನಿ 3 5G ಫೋನಿನ 8GB RAM + 128GB ಸ್ಟೋರೇಜ್ ಆಯ್ಕೆಯನ್ನು 22,999 ರೂ.ಗೆ ಬಿಡುಗಡೆ ಮಾಡಲಾಗಿದೆ. ಪ್ರಸ್ತುತ ಕಂಪನಿಯು ಈ ರೂಪಾಂತರದ ಮೇಲೆ 3,000 ರೂ.ಗಳ ರಿಯಾಯಿತಿಯನ್ನು ನೀಡುತ್ತಿದೆ. ಇ-ಕಾಮರ್ಸ್ ಸೈಟ್ ಅಮೆಜಾನ್‌ನಲ್ಲಿ (Amazon) ಈ ರಿಯಾಯಿತಿ ಲಭ್ಯವಿದೆ. ಇದು ಎಲ್ಲಾ ಗ್ರಾಹಕರು ಪ್ರಯೋಜನ ಪಡೆಯುವ ಕೂಪನ್ ರಿಯಾಯಿತಿಯಾಗಿದೆ.
ನೀವು 3,000 ರೂ.ಗಳ ರಿಯಾಯಿತಿಯೊಂದಿಗೆ, ಲಾವಾ ಅಗ್ನಿ 3 ಫೋನನ್ನು ಕೇವಲ 19,999 ರೂ.ಗೆ ಖರೀದಿಸಬಹುದು. ಗಮನಿಸಬೇಕಾದ ಸಂಗತಿಯೆಂದರೆ, ಈ ಆಫರ್ ಲಾಭ ಪಡೆಯಲು ಯಾವುದೇ ಬ್ಯಾಂಕ್ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಅಗತ್ಯವಿಲ್ಲ. ಈ ಡಿಸ್ಕೌಂಟ್ ಜೊತೆಗೆ, ಅಮೆಜಾನ್ 1 ರೂ. ಹೆಚ್ಚುವರಿ ರಿಯಾಯಿತಿಯನ್ನು ಸಹ ನೀಡುತ್ತಿದೆ. ನೀವು ಈ ಲಾವಾ 5G ಫೋನನ್ನು ಹೀದರ್ ಗ್ಲಾಸ್ ಮತ್ತು ಪ್ರಿಸ್ಟಿನ್ ಗ್ಲಾಸ್ ಬಣ್ಣಗಳ ಆಯ್ಕೆಯಲ್ಲಿ ಕೊಳ್ಳಬಹುದು.
ಈ ಸುದ್ದಿ ಓದಿದ್ದೀರಾ?: Lava Yuva 4: ಅತೀ ಕಡಿಮೆ ಬೆಲೆಗೆ ಹೊಸ ಫೋನ್ ಲಾಂಚ್; ಭರ್ಜರಿ ಫೀಚರ್ಸ್!
ಲಾವಾ ಅಗ್ನಿ 3 5G ವೈಶಿಷ್ಟ್ಯಗಳು
ಡಿಸ್ಪ್ಲೇ ಹೇಗಿದೆ
ಲಾವಾ ಅಗ್ನಿ 3 5G ಫೋನ್ 6.78 ಇಂಚಿನ 1.5K 3D ಕರ್ವ್ಡ್ ಮುಖ್ಯ ಡಿಸ್ಪ್ಲೇ ಹೊಂದಿದೆ. ಇದು 2652 x 1220 ಪಿಕ್ಸೆಲ್‌ಗಳ ರೆಸಲ್ಯೂಶನ್, 120Hz ರಿಫ್ರೆಶ್ ದರ ಮತ್ತು 1200 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ. ಹಿಂಭಾಗದಲ್ಲಿ 1.74 ಇಂಚಿನ ಅಮೋಲೆಡ್ ಡಿಸ್ಪ್ಲೇ ಸಹ ಇದೆ.
ಮೀಡಿಯಾ ಟೆಕ್ ಪ್ರೊಸೆಸರ್
ಲಾವಾ ಅಗ್ನಿ 3 5G ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಎಕ್ಸ್ ಪ್ರೊಸೆಸರ್ ಹೊಂದಿದೆ. ಇದನ್ನು 4 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳ ಆಧಾರದ ಮೇಲೆ ತಯಾರಿಸಲಾಗಿದೆ. ಈ ಲಾವಾ ಫೋನ್ ಆಂಡ್ರಾಯ್ಡ್ 14 ಓಎಸ್‌ನಲ್ಲಿ ಕೆಲಸ ಮಾಡುತ್ತದೆ. ಈ 5G ಫೋನ್ 8GB RAM ಮತ್ತು 256GB ಸ್ಟೋರೇಜ್ ಆಯ್ಕೆ ಒಳಗೊಂಡಿದೆ. ಇದು 8GB ವರ್ಚುವಲ್ RAM ಸಹ ಹೊಂದಿದೆ. ನೀವು ಒಟ್ಟು 16GB RAM ಬಳಸಬಹುದು.

ಟ್ರಿಪಲ್ ಕ್ಯಾಮೆರಾ ಸೆಟಪ್
ಲಾವಾ ಅಗ್ನಿ 3 5G ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದು OIS ಮತ್ತು EIS ಜೊತೆಗೆ ಬರುತ್ತದೆ. ಹಾಗೆಯೇ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಇದು 3X ಆಪ್ಟಿಕಲ್ ಜೂಮ್ ಮತ್ತು EIS ಬೆಂಬಲದೊಂದಿಗೆ ಬರುತ್ತದೆ. ಮತ್ತು 8 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಲಭ್ಯವಿದೆ. ಈ ಫೋನಿನಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.
ಬೊಂಬಾಟ್ ಬ್ಯಾಟರಿ
ಲಾವಾ ಅಗ್ನಿ 3 5G ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ವೇಗವಾಗಿ ಚಾರ್ಜ್ ಮಾಡಲು, 66W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಈ ಲಾವಾ ಮೊಬೈಲ್ ನೀರು ಮತ್ತು ಧೂಳಿನಿಂದ ರಕ್ಷಣೆಗಾಗಿ IP64 ರೇಟಿಂಗ್ ಪಡೆದಿದೆ. ಇದು ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್ ವೈ-ಫೈ 6e, ಬ್ಲೂಟೂತ್ 5.4, ಯುಎಸ್‌ಬಿ ಟೈಪ್ ಸಿ ಪೋರ್ಟ್ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.


Click it and Unblock the Notifications








