3500 ಅಗ್ಗ..! Vivo V40e ಬೆಲೆ ಕುಸಿತ.. 50MP + 50MP ಕ್ಯಾಮೆರಾಗಳು.. ಆಫರ್ ಏನಿದೆ?
ಬಹುನಿರೀಕ್ಷಿತ ವಿವೋ V50e 5G (Vivo V50e 5G) ಫೋನ್ ಭಾರತದಲ್ಲಿ ಬಿಡುಗಡೆಯಾಗಿದೆ. ಇದನ್ನು 28,999 ರೂ.ಗೆ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಈ ಮೊಬೈಲ್ ಲಾಂಚ್ ಬಳಿಕ, ಕಂಪನಿಯ ವಿವೋ V40e 5G (Vivo V40e 5G) ಮೊಬೈಲ್‌ನ ಬೆಲೆಯು ಭಾರೀ ಇಳಿಕೆಯಾಗಿದೆ. ಹೌದು, ಈ ವಿವೋ 5G ಫೋನನ್ನು 28,999 ರೂ.ಗೆ ಬಿಡುಗಡೆ ಮಾಡಲಾಗಿತ್ತು. ಆದರೆ, ಪ್ರಸ್ತುತ ಇದನ್ನು ಆಫರ್ ಮತ್ತು ರಿಯಾಯಿತಿಯೊಂದಿಗೆ ಕೇವಲ 25,500 ರೂ.ಗಿಂತ ಕಡಿಮೆ ಬೆಲೆಗೆ ಲಭ್ಯವಿದೆ. ಬನ್ನಿ, ಈ ವಿವೋ V40e 5G ಫೋನನ್ನು ಎಲ್ಲಿ ಮತ್ತು ಹೇಗೆ ಅಗ್ಗದ ದರಕ್ಕೆ ಖರೀದಿಸಬಹುದು ಎಂಬುವುದನ್ನು ತಿಳಿಯೋಣ.
ವಿವೋ V40e 5G ಮೊಬೈಲ್ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. ಇದು ರಾಯಲ್ ಬ್ರೋಂಜ್ ಮತ್ತು ಮಿಂಟ್ ಗ್ರೀನ್ ಬಣ್ಣಗಳಲ್ಲಿ ಬರುತ್ತದೆ. ಈ ಫೋನಿನ ವಿಶೇಷತೆಗಳೆಂದರೆ, ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಮೊಬೈಲ್ 6.77 ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 256GB ಸ್ಟೋರೇಜ್, 5500mAh ಬ್ಯಾಟರಿ ಮತ್ತು 80W ಸ್ಪೀಡ್ ಚಾರ್ಜಿಂಗ್ ಸೇರಿದಂತೆ ಮುಂತಾದ ಅತ್ಯುತ್ತಮ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ವಿವೋ V40e 5G ಆಫರ್‌ಗಳು
ವಿವೋ V40e 5G ಫೋನಿನ 8GB RAM + 128GB ಸ್ಟೋರೇಜ್ ರೂಪಾಂತರವನ್ನು 28,999 ರೂ.ಗೆ ಬಿಡುಗಡೆ ಮಾಡಲಾಗಿತ್ತು. ಪ್ರಸ್ತುತ ಫ್ಲಿಪ್‌ಕಾರ್ಟ್ ಈ ಫೋನನ್ನು 2,000 ರೂ.ಗಳ ರಿಯಾಯಿತಿಯೊಂದಿಗೆ ಮಾರಾಟ ಮಾಡಲಾಗುತ್ತಿದೆ. ಡಿಸ್ಕೌಂಟ್ ಬಳಿಕ, ಇದರ ಬೆಲೆ 26,999 ರೂ.ಗೆ ಇಳಿಕೆಯಾಗಲಿದೆ. ಈ ಆಫರ್ ಅನ್ನು ಎಲ್ಲಾ ಗ್ರಾಹಕರು ಪಡೆಯಬಹುದು. ಈ ಫೋನ್ ಮೇಲೆ 2,000 ರೂ.ಗಳ ರಿಯಾಯಿತಿಯ ಜೊತೆಗೆ, ಫ್ಲಿಪ್‌ಕಾರ್ಟ್ 1500 ರೂ.ಗಳ ಕ್ರೆಡಿಟ್ ಕಾರ್ಡ್ ಆಫರ್ ಸಹ ನೀಡುತ್ತಿದೆ.
ಎಚ್‌ಡಿಎಫ್‌ಸಿ, ಎಸ್‌ಬಿಐ ಮತ್ತು ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಇಎಂಐ ಮಾಡಿದರೆ, 1500 ರೂ. ಹೆಚ್ಚುವರಿ ರಿಯಾಯಿತಿ ಲಭ್ಯವಿದೆ. ಈ ಡಿಸ್ಕೌಂಟ್ ಬಳಿಕ, ಈ ವಿವೋ 5G ಫೋನಿನ ಬೆಲೆ 25,499 ರೂ.ಗೆ ಕಡಿತವಾಗಲಿದೆ. ಒಟ್ಟಾರೆಯಾಗಿ ಈ ಮೊಬೈಲ್ ಅನ್ನು 3,500 ರೂ.ಗಳ ರಿಯಾಯಿತಿಯೊಂದಿಗೆ 25,499 ರೂ.ಗೆ ನಿಮ್ಮದಾಗಿಸಿಕೊಳ್ಳಬಹುದು. ವಿಶೇಷವೆಂದರೆ, ಈ ಫೋನಿಗೆ ಲಭ್ಯವಿರುವ ಬ್ಯಾಂಕ್ ಆಫರ್ ಈ ತಿಂಗಳು (ಏಪ್ರಿಲ್ 30 ರವರೆಗೆ) ಮಾತ್ರ ಇರುತ್ತದೆ. ನೀವು ಫ್ಲಿಪ್‌ಕಾರ್ಟ್ ಸೈಟ್‌ನಲ್ಲಿ ಈ ಆಫರ್‌ಗಳ ಲಾಭ ಪಡೆಯಬಹುದು.

ವಿವೋ V40e 5G ವೈಶಿಷ್ಟ್ಯಗಳು
ವಿವೋ V40e 5G ಸ್ಮಾರ್ಟ್‌ಫೋನ್ 6.77 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು 2,392 x 1,080 ಪಿಕ್ಸೆಲ್ ರೆಸಲ್ಯೂಶನ್ ಬೆಂಬಲ ಪಡೆದಿದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರ ಮತ್ತು 1300 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲದೊಂದಿಗೆ ಬರುತ್ತದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್ ಹೊಂದಿದೆ. ಇದು ಆಂಡ್ರಾಯ್ಡ್ 14 ಆಧಾರಿತ ಫನ್ ಟಚ್ ಓಎಸ್ 14 ನೊಂದಿಗೆ ಕೆಲಸ ಮಾಡುತ್ತದೆ. ಈ ಮೊಬೈಲ್ 8GB RAM + 128GB ಮತ್ತು 8GB RAM + 256GB ಸ್ಟೋರೇಜ್ ಆಯ್ಕೆ ಹೊಂದಿದೆ. ಈ ಫೋನಿನಲ್ಲಿ 8GB ವಿಸ್ತೃತ RAM ಲಭ್ಯವಿದೆ.
ವಿವೋ V40e 5G ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್ 50 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ. ಈ ಫೋನ್ 5500mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದನ್ನು ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ. ಈ ಫೋನ್ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗೆ IP64 ರೇಟಿಂಗ್ ಪಡೆದಿದೆ. ಹಾಗೆಯೇ ಡ್ಯುಯಲ್ ಸಿಮ್, 5G, 4G, ವೈ-ಫೈ, ಬ್ಲೂಟೂತ್ 5.4 ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.


Click it and Unblock the Notifications








